ಧ್ಯಾನ – Meditation ರೇಷ್ಮಾ ಶೆಟ್ಟಿ

ಧ್ಯಾನ – Meditation

ಮೆಡಿಟೇಷನ್ ಎಂದರೆ ಧ್ಯಾನ. “ಧ್ಯಾನ” ಎಂಬ ಪದವು ಸಂಸ್ಕೃತದ ‘ಧ್ಯೈ’ ಎಂಬ ಧಾತುವಿನಿಂದ ಬಂದಿದೆ, ಇದರರ್ಥ “ಧ್ಯಾನಿಸುವುದು”.

ಧ್ಯಾನ ಎಂದರೆ ಮನಸ್ಸನ್ನು ಒಂದು ವಿಷಯ ಅಥವಾ ಶೂನ್ಯದ ಮೇಲೆ ಕೇಂದ್ರೀಕರಿಸಿ, ಮಾನಸಿಕ ಶಾಂತಿ ಮತ್ತು ಜಾಗೃತಿಯನ್ನು ಪಡೆಯುವ ಪ್ರಕ್ರಿಯೆಯಾಗಿದೆ. ಧಾರಣಾವಸ್ಥೆಯಲ್ಲಿ ಜ್ಞಾನವು ಏಕಪ್ರಕಾರವಾಗಿರುವುದೇ ಧ್ಯಾನ. ಆತ್ಮ ದರ್ಶನದ ವಿಕಾಸವಾಗುವುದು ಧ್ಯಾನದಿಂದ. ಧ್ಯಾನವೆಂಬುವುದು ತನ್ನ ಅಂತರ ಶಕ್ತಿಗಳನ್ನು ಅರಳಿಸುವ ಒಂದು ಸಾಧನ. ಪತಂಜಲಿ ಮಹರ್ಷಿಗಳು ಯೋಗಸೂತ್ರಗಳನ್ನು ಬರೆದಿದ್ದಾರೆ. ಇದರ ಅನುಷ್ಠಾನವನ್ನು ರಾಜಯೋಗವೆಂದು ಕರೆಯುತ್ತಾರೆ. ಇದಕ್ಕೆ ಅಷ್ಟಾಂಗ ಯೋಗವೆಂತಲೂ ಹೆಸರು. ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧಿ – ಇವುಗಳನ್ನು ಅಷ್ಟಾಂಗಗಳೆಂದು ಕರೆಯುತ್ತಾರೆ.

ಆಚಾರ್ಯ ರಜನೀಶ್ ಹೀಗೆ ಹೇಳುತ್ತಾರೆ:

Something pray loudly is prayer
Something pray silently is meditation.

ಶ್ರೀಕೃಷ್ಣನು ಭಗವದ್ಗೀತೆಯ ಆರನೇ ಅಧ್ಯಾಯದಲ್ಲಿ ‘ಧ್ಯಾನಯೋಗ’ ಅಥವಾ ‘ಆತ್ಮಸಂಯಮ ಯೋಗ’ ಎಂಬ ಹೆಸರಿನಲ್ಲಿ ಧ್ಯಾನದ ಬಗ್ಗೆ ವಿಸ್ತಾರವಾಗಿ ವಿವರಿಸಿದ್ದಾನೆ. ಯಾರು ಮನಸ್ಸನ್ನು ಜಯಿಸಿದ್ದಾರೋ ಅವರಿಗೆ ಮನಸ್ಸೇ ಅತ್ಯುತ್ತಮ ಮಿತ್ರ, ಆದರೆ ಮನಸ್ಸನ್ನು ಗೆಲ್ಲದವರಿಗೆ ಅದೇ ಶತ್ರುವಿನಂತೆ ವರ್ತಿಸುತ್ತದೆ” ಎಂದು ಕೃಷ್ಣನು ಹೇಳಿದ್ದಾನೆ. ಧ್ಯಾನವು ಮನಸ್ಸನ್ನು ಶತ್ರುವಿನಿಂದ ಮಿತ್ರನನ್ನಾಗಿ ಬದಲಿಸುವ ಪ್ರಕ್ರಿಯೆಯಾಗಿದೆ.

ಗೌತಮ ಬುದ್ಧನು ಜ್ಞಾನೋದಯ ಪಡೆದದ್ದೇ ಧ್ಯಾನದ ಮೂಲಕ. ಬುದ್ಧನು ಮುಖ್ಯವಾಗಿ ಎರಡು ರೀತಿಯ ಧ್ಯಾನ ತಂತ್ರಗಳನ್ನು ಕಲಿಸಿದನು:
ಆನಾಪಾನಸತಿ (Anapanasati): ಇದು ಶ್ವಾಸದ ಮೇಲೆ ಗಮನವಿಡುವ ಧ್ಯಾನ. “ಆನಾ” ಎಂದರೆ ಒಳಶ್ವಾಸ, “ಪಾನ” ಎಂದರೆ ಹೊರಶ್ವಾಸ ಮತ್ತು “ಸತಿ” ಎಂದರೆ ಜಾಗೃತಿ. ಇದರಲ್ಲಿ ಉಸಿರಾಟವನ್ನು ನಿಯಂತ್ರಿಸದೆ, ಅದು ಸಹಜವಾಗಿ ಬರುವುದನ್ನು ಮತ್ತು ಹೋಗುವುದನ್ನು ಕೇವಲ ಗಮನಿಸಬೇಕು.

ವಿಪಶ್ಯನ (Vipassana): ಇದು ಸತ್ಯವನ್ನು ಇದ್ದ ಹಾಗೆಯೇ ನೋಡುವುದು ಎಂದರ್ಥ. ದೇಹದ ಮೇಲೆ ಉಂಟಾಗುವ ಸಂವೇದನೆಗಳನ್ನು (Sensations) ಗಮನಿಸುವ ಮೂಲಕ ಮನಸ್ಸಿನ ಆಳದಲ್ಲಿರುವ ಅಶುದ್ಧತೆಗಳನ್ನು ಹೋಗಲಾಡಿಸಿ, ಅಂತಿಮ ಸತ್ಯವನ್ನು ಅರಿಯುವುದು ಇದರ ಉದ್ದೇಶ.

ಧ್ಯಾನವು ಸಾವಿರಾರು ವರ್ಷಗಳಷ್ಟು ಹಳೆಯದಾದ ಒಂದು ಪ್ರಾಚೀನ ಅಭ್ಯಾಸವಾಗಿದೆ. ಅದರ ಪ್ರಾಚೀನತೆಯ ಹೊರತಾಗಿಯೂ, ಈ ಅಭ್ಯಾಸವು ಪ್ರಪಂಚದಾದ್ಯಂತ ಸಾಮಾನ್ಯವಾಗಿದೆ ಏಕೆಂದರೆ ಇದು ಮೆದುಳಿನ ಆರೋಗ್ಯ ಮತ್ತು ಒಟ್ಟಾರೆ ಯೋಗಕ್ಷೇಮಕ್ಕೆ ಪ್ರಯೋಜನಗಳನ್ನು ಹೊಂದಿದೆ. ಆಧುನಿಕ ತಂತ್ರಜ್ಞಾನದ ಸಹಾಯದಿಂದ, ಧ್ಯಾನವು ಜನರಿಗೆ ಸಹಾಯ ಮಾಡುತ್ತಿದೆ. ದೇಹ-ಕೇಂದ್ರಿತ ಧ್ಯಾನ ಭಾವನೆ – ಕೇಂದ್ರಿತ ಧ್ಯಾನ ದೃಶ್ಯ, ಆಧಾರಿತ ಧ್ಯಾನ, ಮಂತ್ರ ಧ್ಯಾನ, ಚಲನೆಯೊಂದಿಗೆ ಧ್ಯಾನ, ಮೈಂಡ್‌ಫುಲ್‌ನೆಸ್ ಧ್ಯಾನ, ಇನ್ನೂ ಧ್ಯಾನದಲ್ಲಿ ಆನೇಕಾನೇಕ ವಿಧಗಳಿವೆ.

ಯಾರೇ ಆಗಲಿ ಯಾವುದೇ ಧ್ಯಾನವನ್ನ ಅವಲಂಬಿಸಿದರೂ ಆ ಪ್ರಕ್ರಿಯೆಯ ಬಗ್ಗೆ ವಿಶ್ವಾಸವನ್ನ ಹೊಂದಿರಬೇಕು. ಮೆದುಳು ನಿರಂತವಾಗಿ ಬೀಟಾ, ಅಲ್ಫಾ, ತೀಟಾ, ಡೆಲ್ಟಾ, ಎನ್ನುವ ತರಂಗಗಳನ್ನು ನಿರಂತರವಾಗಿ ಹೊರ ಸೊಸುತ್ತಿರುತ್ತವೆ. ಮನುಷ್ಯ ಧ್ಯಾನ ಮಾಡುವಾಗ ಅಲ್ಫಾ ತರಂಗಗಳನ್ನ ಮೆದುಳು ಬಿಡುಗಡೆಗೊಳಿಸುತ್ತದೆ. ಅಲ್ಫಾ ತರಂಗಗಳು ಬಿಡುಗಡೆಯಾದಾಗ ಮನಸ್ಸು ಪ್ರಶಾಂತವಾಗುತ್ತದೆ. ಧ್ಯಾನದ ಅಭ್ಯಾಸಕ್ಕೆ ಸಂಬಂಧಿಸಿದ ವಿವಿಧ ಆರೋಗ್ಯ ಪ್ರಯೋಜನಗಳನ್ನು ಹಲವಾರು ಸಂಶೋಧನಾ ಅಧ್ಯಯನಗಳು ಸಾಬೀತುಪಡಿಸಿವೆ. ಇವುಗಳಲ್ಲಿ ಒತ್ತಡ ಕಡಿತ, ಆತಂಕ ಮತ್ತು ಖಿನ್ನತೆ ಕಡಿಮೆಯಾಗುವುದು, ನೋವು ಕಡಿಮೆಯಾಗುವುದು, ಸ್ಮರಣಶಕ್ತಿ ಸುಧಾರಿಸುವುದು, ಅನಾರೋಗ್ಯ ಕಡಿಮೆಯಾಗುವುದು ಮತ್ತು ಕೆಲಸದ ಸ್ಥಳದಲ್ಲಿ ಉತ್ಪಾದಕತೆ ಹೆಚ್ಚಾಗುವುದು ಸೇರಿವೆ. ಹೀಗಾಗಿ, ಧ್ಯಾನವನ್ನು ಅಭ್ಯಾಸ ಮಾಡುವುದರಿಂದ ಒಟ್ಟಾರೆ ಆರೋಗ್ಯ ಮತ್ತು ಯೋಗಕ್ಷೇಮ ಮತ್ತು ಕೆಲಸದ ದಕ್ಷತೆಯನ್ನು ಹೆಚ್ಚಿಸಬಹುದು.

ರೇಷ್ಮಾ ಶೆಟ್ಟಿ

Related post