ಕೆಲಸಕ್ಕಾಗಿ ಕಗ್ಗತ್ತಲೆಯ ಖಂಡದತ್ತ-10

— ೧೦ — ಒಗಾದನ್ ಯುದ್ಧ! – 1 ನನ್ನ ಮಗ ಈ ಜಗತ್ತನ್ನು ಬೇಗ ಕಾಣುವ ಹಂಬಲದಿಂದಲೋ ಎಂಬಂತೆ, ಆತುರದಿಂದ ಸ್ವಲ್ಪ ಬೇಗ ಹುಟ್ಟಿದ್ದ – ಎಂಟೂವರೆ ತಿಂಗಳಿಗೆ. ಅಥವ ಚೊಚ್ಚಲ ಗರ್ಭಿಣಿಯಾಗಿ, ತಾಯಿಯ ಹಾರೈಕೆ ಇಲ್ಲದ ಕಾರಣ ಮತ್ತು ಗೊತ್ತಿಲ್ಲದ ನಾಡಲ್ಲಿ, ಗೊತ್ತಿಲ್ಲದ ಜನರ ಮಧ್ಯೆ ಹೇಗೆ ಎಂಬ ಮನದೊಳಗಿನ ನಿಗೂಢ ಆತಂಕ ಕೂಡ ಇದ್ದಿರಬಹುದು. ಒಟ್ಟಿನಲ್ಲಿ ಬಲಿಯುವ ಮುನ್ನವೇ ಹುಟ್ಟಿದ್ದರಿಂದ ತೂಕ ಕಮ್ಮಿ ಹಾಗೂ ನೋಡಲೂ ಮೈತುಂಬಿಕೊಂಡು ಹೊರ ಬಂದಿರಲಿಲ್ಲ. ಹಾಗಾಗಿ, ಅವನ […]Read More

ಮಲೆ ಕಬ್ಬಕ್ಕಿ – Malabar Starling

ನಾವು ಈಗಾಗಲೇ ಅನೇಕ ಗೊರವಂಕಗಳು ಹಾಗೂ ಕಬ್ಬಕ್ಕಿಗಳನ್ನು ಕುರಿತಾಗಿ ತಿಳಿದಿದ್ದೇವೆ. ಮುಖ್ಯವಾಗಿ ಈ ಎರಡರ ನಡುವಿನ ವ್ಯತ್ಯಾಸವೆಂದರೆ ಗೊರವಂಕಗಳ ರೆಕ್ಕೆಗಳ ಮೇಲೆ ಬಿಳಿಯ ಮಚ್ಚೆ ಇರುತ್ತದೆ, ಕಬ್ಬಕ್ಕಿಗಳ (ಸ್ಟಾರ್ಲಿಂಗ್‍) ರೆಕ್ಕೆಯ ಮೇಲೆ ಈ ಮಚ್ಚೆ ಇರುವುದಿಲ್ಲ ಹಾಗೂ ಕಬ್ಬಕ್ಕಿಗಳು ಗಾತ್ರದಲ್ಲಿ ಗೊರವಂಕಗಳಿಗಿಂತ ಚಿಕ್ಕವು. ಈ ಮಲೆ ಕಬ್ಬಕ್ಕಿ ಹೆಸರೇ ಹೇಳುವಂತೆ ಮಲೆನಾಡಿನಲ್ಲಿ ಕಂಡುಬರುವ ಕಬ್ಬಕ್ಕಿ. ಪಶ್ಚಿಮಘಟ್ಟಗಳೇ ಇವುಗಳ ಮುಖ್ಯವಾದ ಆವಾಸವಾದರೂ ಅದರ ಹೊರಗೂ ಕಂಡುಬರುತ್ತದೆ. ಬಿಳಿತಲೆ ಹಾಗೂ ಕೆಂಗಂದು ಹೊಟ್ಟೆಯಿಂದ ಇದನ್ನು ಸುಲಭವಾಗಿ ಗುರುತಿಸಬಹುದು. ಕೊಕ್ಕಿನ ಬುಡದ […]Read More

ಹನಿಗವಿತೆಗಳು – ಡಾII ಪರಮೇಶ್ವರಪ್ಪ ಕುದರಿ – 3

ಹೂವು – ಮುಳ್ಳು ಅವಳೊಂದುಘಮ – ಘಮಿಸುವಸುಂದರ ಹೂವು!ಒಲವ ಪಡೆದುಅವಳ ರಕ್ಷಣೆಗೆ ನಿಂತಚೂಪಾದಮುಳ್ಳು ನಾನು!! ಜೀವ ಗೀತೆಗಳು ಕನಸಿನಕನ್ನಿಕೆಯೊಂದಿಗೆಕಳೆದ ಕ್ಷಣಗಳುಮಧುರ ಅತಿ ಮಧುರಸುಂದರ ಸುಮಧುರ!ಅವು ಭಾವಗೀತೆಗಳುಪ್ರೇಮ ಗೀತೆಗಳುಜೀವ ಗೀತೆಗಳು!! ವೈಯಾರ ರಂಗು ರಂಗಿನ ನಿನ್ನಉಡುಪುಅದಕ್ಕೊಪ್ಪುವಂತಿದೆ ನಿನ್ನಒನಪುಅದನ್ನು ಮೀರಿಸುವಂತಿದೆ ನಿನ್ನವೈಯಾರಮುದ್ದಿಸಬೇಕೆನಿಸುತಿದೆ ನಿನ್ನಮನಸಾರ!! ಸುಹಾಸಿನಿ ಅವಳು ನಕ್ಕ ರೀತಿನಗುವಿಗೆ ನಾ ಬಿದ್ದ ರೀತಿಮನಸಿಂದ ಮಾಸಲುಸಾಧ್ಯವೇ ಇಲ್ಲ!ಮತ್ತೆ ಎಂದು ಅಂತಹನಗುವಿನ ಚೆಲುವೆಯನ್ನುಕಾಣಲೇ ಇಲ್ಲಸುಹಾಸಿನಿ ಅವಳು!! ಡಾII ಪರಮೇಶ್ವರಪ್ಪ ಕುದರಿRead More

ಪರಾಭವ ಭಾವನಾ – 19 ಯತಿರಾಜ್ ವೀರಾಂಬುಧಿ

ಹಿಂದಿನ ಸಂಚಿಕೆಯಿಂದ…ಫಿಲಿಪ್‌ ನ ಸಹಚರರಿಗೆ ಎಷ್ಟು ಹುಡುಕಿದರೂ ಅಪ್ರಮೇಯನ ಹತ್ತಿರವಿದ್ದ ವಿಗ್ರಹಗಳನ್ನು ಪತ್ತೆಹಚ್ಚಲಾಗಿಲ್ಲ ಅಷ್ಟೇಕೆ ಇಂಟರ್‌ಪೋಲ್‌ ಅಧಿಕಾರಿಯಾದ ಶ್ಯಾಮ್ ಗೆ ಕೂಡ. ಅಪ್ರಮೇಯನನ್ನು ಕೊಲ್ಲುವುದು ಸುಲಭವಲ್ಲ ಎಂದು ಫಿಲಿಪ್ ನಿಗೆ ಅರ್ಥವಾಗಿದೆ. ಇತ್ತ ಅಪ್ರಮೇಯನೂ ಮಾನಸಿಕವಾಗಿ ಸಾವಿಗೆ ಸಿದ್ಧನಾಗಿದ್ದಾನೆ. ಮುಂದೆ… –ಹತ್ತೊಂಬತ್ತು– ನಾಯಕ್‌ ಶತಪಥ ತಿರುಗುತ್ತಿದ್ದ. ಅವನಿಗೆ ಆಲ್ಬೆರ್ತೋ ಗಾರ್ಸಿಯಾನ ಹಣವನ್ನು ಮರಳಿಸುವ ವಿಷಯದಲ್ಲಿ ಚಿಂತೆ ಹತ್ತಿತ್ತು. ಫಿಲಿಪ್‌ ಸ್ಟೋನ್‌ಬ್ರಿಡ್ಜ್‌ ಇಂಗ್ಲೆಂಡಿನಿಂದ ಬಂದಿದ್ದೇನೋ ಹೌದು. ಅವನ ಜೊತೆಗೆ ತನ್ನ ಗುಂಪಿನ ಅತ್ಯಂತ ಚಾಲಾಕಿ ಹೆಣ್ಣು ನೀಲಂ ಕೂಡ […]Read More

ಸೌರವ್ಯೂಹ – 2

ಸೂರ್ಯನು ಬೇಕು ಬೆಳಕು ಕೊಡಲು ಸೂರ್ಯನು ಬೇಕು ಬಿಸಿಲು ಕೊಡಲು… ಈ ವಾಕ್ಯದ ತೀವ್ರತೆ ನಮಗೆ ತಿಳಿದದ್ದು ಕಳೆದೆರಡು ವಾರಗಳಲ್ಲಿ.ಗಂಡನೊಡನೆ ಮುನಿದ ಹೆಂಡತಿಯಂತಾಗಿದ್ದ ಸೂರ್ಯದೇವ! ಈ ವಾರ ಸೂರ್ಯನ ಜನ್ಮ ರಹಸ್ಯವನ್ನು ತಿಳಿಯೋಣ ಸೂರ್ಯನ ಜನನ ಗ್ರಹಗಳು ಪಡೆಯದೇ ಉಳಿದ ಅವಶೇಷಗಳು ಕ್ಷುದ್ರ ಗ್ರಹ ಪಟ್ಟಿ ಕೈಪರ್ ಪಟ್ಟಿ. ಇಂತಹ ಮತ್ತು ಊರ್ಟ್ ಮೋಡದ ಪ್ರದೇಶಗಳಲ್ಲಿ ಸಂಗ್ರಹಗೊಂಡವು. ಹೀಗೆ ಘನೀಕರಿಸಿದ 60 ದಶಲಕ್ಷ ವರ್ಷಗಳ ಒಳಗೆ ಜಲಜನಕದ ಸಾಂದ್ರತೆಯು ಭ್ರೂಣ ಸೂರ್ಯನ (ಫೋಟೋಸ್ಟಾರ್) ಮಧ್ಯಭಾಗದಲ್ಲಿ ವೇಗೋತ್ಕರ್ಷದ ಸಮ್ಮಿಲನ […]Read More

ಸೋತ ಸಮರಗಳ ಹಿಂದೆ

ಸಿಕಂದರನಿಗೊಂದುಭಾರತ ವರ್ಷಕೌರವನಿಗೊಂದುಕುರುಕ್ಷೇತ್ರನೆಪೋಲಿಯನ್ನ ನಿಗೊಂದುವಾಟರ್ಲು ಇದ್ದಂತೆನಮಗೂ ನಿಮಗೂಖಂಡಿತವಾಗಿ ಇದ್ದೆ ಇರುತ್ತದೆಒಂದು ಕರ್ಮಭೂಮಿಸೋತು ಗೆಲ್ಲುವುದನ್ನುನಾವು ಕಲಿಯಬೇಕುಅಷ್ಟೇ! ಡಿ. ಎನ್. ಸುರೇಶ್ ಹವ್ಯಾಸಿ ಪತ್ರಕರ್ತರುRead More

ಅಭಿನಯ ಕಾರ್ಯಾಗಾರ – ರಂಗಚಕ್ರ ತಂಡ

ರಂಗಭೂಮಿ ಒಂದು ಮಹಾ ಸಾಗರ. ಅಲ್ಲಿ ಅಭಿನಯಿಸುತ್ತ, ಕಲಿಯುತ್ತ ಮಾಗಿದ ಕಲಾವಿದರು ತಮ್ಮ ಅಭಿನಯ ವಿದ್ಯೆಯನ್ನು ಮುಷ್ಟಿಯಲ್ಲಿ ಎಂದು ಇಟ್ಟುಕೊಂಡಿಲ್ಲ. ಅದೇನಿದ್ದರೂ ತೆರೆದ ಕೈ. ಅಂತಹ ತಂಡಗಳಲ್ಲಿ “ರಂಗಚಕ್ರ ತಂಡ“ವು ಒಂದು. “ರಂಗಚಕ್ರ ತಂಡ”ವು ಅಭಿನಯ ಕಾರ್ಯಾಗಾರದ ಮೂಲಕ ಹೊಸ ಹೊಸ ಪ್ರತಿಭೆಗಳನ್ನು ರಂಗಭೂಮಿಗೆ ಪರಿಚಯಿಸುತ್ತಾ ಹಲವಾರು ನಾಟಕಗಳನ್ನು ಪ್ರಸ್ತುತ ಪಡಿಸಿದೆ. ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ರಂಗಚಕ್ರ ರಂಗತಂಡವು ಡಿಸೆಂಬರ್ 11 2021 ರಿಂದ (7 ದಿನಗಳ ಕಾಲ ಅಭಿನಯ ಕಾರ್ಯಾಗಾರ, 25 ದಿನಗಳ ಕಾಲ ನಾಟಕ […]Read More

ನಾಯಿಯ ಕುಟುಂಬ – DOG FAMILY

ನಾಯಿಯ ಕುಟುಂಬದಲ್ಲಿ ಸಾಕುನಾಯಿ ಕಾಡುನಾಯಿ ತೋಳ ನರಿ ಕಯೋಟಿ ಹಾಗು ಆಸ್ಟ್ರೇಲಿಯಾದ ಡಿಂಗೋನಾಯಿ ಸೇರಿಕೊಂಡಿದೆ , ಇವೆಲ್ಲವು ಮಾಂಸಾಹಾರಿಗಣದ canidae ಕುಟುಂಬಕ್ಕೆ ಸೇರಿವೆ.ಈ ಕುಟುಂಬದ ಪ್ರಾಣಿಗಳು ನ್ಯೂಝಿಲ್ಯಾಂಡ್ ನ್ಯೂಗಿನಿ ಆಸ್ಟ್ರೇಲಿಯ ಮಡಗಾಸ್ಕರ್ ಮೊದಲಾದ ನಡುಗಡ್ಡೆಗಳನ್ನು ಬಿಟ್ಟು ಎಲ್ಲಾ ಕಡೆ ನೆಲೆಸಿವೆ.ಮರುಭೂಮಿ ಆರ್ಕಟಿಕ್ ಟಂಡ್ರಾ ಉಷ್ಣವಲಯದ ಕಾಡು ಈ ಎಲ್ಲ ವೈಪರೀತ್ಯದ ಪರಿಸರಗಳಿಗೆ ಹೊಂದಿಕೊಂಡಿವೆ. ಇವುಗಳಲ್ಲಿ ಅನೇಕ ಜಾತಿ, ಪ್ರಭೇದಗಳಿವೆ, ಭಾರತದಲ್ಲಿ ಎಂಟು ಜಾತಿಗಳಿದ್ದರೆ ಪ್ರಪಂಚದಲ್ಲಿ ಸುಮಾರು 34 ಜಾತಿಗಳಿವೆ. ಆಕಾರ ಅಳತೆ ಬಣ್ಣದಲ್ಲಿ ಬೇರೆ ಬೇರೆಯಾದರೂ ಇವೆಲ್ಲವೂ […]Read More

ಪ್ರತ್ಯಗಾತ್ಮ ಚಿಂತನ (ನೇನಂಶಿ) – 18

ಅನ್ನ ಭೂಮಿಯ ಋಣವು ನೀರು ಬಾನಿನ ಋಣವುನಿನ್ನ ಜನುಮವೆ ತಾಯಿ ತಂದೆಗಳ ಋಣವುಎನ್ನದಿರು ‘ಋಣಿ’ ಎಂದು ಋಣ ಮುಕ್ತನೆಂತಪ್ಪೆ?ಚೆನ್ನಾಯ್ತು ಸುಮ್ಮನಿರು -||ಪ್ರತ್ಯಗಾತ್ಮ|| ಯಾರ ಋಣವನು ಯಾರು ತೀರಿಸುವರೈ ಹೇಳುನೀರ ಋಣ ಅನ್ನ ಋಣ ತೀರಿಸುವರಾರು?ನೇರವಾಗಿಯೆ ಇನಿತು. ಮರೆಯಲ್ಲಿ ಇನ್ನೆನಿತೊ!ಬೇರು ಬಿಟ್ಟಿದೆ ಋಣವು -||ಪ್ರತ್ಯಗಾತ್ಮ|| ವಿದ್ಯೆ ಗುರುವಿನ ಋಣವು; ಪ್ರತಿಭೆ ದೇವರ ಋಣವುಬುದ್ಧಿ ಹಿರಿಯರ ಋಣವು; ಕಾವ್ಯ ಕವಿ ಋಣವುಸಿದ್ಧಿ ಗಳಿಸಲಸಾಧ್ಯ ಅವರಿವರ ಋಣವಿರದೆಶುದ್ಧ ಮಾನಸನಾಗು- ||ಪ್ರತ್ಯಗಾತ್ಮ|| ಎನ್. ಶಿವರಾಮಯ್ಯ ‘ನೇನಂಶಿ’Read More

ಕೆಲಸಕ್ಕಾಗಿ ಕಗ್ಗತ್ತಲೆಯ ಖಂಡದತ್ತ-9

— ೯ — ಅಂಚೆಯಂಟಿಗೆ ನಾಲಗೆ! ಹಾರ್ಗೀಸಾದಲ್ಲಿ ಶರತ್ಕಾಲದ ಮಳೆ ಅಕ್ಟೋಬರ್ ಮತ್ತು ನವೆಂಬರಿನಲ್ಲಿ ಸುರಿಯುತ್ತದೆ. ನಮ್ಮ ಜಂಜಾಟದಲ್ಲಿ ಅಂತಹ ಮಳೆಗಾಲ ಕಳೆದುದೇ ನನಗೆ ಗೊತ್ತಾಗಲಿಲ್ಲ. ನನಗೆ ಅಲ್ಲಿ ಸ್ಥಿರವಾಗಿ ನೆಲೆಗೊಳ್ಳುವ ಹೊತ್ತಿಗೆ, ಶುಷ್ಕ ಚಳಿಗಾಲ ಆರಂಭ ಆಗಿತ್ತು. ನಾನು ಕೆಲಸಕ್ಕೂ ಅಷ್ಟರಲ್ಲಿ ಹಳಬನಾಗಿದ್ದೆ. ಮೊಗದಿಶುವಲ್ಲಿ ಇದ್ದಷ್ಟು ರೋಗಿಗಳ ಸಂದಣಿ ಇಲ್ಲಿ ಇರಲಿಲ್ಲ. ಹಾಗಾಗಿ ಅಲ್ಪಸ್ವಲ್ಪ ವಿರಾಮ ದೊರಕುತ್ತಿತ್ತು. ನನ್ನ ತಪಾಸಣಾ ಕೊಠಡಿಗೆ, ಅಲ್ಲಿನ ಔಷಧ ವಿಭಾಗದ ಮುಖ್ಯಸ್ಥನ ಮೇಜಿನ ಪಕ್ಕದಲ್ಲೇ ಹಾಯ್ದು ಹೋಗಬೇಕಿತ್ತು. ಒಂದು ದಿನ […]Read More