ಕಾದಂಬರಿ ಪರಿಚಯ ಲೇಖಕರು: ಪ್ರಮೋದ್ ಕರಣಂ ಶ್ರೀ ಪ್ರಮೋದ್ ಕರಣಂ ರವರ ಚೊಚ್ಚಲ ಕಾದಂಬರಿ ಇದಾಗಿದ್ದು, ದಿನಾಂಕ:17-12-2020 ರಂದು ಕಲ್ಬುರ್ಗಿಯಲ್ಲಿ ಖ್ಯಾತ ಸಾಹಿತಿಗಳಾಗಿರುವ ಪ್ರೊಫೆಸರ್ ಶ್ರೀ ವಸಂತ ಕುಷ್ಟಗಿ ರವರ ಅಮೃತ ಹಸ್ತದಿಂದ ಲೋಕಾರ್ಪಣೆಗೊಂಡ ಸಂದರ್ಭದಲ್ಲಿ ಪ್ರೊಫೆಸರ್ ವಸಂತ ಕುಷ್ಟಗಿ ರವರು “ನಾನು ಓದಿದ ಕಾದಂಬರಿಗಳಲ್ಲಿ ತ ರಾ ಸು ರವರ ಮಸಣದ ಹೂವು ಕಾದಂಬರಿ ನನಗೆ ತುಂಬ ಇಷ್ಟವಾಗಿದ್ದು, ಅದರ ನಂತರ ಈ ಕಾದಂಬರಿ ನನಗೆ ತುಂಬ ಇಷ್ಟವಾಗಿದೆ ” ಎಂಬ ಮೆಚ್ಚುಗೆಯ ನುಡಿಗಳೊಂದಿಗೆ ಹಾರೈಸಿರುತ್ತಾರೆ. […]Read More
ಮಹಾಕವಿಯ ಚೇತನಕ್ಕೊಂದು ಮಂತ್ರ! – ಕುಟುರ Barbet – Psilopogon viridis ಕುಟುರ್…ಕುಟುರ್….ಕುಟುರ್… ಕೇಳಿದೊಡನೆಯೇ ಕುವೆಂಪು ಭಾವಪರವಶರಾಗುತ್ತಿದ್ದರಂತೆ. ಅವರ ಸುಪುತ್ರ ಏಕೆಂದು ಕೇಳಿದರೆ, “ಕುಟುರನ ಹಕ್ಕಿಯ ಕೂಗು ಕೇಳಿದೊಡನೆಯೇ ನನ್ನ ಚೇತನ ಈ ಊರಿನ ಸದ್ದು ಗೊಂದಲಗಳಿಂದ ಪಾರಾಗಿ ಮಲೆನಾಡಿನ ವಿಸ್ತಾರವಾದ ಕಾಡಿಗೆ ಸ್ಥಳಾಂತರಗೊಳ್ಳುತ್ತದೆ. ನಿಮಗೆಲ್ಲ ಅದೊಂದು ಹಕ್ಕಿಯ ಕೂಗಾದರೆ, ನನಗೆ ಅದೊಂದು ಮಂತ್ರ!” ಎಂದರಂತೆ. ಆ ಹಕ್ಕಿಯೇ ಬಿಳಿ ಕೆನ್ನೆಯ ಕುಟುರ. ಸೊಪ್ಪುಕುಟಿರ, ಕುಟಿರ ಎಂದೆಲ್ಲ ಕರೆಸಿಕೊಳ್ಳುವ ಹಕ್ಕಿ ನಮ್ಮಲ್ಲಿ ಸಾಮಾನ್ಯವಾಗಿ ಕಂಡುಬರುವ ಹಕ್ಕಿಗಳಲ್ಲಿ ಒಂದು. […]Read More
-ರತ್ನನ ಪದಗಳು ಕುಡಕರ್ ಮಾತ್ವ ತಿಳಿಕೊಳ್ದೇನೆನೂಕ್ಬಾರ್ದ್ ಔರ್‍ನ ಕೆಳಗೆ;ಯಾವ್ ಚಿಪ್ನಾಗ್ ಮುತ್ತ್ ಐತೊ-ಒಡದ್ ನೋಡ್ಬೇಕ್ ಒಳಗೆ! ಕೊಚ್ಚೆ ನೀರೀನ್ ಸೋದೀಸ್ತ್ ಅಂದ್ರೆಸಿಕ್ಕೋಕಿಲ್ವ ಗಂಗೆ?ಸಾಜಾ ಯೇಳೋನ್ ಯಾರಾದ್ರೇನು?ಸತ್ಯ ಕಣ್ ಕಂಡೌಂಗೆ! ಆರ್‍ತ್ ಇಲ್ಲಾಂತ್ ನೆಗಬೇಡಾಣ್ಣನಾಕುಡದಾಡೋ ಮಟ್ಟು!ಕುಡಕನ್ ಪದಗೊಳ್ ಒಕ್ಕ್ ನೋಡಿದ್ರೆಮಸ್ತಾಗ್ ಅವೆ ಗುಟ್ಟು! ‘ರವ್ವಿ ಕಾಣದ್ ಕವಿ ಕಂಡ’ಅಂದ್ರೆ ಕವಿಗೊಳ್ ತತ್ವ-‘ಕವ್ವಿ ಕಾಣದ್ ಕುಡಕ ಕಂಡ’ಅನ್ನೊದ್ ಕುಡಕರ್ ಮಾತ್ವ! –ಜಿ ಪಿ ರಾಜರತ್ನಂ ಮೂಲ ಪದ: ಜಿ ಪಿ ರಾಜರತ್ನಂ – ರತ್ನನ ಪದಗಳು ಕೃಪೆ ಡಾ|| ನಾ […]Read More
ಬಾಲ್ಯದ ದಿನಗಳು ಎಲ್ಲರಲ್ಲೂ ನೆನಪಿರುತ್ತೆ. ಆದರೆ ಕೆಲವೊಂದು ಸಂದರ್ಭಗಳಲ್ಲಿ ಮಾತ್ರ ಅವು ಎದ್ದು ಕೂರುತ್ವೆ. ಮತ್ತೆ ಅವು ಗರ್ಭದಲ್ಲಿ ಸೇರಿ ಬಿಡುತ್ತೆ. ಮತ್ಯಾವಾಗಲೋ ಮತ್ತೆ ಎದ್ದು ಕಾಡುತ್ತೆ. ಹಾಗೆ ನನಗೂ ನನ್ನ ಬಾಲ್ಯದ ನೆನಪುಗಳು ಸಾಕಷ್ಟು ಬಾರಿ ಕಾಡಿದ್ದಿದೆ. ಇತ್ತೀಚೆಗೆ ನಾವು ನೋಡಿದ ಡಾ. ವೈದೇಹಿ ಅವರ ಕತೆಗಳ ಆಧಾರಿತ, ಚಂಪಾ ಶೆಟ್ಟಿ ಅವರ ನಿರ್ದೇಶನದ ‘ಅಮ್ಮಚ್ಚಿಯೆಂಬ ನೆನಪು’ ಚಿತ್ರ ನೋಡಿದ ಮೇಲೆ ಮತ್ತೆ ನನ್ನ ಬಾಲ್ಯದ ದಿನಗಳು ಮತ್ತಷ್ಟು ಕಾಡ ಹತ್ತಿತು. ಈ ಚಿತ್ರದಲ್ಲಿ ಬರುವ […]Read More
ಕುಟುಂಬ ಎಂದರೆ ಹೇಗಿರಬೇಕು? ತಾಯಿತಂದೆ ಯರಲ್ಲಿ ಸಾಮರಸ್ಯ, ಮನೆಯಲ್ಲಿರುವ ಹಿರಿಯ ಸದಸ್ಯರಿಗೆ ತೋರುವ ಗೌರವ, ಮಕ್ಕಳ ಬಗ್ಗೆ ಪ್ರೀತಿ, ಅತಿಥಿಯರನ್ನು ಸತ್ಕರಿಸುವ ರೀತಿ ಇತ್ಯಾದಿ ಇತ್ಯಾದಿ… ಇಂತಹ ಎಷ್ಟೋ ವಿಷಯಗಳನ್ನು ನಮ್ಮ ಪೂರ್ವಿಕರು ಹಾಗು ಹಿರಿಯರು ತಲತಲಾಂತರಗಳಿಂದ ಪಾಲಿಸಿಕೊಂಡು ಬಂದಿದ್ದಾರೆ. ಯಾಕೆ ಪಾಲಿಸಲಾಗಿದೆ ಎಂದು ಕೆಲವನ್ನು ವಿಮರ್ಶಿಸೋಣ ಸಾಮರಸ್ಯ ಮನೆಯಲ್ಲಿ ಗಂಡ ಹೆಂಡಿರು ಸಣ್ಣ ಪುಟ್ಟ ವಿರಸಗಳನ್ನು ದೊಡ್ಡ ಸಮಸ್ಯೆಯಾಗಲು ಬಿಡದೆ ಸಮಬಾಳ್ವೆ ನೆಡೆಸಿದರೆ ಸಂಸಾರ ತೂಗಿಕೊಂಡು ಹೋಗುತದ್ದೆ. ಮನೆಯ ಇತರೆ ಸದಸ್ಯರು ಇದರಿಂದಾಗಿ ವಿಚಲಿತರಾಗದೆ ತಮ್ಮ […]Read More
ಹಿಂದಿನ ಲೇಖನದಲ್ಲಿ “ಆಲ್ಬರ್ಟ್ ಗೋರಿಂಗ್” ಬಗ್ಗೆ ಪ್ರಸ್ತಾಪಿಸಿದ್ದು ಈಗ ಹೇಳ ಹೊರಟಿರುವುದು ಇನ್ನೊಬ್ಬ ಕ್ರೂರ ನಾಝಿ ನಾಯಕ “ರೀನ್ಹಾರ್ಡ್ ಹೆಡ್ರಿಕ್” ನ ಸಹೋದರ “ಹೈಂಜ್ ಹೆಡ್ರಿಕ್” ಬಗ್ಗೆ. ತನ್ನ ಕೊನೆಯ ಕಾಲದಲ್ಲಿ ಪಶ್ಚಾತಾಪದಿಂದ ಕೊಂಚ ಒಳ್ಳೆಯ ಮಾನವೀಯ ಕೆಲಸವನ್ನು ಮಾಡಿದವ. ಮೊದಲನೇ ಮಹಾಯುದ್ಧದ ( 1914 -1918 ) ಸೋಲು ಜರ್ಮನಿಯ ಎಲ್ಲೆಡೆ ಅರಾಜಕತೆಯನ್ನು ಸೃಷ್ಟಿಸಿರುತ್ತದೆ. ಕ್ರಮೇಣ ಅಡಾಲ್ಫ್ ಹಿಟ್ಲರ್ 1933 ರಲ್ಲಿ ಜರ್ಮನಿಯ ನಾಯಕನಾಗಿ (ಕುಲಪತಿ) ಆಯ್ಕೆಯಾಗುತ್ತಿದ್ದಂತೆ ನಾಝಿ ಪಾರ್ಟಿ (ಜರ್ಮನ್ ನ್ಯಾಷನಲ್ ಪೀಪಲ್ ಪಾರ್ಟಿ) […]Read More
ಗಿಣಿಯು ಪಂಜರದೊಳಿಲ್ಲಾ, ರಾಮ ರಾಮಾ ಎಂಬ ದಾಸರ ಪದವನ್ನು ನಾವೆಲ್ಲರೂ ಕೇಳಿರುತ್ತೇವೆ. ಒಬ್ಬ ಸಂತನ ಮತ್ತು ಕಟುಕನ ಮನೆಯಲ್ಲಿ ಬೆಳೆದ ಒಂದೇ ಗಿಣಿಯ ಎರಡು ಮರಿಗಳು ಮುಂದೆ ಏನಾದವು ಎಂಬುದು ನಮಗೆ ತಿಳಿದೇ ಇದೆ. ಮದುವೆಗೆ ಮೊದಲು ಹುಡುಗಿಗೆ ಗಿಣಿಯಂತೆ ಮಾತಾಡುತ್ತೀಯಲ್ಲೇ ಎಂದವರು ಮುಂದೆ “ಗಿಣಿ ತರ ಮಾತಾಡ್ಬೇಡ ನೀನು ಎಂದಿರುತ್ತೇವೆ!” ಗಿಣಿ ಭವಿಷ್ಯ ಕೇಳಿರುವುದೂ ಉಂಟು! ಗಿಣಿಯ ಪ್ರಸ್ತಾಪವಿರುವ ಪ್ರಣಯ ಗೀತೆಗಳು ಕಡಿಮೆ ಇವೆಯೇ! (ಪಂಚರಂಗಿ!) ರಾಮ ರಾಮ! ಇವೆಲ್ಲಾ ಏನೇ ಇರಲಿ, ಗಿಣಿ ಸಾಮಾನ್ಯವಾಗಿ […]Read More
ಕಲಕಬೇಡ ಕುಲುಕಬೇಡ ನಮ್ಮ ಬದುಕ ಬಂಧು ಕಲಕಿ ಕದಡಿ ಬಗ್ಗಡ ಮಾಡಿಬಿಡಬೇಡ ನೋಡುಗಣ್ಣುಗಳಿಗೆ ಕುಚೋದ್ಯಕಾರಣ ಆಗಿ ಆ ಕಲುಷಿತ ಬದುಕು ದುರ್ಗಂಧ ಉಗ್ಗೀತು…! ನಮ್ಮ ನಾವಿದ್ದ ಹಾಗೆಯೆ ಬಿಟ್ಟು ಬಿಡುವ ಕೃಪೆತೋರು ನಮ್ಮ ಹುಟ್ಟೇ ಹಾಗಿರಬಹುದು ಬಹುಷಃ ನಿನ್ನ ಕಣ್ಣೀಗ ಹೇಗೆ ನೋಡುತ್ತಿದೆಯೋ ಹಾಗೆ ಅಥವ ಕಾಣದೆಯೂ ಇರಬಹುದು ನಿನಗೆ ನಿನ್ನ ಕಣ್ಣ ಸೋಂಕಿಂದ ನಮ್ಮ ನೈಜ ರೂಪುರೇಖೆ ಹೇಗೋ ಏನೋ ನಾವಂತು ಅರಿಯೆವು ಆದರೂ ನೀ ನಮ್ಮ ಬಂಧು ಅದು ಯಾವ ರೀತಿಯೇ ಇರಲಿ ನಂಟಾಗಲಿ […]Read More
ಕಳೆದ ಶತಮಾನದ ಮಹಾಯುದ್ಧದಲ್ಲಿ ತಮ್ಮ ಕ್ರೂರತೆಯಿಂದ ಮೆರೆದು ಲಕ್ಷಾಂತರ ಜನಸಾಮಾನ್ಯರ ಮಾರಣಹೋಮಕ್ಕೆ ಕಾರಣರಾದ ನಾಝಿ ನಾಯಕರ (ಹಿಟ್ಲರ್ ಸಹಿತ) ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಆದರೆ ಇವರುಗಳ ಮದ್ಯೆ ಈ ಕ್ರೂರ ನಾಯಕರ ಇಬ್ಬರು ಸಹೋದರರ ಮಾನವತೆಯ ಬಗ್ಗೆ ತಿಳಿಯಲೇಬೇಕು. ಆಲ್ಬರ್ಟ್ ಗೋರಿಂಗ್: ಆಸ್ಟ್ರಿಯಾ ದೇಶದ ವಿಯೆನ್ನಾ ನಗರದಲ್ಲಿನ ಒಂದು ಸಂಜೆ, ಯಹೂದಿಗಳ ಗುಂಪೊಂದು ನಾಝಿಗಳ ಆದೇಶದ ಮೇರೆಗೆ ನಗರದ ರಸ್ತೆಗಳ್ಳನ್ನು ಸ್ವಚ್ಛಗೊಳಿಸುತಿತ್ತು. ಅವರುಗಳ ಮೇಲ್ವಿಚಾರಣೆ ಹೊತ್ತಿದ್ದ ಎಸ್ ಎಸ್ ಆಫೀಸರ್ ಒಬ್ಬ ಗುಂಪಲ್ಲಿ ಕೆಲಸ ಮಾಡುತಿದ್ದ […]Read More
ಪಕ್ಷಿಲೋಕ – 1 ಕಾಗೆಗಳು “…ಅನ್ನದಲ್ಲಿ ಕೂತ ಕಾಗೆ ತನ್ನ ಬಳಗವನ್ನೆಲ್ಲಾ ಕರೆಯುತ್ತದೆ!” ಈ ಮಾತನ್ನು ನಾವು ಅನೇಕ ಬಾರಿ ಕೇಳಿರುತ್ತೇವೆ. ಒಳ್ಳೆಯದಕ್ಕೂ ಕೆಟ್ಟದಕ್ಕೂ ಇದನ್ನು ಒಪ್ಪವಿಡುತ್ತೇವೆ. “ಅವನು ಬದುಕಿದ್ದಾಗ ಒಬ್ಬರಿಗೆ ಕೈಯೆತ್ತಿ ಒಂದು ಕಾಸು ಕೊಡಲಿಲ್ಲ, ಅವನ ಪಿಂಡದಲ್ಲಿ ಕೂತ ಕಾಗೆ ತನ್ನ ಬಳಗವನ್ನೆಲ್ಲ ಕರೀತು ನೋಡಿ ಎಂದು”. ಹಾಗೆಯೇ “…ಇದನ್ನ ಮಾಡ್ದೆ ಇದ್ರೆ ಅವಗೆ ಕಾಕಿಪಿಂಡ ಆಗಂಗಿಲ್ಲ!” ಎಂಬುದೂ ಒಂದು ಮಾತು! ಅದನ್ನು ಅವನು ಮಾಡೇ ಮಾಡುತ್ತಾನೆ ಎಂಬುದು ಅರ್ಥ. ಒಟ್ಟಾರೆ, ನಮ್ಮ ಸಂಸ್ಕೃತಿಯಲ್ಲಿ […]Read More