ಸವಿಸಂಜೆಯ ಚಿತ್ತಾರ

ಸವಿಸಂಜೆಯ ಚಿತ್ತಾರ ಅಂಬರದ ನೀಲಬಣ್ಣದಿಅಂದದ ಚಿತ್ತಾರವದು ಕಂಡಿದೆ!ಹೊನ್ನಿನ ರಂಗಲಿ ದಿಗಂತವು..ತನ್ನಿರುವನು ತಾನೇ ಮರೆತಂತಿದೆ!! ಅಹಸ್ಕರನ ಕಿರಣವು ಮಾಸಿ ತನ್ನಆಯಸ್ಸನು ಮರುದಿನಕೆ ದೂಡಿದೆ!ಮತ್ತದೇ ಉತ್ಸಾಹದಿ ಆಗಮಿಸಿರಲು..ಬತ್ತದಿಹ ಚೈತನ್ಯವ ಜಗಕೆ ತಂದಿದೆ!! ಪ್ರತಿದಿನವೂ ಅದೇ ಬೆಳಗುಪ್ರತಿನಿಮಿಷವೂ ಅದೇ ಸೊಬಗು!ನಿತ್ಯವೂ ಲೋಕ ತನ್ನಂತೆ ತಾ ನಡೆದು..ಮಿಥ್ಯವಿರದ ಪ್ರಕೃತಿ ತಾ ಅರಳಿದ ಮೆರುಗು!! ಮಾನವನ ಇಹದ ಬದುಕಲಿಯೂಮಾಸದಿಹ ಇಳಿಸಂಜೆಯು ಕಾಯುತಿದೆ!ಕಪ್ಪುಬಿಳುಪಿನ ರಂಗಿನಲಿ ತನಗೆ…ಒಪ್ಪಾದ ಬಣ್ಣವನು ಹುಡುಕುತಿದೆ!! ಸುಮನಾ ರಮಾನಂದಮುಂಬೈRead More

ಹೈಪೋಥೈರಾಯ್ಡಿಸಮ್ಮ್ – Hypothiroidism

ಹೈಪೋಥೈರಾಯ್ಡಿಸಮ್ಮ್ – Hypothiroidism ಹೈಪೋಥೈರಾಯ್ಡಿಸಮ್ ಅನ್ನು ಅಂಡರ್ ಆಕ್ಟಿವ್ ಥೈರಾಯ್ಡ್ ಎಂದೂ ಕರೆಯಲಾಗುತ್ತದೆ, ಇದು ರೋಗಿಯ ಥೈರಾಯ್ಡ್ ಗ್ರಂಥಿ (ಕತ್ತಿನ ಮುಂಭಾಗದಲ್ಲಿರುವ ಚಿಟ್ಟೆ-ಆಕಾರದ ಗ್ರಂಥಿ) ಸಾಕಷ್ಟು ಥೈರಾಯ್ಡ್ ಹಾರ್ಮೋನ್ (ಥೈರಾಕ್ಸಿನ್) ಅನ್ನು ರಕ್ತಪ್ರವಾಹಕ್ಕೆ ಉತ್ಪಾದಿಸಲು ಮತ್ತು ಸ್ರವಿಸಲು ವಿಫಲವಾದ ಸ್ಥಿತಿಯಾಗಿದೆ. ಹೈಪೋಥೈರಾಯ್ಡಿಸಮ್ ಒಂದು ದೈಹಿಕ ಅಸ್ವಸ್ಥತೆಯಾಗಿದ್ದು, ಇದರಲ್ಲಿ ದೇಹವು ಸಾಕಷ್ಟು ಥೈರಾಯ್ಡ್ ಹಾರ್ಮೋನುಗಳನ್ನು ಉತ್ಪಾದಿಸುವುದಿಲ್ಲ, ಹೆಚ್ಚಾಗಿ ಈ ಕಾಯಿಲೆ ಸ್ತ್ರೀಯರನ್ನು ಬಾಧಿಸುತ್ತದೆ ಪುರುಷರಿಗೂ ಇದು ಬರುವ ಸಾಧ್ಯತೆ ಇದೆ. ಥೈರಾಯಿಡ್ ಗ್ರಂಥಿಯ ಅಸಮತೋಲನ ಸ್ರವಿಸುವಿಕೆಯಿಂದ ಬೇರೆ ಬೇರೆ […]Read More

ಸಮಾಜ ಸಮನ್ವಯ

ಸಮಾಜ ಸಮನ್ವಯ ನಮ್ಮೂರ ಬೆಟ್ಟದ ತುದಿಯಲ್ಲಿಉದಯಿಸುವ ಸೂರ್ಯನಿಗೆಎದ್ದೇಳು ಮಂಜುನಾಥ ಏಳು ಬೆಳಗಾಯಿತುಎನ್ನುವ ಸ್ವಾಗತ ಗೀತೆಪ್ರತಿ ದಿನವೂನಮ್ಮೂರಿನ ದೇವಾಲಯದಲ್ಲಿ ಕೇಳಿ ಬರುತಿತ್ತು ಬೆಳಗಿನ ಜಾವ ನಾಲ್ಕು ಘಂಟೆಗೆಮಠ ಮಂದಿರದಲ್ಲಿ ಮೈಕ್ ಹತ್ತಿಸಿದರೆಶುಕ್ಲಾಂಬರದರಂ ಶಶಿವರ್ಣಂ ಚತುರ್ಭುಜಂನೊಂದಿಗೆ ಮುಂದುವರಿಯುತ್ತಿತ್ತು… ಮಂದಿರದ ಮೈಕ್ ನೊಂದಿಗೆ ಮಸೀದಿಯಲ್ಲಿ ಕೂಗುತ್ತಿದ್ದ ಆಜಾನಧ್ವನಿಯೂ ಗಾಳಿಯಲ್ಲಿ ವಿಲೀನಗೊಂಡು ತೇಲಿಮಠದ ಸ್ವಾಗತ ಗೀತೆಯೊಂದಿಗೆ ಬೆರೆತುಅರಳುವ ಮೊಗ್ಗುಗಳಿಗೆ, ಹಾರುವ ಹಕ್ಕಿಗಳಿಗೆ,ಮೊಳಕೆಯೊಡೆಯುವ ಬೀಜಕ್ಕೆ, ಕೂಗುವ ಕೋಳಿಗೆ,ಇಂಪಾದ ಸಂಗೀತದೊಂದಿಗೆ ಶುಭ ಕೋರುತಿತ್ತು ನಿನ್ನೆಯ ಕತ್ತಲೆಯ ಬಾನಿನ ಮುಸುಕಿನಲ್ಲಿಹಕ್ಕಿಗಳ ಹಿಂಡು ರಂಗೋಲಿ ಹಾಕಿಕರಗುವ ಚಂದಿರನಿಗೂ ದಾರಿ […]Read More

ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಸ್ವೇಚ್ಛಾಚಾರ

ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಸ್ವೇಚ್ಛಾಚಾರ ಸ್ವತಂತ್ರ ಭಾರತದಲ್ಲಿ ಪ್ರತಿಯೊಬ್ಬ ಭಾರತೀಯ ಪ್ರಜೆಗೂ ವಾಕ್ ಸ್ವಾತಂತ್ರ್ಯ… ತನ್ನ ಭಾವನೆಗಳು ಹಾಗೂ ಅಭಿಪ್ರಾಯಗಳನ್ನು ಇತರರ ಜತೆ ಹಂಚಿಕೊಳ್ಳುವ ಅಥವಾ ವ್ಯಕ್ತಪಡಿಸುವ ಮುಕ್ತವಾದ ಅವಕಾಶವಿದ್ದು ಇದು ಆತನ ಸಾಂವಿಧಾನಿಕ ಹಕ್ಕೂ ಆಗಿರುತ್ತದೆ. ಇದು ಮುಖ್ಯವಾಗಿ ವಿವಿಧ ರೀತಿಯ ಪ್ರತಿಭಟನೆಗಳು, ಮನವಿಗಳು ಅಥವಾ ವ್ಯವಸ್ಥೆಯನ್ನು ವಿರೋಧಿಸುವುದರ ಮೂಲಕವೂ ಅಗಿರಬಹುದು. ಆದರೆ ಇತ್ತೀಚಿನ ದಿನಗಳಲ್ಲಿ ಇವುಗಳಿಗಿಂತ ಹೆಚ್ಚಿನ ಪ್ರಾಧಾನ್ಯತೆ ಅಥವಾ ಪ್ರಾತಿನಿಧ್ಯವನ್ನು ಪಡೆಯುತ್ತಿರುವುದು ಮಾಧ್ಯಮಗಳು. ಅವುಗಳಲ್ಲಿ ಪ್ರಮುಖವಾಗಿ ಟೀವಿ ಮಾಧ್ಯಮಗಳು ಹಾಗೂ ವೃತ್ತಪತ್ರಿಕೆಗಳು ಮತ್ತು […]Read More

ಬದುಕುವ ಪರಿ

ಬದುಕುವ ಪರಿ ಈ ಬದುಕೊಂದು ಅವಕಾಶಗಳಮಹಾ ಸಾಗರಬೆದರದಿರು ಎಂದಿಗೂ,ಹೂರದೂಡಿಬಿಟ್ಟಾರು,ಈ ಜಗದಾಚೆಗೂ ನಿಲ್ಲದಿರು ತುಸು ಹೊತ್ತುವಿಶ್ರಾಂತಿಗೆ ಸಯಯವಿಲ್ಲದಿಲ್ಲಎಂದಿಗಾದರೂ ನೀ ಮಹಾ ವಿಶ್ರಾಂತ ಸಮಯ ಎಲ್ಲರಿಗೂ ಒಂದೇಆದರೇತಕೆ ವಿಭಿನ್ನ ನೀ ನಂಬಿದ ಜನ.ಎಲ್ಲ ತಿಮಿಂಗಿಲಗಳಿಗೂ ಜಾಗವಿದೆ ಇಲ್ಲಿಹುಡುಕದಿರು ಜಾಗವ ಸಣ್ಣ ಬಾವಿಯೊಳಗೆ ನಾವು ಸಾಗುತ್ತಲಿರೋಣಸಾಧ್ಯವಾದರೆ ಸಮಾಜದ ಜೊತೆ, ಜೊತೆಗೆ.ಇಲ್ಲದಿರೆ ಒಂಟಿ ಸಲಗದಂತೆಬದುಕಿ ಬಿಡೋಣ ಒಮ್ಮೊಮ್ಮೆ ನಿಜ ಸಂತನಂತೆ!!! ಪವನ ಕುಮಾರ ಕೆ ವಿಬಳ್ಳಾರಿRead More

ಕರುಣಾಳು ಬಾ ಬೆಳಕೆ

ಕರುಣಾಳು ಬಾ ಬೆಳಕೆ ಸಿರಿಯ ಪಂಜರವ ಹರಿದೊಗೆದುಸುಖದ ಮೂಲವ ಹುಡುಕುತಬೋಧಿ ವೃಕ್ಷದಡಿ ತಪವಗೈದುದಿವ್ಯ ಜ್ಞಾನವನು ಪಡೆದರು ಬುದ್ಧ ಅಳುವವರ ಕಂಬನಿಯೊರೆಸಲುವರ್ಗ ವರ್ಣ ಲಿಂಗ ಭೇದಗಳಳಿಸಲುಗುಡಿಸಲೊಳಿರುವವರ ಹುಡುಕುತನಡೆದರು ಕರುಣಾಮೂರ್ತಿ ಬುದ್ಧ ಕೊಲ್ಲಲಿಲ್ಲ ನೀವು ಪಾಪಿಗಳನುದ್ವೇಷಿಸಲಿಲ್ಲ ನೀವು ಕೋಪಿಗಳನುಕಿತ್ತೊಗೆದಿರಿ ನೀವು ಪಾಪಿಗಳಮನದಾಳದ ಕೊಳೆತ ಕಸವನು ದುಃಖದ ಮೂಲ ಆಸೆಯ ಬಿಡಿಸಿಶುದ್ಧಾಚರಣೆಯ ದೀಕ್ಷೆಯ ನೀಡಿಜ್ಞಾನಾರ್ಥಿಗಳಿಗೆ ಜ್ಞಾನ ದಾಸೋಹಆರಂಭಿಸಿದ ವಿಶ್ವಗುರು ಬುದ್ಧ ಜ್ಞಾನದ ಸುದೀಪ ಹೊತ್ತಿಸಿಅಜ್ಞಾನದ ತಮವ ಓಡಿಸಿದಕರುಣಾಳು ಬೆಳಕು ಬುದ್ಧಮತ್ತೊಮ್ಮೆ ಅವತರಿಸಿ ಬನ್ನಿ ಡಾ. ಗುರುಸಿದ್ಧಯ್ಯಾ ಸ್ವಾಮಿಅಕ್ಕಲಕೋಟ ಮಹಾರಾಷ್ಟ್ರಮೊಬೈಲ್ 9175547259Read More

ಶಾಖಾಹಾರಿ ಕನ್ನಡ ಚಿತ್ರ

ಶಾಖಾಹಾರಿ ಕನ್ನಡ ಚಿತ್ರ ಚಿತ್ರದ ಬಗ್ಗೆ ಹೀಗೊಂದು ನೋಟ… ಮಲೆನಾಡಿನ ಪುಟ್ಟ ಹಳ್ಳಿಯಲ್ಲಿನ ಪುಟ್ಟ ಶಾಖಾಹಾರಿ ಹೊಟೇಲ್. ಅದರ ಮಾಲೀಕ ಕಮ್ ಭಟ್ಟ ಕಮ್ ಸಪ್ಲೈರ್ ಎಲ್ಲವೂ ಆದ ಸುಬ್ಬಣ್ಣನ ಸುತ್ತ ನಡೆವ ರಾತ್ರಿ-ಬೆಳಗು, ಕತ್ತಲೆ-ಬೆಳಕುಗಳ ಸರಣೀ ಚಿತ್ರಗುಚ್ಚ ಈ ಚಿತ್ರ. ತನ್ನ ಪಾಡಿಗೆ ತಾನಿದ್ದರೂ ಆಕಸ್ಮಿಕಗಳು ಒಂದರ ಮೇಲೊಂದು ಬಂದೆರಗಿ ಮೃದು ಸ್ವಭಾವದವನಿಂದಲೂ ಕಠೋರ ಕಾರ್ಯ ಮಾಡುವಂತೆ ಪ್ರೇರೇಪಿಸುವ ಕತೆ ಇಲ್ಲಿದೆ. ಹಲವಾರು ವಿಷಯಗಳನ್ನು ತಮ್ಮ ಮೊದಲ ಚಿತ್ರದಲ್ಲೇ ನಿರ್ದೇಶಕ ಹೇಳಿದ್ದಾರೆ. ರಂಗಾಯಣ ರಘು ಹಾಗೂ […]Read More

ಸ್ವಯಂ ಕಾಳಜಿ

ಸ್ವಯಂ ಕಾಳಜಿ ಇತರರ ಬಗೆಗಿನ ಕಾಳಜಿಯು ಮನುಷ್ಯನ ಪರಮ ಧರ್ಮ; ಆದರೆ ಇತರರ ಕಾಳಜಿಯಲ್ಲಿ ಸ್ವಯಂ ನಿರ್ಲಕ್ಷ್ಯ ಬೇಡ. ಒಂದು ಕಾಡಿನಲ್ಲಿ ಹೆಣ್ಣು ಕೋತಿಯೊಂದು ತನ್ನ ಮರಿಯೊಂದಿಗೆ ವಾಸವಾಗಿದ್ದು, ಮರಿಯನ್ನು ಅತಿಯಾಗಿ ಪ್ರೀತಿಸುತ್ತಿತ್ತು. ಮರಿಯನ್ನು ತಾನು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಾ ತನಗೆ ತಿನ್ನಲು ಏನು ಸಿಕ್ಕಿದರೂ ಮೊದಲಿಗೆ ತನ್ನ ಮರಿಗೇ ತಿನ್ನಲು ನೀಡುತ್ತಿತ್ತು. ತಾನು ಎಲ್ಲೇ ಹೋದರೂ ಮರಿಯನ್ನು ತನ್ನ ಹೊಟ್ಟೆಯ ಅಡಿಯಲ್ಲಿಯೇ ಹಿಡಿದುಕೊಂಡು ತಿರುಗುತ್ತಿತ್ತು. ಇದರಿಂದಾಗಿ ಗುಂಪಿನಲ್ಲಿದ್ದ ಇತರ ಕೋತಿಗಳಿಗೂ ಆ ತಾಯಿ ಕೋತಿಯ ತನ್ನ […]Read More

ಈಸ ಬೇಕು, ಇದ್ದು ಜೈಸ ಬೇಕು

ಈಸ ಬೇಕು, ಇದ್ದು ಜೈಸ ಬೇಕು ಜೀವನ ಎಲ್ಲರಿಗೂ ಸುಖದ ಸುಪ್ಪತ್ತಿಗೆಯಲ್ಲ. ಕೆಲವರು ಬಹಳಷ್ಟು ದುಃಖ, ನಷ್ಟಗಳನ್ನು, ನೋವುಗಳನ್ನೂ ಜೀವನದಲ್ಲಿ ಕಂಡಿರುತ್ತಾರೆ. ಎಷ್ಟೋ ವೇಳೆ, ಸಾಕಪ್ಪಾ ಈ ಜೀವನ ಎಂದು ಹತಾಶರಾಗಿ ಸಾಯಬೇಕು ಎಂದುಕೊಂಡಾಗ ಈ ಮಾತುಗಳು ಜನ ಸಾಮಾನ್ಯರಿಗೆ ಅಮೃತವಾಣಿಯಂತೆ ಚೈತನ್ಯ ನೀಡಿದೆ. ತಮಗೆದುರಾಗುವ ಪ್ರತಿಯೊಂದು ಆಪತ್ತನ್ನೂ ಒಂದು ಅವಕಾಶವೆಂದು ಭಾವಿಸಿ, ಅದನ್ನು ಉಪಯೋಗಿಸಿಕೊಂಡು ಸಂತಸದಿಂದ ಬಾಳುವಂತೆ ನಮ್ಮ ಹಿರಿಯರು ಹೇಳಿದ್ದಾರೆ, ಅವರು ಅದರಂತೆಯೇ ನಡೆದಿದ್ದಾರೆ. *ಮಾನವ ಜನ್ಮ ದೊಡ್ಡದು* ಎಂಬ ದಾಸವಾಣಿಯಂತೆ ಆ ದೇವರು […]Read More

ಜನನಿ

ಜನನಿ ನವಮಾಸ ನೋವುಂಡು ಹಡೆದಳು ಹೆತ್ತವ್ವಪದಗಳಿಗೆ ಸಿಗದ ವ್ಯಕ್ತಿತ್ವವುಳ್ಳ ನನ್ನವ್ವನೂರು ಜನ್ಮಕೂ ನೀನೇ ನನ್ನ ಹಡೆದವ್ವದೇವರಿಗಿಂತ ಮಿಗಿಲು ನನ್ನ ಪ್ರೀತಿಯ ಅವ್ವ ಅಮ್ಮ ನಿನ್ನ ತೋಳಿನಲ್ಲಿ ಸ್ವರ್ಗವ ಕಂಡೆನುನಿನ್ನ ಮಡಿಲಲ್ಲಿ ಸ್ವರ್ಗದ ಸಿರಿಯ ಪಡೆದೆನುನೀನೆ ನನ್ನ ಮನದ ದೇವರೆಂದು ತಿಳಿದೆನುಪ್ರತಿನಿತ್ಯವೂ ನಿನ್ನ ಪಾದವ ಪೂಜಿಸಿದೆನು ಸೋಲಿನಲ್ಲಿ ಗೆಲುವಾಗಿ ಅನ್ಯಾಯದಲ್ಲಿ ನ್ಯಾಯವಾಗಿಅಧರ್ಮದಲ್ಲಿ ಧರ್ಮವಾಗಿ ಸ್ವಾರ್ಥದಲ್ಲಿ ನಿಸ್ವಾರ್ಥಿಯಾಗಿಬದುಕಿದೆ ನೀನು ಕಣ್ಣಿಗೆ ಕಾಣುವ ದೇವರಾಗಿಸಂಬಂಧಗಳಲ್ಲಿ ಬೆಲೆ ಬಾಳುವ ಮಹಾತ್ಯಾಗಿಯಾಗಿ ಜನ್ಮ ನೀಡಿದ ಜನನಿಗೆ ಮಾತೃದೇವೋಭವಅಕ್ಷರ ಕಲಿಸಿದ ಮಾತೆಗೆ ಆಚಾರ್ಯದೇವೋಭವತಂದೆಯ ಪ್ರೀತಿ ತೋರಿಸಿದ […]Read More