ಯೋಗಾ-ಯೋಗ

ಅಂತರರಾಷ್ಟ್ರೀಯ ಯೋಗ ದಿನಾಚರಣೆ ಜೂನ್ ಇಪ್ಪತ್ತೊಂದು [ June 21 ], ಯೋಗಾಭ್ಯಾಸದಿಂದ ಸದೃಢ ಆರೋಗ್ಯ ನಿಮ್ಮದೆ ಎಂದೆಂದೂ. ಅಪರಿಮಿತ ಸಂತೋಷ, ಆರೋಗ್ಯ ಪಡೆಯಲು ತಪ್ಪದೆ ಮಾಡಿ ಯೋಗ 🤸🏻‍♀️ಯೋಗದ ಮಹತ್ವ ಅರಿವಿದ್ದವರಿಗೆ ಜೀವನ ಬಲು ಸರಾಗ 🚀ಯೋಗವು ಯಾವುದೇ ದೈಹಿಕ, ಮಾನಸಿಕ ಸಮಸ್ಯೆಗಳು ಹತ್ತಿರ ಸುಳಿಯದಂತೆ ಜಡಿಯುವ ಬೀಗ 🔒ಯೋಗ ಕಷ್ಟವೂ ಅಲ್ಲ, ಕ್ಲಿಷ್ಟವೂ ಅಲ್ಲ, ಎಲ್ಲರ ಸಂತೋಷವಾಗಿರಿಸುವ ಆನಂದರಾಗ ಯೋಗ ನಿಜಾರ್ಥದಲ್ಲಿ ಶಿಕ್ಷಣವಲ್ಲ, ನಮ್ಮ ಸಂಸ್ಕೃತಿ 👏🏻ಯೋಗದಿಂದಲೆ ಸಾಧ್ಯ ನಿಜವಾದ ಪ್ರಗತಿ 🚉ಉತ್ತಮ, ಅತ್ಯುತ್ತಮವಾಗಿರುವುದು […]Read More

ಅಪ್ಪ

ತಾಳ್ಮೆ ಗಳಿಸಲುಕೋಪ ಮಾರಿದ!ತನ್ನವರಆಸೆ ತೀರಿಸಲುಕನಸು ಮಾರಿದ! ಸಂಸಾರಕ್ಕೆತನ್ನನ್ನೇ ತಾನುತೇದು ತೇದುಸವೆಯುವಶ್ರೀಗಂಧ ತನ್ನಾಸೆಯಬದಿಗೊತ್ತಿತನ್ನವರ ಹೆಗಲಮೇಲೆ ಹೊತ್ತುದಡ ಸೇರಿಸುವತೆಪ್ಪ! ನನ್ನಪ್ಪ ಶ್ರೀಧರ ಕಾಡ್ಲೂರುRead More

ಸಂಚಾರಿ ವಿಜಯ್- ಇಲ್ಲವಾದ ಮೇಲೂ ಜೀವಂತ!!!

ಸಂಚಾರಿ ವಿಜಯ್ ಶ್ರೇಷ್ಠ ನಟರಷ್ಟೇ ಆಲ್ಲ ಬರಹಗಾರರೂ ಹೌದು! ಸಂಚಾರಿ ವಿಜಯ್ ಅವರು ಲೇಖನಗಳನ್ನೂ ಬರೆಯುತ್ತಿದ್ದರು. ಆಗಾಗ ಬರಹದಲ್ಲೂ ತೊಡಗಿಸಿಕೊಂಡಿದ್ದರಲ್ಲದೇ ತಮ್ಮ ಸಮಾನ ಮನಸ್ಕರಲ್ಲಿ ಅದನ್ನು ಹಂಚಿಕೊಳ್ಳುತ್ತಿದ್ದರು. ಅಲ್ಲದೇ ವಿಜಯ್ ಅವರಿಗೆ ತಮ್ಮ ಅಮ್ಮನ ಜೀವನಗಾಥೆಯನ್ನು ಬರೆಯಬೇಕೆಂಬ ಹೆಬ್ಬಯಕೆಯೂ ಇತ್ತೆಂಬುದು ಅವರು ತಮ್ಮ ಆಪ್ತ ಬಳಗದಲ್ಲಿ ಹಂಚಿಕೊಂಡಿದ್ದರು. ಅವರ “ಮೆಜೆಸ್ಟಿಕ್ ಎಂಬ ಮಾಯಾಜಾಲದಲ್ಲೊಮ್ಮೆ ನಾನು” ಎಂಬ ಕಿರು ಕಥೆ ಅವರು ಅಪಘಾತಕೀಡಾಗಿ ಸಾಯುವ ಎರಡು ದಿನದ ಮುಂಚೆ ನಮ್ಮ ಗೆಳೆಯರ ಬಳಗಕ್ಕೆ ಸೇರಿತ್ತು. ವಿಜಯ್ ಅವರು ನನಗೇನು […]Read More

ಮೆಜೆಸ್ಟಿಕ್ ಎಂಬ ಮಾಯಾಜಾಲದಲ್ಲೊಮ್ಮೆ ನಾನು!!!

ಸಂಚಾರಿ ವಿಜಯ್ ಶ್ರೇಷ್ಠ ನಟರಷ್ಟೇ ಆಲ್ಲ ಬರಹಗಾರರೂ ಹೌದು! ಜೂನ್ ಹತ್ತರಂದು (ಅಪಘಾತಕ್ಕೆ ಎರಡು ದಿನ ಮುಂಚೆ) ತನ್ನ ಗೆಳೆಯರ ಬಳಗಕ್ಕೆ ಕಳಿಸಿದ್ದ ಲೇಖನವಿದು‌. ಮೆಜೆಸ್ಟಿಕ್ ಎಂಬ ಮಾಯಾಜಾಲದಲ್ಲೊಮ್ಮೆ ನಾನು!!! ವರುಷಗಳ ಹಿಂದೆ ನಮ್ಮ ಮನೆಯಲ್ಲಿ ನನ್ನ ಕೈಗೆ ಒಂದಿಷ್ಟು ಹಣ ಸಿಕ್ಕರೆ ಮುಗಿಯಿತು. ಹೇಳಿ ಕೇಳಿ ಶೋಕಿವಾಲನ ಬ್ರೀಡಿನಂತಿದ್ದ ನಾನು ಬೆಳ್ಳಂಬೆಳಗ್ಗೆ ಎದ್ದು ರೆಡಿಯಾಗಿ ಮುರುಕು ಮಸುಕು ಕನ್ನಡಿ ಮುಂದೆ ನಿಂತು ಕನ್ನಡಿಯ ಮೇಲಿನ ಧೂಳ್ಯಾವುದೂ ಪೌಡರ್ ಯಾವುದು ಗೊತ್ತಾಗದೆ ಅಳತೆ ಮೀರಿ ಮುಖದ ತುಂಬಾ […]Read More

ಕಿನ್ನಾಳ ಚಿತ್ತಾರ ಕಲೆ ಹಾಗು ಕಲಾವಿದರು

ಕಳೆದ ವಾರ ನಮ್ಮ ಸಂಸ್ಕೃತಿಯ ಹೆಮ್ಮೆಯ ಕಲೆ ಚನ್ನಪಟ್ಟಣದ ಬೊಂಬೆಯ ಬಗ್ಗೆ ಓದಿದ್ದೀರಿ. ಈಗ ಕಲೆ ಸಂಸ್ಕೃತಿಯ ಅಳಿವಿನಂಚಿನಲ್ಲಿದ್ದು ಈಗ ಕೇಂದ್ರ ಸರ್ಕಾರದ ಕೃಪೆ ಯಿಂದ ಮತ್ತೆ ಪುನರ್ಉದಯಿಸುತ್ತಿರುವ ಕಿನ್ನಾಳ ಕಲೆ ಹಾಗು ಅದನ್ನೇ ನೆಚ್ಚಿಕೊಂಡಿರುವ ಕಲಾವಿದರ ಬಗ್ಗೆ ತಿಳಿಯೋಣ. ವಿಜಯನಗರ ಸಾಮ್ರಾಜ್ಯವು ಒಂದು ಕಾಲದಲ್ಲಿ ಇಡೀ ದಕ್ಷಿಣ ಭಾರತಕ್ಕೇ ಧಾರ್ಮಿಕ ರಕ್ಷಣೆಯನ್ನು ಕೊಟ್ಟ ಕರ್ನಾಟಕದ ರಾಜಮನೆತನ. ವಾಸ್ತುಶಿಲ್ಪ ಮತ್ತು ಶಿಲ್ಪಕಲೆಯಂತೆ ಕುಸರಿ ಕಲೆಯು ಆ ಕಾಲದಲ್ಲಿ ಪ್ರಾಮುಖ್ಯತೆಯನ್ನು ಪಡೆದಿತ್ತು. ವಿಜಯನಗರ ಮಹಾ ಸಂಸ್ಥಾನದ ಪತನದ ನಂತರ […]Read More

ಹನಿಗವನ

ಪ್ರಿಯೆ!ನೀನೇ ನನ್ನ ಬೆಳ್ಳಿ ಚುಕ್ಕಿ.ನೀನೇ ನನ್ನ ಪ್ರೀತಿಯ ಹಕ್ಕಿ.ಕುಡಿದುಬಂದವನಿಗೆ ಬೈದಳು.ಪಾತ್ರೆಯನ್ನು ಕುಕ್ಕಿ ಕುಕ್ಕಿ. ಬಳೆಮಕ್ಕಳಿಗೆ ಇಷ್ಟಕೋಡಬಳೆ.IT ಮಿಕಗಳಿಗೆ“Code”ಬಳೆ. ಅಳಿಯಕರಾವಳಿಯ ಅಳಿಯನಿಗೆ ಮಾವ ಕೊಡದಿದ್ದರೂ ಓಕೆಮನೆ, ಸೈಟ್,ಜಮೀನು.ಆಗಾಗ ಕಳಿಸಿಕೂಟ್ಟರೆ ಸಾಕು ತರತರದಮೀನು. ಬಲೆಒಪ್ಪಿಕೊಳ್ಳಲುಹೀಗೇಕೆ ಕಾಡುವೆಓ ನನ್ನನಲ್ಲೆ.ನನ್ನ ಪಾಲಿಗೆನೀನೇನುಸಿಲ್ಕ್ ಬೋರ್ಡ್ಸಿಗ್ನಲ್ಲೆ. ಶ್ರೀಧರ ಕಾಡ್ಲೂರುRead More

ಮೊಬೈಲ್ ಬೇಕಮ್ಮ

ಅಮ್ಮ ಅಮ್ಮ ಕೇಳಮ್ಮಕುಂಟಾಬಿಲ್ಲೆ ಬೋರಮ್ಮಕಣ್ಣಾ ಮುಚ್ಚಾಲೆ ಬೋರಮ್ಮಮೊಬೈಲ್ ಗೇಮ ಬೇಕಮ್ಮ! ನನಗೂ ಮೊಬೈಲ್ ಕೊಡಿಸಮ್ಮಸ್ಮಾರ್ಟ್ ಫೋನೇ ಕೊಡಿಸಮ್ಮಅಪ್ಪಗೆ ನೀನೇ ಹೇಳಮ್ಮದೊಡ್ಡ ಸೈಜೇ ಕೊಡಿಸಮ್ಮ! ಆನ್ ಲೈನ್ ತರಗತಿ ಸೇರುವೆನುದಿನವೂ ಪಾಠವ ಕೇಳುವೆನುಹೋಮ್ ವರ್ಕ್ ಕೂಡ ಮಾಡುವೆನುಗುರುಗಳ ಮೆಚ್ಚುಗೆ ಪಡೆಯುವೆನು! ಗೂಗಲ್ ನಿಂದ ಕಲಿಯುವೆನುತಿಳಿಯದ ಮಾಹಿತಿ ತಿಳಿಯುವೆನುಜೂಮ್ ಮೀಟಲಿ ಸೇರುವೆನುವಿಚಾರ ವಿನಿಮಯ ಮಾಡುವೆನು ಯು ಟ್ಯೂಬನು ನಾನು ಬಳಸುವೆನುವಿಡಿಯೋ ಕೂಡ ಮಾಡುವೆನುನನ್ನದೇ ಚಾನಲ್ ಮಾಡುವೆನುನನ್ನಯ ವಿಚಾರ ಹಂಚುವೆನು! ವಾಟ್ಸಪ್ ಗ್ರೂಪನು ಮಾಡುವೆನುಗೆಳೆಯರ ನಾನು ಪಡೆಯುವೆನುಗೇಮನು ನಾನು ಆಡುವೆನುಗೆಲ್ಲುತ ಗೆಲ್ಲುತ […]Read More

ಹೆಣ್ಣು ನೋಡಲು ದಂಡಯಾತ್ರೆ!

ಗೌತಮ್ ಇದೀಗ ಹೆಣ್ಣು ನೋಡಲು ಪುನರಪಿ ಹೊರಡುವವನಿದ್ದಾನೆ. ಆದರೆ, ಈ ‘ಗೌತಮ’ನ ವಿಷಯಕ್ಕೆ ನಂತರ ಹೊರಳಿ ಬರೋಣ. ಪ್ರಸ್ತುತ ಹೀಗೆ ಹೆಣ್ಣು ನೋಡಲು ಹೋಗುವ ಪದ್ಧತಿಯನ್ನು ಯಾರು, ಯಾವ ಶತಮಾನದಲ್ಲಿ ಹುಟ್ಟುಹಾಕಿದರೋ ನಾನಂತೂ ಕಾಣೆ. ಅಂಥದ್ದರ ಬಗ್ಗೆ ಅಕಸ್ಮಾತ್ ಪ್ರಾಚೀನ ಗ್ರಂಥಗಳಲ್ಲಿ ಉಲ್ಲೇಖ ಏನಾದರೂ ಇದ್ದರೆ, ಅದರ ಬಗ್ಗೆ ಸಹ ನಾ ಓದಿದ ಜ್ಞಾಪಕ ಇಲ್ಲ, ಹಾಗಾಗಿ ನಾನರಿಯೆ. ಹಾಗೂ, ಈ ತರಹ ಒಂದು ‘ಉನ್ನತ ನಾಗರಿಕ’ ಪದ್ಧತಿ ಹೊರದೇಶಗಳಲ್ಲೂ ಇದ್ದರೆ, ಅದರ ಬಗ್ಗೆ ಸಹ ಜ್ಞಾನವಿರದವನು […]Read More

ಕಾಡು ಬೆಳಸುವ ಮಂಗಟ್ಟೆ ಹಕ್ಕಿಗಳು (Hornbills)

ಅತಿ ಉದ್ದವಾದ ಕೊಕ್ಕು, ಎಷ್ಟೋ ಪಕ್ಷಿಗಳ ಕೊಕ್ಕಿನ ಮೇಲೆ ಒಂದು ಉದ್ದವಾದ ಗುಬುಟಿನಂತಹ ರಚನೆ, ದೊಡ್ಡಗಾತ್ರದ ಹಕ್ಕಿ ಒಮ್ಮೆ   ನೋಡಿದರೆ ಮರೆಯುವುದೇ ಇಲ್ಲ. ಅಂತಹ ಹಕ್ಕಿಯಿದು. ಇದನ್ನು ಕುರಿತಾಗಿ ಸಂತೋಷದ, ಆಶ‍್ಚರ್ಯದ ಹಾಗೂ ವಿಷಾದದ ವಿಷಯಗಳಿವೆ. ಮಂಗಟ್ಟೆ ಹಕ್ಕಿಗಳು ಕೀಟ, ಸಣ್ಣ-ದೊಡ್ಡ ಜೀವಿಗಳನ್ನು ತಿನ್ನುತ್ತದೆಯಾದರೂ ಫಲಾಹಾರಿ ಹಕ್ಕಿಗಳು. ಇವು ಹಣ್ಣುತಿಂದು ಕಾಡಿನ ದೂರದೂರದವರೆಗೂ ಹೋಗಿ ವಿಸರ್ಜಿಸುವುದರಿಂದ ಕಾಡಿನ ಬೆಳವಣಿಗೆಗೆ ಮತ್ತು ಮರಗಳ ಹರವು ವಿಸ್ತಾರವಾಗಲು ನೆರವಾಗುತ್ತದೆ. ಮಂಗಟ್ಟೆ ಹಕ್ಕಿ ಹಾಗೂ ಇದರ ಸುಂದರ ರೂಪ ಸಂತೋಷ ತರುವ […]Read More

ಚನ್ನಪಟ್ಟಣದ ಗೊಂಬೆಗಳು

ಆಟಿಕೆಗಳು ಕೇವಲ ಆಟಿಕೆಗಳಲ್ಲ, ಅದರಿಂದ ಮಕ್ಕಳ ಕಲ್ಪನಾ ಶಕ್ತಿ, ಮೇಧಾ ಶಕ್ತಿ ಬೆಳವಣಿಗೆಯಾಗುತ್ತದೆ. ಮತ್ತು ಇತರರ ಜತೆ ಬೆರೆಯುವುದನ್ನು ಮಕ್ಕಳಿಗೆ ಕಲಿಸಿಕೊಡುತ್ತದೆ. “ಆಟಿಕೆಗಳಿಂದ ಮನೋರಂಜನೆಯಷ್ಟೇ ಸಿಗುವುದಿಲ್ಲಆಟದ ಜೊತೆಗೆ ಪಠ್ಯ ಕಲಿಯುವುದು ನೂತನ ಶಿಕ್ಷಣ ನೀತಿಯ ಭಾಗವಾಗಲಿದೆ ಎಂದು ಎನ್‌ಇಪಿ ಹೇಳುತ್ತದೆ”. ಲಡಾಖ್ ಗಡಿ ತಂಟೆ ಬಳಿಕ ‘ಬಾಯ್ಕಾಟ್ ಚೀನಾ’ ಆಂದೋಲನ ತೀವ್ರಗೊಳಿಸಿದ ಕೇಂದ್ರ ಸರಕಾರ, ಚೀನಾ ಆಟಿಕೆಗಳ ಅಬ್ಬರಕ್ಕೆ ಕಡಿವಾಣ ಹಾಕಿ ಜಾಗತಿಕ ಆಟಿಕೆಗಳ ತಯಾರಿಕಾ ಕ್ಷೇತ್ರದಲ್ಲಿ ಚೀನಾ ಹೊಂದಿರುವ ಪ್ರಾಬಲ್ಯ ಹತ್ತಿಕ್ಕಲು ಆತ್ಮನಿರ್ಭರ ಅಭಿಯಾನ ಕೈಗೊಂಡಿದೆ. […]Read More