ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಸ್ವೀಕರಿಸಿದ ಶ್ರೀ ಎಂ.ಎಚ್. ಪೂಜಾರಿ
ಹೂಮನ
ಹಾಯಾಗಿ ನೀ ಮಲಗು
ಹೂ ಮನದ ಮಗುವೆ;
ಮುಂದಿಹುದು ಜೀವನದಿ
ಜಂಜಾಟದಾ ಬದುಕು !
ಈ ಜಗದ ಜೀವನವು
ಹೂವ ಹಾಸಿಗೆಯಲ್ಲ;
ಮುಳ್ಳುಗಳು ಇಲ್ಲಿಹುದು
ಮರೆಯದಿರು ಮಗುವೆ!
ಮಾಲೆ ಮಾಡುತ ನಾನು
ದೇವನಲಿ ಬೇಡಿರುವೆ;
ಬರುವ ದುಃಖಗಳೆಲ್ಲ
ಈಗಲೆನಗೇ ಬರಲಿ !
ತುಂಬು ಜೀವನ ನಿನದು
ಹೂವಿನಂತರಳಿರಲಿ;
ಜಗದ ಸುಖವನವರತ
ನಿನ್ನುಡಿಯಲಿರಲಿ !!

ಶ್ರೀವಲ್ಲಿ ಮಂಜುನಾಥ