ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಸ್ವೀಕರಿಸಿದ ಶ್ರೀ ಎಂ.ಎಚ್. ಪೂಜಾರಿ
ಮೇಘದಾಟ
ಏಣಾಂಕನೊಡಗೂಡಿ
ಅನಂತ ಆಗಸವಿಂದು
ಚಂದ್ರಿಕೆಯ ಮಳೆಯನ್ನು
ತಾ ಸುರಿಸುತಿಹುದು;
ದೇವ ಕನ್ನಿಕೆಯರಿಂದು
ಹಾಲ್ಕೆನೆಯ ಮೋಡವನು
ಒಯ್ಯನೆ ಬಾನಿನಲ್ಲಿ
ತೇಲಿ ಬಿಡುತಿಹರು ;
ಹಾಲ್ಗಡಲ ರಥವೇರಿ
ಕುಳಿತ ಉಡುಪನನು
ಅಗಣಿತ ತಾರೆಯರು
ಆವರಿಸುತಿಹರು;
ಅಕಲ್ಪಿತ ನಗೆಯೊಂದು
ತುಟಿಯಂಚಿನಲಿ ಮಿಂಚಿ
ಮೇಘದಾಟಕೆ ಸಾಕ್ಷಿ
ತಾನಾಗುತಿಹುದು !!

ಶ್ರೀವಲ್ಲಿ ಮಂಜುನಾಥ