ಗುದದ ರೋಗಗಳು (Anal diseases) – 2

ಗುದದ ರೋಗಗಳು (Anal diseases) – 2 ಗುದದ್ವಾರದ ಬಿರುಕು/ಸೀಳು ವಯಸ್ಸು ಐವತ್ತು ತುಂಬಿದ ಶೇಕಡ ಐವತ್ತರಷ್ಟು ಜನರು ಈ ಜಗತ್ತಿನಲ್ಲಿ, ಅವರ ಜೀವಿತಾವಧಿಯಲ್ಲಿ ಮೂಲವ್ಯಾಧಿ ರೋಗದಿಂದ ಬಳಲಬಹುದು ಎಂಬ ಒಂದು ಅಂದಾಜಿದೆ. ಆದರೆ ಗುದದ್ವಾರದ ಸೀಳು ಅಥವ ಬಿರುಕಿನ ಬಗ್ಗೆ ನಿಖರ ಮಾಹಿತಿ ಇಲ್ಲದಿದ್ದರೂ, ಪ್ರತಿ ಐದು ಮಂದಿಗೆ ಒಬ್ಬರಲ್ಲಿ ಈ ರೋಗ ಕಂಡುಬರುವ ಸಾಧ್ಯತೆ ಇದೆಯಂತೆ. ಮೇಲಾಗಿ, ಮುಜುಗರ ಅಥವ ನಾಚಿಕೆಯಿಂದ ವೈದ್ಯರ ಸಲಹೆ ಪಡೆಯದೆ ದೂರ ಉಳಿಯುವವರ ಲೆಕ್ಕವನ್ನೂ ಸೇರಿಸಿದರೆ, ಒಟ್ಟಾರೆ ರೋಗಿಗಳ […]Read More

ಅಳಲು

ಅಳಲು ಗಿಡವಾದೆ, ಮರವಾದೆಬಯಲಿನಲಿ ಬೆತ್ತಲಾದೆಮಾನವನ ದಾಹಕೆ ಬಲಿಯಾದೆ ಹೆಚ್ಚಿಸಿಕೊಳ್ಳುತಿಹ ಮಾನವ ತನ್ನ ಸಂಕುಲವಾಕಡಿದು ಬುಡಮೇಲು ಮಾಡುತಿಹ ಸಸ್ಯರಾಶಿಯಾತನ್ನ ಹೊಟ್ಟೆ ಹೊರೆಯಲು ಕತ್ತರಿಸುತಿಹ ಮರಗಳಾ ಉರುವಲಿಗೆ ಮರಗಳೇ ಬೇಕೇನಿವನಿಗೆನಿಗಿ ನಿಗಿ ಹೊಳೆಯುತಿಹ ರವಿ ಕಾಣನಿವನಿಗೆಕಾದಿದೆ ತಕ್ಕ ಶಾಸ್ತಿ ಮುಂದೊಂದುದಿನ ಅವನಿಗೆ ಮುಂದೊಂದು ದಿನ ಹಸಿರಿಲ್ಲದೇ ನೆರಳಿಲ್ಲದೇನೀರಿಲ್ಲದೇ ಅವ ಒಣಗುವುದಿಲ್ಲವೇಎಂದೂ ಮರೆಯಾಗದ ಸೂರ್ಯ ನೋಡುವುದಿಲ್ಲವೇ ಕಾಡು ಕಡಿದರೆ ನಾಡಿಲ್ಲನಾಡಿಲ್ಲದಿರೆ ನಾವಿಲ್ಲ ಸಿ. ಎನ್. ಮಹೇಶ್Read More

ಅಕ್ಷರಗಳ ಮಾಲೆ – ನಮ್ಮೂರಿನ ಶಾಲೆ

ಅಕ್ಷರಗಳ ಮಾಲೆ – ನಮ್ಮೂರಿನ ಶಾಲೆ ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ ಎಂಬ ಕುವೆಂಪುರವರ ನುಡಿಯಂತೆ, ಭಕ್ತರಿಗೆ ದೇವಾಲಯವಾದರೆ ಪ್ರತಿ ವಿದ್ಯಾರ್ಥಿಗಳ ಪಾಲಿಗೆ ಶಾಲೆಯೇ ದೇವಾಲಯವಿದ್ದಂತೆ. ನಾವು ಜ್ಞಾನವನ್ನು ಪಡೆಯುವ ಸ್ಥಳವನ್ನು ಶಾಲೆ ಎಂದು ಕರೆಯಲಾಗುತ್ತದೆ. ಶಾಲೆಗೆ ದೇವಾಲಯದ ಸಾದೃಶ್ಯವನ್ನು ನೀಡಲಾಗಿದೆ. ನಮ್ಮ ಜೀವನದ ಪ್ರಮುಖ ಭಾಗವೆಂದರೆ ನಮ್ಮ ಬಾಲ್ಯ ಮತ್ತು ನಮ್ಮ ಬಾಲ್ಯವು ಶಾಲೆಯ ನೆನಪುಗಳಿಂದ ತುಂಬಿರುತ್ತದೆ. ಶಾಲೆ ಎಂದರೆ ಶಿಸ್ತು, ಶಿಕ್ಷಣ, ಶಿಕ್ಷಕರು, ಗೆಳತಿಯರು, ಗೆಳೆಯರು ಮುಂತಾದ ಚಿತ್ರಣ ಕಣ್ಮುಂದೆ ಬರುತ್ತದೆ. […]Read More

ಪರಶುರಾಮ ಸೃಷ್ಟಿಯ ನಾಡಿನಲ್ಲೊಂದು ಥೀಂ ಪಾರ್ಕ್

ಪರಶುರಾಮ ಸೃಷ್ಟಿಯ ನಾಡಿನಲ್ಲೊಂದು ಥೀಂ ಪಾರ್ಕ್ ಕರಾವಳಿ ಜಿಲ್ಲೆಗಳನ್ನು (ತುಳುನಾಡು) ಪರಶುರಾಮ ಸೃಷ್ಟಿಸಿದ ನಾಡು ಎಂದು ಕರೆಯುತ್ತಾರೆ. ಈ ಕರಾವಳಿಯ ಭಾಗವನ್ನು ಮಹರ್ಷಿ ಪರಶುರಾರಮರು ಸೃಷ್ಟಿಸಿದ್ದು ಎಂಬ ಪುರಾಣ ಪ್ರತೀತಿಯಿದೆ. ಸುಮಾರು 5,000 ವರ್ಷಕ್ಕೂ ಮೊದಲು ಈ ಭೂಮಿಯಲ್ಲಿ ಜೀವಿಸಿದ್ದ ಪರಶುರಾಮ, (ವಿಷ್ಣುವಿನ ಆರನೆಯ ಅವತಾರ) ಮತ್ತು ಬ್ರಹ್ಮನ ವಂಶಸ್ಥ ಹಾಗೂ ಶಿವನ ಶಿಷ್ಯ ಎಂಬ ಉಲ್ಲೇಖವಿದೆ. ಇವರು ರೇಣುಕೆ ಹಾಗೂ ಸಪ್ತರ್ಷಿ ಜಮದಗ್ನಿಯ ಪುತ್ರ. ಇವರು ತ್ರೇತಾಯುಗದ ಕೊನೆಯಲ್ಲಿ ಜೀವಿಸಿದ್ದರು. ತಮ್ಮ ತಾಯಿಗಾಗಿ ಪರಶುಘಡದಲ್ಲಿ (ಸವದತ್ತಿ) […]Read More

ಹೊಸ ಭಾವಲಾಸ್ಯ

ಹೊಸ ಭಾವಲಾಸ್ಯ ತಾಳ ತಪ್ಪದ ಮೌನರಾಗಕೆಮನವು ಮೂಕಭಾವ ತಳೆದಿದೆ!ಕುಳಿರ್ಗಾಳಿಯ ದಾಳಿಯಲೂ…ಚಿಗುರಿದೆಲೆಗಳು ನಗುತಿವೆ!! ಬತ್ತಿದೆದೆಯಲಿ ಹೊಸ ಕನಸುಗರಿಗೆದರಿ ಚೈತನ್ಯವು ಮೂಡಿದೆ!ರೆಂಬೆಕೊಂಬೆಗಳಲಿ ನಂಬಿಕೆಯುಕ್ಕಿಸಿ..ಹಚ್ಚಹಸಿರು ತಾ ನಲಿದಿದೆ!! ದಿಕ್ಕು ತಪ್ಪಿಸುವ ಕತ್ತಲೆಯಲಿನಂದದ ಬೆಳಕು ಉಳಿಯಲಿ!ಅವನೆಣಿಸಿದಾಗ ಪಯಣ ನಿಲುವುದು..ಜಡ ಬದುಕಿನ ನಿಲ್ದಾಣದಲಿ!! ವಿಸ್ತರಿಸಿದ ಅಂಬರದ ಕ್ಷಿತಿಜದೊಳುಮುಚ್ಚಿದ ಕಂಗಳಲಿ ಅಡಗಿದೆ ಬೆಳಕು!ಸತ್ಯದ ನಿಲುವಿಗೆ ನಿಜದೊಳು..ಮನತೆರೆದು ನೋಡಲು ನಲ್ಮೆಯ ಬದುಕು!! ಸುಮನಾ ರಮಾನಂದRead More

ಫಲಾಫಲ

ಫಲಾಫಲ ಬದುಕು ಜಟಕಾಬಂಡಿ, ವಿಧಿಯದರ ಸಾಹೇಬ ।ಕುದುರೆ ನೀನ್, ಅವನು ಪೇಳ್ದಂತೆ ಪಯಣಿಗರು ॥ಮದುವೆಗೋ ಮಸಣಕೋ ಹೋಗೆಂದ ಕಡೆಗೋಡು ।ಪದ ಕುಸಿಯೆ ನೆಲವಿಹುದು – ಮಂಕುತಿಮ್ಮ ॥ ೬೦೦ ॥ ಡಿವಿಜಿಯವರು ನಮ್ಮ ಬದುಕನ್ನು ಜಟಕಾ ಬಂಡಿಗೆ ಹೋಲಿಸಿ, ಅದನ್ನು ಹೊತ್ತು ನಡೆಸುವ ಕುದುರೆ ನಾವು ಎಂದಿದ್ದಾರೆ, ಇನ್ನು ಅದನ್ನು ನಡೆಸುವವನನ್ನು ವಿಧಿಗೆ ಹೋಲಿಸಿ, ವಿಧಿಯ ಆಣತಿಯಂತೆ ನಾವು ನಡೆಯುತ್ತೇವೆಯೇ ಹೊರತು ನಾವು ಅಂದುಕೊಂಡಂತೆ ಏನೂ ಆಗುವುದಿಲ್ಲ ಎಂದಿದ್ದಾರೆ. ಹಾಗೆಯೇ, ಜೀವನದಲ್ಲಿ ಯಾರಿಗಾದರೂ ತನ್ನ ಉನ್ನತಿಗೆ ತಾನೇ […]Read More

ಮತ್ತೆ ಹುಟ್ಟಿ ಬನ್ನಿ

ಮತ್ತೆ ಹುಟ್ಟಿ ಬನ್ನಿ ಮುತ್ತಿನಂಥ ‘ರಾಜ’, ಸಾಗರದಂಥ ‘ಪಾರ್ವತಮ್ಮ’ಮನೆಯೊಳು ಮೂಡಿದ ಫಳಫಳ ಬೆಳ್ಳಿ ‘ಚುಕ್ಕಿ’ಅಮ್ಮ ಬರೆದ ರಂಗವಲ್ಲಿಯಲ್ಲಿ ಮೂಡಿ ಬೆಳೆದಅವಸರದ ಗಗನಯಾತ್ರಿ ಮತ್ತೆ ಹುಟ್ಟಿ ಬನ್ನಿ ಪಾವನ ಗಂಗೆಯ ಕೊಳದೊಳ ತೀರ್ಥದ ಜಲತೀರ್ಥದ ಜಲದೊಳು ಉದಿಸಿದ ನವಕಮಲನವಕಮಲದ ಮೊದಲ ಮಂದ ಸ್ಮಿತಹಾಸಸ್ಮಿತಹಾಸದ ಸುಕುಮಾರ ಮತ್ತೆ ಹುಟ್ಟಿ ಬನ್ನಿ ಕೋಟಿ ಕೋಟಿ ಮನಗಳ ಗೆದ್ದ ಕೋಟ್ಯಾಧಿಪತಿಕೋಟಿ ಇದ್ದರೂ ಸೆಟೆಯದ ಸರಳ ಸುಮತಿಕೆರೆಯ ನೀರನು ಕೆರೆಗೆ ಚೆಲ್ಲಿದಂತೆ ದಾನಗೈದದಾನಶೂರ ಕರ್ಣ ಚಿನ್ನ ರನ್ನ  ಮತ್ತೆ ಹುಟ್ಟಿ ಬನ್ನಿ ದೀನ ದಲಿತ […]Read More

ಸಹ್ಯಾದ್ರಿ ವನ ಉಳಿಸಿಕೊಳ್ಳಲು ಅಭಿಯಾನ

ಸಹ್ಯಾದ್ರಿ ವನ ಉಳಿಸಿಕೊಳ್ಳಲು ಅಭಿಯಾನ ಬೆಂಗಳೂರು ಜ್ಞಾನ ಭಾರತಿ ಪುಣ್ಯಧಾಮವಾಗಿರುವುದು ನಮ್ಮೆಲ್ಲರ ಸುಕ್ರುತ. ಬೆಂಗಳೂರು ವಿಶ್ವ ವಿದ್ಯಾಲಯದ ಆವರಣದ ಬಯೋ ಪಾರ್ಕ್ ಆಮ್ಲಜನಕದ ಕಣಜವಾಗಿ, ಇಂಗಾಲ ಹೀರಿಕೊಳ್ಳುವ ಕೆಲಸ ಮಾಡುತ್ತಿದೆ. ನೀರಿನ ಆಸರೆಯೂ ಹಾಗೂ ಅಂತರ್ಜಲ ಮರುಪೂರಣ ಕೇಂದ್ರವೂ ಆಗಿದ್ದು ಬೆಂಗಳೂರಿಗರ ಸೌಭಾಗ್ಯ. ಹೈಕೋರ್ಟ್ ನಿರೀಕ್ಷೆಯಂತೆ ಇಕೋತೆರಪಿ ಕಾರ್ಯಕ್ರಮ ಡಾ.ಯಲ್ಲಪ್ಪ ರೆಡ್ಡಿಯವರಿಂದ ನಡೆಯುತ್ತಾ ವಿಶೇಷ ಚೇತನ ಮಕ್ಕಳ ಆಶಾದೀಪವಾಗಿದೆ. ಜ್ಞಾನ ಭಾರತಿಯಲ್ಲಿ ಲಕ್ಷಾಂತರ ಮರಗಳನ್ನು ಬೆಳೆಸಲು ಸ್ವಾಟ್, ಗ್ರೀನ್ಸ್ ಆರ್ಮಿ ಫೋರ್ಸ್, ಮಿಡಿತ ಫೌಂಡೇಶನ್, ಜೀವನ್ಮುಕ್ತಿ, ಅದಮ್ಯ […]Read More

ವಟವೃಕ್ಷ – ಆಲದ ಮರ

ವಟವೃಕ್ಷ – ಆಲದ ಮರ ಆಲದ ಮರವು ಹಲಸಿನ ಕುಟುಂಬಕ್ಕೆ ಸೇರಿದ (ಮೋರೇಸೀ ಕುಟುಂಬ), ಬೃಹತ್ತಾಗಿ ಬೆಳೆಯುವ ವೃಕ್ಷವಾಗಿದ್ದು ಮೊದಲಿಗೆ ಪರಾವಲಂಬಿ ಸಸ್ಯವಾಗಿ (ಎಪಿಫೈಟಿಕ್ ಅಂದರೆ ಇತರ ಮರಗಳನ್ನು ಆಶ್ರಯಿಸಿಕೊಂಡು ಬೆಳೆದು ನಂತರ ತಾನು ಸ್ವತಂತ್ರವಾಗಿ ಬೆಳೆಯುವ ಜಾತಿಯ ಸಸ್ಯ) ಜನ್ಮ ತಾಳುತ್ತದೆ. ಎಪಿಫೈಟಿಕ್ ಅಂದರೆ ಬೇರೊಂದು ಮರದ ಮೇಲೆ ಬಿದ್ದ ಬೀಜ ಹುಟ್ಟಿ ಅಲ್ಲಿಂದ ತನ್ನ ಜೀವನ ಚಕ್ರ ಆರಂಭಿಸುತ್ತದೆ. ಇದು ಭಾರತ ದೇಶದ ರಾಷ್ಟ್ರೀಯ ವೃಕ್ಷವೂ ಆಗಿದೆ. ಹಿಂದೂ ಧರ್ಮದಲ್ಲಿ ಪೂಜ್ಯನೀಯವಾಗಿರುವ ಅಶ್ವತ್ಥ ವೃಕ್ಷವೂ(ಅರಳೀ […]Read More

ಹೆಣ್ಣಿನ ನಡಿಗೆಯಲಿ ಜಗತ್ತು

ಹೆಣ್ಣಿನ ನಡಿಗೆಯಲಿ ಜಗತ್ತು ಅನವರತ ದುಡಿವ ಹೆಣ್ಣಾಗಿಎಲ್ಲರ ಬದುಕಿನ ಕಣ್ಣಾಗಿ..ಇವಳಾಗಿಹಳು ಸಕಲರ ಭಾವಚೇತನ..ನೀಡುವಿರಾ ಇವಳಿಗೆ ಪ್ರತಿಸ್ಪಂದನ..!!? ಹೊಂಗನಸಿನ ಭಾವ ರೆಕ್ಕೆಯಲಿಮನ ಹಾರುತಿದೆ ಬಾನಂಗಳದಲಿ..ಅರಿಯದ ದ್ವಂದ್ವ,ನಿಡುಸುಯ್ದ ಮನಸು..ಅವಳ ಕನಸಾಗುವುದೇ ಎಂದಾದರೂ ನನಸು..!!? ಸಂಸಾರದ ನಗುಮೊಗವ ನೋಡಿಭವ ಸಾಗರದಿ ಬಿಡದೆ ಈಜಾಡಿ..ಸಬಲೆಯಾಗಿ ಮಾಡಿದ ಮಂಥನಕೆ..ಬೆಲೆ ದೊರೆವುದೇ ಅವಳ ತ್ಯಾಗ ಜೀವನಕೆ..!!? ಬಾಳಿನಲಿಹ ಉತ್ತರವಿರದ ಜಟಿಲತೆಗೆಉತ್ತರಿಸಿದೆ ಅವಳ ಸ್ನಿಗ್ಧ ಸರಳತೆ..ತಲೆಬಾಗಿ ನಡೆದಿಹಳು ಲೋಕದ ನಿಯಮಕೆ..ಸಾಟಿ ಎಲ್ಲಿದೆ ಅವಳ ಸಂಯಮಕೆ..!!? ಬದುಕಲಿ ಬರುವ ಅಡೆತಡೆಗಳ ರಭಸಕೆಎದುರಿಸಿಹಳು ದಿಟ್ಟತನದಿ ಅದರ ಹೊಡೆತಕೆ..ಕಾದಿಹಳು ಸಮಾಧಾನದ ನುಡಿಗಳಿಗೆ..ಓಗೊಡುವಿರಾ […]Read More