ಶಾಂತಿ ಗ್ರಾಮ
ಎಲ್ಲ ಧರ್ಮವೂ ಇಲ್ಲಿ
ನೆಲೆಯಾಗಿ ನಿಂತಿಹುದು;
ಸ್ನೇಹ, ಸಹನೆಯ ಗಾಳಿ
ಉಸಿರು ಉಸಿರಲ್ಲಿಹುದು!
ಹುಟ್ಟು- ಸಾವೇ ಬರಲಿ,
ಹಬ್ಬ-ಜಾತ್ರೆಯೆ ಇರಲಿ,
ಒಮ್ಮನದಿ ಜನರೆಲ್ಲ
ಕೂಡಿ ನಡೆಸುವರು !
ಸಹಿಷ್ಣುತೆಯೊಡನೆ
ಶಾಂತಿಯಿಲ್ಲಿಯ ಮಂತ್ರ,
ನಡೆಯದಿಲ್ಲಿ ಜನರನು
ಒಡೆಯುವಾ ತಂತ್ರ !
ಸಬಲ, ಸ್ವಾವಲಂಬಿ,
ಸುಸ್ಥಿರ, ಸಮೃದ್ಧ
ಆದರ್ಶ ನಡವಳಿಕೆಯೇ
ಇಲ್ಲಿಯಾ ಧರ್ಮ!

ಶ್ರೀವಲ್ಲಿ ಮಂಜುನಾಥ