ಶಾಖಾಹಾರಿ ಕನ್ನಡ ಚಿತ್ರ ಚಿತ್ರದ ಬಗ್ಗೆ ಹೀಗೊಂದು ನೋಟ… ಮಲೆನಾಡಿನ ಪುಟ್ಟ ಹಳ್ಳಿಯಲ್ಲಿನ ಪುಟ್ಟ ಶಾಖಾಹಾರಿ ಹೊಟೇಲ್. ಅದರ ಮಾಲೀಕ ಕಮ್ ಭಟ್ಟ ಕಮ್ ಸಪ್ಲೈರ್ ಎಲ್ಲವೂ ಆದ ಸುಬ್ಬಣ್ಣನ ಸುತ್ತ ನಡೆವ ರಾತ್ರಿ-ಬೆಳಗು, ಕತ್ತಲೆ-ಬೆಳಕುಗಳ ಸರಣೀ ಚಿತ್ರಗುಚ್ಚ ಈ ಚಿತ್ರ. ತನ್ನ ಪಾಡಿಗೆ ತಾನಿದ್ದರೂ ಆಕಸ್ಮಿಕಗಳು ಒಂದರ ಮೇಲೊಂದು ಬಂದೆರಗಿ ಮೃದು ಸ್ವಭಾವದವನಿಂದಲೂ ಕಠೋರ ಕಾರ್ಯ ಮಾಡುವಂತೆ ಪ್ರೇರೇಪಿಸುವ ಕತೆ ಇಲ್ಲಿದೆ. ಹಲವಾರು ವಿಷಯಗಳನ್ನು ತಮ್ಮ ಮೊದಲ ಚಿತ್ರದಲ್ಲೇ ನಿರ್ದೇಶಕ ಹೇಳಿದ್ದಾರೆ. ರಂಗಾಯಣ ರಘು ಹಾಗೂ […]Read More
ಸ್ವಯಂ ಕಾಳಜಿ ಇತರರ ಬಗೆಗಿನ ಕಾಳಜಿಯು ಮನುಷ್ಯನ ಪರಮ ಧರ್ಮ; ಆದರೆ ಇತರರ ಕಾಳಜಿಯಲ್ಲಿ ಸ್ವಯಂ ನಿರ್ಲಕ್ಷ್ಯ ಬೇಡ. ಒಂದು ಕಾಡಿನಲ್ಲಿ ಹೆಣ್ಣು ಕೋತಿಯೊಂದು ತನ್ನ ಮರಿಯೊಂದಿಗೆ ವಾಸವಾಗಿದ್ದು, ಮರಿಯನ್ನು ಅತಿಯಾಗಿ ಪ್ರೀತಿಸುತ್ತಿತ್ತು. ಮರಿಯನ್ನು ತಾನು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಾ ತನಗೆ ತಿನ್ನಲು ಏನು ಸಿಕ್ಕಿದರೂ ಮೊದಲಿಗೆ ತನ್ನ ಮರಿಗೇ ತಿನ್ನಲು ನೀಡುತ್ತಿತ್ತು. ತಾನು ಎಲ್ಲೇ ಹೋದರೂ ಮರಿಯನ್ನು ತನ್ನ ಹೊಟ್ಟೆಯ ಅಡಿಯಲ್ಲಿಯೇ ಹಿಡಿದುಕೊಂಡು ತಿರುಗುತ್ತಿತ್ತು. ಇದರಿಂದಾಗಿ ಗುಂಪಿನಲ್ಲಿದ್ದ ಇತರ ಕೋತಿಗಳಿಗೂ ಆ ತಾಯಿ ಕೋತಿಯ ತನ್ನ […]Read More
ಈಸ ಬೇಕು, ಇದ್ದು ಜೈಸ ಬೇಕು ಜೀವನ ಎಲ್ಲರಿಗೂ ಸುಖದ ಸುಪ್ಪತ್ತಿಗೆಯಲ್ಲ. ಕೆಲವರು ಬಹಳಷ್ಟು ದುಃಖ, ನಷ್ಟಗಳನ್ನು, ನೋವುಗಳನ್ನೂ ಜೀವನದಲ್ಲಿ ಕಂಡಿರುತ್ತಾರೆ. ಎಷ್ಟೋ ವೇಳೆ, ಸಾಕಪ್ಪಾ ಈ ಜೀವನ ಎಂದು ಹತಾಶರಾಗಿ ಸಾಯಬೇಕು ಎಂದುಕೊಂಡಾಗ ಈ ಮಾತುಗಳು ಜನ ಸಾಮಾನ್ಯರಿಗೆ ಅಮೃತವಾಣಿಯಂತೆ ಚೈತನ್ಯ ನೀಡಿದೆ. ತಮಗೆದುರಾಗುವ ಪ್ರತಿಯೊಂದು ಆಪತ್ತನ್ನೂ ಒಂದು ಅವಕಾಶವೆಂದು ಭಾವಿಸಿ, ಅದನ್ನು ಉಪಯೋಗಿಸಿಕೊಂಡು ಸಂತಸದಿಂದ ಬಾಳುವಂತೆ ನಮ್ಮ ಹಿರಿಯರು ಹೇಳಿದ್ದಾರೆ, ಅವರು ಅದರಂತೆಯೇ ನಡೆದಿದ್ದಾರೆ. *ಮಾನವ ಜನ್ಮ ದೊಡ್ಡದು* ಎಂಬ ದಾಸವಾಣಿಯಂತೆ ಆ ದೇವರು […]Read More
ಜನನಿ ನವಮಾಸ ನೋವುಂಡು ಹಡೆದಳು ಹೆತ್ತವ್ವಪದಗಳಿಗೆ ಸಿಗದ ವ್ಯಕ್ತಿತ್ವವುಳ್ಳ ನನ್ನವ್ವನೂರು ಜನ್ಮಕೂ ನೀನೇ ನನ್ನ ಹಡೆದವ್ವದೇವರಿಗಿಂತ ಮಿಗಿಲು ನನ್ನ ಪ್ರೀತಿಯ ಅವ್ವ ಅಮ್ಮ ನಿನ್ನ ತೋಳಿನಲ್ಲಿ ಸ್ವರ್ಗವ ಕಂಡೆನುನಿನ್ನ ಮಡಿಲಲ್ಲಿ ಸ್ವರ್ಗದ ಸಿರಿಯ ಪಡೆದೆನುನೀನೆ ನನ್ನ ಮನದ ದೇವರೆಂದು ತಿಳಿದೆನುಪ್ರತಿನಿತ್ಯವೂ ನಿನ್ನ ಪಾದವ ಪೂಜಿಸಿದೆನು ಸೋಲಿನಲ್ಲಿ ಗೆಲುವಾಗಿ ಅನ್ಯಾಯದಲ್ಲಿ ನ್ಯಾಯವಾಗಿಅಧರ್ಮದಲ್ಲಿ ಧರ್ಮವಾಗಿ ಸ್ವಾರ್ಥದಲ್ಲಿ ನಿಸ್ವಾರ್ಥಿಯಾಗಿಬದುಕಿದೆ ನೀನು ಕಣ್ಣಿಗೆ ಕಾಣುವ ದೇವರಾಗಿಸಂಬಂಧಗಳಲ್ಲಿ ಬೆಲೆ ಬಾಳುವ ಮಹಾತ್ಯಾಗಿಯಾಗಿ ಜನ್ಮ ನೀಡಿದ ಜನನಿಗೆ ಮಾತೃದೇವೋಭವಅಕ್ಷರ ಕಲಿಸಿದ ಮಾತೆಗೆ ಆಚಾರ್ಯದೇವೋಭವತಂದೆಯ ಪ್ರೀತಿ ತೋರಿಸಿದ […]Read More
ನೆನಪು ನಿನ್ನ ನೆನಪುಗಳೆನ್ನಮನದ ತಂತಿಯಮೀಟಿ, ನೋವಿನಾರಾಗವನು ತಾನುಡಿಸುತಿಹುದು ; ಬೆಳದಿಂಗಳೂ ಇಂದುಸುಡುವ ಬಿರುಬಿಸಿಲಾಗಿಅದರ ಜ್ವಾಲೆಗಳೆನ್ನಹೂ ಮನವ ಬೆಂಬೆತ್ತಿಕಾಡುತಿಹುದು ! ನನ್ನ ಮನವದು ತಾನುನಿನ್ನ ಬರುವಿಕೆಗಾಗಿಮಳೆಹನಿಗೆ ಬಾಯ್ದೆರೆದಚಾತಕ ಪಕ್ಷಿಯೊಲುಕಾದು ಕುಳಿತಿಹುದು; ನನ್ನ ಹೂ ಕಣ್ಗಳಲಿನಿನ್ನ ಕಾಣುವ ಆಸೆಮುಳ್ಳಂತೆ ಹೊಕ್ಕಿರಲುಕಣ್ರೆಪ್ಪೆಗಳದರೊಡನೆಕಾವಲಿಹುದು ! ನನ್ನ ಮನದಾಗಸದಚಂದ್ರ ನೀನಿಲ್ಲದೆಯೆಬೆಲ್ಲ ಜಜ್ಜಿದ ಕಲ್ಲುಮೂಲೆಯಲ್ಲಿರುವಂತೆಅಳುತಲಿಹುದು ! ನನ್ನನುಮತಿಯಿಲ್ಲದೆ,ನೆನಪುಗಳ ರಾಶಿಯನುಮಡಿಲಿಗೆರೆದ ಓ ಸಖನೆನೀನೆಲ್ಲಿರುವೆಯೆಂದುಮನ ಕೇಳುತಿಹುದು !! ಶ್ರೀವಲ್ಲಿ ಮಂಜುನಾಥRead More
ಓರ್ಕಾ – ಕೊಲೆಗಾರ ತಿಮಿಂಗಿಲ ಡಾಲ್ಫಿನ್ ಜಾತಿಗೆ ಸೇರಿದ ಸಮುದ್ರದಲ್ಲಿನ ಪರಭಕ್ಷಕಗಳ ಪೈಕಿ ಓರ್ಕಾ ತಿಮಿಂಗಿಲಗಳು ಅಗ್ರಪರಭಕ್ಷಕಗಳು ( ಅಪೆಕ್ಸ್ ಪ್ರಿಡೇಟರ್ ). ಕಿಲ್ಲರ್ ವೇಲ್ಸ್ ಎಂದು ಕರೆಯುವ ಈ ತಿಮಿಂಗಿಲಗಳು 6 ರಿಂದ 8 mt ಉದ್ದ , 3500 ಯಿಂದ 5500 ಸಾವಿರ ಕೇಜಿ ತೂಗುತ್ತವೆ. ಇವು ಡಾಲ್ಫಿನ್ ಗಳು. ಎಲ್ಲಾ ಡಾಲ್ಫಿನ್ ಗಳು ತಿಮಿಂಗಿಲಗಳೆ, ಎಲ್ಲಾ ತಿಮಿಂಗಿಲಗಳು ಡಾಲ್ಫಿನ್ ಗಳಲ್ಲ. ತಿಮಿಂಗಿಲಗಳನ್ನ (Cetacea) ಅನೇಕ ಕುಟುಂಬಗಳಲ್ಲಿ ವಿಭಾಗಿಸಿದ್ದಾರೆ. ಅವುಗಳಲ್ಲಿ Delphinidae ಎನ್ನುವುದು ಡಾಲ್ಫಿನ್ […]Read More
ನೆನಪಿನ ಹಾದಿಯಲ್ಲಿ ಒಲವಿನ ಮಳೆಯಲ್ಲಿನಿನ್ನ ನೆನಪಾಗುತಿದೆಏಕೆ ಹೀಗೆ!!?ಭಾವ ಕಂಬನಿಗಳ ಜೊತೆಗೆನನ್ನ ಕಂಬನಿಯೂ ಹರಿಯುತ್ತಿದೆ..ನೋವಿಗೋ..? ನಲಿವಿಗೋ..?ತಿಳಿಯದಾಗಿದೆಯಲ್ಲ !!!?? ನಿನ್ನ ನೆನಪಿನಲೇ ನಾನು ಬರೆಯುತ್ತೇನೆ,ಬರೆದು ನಿರಾಳವಾಗುತ್ತೇನೆ,ನಿನ್ನ ನೆನಪಾದ ಗಳಿಗೆಯಲಿ…!! ನಾ ಬರೆದಾಗ ಭಾವದ ಬಸಿರುಪ್ರಸವ ವೇದನೆ ಅನುಭವಿಸಿಒಡಲ ಮಾತುಗಳು ಹೊರಬಂದುಆಗಸದಿ ಚಂದಿರನ ಬೆಳದಿಂಗಳು ಕಂಡಾಗನಿನ್ನ ನಗು ನೆನಪಾಗುತ್ತದೆ,ನಿನ್ನ ಮುಂಗುರುಳ ನರ್ತನ ಕಣ್ಣು ತುಂಬುತ್ತದೆನಿನ್ನ ಮಂದಹಾಸದ ನೆನಪಾಗಿಮೌನವಾಗುತ್ತೇನೆ!!! ನೀ ಅಂದು ಬೆನ್ನುಮಾಡಿ ಹೋದಹಾದಿಯಲಿ ನಾನೂ ನಡೆಯುತ್ತೇನೆ,ನಿನ್ನ ಹೆಜ್ಜೆಗಳ ಅರಸುತ್ತೇನೆ,ಕಾಲ್ಗಳು ಮುಂದೆ ಸಾಗದೇ ನಿಲ್ಲುತ್ತವೆ,ನಿನ್ನ ಹೆಜ್ಜೆ ಕಂಡ ಸಂತಸಕ್ಕೋ ?ನಿನ್ನ ಹಾದಿಗುಂಟ ನಡೆದ […]Read More
ಚಂದಿರನ ಚಮತ್ಕಾರ ಕಾಣದ ಆ ದೇವನು ಸೃಷ್ಟಿಸಿದಬುವಿಯಲಿ ಸಕಲವೂ ಸುಂದರ!ಶಶಿ ಮೂಡಿಸಿಹ ಬೆಳದಿಂಗಳಲಿ..ಹೊಳೆವ ತಾರೆಗಳದೇ ಚಿತ್ತಾರ!! ಪ್ರಕೃತಿಯ ಚೆಂದದ ಮಡಿಲಲಿಅಡಗಿದೆ ಸಾವಿರಾರು ವಿಚಿತ್ರ!ಧರೆಯಂಗಳದಿ ಮೂಡಿದ ತಂಪಲಿ..ತಂಗದಿರ ನೀಡಿಹನು ಹಾಲ್ಬೆಳಕ ಸೂತ್ರ!! ರವಿ ವಸುಂಧರೆಗೆ ತರುವಂತೆಕಣ್ಕೋರೈಸುವ ಹೊಂಗಿರಣವನು!ಚಂದಿರ ಅವನಿಂದ ಕಡ ತಂದ..ಬೆಳಕಿಂದ ಹಾಸಿಹನು ಬೆಳದಿಂಗಳನು!! ಆಗಸದಿ ಹರಡಿದ ತಾರೆಗಳಒಟ್ಟುಗೂಡಿಸಿ ನಲಿವನು ಚಂದಿರ!ಕಡುಬಿಸಿಲ ತಾಪಕೆ ಬಳಲಿದ ಇಳೆಯ..ತಾ ತಂಪಾಗಿಸಿ ಬೆಳಗಿಹನು ಅಂಬರ!! ಸುಮನಾ ರಮಾನಂದRead More
ತಾಯಿಯ ಒಡಲು – ಬಂಗಾರದ ಕಡಲು ತಾಯಿಯು ಒಂದು ಪದವಾಗಿದ್ದು ಅದು ಸ್ವತಃ ಪರಿಪೂರ್ಣ ಪದವಾಗಿದೆ. ನಮ್ಮ ಅಸ್ತಿತ್ವಕ್ಕೆ ತಾಯಿಯೇ ಮೂಲ ಕಾರಣ. ತಾಯಿ ನಮ್ಮ ಜನ್ಮದಲ್ಲಿ ದೇವರ ಸಂಗಾತಿ. ನಾವು ದೇವರನ್ನು ನೋಡಿಲ್ಲ, ಮುಟ್ಟಿಲ್ಲ, ಆದರೆ ದೇವರನ್ನು ಕಂಡರೆ ಅದು ತಾಯಿಯಂತಾಗಬಹುದು. ತಾಯಿಯೇ ಮೊದಲ ಗುರು ಎಂದು ನಮ್ಮ ಶಾಸ್ತ್ರಗಳಲ್ಲಿ ಹೇಳಲಾಗಿದೆ, ತಾಯಿಯ ಸೇವೆಯು ಎಲ್ಲಾ ದೇವರ ಸೇವೆ ಮಾಡಿದ ಪ್ರತಿಫಲವಾಗಿದೆ. ಈ ಭೂಮಿಯ ಮೇಲೆ ದೇವರು ಎಲ್ಲಾ ಕಡೆ ಇರಲು ಅಸಾಧ್ಯವೆಂದು ತಿಳಿದು, ಪ್ರತಿ […]Read More
ಮುಸ್ಸಂಜೆಯ ನೋಟ ಅಂದದ ವರ್ಷಧಾರೆ ಬರುತಿದೆಚೆಂದದ ಈ ಮುಸ್ಸಂಜೆಯಲಿ!ನೊಂದ ಬುವಿಯದನಪ್ಪಿ..ಮಿಂದಂತಿದೆ ಮಣ್ಣ ಘಮಲಿನಲಿ!! ಬಂಗಾರ ಬಣ್ಣದ ಬೆಳಕಿಂದರಂಗಾಗಿದೆ ಧರೆ ಹಸಿರಿನಲಿ!ಹಿಂಗಾರಿನ ಮುಸಲಧಾರೆಯ..ಗುಂಗಿನಲಿದೆ ಇಳೆ ಹರುಷದಲಿ!! ತೆಂಗಿನ ಗರಿಗಳ ಓಲಾಟದಿರಂಗಿನ ಚಿತ್ತಾರ ಗಗನದಲಿ!ಭೃಂಗವದು ಹೂವನ್ನು ಕಾಡುವಂತೆ..ತಂಗಾಳಿ ತೀಡಿದೆ ಸಂಜೆಯಲಿ!! ಬೆರಗಿನ ಚಟಪಟ ಮಳೆಹನಿಯುಮೆರುಗಿನಿಂದಾಗಮಿಸಿ ಅವನಿಯಲಿ!ಮೂಡಿಸಿ ಚಿತ್ತಾರವನಾಗಸದಿ..ಸೊಬಗು ತಂದಿದೆ ಬೈಗಿನಲಿ!! ಸುಮನಾ ರಮಾನಂದRead More