ವ್ಯಾಯಾಮವೇ ಭಾಗ್ಯ

ವ್ಯಾಯಾಮವೇ ಭಾಗ್ಯ ವ್ಯಾಯಾಮವು ನಮ್ಮ ಜೀವನದ ಒಂದು ಅತ್ಯಂತ ಪ್ರಮುಖವಾದ ಅಂಗ. ಪ್ರತಿಯೊಬ್ಬ ಜೀವಿಗೂ ಅತ್ಯಂತ ಅವಶ್ಯಕವಾದ ಈ ವ್ಯಾಯಾಮವು ಮಾನಸಿಕ ಹಾಗೂ ಶರೀರಿಕ ಆರೋಗ್ಯವನ್ನು ಕಾಪಾಡುವುದರಲ್ಲಿ ಮೊದಲನೆಯ ಸ್ಥಾನದಲ್ಲಿದೆ. ನಮ್ಮ ದೇಹದ ಅಂಗಾಂಗಗಳನ್ನು ಸುಸ್ಥಿರವಾಗಿ ಇಡಲು, ಧೀರ್ಘವಾದ ಆಯಸ್ಸನ್ನು ಹೊಂದಿರಲು ನಿಯಮಿತ ವ್ಯಾಯಾಮ ಸಹಾಯ ಮಾಡುತ್ತದೆ. ಇಲ್ಲಿ ನಿಯಮಿತ ಎನ್ನುವುದು ಅತ್ಯಂತ ಮುಖ್ಯವಾದ ಪದವಾಗಿದೆ, ನಮ್ಮ ದೇಹದ ಸ್ನಾಯುಗಳಿಗೆ ಜ್ಞಾಪಕ ಇಟ್ಟುಕೊಳ್ಳುವಂಥ ಶಕ್ತಿ ಇದೆ ದಿನವೂ ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ಸ್ನಾಯುಗಳು ನೆನಪಿನಲ್ಲಿಟ್ಟುಕೊಂಡು ವೃದ್ಧಿಸುತ್ತವೆ, ಸ್ನಾಯುಗಳು […]Read More

ಬೆಳದಿಂಗಳ ಲಹರಿಯಲಿ…

ಬೆಳದಿಂಗಳ ಲಹರಿಯಲಿ… ಕಾಣದ ಆ ದೇವನು ಸೃಷ್ಟಿಸಿದಬುವಿಯಲಿ ಸಕಲವೂ ಸುಂದರ!ಶಶಿ ಮೂಡಿಸಿಹ ಬೆಳದಿಂಗಳಲಿ..ಹೊಳೆವ ತಾರೆಗಳದೇ ಚಿತ್ತಾರ!! ಪ್ರಕೃತಿಯ ಚೆಂದದ ಮಡಿಲಲಿಅಡಗಿದೆ ಸಾವಿರಾರು ವಿಚಿತ್ರ!ಧರೆಯಂಗಳದಿ ಮೂಡಿದ ತಂಪಲಿ..ತಂಗದಿರ ನೀಡಿಹನು ಹಾಲ್ಬೆಳಕ ಸೂತ್ರ!! ರವಿ ವಸುಂಧರೆಗೆ ತರುವಂತೆಕಣ್ಕೋರೈಸುವ ಹೊಂಗಿರಣವನು!ಚಂದಿರ ಅವನಿಂದ ಕಡ ತಂದ..ಬೆಳಕಿಂದ ಹಾಸಿಹನು ಬೆಳದಿಂಗಳನು!! ಆಗಸದಿ ಹರಡಿದ ತಾರೆಗಳಒಟ್ಟುಗೂಡಿಸಿ ನಲಿವನು ಚಂದಿರ!ಕಡುಬಿಸಿಲ ತಾಪಕೆ ಬಳಲಿದ ಇಳೆಯ..ತಾ ತಂಪಾಗಿಸಿ ಬೆಳಗಿಹನು ಅಂಬರ!! ಸುಮನಾ ರಮಾನಂದRead More

ನೇತಾಜಿ ನಿಗೂಢ ಕಣ್ಮರೆ!!!!

ನೇತಾಜಿ ನಿಗೂಢ ಕಣ್ಮರೆ!!!! ನಮಗೆಲ್ಲರಿಗೂ ತಿಳಿದರುವ ಪ್ರಕಾರ ನಮ್ಮ ದೇಶಕ್ಕೆ ಆಗಸ್ಟ್ 15 ರ 1947 ರಲ್ಲಿ ಸ್ವಾತಂತ್ರ‍್ಯ ಸಿಕ್ಕಿತು. ಆದರೆ ಇದಕ್ಕೂ ಸುಮಾರು ನಾಲ್ಕು ವರ್ಷಗಳ ಮೊದಲೇ ಬ್ರಿಟಿಷರಿಗೆ ಸಡ್ಡು ಹೊಡೆದಿದ್ದ ನೇತಾಜಿಯು ಬ್ರಿಟಿಷರಿಂದ ಭಾರತಕ್ಕೆ ಸ್ವಾತಂತ್ರ‍್ಯ ಘೋಷಿಸಿ ತಮ್ಮ ನೇತೃತ್ವದಲ್ಲಿ ಸರ್ಕಾರವನ್ನೂ ರಚಿಸಿದ್ದರು. 1943 ಡಿಸೆಂಬರ್ 29 ರಂದು ಅಂಡಮಾನ್ ನಿಕೋಬಾರಿನಲ್ಲಿ ನೇತಾಜಿಯು ಪ್ರಾಂತೀಯ ಸರ್ಕಾರ ರಚಿಸುವ ಮೂಲಕ ಇತಿಹಾಸವನ್ನು ಬರೆದಿದ್ದರು. ಜೊತೆಗೆ ಡಿ.30 ರಂದು ಪೋರ್ಟ್ ಬ್ಲೇರ್‌ನ ಜಿಮ್ಖಾನಾ ಮೈದಾನದಲ್ಲಿ ಇಂಡಿಯನ್ ನ್ಯಾಷನಲ್ […]Read More

ಗ್ಯಾಲಾಪಾಗಸ್ ದ್ವೀಪದ ಬೃಹತ್ ಆಮೆಗಳು

ಗ್ಯಾಲಾಪಾಗಸ್ ದ್ವೀಪದ ಬೃಹತ್ ಆಮೆಗಳು ಗ್ಯಾಲಾಪಾಗಸ್ ದ್ವೀಪ ಸಮೂಹದ ದೈತ್ಯಾಕಾರದ ಆಮೆಗಳು ಭೂಮಿಯ ಮೇಲೆ ವಾಸಿಸುವ ಭೂಚರಗಳು. 400 kg ತೂಕ ಮತ್ತು 1.8 ಉದ್ದ ಬೆಳೆಯವ ಈ ಆಮೆಗಳು ದೈತ್ಯದೇಹ ಮತ್ತು ದೀರ್ಘ ಆಯುಷ್ಯಕ್ಕೆ ಪ್ರಸಿದ್ಧವಾಗಿವೆ. ನೂರು ವರ್ಷಕ್ಕಿಂತಲೂ ಅಧಿಕ ಕಾಲ ಬದುಕುವ ಈ ಆಮೆಗಳು “ಗ್ಯಾಲಾಪಾಗಸ್ ದ್ವೀಪ ಸಮೂಚ್ಚಯಗಳ ಅಚ್ಚರಿಗಳಲ್ಲಿ ಒಂದಾಗಿವೆ. ಬಹುಶಃ ಗ್ಯಾಲಾಪಾಗಸ್ ದ್ವೀಪಸಮುಚ್ಚಯಗಳಲ್ಲಿ ಕಂಡುಬರುವಂತ ವಿಶಿಷ್ಟ ಹಾಗು ವೈವಿಧ್ಯಮಯ ಜೀವ ಪ್ರಭೇದಗಳು ಪ್ರಪಂಚದ ಬೇರೆ ಯಾವ ದ್ವೀಪಗಳಲ್ಲೂ ಕಂಡುಬರುವುದಿಲ್ಲ. ಹಾಗಾಗಿಯೇ ಈ […]Read More

ಭರವಸೆ

ಭರವಸೆ ನಾನಡೆವ ಹಾದಿಯಬದಿಯ ಮರದಲಿ ಕುಳಿತಕೋಗಿಲೆಯು ತಾನಿಂದು,ನಾನೆಂದೊ ಮರೆತಹಾಡೊಂದನು ತನ್ನಿನಿದನಿಯಲಿ ಹಾಡುತಿಹುದು; ನೂರಾರು ಮಳೆಬಿಲ್ಲಬಣ್ಣವನು ಕಡಪಡೆದುತನ್ನ ತಾ ಸಿಂಗರಿಸಿ,ಬದಿಯ ಹೊಳೆಯಲಿಬಗ್ಗಿ ತನ್ನಂದಕೆ ಹಿಗ್ಗಿ,ತುಸು ನಾಚಿದ ಧರಣಿಯತೆರದಿ ಇಂದೆನ್ನ ಮನವೇಕೆನಲಿಯುತಿಹುದು; ಹೊಳೆಯಂತೆ ಹರಿದಗುಲಾಬಿಯ ಪನ್ನೀರಲಿತೊಯ್ದ ದುಂಬಿಯಗುಂಜಾರವದಂತೆನನ್ನ ಮನವೇಕೋಅರಿಯದಾ ಮತ್ತಿನಲಿಮುಳುಗುತಿಹುದು; ನಿನ್ನ ಕಂಗಳಲಿರುವತಂಪಾದ ಚಂದ್ರಿಕೆಯುಮೌನದಲೆ, ಪ್ರೀತಿಯಲೆನನ್ನ ಕಂಗಳಲಿಳಿದುಮನವನಾವರಿಸುತಲಿಸಂತೈಸಿ, ಭದ್ರತೆಯಭಾವವ ನೀಡುತಿಹುದು ! ಶ್ರೀವಲ್ಲಿ ಮಂಜುನಾಥRead More

ನೇತಾಜಿಯ ಮಹಾ–ಪಯಣ

ನೇತಾಜಿಯ ಮಹಾ–ಪಯಣ ‘ಸ್ವತಂತ್ರ ಭಾರತದ ನನ್ನ ಕನಸು ನನ್ನನ್ನು ಇಲ್ಲಿ ಕರೆತಂದಿದೆ, ಬ್ರಿಟೀಷರಿಗೆ ಪಾಠ ಕಲಿಸಲು ಜರ್ಮನಿ, ಇಟಲಿ ಮತ್ತು ಜಪಾನ್‌ನಂತಹ ಸ್ನೇಹಿತ ರಾಷ್ಟ್ರಗಳ ಬೆಂಬಲ ಬೇಕು, ಸ್ವಾತಂತ್ರಕ್ಕಾಗಿ ನಮ್ಮ ರಕ್ತವನ್ನು ಚೆಲ್ಲಲು ನಾವು ಸಿದ್ಧರಿದ್ದೇವೆ’ ಸುಭಾಷ್ ಚಂದ್ರ ಬೋಸ್ ಬ್ರಿಟೀಷರ ಕಣ್ತಪ್ಪಿಸಿ ಜಗತ್ತು ಕಂಡ ವಿಲಕ್ಷಣ ದಂಡನಾಯಕ, ಪರಮ ಕ್ರೂರಿ, ನಾಜಿ ನಾಯಕ ‘ಅಡಾಲ್ಫ್ ಹಿಟ್ಲರ್’ನೊಂದಿಗೆ ಸುಭಾಷ್ ಚಂದ್ರ ಬೋಸ್ ಸ್ನೇಹ ಹಸ್ತ ಚಾಚುತ್ತಾರೆ, ಮಹಾಯುದ್ಧದಲ್ಲಿ ಜರ್ಮನಿ ಬ್ರಿಟಿಷರ ಪರಮ ವೈರಿ ಎಂಬ ಒಂದೇ ಕಾರಣಕ್ಕೆ […]Read More

ಮಂಗಟ್ಟೆ ಹಕ್ಕಿಗಳು – Hornbill

ಮಂಗಟ್ಟೆ ಹಕ್ಕಿಗಳು – Hornbill ಅತಿ ಉದ್ದನೆಯ ಕೊಕ್ಕು, ಕೊಕ್ಕಿನ ಮೇಲೆ ಒಂದು ಉದ್ದವಾದ ಗುಬುಟಿನಂತಹ ರಚನೆ, ದೊಡ್ಡಗಾತ್ರದ ಆಕರ್ಷಕ ಮೈ ಬಣ್ಣದ ಹಕ್ಕಿಗಳು ತಮ್ಮ ಕೂಗುಗಳು ಒಂದು ತರಹದ ಕೀರಲು ಧ್ವನಿಯಿಂದ ಕೂಡಿದ್ದು, ಜೋಡಿಗಳಾಗಿ ಅಥವಾ ಸಣ್ಣ ಗುಂಪುಗಳಾಗಿ ಹಾರಾಡುವ ಅತ್ಯಾಕರ್ಷಕ ಹಕ್ಕಿಗಳೇ ಮಂಗಟ್ಟೆ ಹಕ್ಕಿಗಳು… ಸಂಪೂರ್ಣ ಬೆಳವಣಿಗೆ ಹೊಂದಿದ ಮಂಗಟ್ಟೆ ಹಕ್ಕಿ ರೆಕ್ಕೆ ಅಗಲಿಸಿ ಹಾರುವಾಗ ಸುಮಾರು ಐದು ಅಡಿಗಳಷ್ಟು ಉದ್ದಕ್ಕೆ ಹರಡಿಕೊಳ್ಳುತ್ತದೆ. ಅಲ್ಲದೇ ಹಾರಾಡುವಾಗ ತನ್ನ ರೆಕ್ಕೆಗಳಿಂದ ಪಟಪಟ ಎಂಬ ಶಬ್ದವನ್ನು ಸೃಷ್ಟಿಸುತ್ತದೆ. […]Read More

ಮಧು ಬನದೊಲೊಮ್ಮೆ

ಮಧು ಬನದೊಲೊಮ್ಮೆ ಮಧು ಬನದೊಲೊಮ್ಮೆ ಶೀರ್ಷಿಕೆ ಕಣ್ಣಾಡಿಸಿದರೆ ಸಾಕು ಬಾಯಲ್ಲಿ ನೀರೂರುತ್ತದೆ!!ಅಂತೆಯೇ ಈ ಕವನ ಸಂಕಲನ …ಪಂಚಾಮೃತವ ಸವಿದಷ್ಟೇ ..ಅಲ್ಲಲ್ಲಾ..ಕುಡಿದಷ್ಟೇ ಮುದವ ನೀಡುತ್ತದೆಪ್ರತಿ ಕ್ಷಣ ಪ್ರತಿ ನಿಮಿಷ…ಪ್ರತಿ ಕವನ!! ಶ್ರೀಯುತ ನರಹರಿ ಕರಣೀಕರು,ವೃತ್ತಿಯಲ್ಲಿ ಪುರೋಹಿತರು,ಪ್ರವೃತ್ತಿ ಹತ್ತು ಹಲವು ! ಆಗಮಿಕರು,ಶಾಸ್ತ್ರಜ್ಞರು, ಸಂಸ್ಕೃತ ಪಂಡಿತರು, ವೇದಾಧ್ಯಯನ ಶೀಲರು, ಜ್ಯೋತಿಷ್ಯ ಶಾಸ್ತ್ರ ನಿಪುಣರು, ಕವಿಗಳು, ಸಾಹಿತಿಗಳು, ಒಳ್ಳೆಯ ವಿಮರ್ಶಕರು, ಎಲ್ಲಕ್ಕಿಂತ ಮಿಗಿಲಾಗಿ ಸಜ್ಜನರು, ಸಹೃದಯರು, ಸ್ನೇಹ ಸಂಪನ್ನರು. ಈ ಕವನ ಸಂಕಲನ ಅವರ ಪ್ರತಿಭೆಗೆ ಸಾಕ್ಷಿಯಾಗಿ ನಿಲ್ಲುತ್ತದೆ. ಇದರಲ್ಲಿ ಏನಿಲ್ಲಾ […]Read More

ವೀರ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ – 1

ಸ್ವಾತಂತ್ರ್ಯದ ರಣಕಲಿ ಸುಭಾಷ್ ಚಂದ್ರ ಬೋಸ್ “ನೇತಾಜಿ ಸುಭಾಷ್ ಚಂದ್ರ ಬೋಸ್” ಹೆಸರು ಕೇಳಿದೊಡನೆ ಪುಟ್ಟ ಮಕ್ಕಳಿಂದ ವಯೋ ವೃದ್ಧರ ತನಕ ರೋಮಾಂಚನ ಗೊಳ್ಳುವರು. ಭಾರತ ದೇಶ ಕಂಡ ಅಪ್ರತಿಮ ದೇಶಭಕ್ತ, ವೀರ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್. ಈ ಮಹಾನ್ ರಾಷ್ಟ್ರ ನಾಯಕನ ಜೀವನದ ಘಟನೆಗಳ ಮೆಲುಕೇ ಸ್ಪೂರ್ತಿ ತುಂಬುವಂತದ್ದು. “ಸ್ವಾತಂತ್ರ‍್ಯವನ್ನು ಯಾರೂ ಕೊಡುವುದಿಲ್ಲ, ಅದನ್ನು ನಾವೇ ಪಡೆದುಕೊಳ್ಳಬೇಕು”,“ನನಗೆ ರಕ್ತ ನೀಡಿ ನಿಮಗೆ ನಾನು ಸ್ವಾತಂತ್ರ‍್ಯವನ್ನು ತಂದುಕೊಡುತ್ತೇನೆ”,“ನಮ್ಮ ದೇಶ ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ವಾತಂತ್ರ‍್ಯ ಒಂದೇ […]Read More

ಯುಗಾದಿ ಪರ್ವದ ಲಾಸ್ಯ

ಯುಗಾದಿ ಪರ್ವದ ಲಾಸ್ಯ ಯುಗಯುಗವದು ಕಳೆದರೂಮತ್ತೆ ಮರಳಿ ಬಂದಿದೆ ಯುಗಾದಿ !ಶಿಶಿರದ ಕೊರೆವ ಚಳಿಯನತ್ತ ಸರಿಸಿ..ನೀಡಿದೆ ಜನರ ಬದುಕಲಿ ಹೊಸ ನಾಂದಿ !! ನವಚೈತ್ರದಿ ಅರಳಿಹ ವನಸುಮವುಕೊಡುತಿಹುದು ಸವಿ ಪ್ರಕೃತಿಗೊಂದು ಬೆರಗು !ಒಣಗಿಹ ಕಾನನವು ಮತ್ತೆ ಹಸಿರಲಿ ಕಂಗೊಳಿಸಿ..ನೀಡಿದೆ ಅಂಧಕಾರದಲಿಹ ಜನಕೊಂದು ಬೆಳಗು !! ಚೈತ್ರಮಾಸದಿ ಸಿಹಿಮಾವೊಂದೇ ಅರಳಲಿಲ್ಲಜೊತೆಗೆ ಅರಳುತಿದೆ ಕಹಿ ತುಂಬಿದಾ ಬೇವು !ಸಂತಸವೊಂದೇ ಜಗದಲಿಲ್ಲವೆಂಬ ನೀತಿಯಾ ಕಲಿಸಿ..ವರದಾನದಿ ಕೊಟ್ಟಿದೆ ಬಾಳಲಿ ನೋವು – ನಲಿವು !! ಚಿಗುರೆಲೆಗಳು ತೂಗಿ ಸಂತಸದಿ ನರ್ತಿಸಿವೆವಸಂತಾಗಮನದ ಸವಿಸ್ಪರ್ಶದಲಿ !ದೂರದ […]Read More