ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಸ್ವೀಕರಿಸಿದ ಶ್ರೀ ಎಂ.ಎಚ್. ಪೂಜಾರಿ
ಸಕ್ಕರಗುತ್ತಿ
ದ್ವೇಷಾಸೂಯೆಗಳ
ಮನದಿ ತುಂಬಿಕೊಂಡು
ಬದುಕುತ್ತಿರುವವರ
ಎದೆಯಾಳಕ್ಕಿಳಿದು
ಅವರಲ್ಲಡಗಿಹ ಈ
ದುರ್ಗುಣಗಳನೆಲ್ಲಾ
ಖಾಲಿಗೊಳಿಸಲೀಗ
ಸಕ್ಕರಗುತ್ತಿಯೊಂದು
ನನಗೆ ಸಿಗಬಾರದೆ!
ಮನದಲಿ ಅಪಾರ
ಪ್ರೀತಿಯಿದ್ದೂ, ಅದ
ಬಚ್ಚಿಟ್ಟುಕೊಳ್ಳುವವರ
ಮನದಾಳಕ್ಕಿಳಿದು
ಇಷ್ಟಿಷ್ಟೇ ಪ್ರೀತಿಯ
ಬಸಿದುಕೊಳ್ಳುವಂತಹ
ಸಕ್ಕರಗುತ್ತಿಯೊಂದು
ನನಗೆ ಸಿಗಬಾರದೆ!

ಶ್ರೀವಲ್ಲಿ ಮಂಜುನಾಥ