ಕಲಾ ಪ್ರದರ್ಶನ – ಸಂಸ್ಕಾರ ಭಾರತೀ ವತಿಯಿಂದ….
ಸ್ವಾಭಿಮಾನ ಭಾರತ್ ಮತ್ತು ಸಂವಿಧಾನ 75 ರ ಶೀರ್ಷಿಕೆಯಡಿಯಲ್ಲಿ ಕಲಾ ಪ್ರದರ್ಶನವನ್ನು
ಸಂಸ್ಕಾರ ಭಾರತೀ ಕರ್ನಾಟಕ, ದಕ್ಷಿಣ ಪ್ರಾಂತ ದೃಶ್ಯಕಲಾ ವಿಭಾಗದ ವತಿಯಿಂದ ಹಮ್ಮಿಕೊಳ್ಳಲಾಗಿದೆ.
ಕಲಾ ಪ್ರದರ್ಶನದಲ್ಲಿ ಕರ್ನಾಟಕದ ಖ್ಯಾತ 75ಕ್ಕೂ ಹೆಚ್ಚು ಕಲಾವಿದರು ಐತಿಹಾಸಿಕ, ಸಾಮಾಜಿಕ, ರಾಜಕೀಯ, ತಂತ್ರಜ್ಞಾನ ಕ್ಷೇತ್ರ ಒಳಗೊಂಡಂತೆ ತಮ್ಮ ಕಲಾಕೃತಿಗಳನ್ನು ಪ್ರದರ್ಶನಗೊಳಿಸಲಿದ್ದಾರೆ.

ದಿನಾಂಕ 12.06.2026, ಶುಕ್ರವಾರ ಬೆಳಗ್ಗೆ 10:30ಕ್ಕೆ ಖ್ಯಾತ ಕಲಾವಿದರಾದ ಶ್ರೀ ಎಸ್ ಜಿ ವಾಸುದೇವ್ ಕಲಾಪ್ರದರ್ಶನ ಉದ್ಘಾಟಿಸಲಿದ್ದು, ಸಂಸ್ಕಾರ ಭಾರತೀ ಕರ್ನಾಟಕ ದಕ್ಷಿಣ ಪ್ರಾಂತಾಧ್ಯಕ್ಷರು ಹಾಗೂ ಖ್ಯಾತ ಚಲನಚಿತ್ರ ನಿರ್ದೇಶಕರಾದ ಶ್ರೀ ಸುಚೇಂದ್ರ ಪ್ರಸಾದ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಸಂಸ್ಕಾರ ಭಾರತೀ ಅಖಿಲ ಭಾರತೀಯ ಅಧ್ಯಕ್ಷ ಮತ್ತು ಖ್ಯಾತ ವಯೋಲಿನ್ ವಾದಕ ಶ್ರೀ ಮೈಸೂರು ಮಂಜುನಾಥ್, ಮತ್ತು ಖ್ಯಾತ ಕಲಾವಿದರಾದ ಶ್ರೀ ಚಿ ಸು ಕೃಷ್ಣ ಸೆಟ್ಟಿಯವರು ಉಪಸ್ಥಿತರಿರುತ್ತಾರೆ.
ಕಲಾಪ್ರದರ್ಶನವು ದಿನಾಂಕ 17.06.2026 ರವರೆಗೆ ಸಾರ್ವಜನಿಕ ವೀಕ್ಷಣೆಗೆ ಲಭ್ಯವಿರುತ್ತದೆ.
ಸ್ಥಳ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್,
ಬಿ ಪಿ ವಾಡಿಯಾ ರಸ್ತೆ,
ಬಸವನಗುಡಿ, ಬೆಂಗಳೂರು.
ಪ್ರಕಟಣೆ : ಸಾಹಿತ್ಯಮೈತ್ರಿ
ಸಂಪರ್ಕ:
ಗಣಪತಿ ಎಸ್ ಹೆಗಡೆ
ಪ್ರಾಂತ ದೃಶ್ಯಕಲಾ ಸಂಯೋಜಕ
ಸಂಸ್ಕಾರ ಭಾರತೀ ಕರ್ನಾಟಕ ದಕ್ಷಿಣ ಪ್ರಾಂತ
9980075463