ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಸ್ವೀಕರಿಸಿದ ಶ್ರೀ ಎಂ.ಎಚ್. ಪೂಜಾರಿ
ತಾಳ್ಮೆ ಗಳಿಸಲು
ಕೋಪ ಮಾರಿದ!
ತನ್ನವರ
ಆಸೆ ತೀರಿಸಲು
ಕನಸು ಮಾರಿದ!

ಸಂಸಾರಕ್ಕೆ
ತನ್ನನ್ನೇ ತಾನು
ತೇದು ತೇದು
ಸವೆಯುವ
ಶ್ರೀಗಂಧ
ತನ್ನಾಸೆಯ
ಬದಿಗೊತ್ತಿ
ತನ್ನವರ ಹೆಗಲ
ಮೇಲೆ ಹೊತ್ತು
ದಡ ಸೇರಿಸುವ
ತೆಪ್ಪ! ನನ್ನಪ್ಪ

ಶ್ರೀಧರ ಕಾಡ್ಲೂರು