ಹಿಂದಿನ ಸಂಚಿಕೆಯಿಂದ…. ಸ್ಕಂದಗುಪ್ತ- ನಿನ್ನ ಅವಸ್ಥೆಯನ್ನು ನೋಡಿದರೆ ನನಗೆ ‘ಅಯ್ಯೋ’ ಎನಿಸುತ್ತದೆ. ಮತ್ತೆ ಮತ್ತೆ ಕಾಳಿದಾಸನ ಮಾತುಗಳನ್ನು ಉದಾಹರಿಸುತ್ತಿರುವೆ. ನೀನು ಯುದ್ಧವನ್ನು ನೋಡಬೇಕೆಂದು ಆಸೆಪಟ್ಟೆ. ಆದ ಕಾರಣ ನಿನ್ನನ್ನು ಜೊತೆಯಲ್ಲಿ ಕರೆದುಕೊಂಡು ಬಂದೆ. ಹೀಗೆಂದು ತಿಳಿದಿದ್ದರೆ ನಿನ್ನ ಹೆಂಡತಿಯನ್ನೂ ಜೊತೆಯಲ್ಲಿ ಕರೆದುಕೊಂಡು ಬರಬಹುದಾಗಿತ್ತು. ಪಿಪ್ಪಲೀ ಮಿಶ್ರ- ‘ಬೇಡ ವಯಸ್ಯ. ಇದೇ ಒಳ್ಳೆಯದು. ನನಗೆ ಸ್ವಲ್ಪ ನೋವಾದರೂ ಪರವಾಗಿಲ್ಲ. ಆಕೆ ಏನಾದರೂ ಬಂದಿದ್ದರೆ ಇಲ್ಲಿಯ ಸೈನ್ಯ, ಆನೆ ಕುದುರೆ ಇವುಗಳನ್ನೆಲ್ಲಾ ನೋಡಿ, ಹೆದರಿ, ಪ್ರಾಣವನ್ನೇ ಬಿಡುತ್ತಿದ್ದಳು.’ ಈ ರೀತಿ […]Read More
ಸ್ಕಂದಾವಾರದಲ್ಲಿ (ಸೇನಾ ಶಿಬಿರದಲ್ಲಿ) ಮಧ್ಯಾಹ್ನದ ಊಟವಾದ ಮೇಲೆ ಸ್ಕಂದಗುಪ್ತನು ಶಿಬಿರದ ಒಂದು ಕೊಠಡಿಯಲ್ಲಿ ಮಲಗಿ ವಿಶ್ರಮಿಸಿಕೊಳ್ಳುತ್ತಿದ್ದನು. ಇಬ್ಬರು ಸಂವಾಹಕ (ಮಾಲೀಸು ಮಾಡುವವರು) ಅವನ ಕಾಲುಗಳನ್ನು ಒತ್ತುತ್ತಿದ್ದರು. ಒಬ್ಬ ದಾಸಿ ಚಾಮರವನ್ನುಬೀಸುತ್ತ ಗಾಳಿ ಹಾಕುತ್ತಿದ್ದಳು. ಭುಕ್ತಾ ರಾಜವದಾಚರೇತ್! ಆಗಿನ ಕಾಲದಲ್ಲಿ ಮಧ್ಯಾಹ್ನದ ಭೋಜನಾ ನಂತರ ವಿಶ್ರಮಿಸಿಕೊಳ್ಳುವ ಪದ್ಧತಿ ಇದ್ದಿತು. ರಾಜನಿಂದ ಮೊದಲುಗೊಂಡು ಸಾಧಾರಣ ಪಾಮರರವರೆಗೆ ಎಲ್ಲರೂ ಮಧ್ಯಾಹ್ನದ ಹೊತ್ತಿನಲ್ಲಿ ಸ್ವಲ್ಪ ಹೊತ್ತಾದರೂ ರಾಜನಂತೆ ಈ ಪದ್ಧತಿಯನ್ನು ಆಚರಿಸುತ್ತಿದ್ದರು. ಸ್ಕಂದಗುಪ್ತನ ಗುಡಾರದಲ್ಲಿ ಅನೇಕ ಕೊಠಡಿಗಳಿದ್ದವು. ಅವುಗಳಲ್ಲಿ ಒಂದು ಎಲ್ಲಕ್ಕಿಂತಲೂ ದೊಡ್ಡದು. […]Read More
ಹಿಂದಿನ ಸಂಚಿಕೆಯಿಂದ…. ನಡುರಾತ್ರಿಯಾದ ಮೇಲೆ ಅವನಿಗೆ ಎಚ್ಚರವಾಯಿತು. ಎದ್ದು ಕುಳಿತನು. ಬೆಂಕಿ ಆರಿ ತಣ್ಣಗಾಗಿತ್ತು. ಸುತ್ತಲೂ ಗಾಢಾಂಧಕಾರ. ರಟ್ಟಾ ಎದ್ದು ಬಂದು ಅವನ ತೋಳುಗಳನ್ನು ಬಿಗಿಯಾಗಿ ಅವಚಿಕೊಂಡು ಕುಳಿತಿರುವ ಹಾಗೆ ಭಾಸವಾಯಿತು. ಅವನ ಕಿವಿಯಲ್ಲಿ ‘ನೋಡಿರಿ ಗುಹೆಯ ಬಾಗಿಲ ಕಡೆ ನೋಡಿರಿ-’ ಎಂದು ರಟ್ಟಾ ಮೆಲ್ಲಗೆ ಹೇಳಿದಳು. ಚಿತ್ರಕನು ಗುಹೆಯ ಬಾಗಿಲ ಕಡೆ ದೃಷ್ಟಿ ಹರಿಸಿ ನೋಡುತ್ತಾನೆ- ಬೆಂಕಿಯ ಹಾಗೆ ಕೆಂಪು ಬಣ್ಣದ ಎರಡು ಕಣ್ಣುಗಳು ಅವರನ್ನೇ ದುರುಗುಟ್ಟಿ ನೋಡುತ್ತಿವೆ. ಕತ್ತಲಿನಲ್ಲಿ ಬೆಂಕಿಯಂತಿರುವ ಕಣ್ಣಿನ ಪ್ರಾಣಿಯ ಶರೀರ […]Read More
ಕಳೆದ ಸಂಚಿಕೆಯಿಂದ…. ಪಶ್ಚಿಮ ದಿಗ್ವಲಯವನ್ನು ಆರಕ್ತಸಿಕ್ತವನ್ನಾಗಿಸುತ್ತ ಸೂರ್ಯ ಅಸ್ತಂಗತನಾದನು. ನಾಲ್ಕು ದಿಕ್ಕಿಗೂ ಪರ್ವತ. ಉದ್ದವಾಗಿ ಮಲಗಿರುವ ಅಷ್ಟು ಎತ್ತರವಲ್ಲದ ಪರ್ವತಶ್ರೇಣಿ. ನಡು ನಡುವೆ ದೊಡ್ಡ ದೊಡ್ಡ ಬಂಡೆಗಳು ಎದ್ದು ನಿಂತಿವೆ. ಪರ್ವತದಲ್ಲಿ ಎಲ್ಲಿ ನೋಡಿದರೂ ಮುಳ್ಳು ಕಾರೆಗಿಡಗಳು, ಕಾಡ ಎಲಚಿಮರಗಳೇ ಕಾಣಿಸುತ್ತಿದ್ದವು. ಇಂಥ ಪರಿಸರದ ನಡುವೆ ಚಿತ್ರಕ ಹಾಗೂ ರಟ್ಟಾ ಕುದುರೆಯನ್ನೇರಿ ನಿಂತಿದ್ದಾರೆ. ರಟ್ಟಾ ಮೌನವಾಗಿ ಚಿತ್ರಕನ ಕಡೆ ನೋಡಿದಳು. ಅವಳ ಮುಖದಲ್ಲಿ ಒಂದು ವಿಚಿತ್ರವಾದ ನಗು ಕಾಣಿಸಿತು. ಅವರು ಪರ್ವತವನ್ನು ದಾಟಲು ಕೆಲವೊಮ್ಮೆ ಸರಿದಾರಿಯಲ್ಲಿ, ಕೆಲವೊಮ್ಮೆ […]Read More
—ಗಿರಿಲಂಘನ– ರಟ್ಟಾ ಹಾಗೂ ಚಿತ್ರಕ ಕುದುರೆಯ ಮೇಲೆ ಕುಳಿತುಕೊಳ್ಳುತ್ತಿರುವಾಗ ಜಂಬುಕ ಪಾಂಥಶಾಲೆಯೊಳಗಿಂದ ಓಡಿ ಬಂದು, ಚಿತ್ರಕ ಜೀನಿಗೆ ಒಂದು ಬಟ್ಟೆಯ ಗಂಟನ್ನು ಕಟ್ಟಿದನು. ಚಿತ್ರಕ- ‘ಏನಿದು?’ ಜಂಬುಕ- ಏನಿಲ್ಲ. ಸ್ವಲ್ಪ ಖಾದ್ಯ ಪದಾರ್ಥಗಳು. ಜೊತೆಗಿದ್ದರೆ ಒಳ್ಳೆಯದು’ ಸಮಯಕ್ಕೆ ಬೇಕಾಗಬಹುದು. ಚಿತ್ರಕ- ಒಳ್ಳೆಯದು. ನೀನೂ ಕೂಡ ಇನ್ನು ತಡ ಮಾಡಬೇಡ. ಜಂಬುಕ- ಇಲ್ಲ. ನನ್ನ ಬಳಿ ಕುದುರೆ ಇಲ್ಲ. ಕತ್ತೆಯ ಮೇಲೆ ಪ್ರಯಾಣ ಮಾಡಬೇಕಾಗುತ್ತದೆ. ಹೋಗಿ ಸೇರಲು ಸ್ವಲ್ಪ ತಡವಾಗುತ್ತದೆ. ರಟ್ಟಾ ಜಂಬುಕನ ಕೈಗೆ ಒಂದು ಸ್ವರ್ಣ ದೀನಾರವನ್ನು […]Read More
ಹಿಂದಿನ ಸಂಚಿಕೆಯಿಂದ…. ಹೋರಾಡಬೇಕಾದ ಸಂದರ್ಭ ಒದಗಿ ಬಂದರೆ ಚಿತ್ರಕ ಎಂದೂ ಧೈರ್ಯ ಕಳೆದುಕೊಳ್ಳುತ್ತಿರಲಿಲ್ಲ. ಯುದ್ಧಕ್ಕೆ ಮುಂಚೆ ಬುದ್ಧಿವಂತನಾದ ಸೇನಾಪತಿಯ ಹಾಗೆ ಅವನು ಎಲ್ಲ ಜವಾಬ್ದಾರಿಯನ್ನು ತಾನೇ ವಹಿಸಿಕೊಂಡನು. ರಟ್ಟಾಳ ಕೈ ಹಿಡಿದು ಅವನು ಅವಳನ್ನು ಕೊಠಡಿಗೆ ಕರೆದುಕೊಂಡು ಬಂದು ಕುಳ್ಳಿರಿಸಿದನು. ಅವಳ ಕೈ ಹಿಮದಂತೆ ಕೊರೆಯುತ್ತಿತ್ತು. ತುಟಿಗಳು ನಡುಗುತ್ತಿದ್ದವು. ನಾರೀಮಣಿ ಹೊರಗೆ ಪುರುಷರಂತೆ ಎಷ್ಟೇ ಚೆನ್ನಾಗಿ ಅಭಿನಯಿಸಿದರೂ, ಆಂತರ್ಯದಲ್ಲಿ ಅವರು ಅಬಲೆಯರು! ಚಿತ್ರಕನು ಅವಳ ಮುಂದೆ ಕುಳಿತನು. ಧೈರ್ಯದಿಂದ ಅವಳನ್ನು ನಾಲ್ಕಾರು ಪ್ರಶ್ನೆ ಕೇಳಿ, ಕಿರಾತ ಮತ್ತು […]Read More
ಪರಿಚ್ಛೇದ – 13ಚೀನೀ ಪರಿವ್ರಾಜಕ (ಚೀನೀ ಯಾತ್ರಿಕ) ಸೂರ್ಯೋದಯವಾಗುತ್ತಲೇ ಪಾಂಥಶಾಲೆಯ ಬಾಗಿಲು ತೆರೆಯಿತು. ಪಾರಸಿಕ ವ್ಯಾಪಾರಿಗಳು ಅಷ್ಟು ಹೊತ್ತಿಗಾಗಲೇ ಒಂಟೆ ಮತ್ತು ಕತ್ತೆಗಳ ಮೇಲೆ ಚೀಲಗಳನ್ನು ಹೇರಿ ಸಿದ್ಧತೆ ಮಾಡಿಕೊಂಡಿದ್ದರು. ಪಾಂಥಶಾಲೆಯ ಶುಲ್ಕವನ್ನು ಪಾವತಿ ಮಾಡಿ ಹೊರಗೆ ಹೊರಟರು. ಅವರು ಇಡೀ ಆರ್ಯಾವರ್ತವನ್ನೆಲ್ಲ ಸುತ್ತಾಡುವರು. ಅಲ್ಲಲ್ಲಿ ದಾರಿ ಪಕ್ಕದಲ್ಲಿ ವಿಶ್ರಮಿಸಿಕೊಂಡು ಪ್ರಯಾಣ ಮಾಡುವರು. ಚಿತ್ರಕ ರಾತ್ರಿಯೆಲ್ಲ ನಿದ್ದೆ ಮಾಡಿರಲಿಲ್ಲ. ಇಷ್ಟಾದರೂ ಅವನಲ್ಲಿ ಎಳ್ಳಷ್ಟೂ ಆಯಾಸ ಕಾಣುತ್ತಿರಲಿಲ್ಲ. ಅವನು ಅತ್ತಿತ್ತ ನೋಡಿದನು. ಪಾಂಥ ಶಾಲೆಯೆಲ್ಲ ಬಿಕೋ ಎನ್ನುತ್ತಿದೆ. ಆದರೆ […]Read More
ಹಿಂದಿನ ಸಂಚಿಕೆಯಿಂದ…. ಚಂದ್ರೋದಯವಾಯಿತು. ಕೃಷ್ಣಪಕ್ಷದ ಚತುರ್ಥಿಯ ಚಂದ್ರನು ಪೂರ್ವಾಚಲದ ನೆತ್ತಿಯ ಮೇಲೆ ಕಾಣಿಸಿಕೊಂಡು ಬಲವಂತದ ನಗೆ ನಗುತ್ತಿದ್ದಾನೆ. ಪಾಂಥಶಾಲೆಯ ಅಂಗಳದಲ್ಲಿ ಯಾರೂ ಇಲ್ಲ. ಪಾರಸಿಕರು ತಮ್ಮ ಕೊಠಡಿಯ ಬಾಗಿಲು ಮುಚ್ಚಿಕೊಂಡಿದ್ದಾರೆ. ಅಂಗಳ ಚಂದ್ರನ ಮಂದ ಪ್ರಕಾಶದಿಂದ ಬೆಳಗಿದೆ. ಚಿತ್ರಕ ರಟ್ಟಾಳ ಕೊಠಡಿಯ ಬಾಗಿಲು ಬಡಿದು ‘ದೇವಿ, ಏಳಿರಿ ಏಳಿರಿ. ಊಟಕ್ಕೆ ಬನ್ನಿರಿ’ ಎಂದು ಕರೆದನು. ರಟ್ಟಾ ಬಾಗಿಲು ತೆರೆದು ಹೊರ ಬಂದು ನಗುತ್ತ ‘ನಿದ್ದೆ ಬಂದು ಮಲಗಿಬಿಟ್ಟಿದ್ದೆ’ ಎಂದಳು. ಕೊಠಡಿಯ ಎದುರಿಗೆ ಊಟದ ವ್ಯವಸ್ಥೆ. ಎದುರು ಬದುರು […]Read More
ಹಿಂದಿನ ಸಂಚಿಕೆಯಿಂದ…. ರಟ್ಟಾ ಮತ್ತು ಚಿತ್ರಕ ಇವರುಗಳಿಗೆ ಕೊಡ ಮಾಡಿದ ಕೊಠಡಿಗಳು ಇತರೆ ಕೊಠಡಿಗಳಂತೆಯೇ ಆದರೂ ಇವರ ಕೊಠಡಿಯ ನೆಲಕ್ಕೆ ಒಂಟೆ ಕೂದಲಿನ ಕಂಬಳಿ ಹಾಸಿ ಅದರ ಮೇಲೆ ಮೆತ್ತನೆಯ ಹಾಸಿಗೆಗಳನ್ನು ಹಾಸಿದ್ದರು. ಮೂಲೆಯಲ್ಲಿ ಹಿತ್ತಾಳೆಯ ದೀಪದ ಕಂಬದಲ್ಲಿ ಎಣ್ಣೆ ಬತ್ತಿ ಉರಿಯುತ್ತಿತ್ತು. ರಾಜಕುಮಾರಿಯ ಅಂತಸ್ಥಿಗೆ ಇದು ತಕ್ಕುದಲ್ಲವಾದರೂ, ರಟ್ಟಾ ಇದನ್ನು ನೋಡಿ ಸಂಪ್ರೀತಳಾಗಳು. ಅತಿಥಿಗಳಿಬ್ಬರೂ ಹಾಲುಕೀರು, ಅಮ್ಲಸೀಧು ಕಡಿದು ಹಸಿವು ಬಾಯಾರಿಕೆಗಳನ್ನು ಹೋಗಲಾಡಿಸಿಕೊಂಡರು. ರಾತ್ರಿ ಊಟವೊಂದು ಬಾಕಿ ಇತ್ತು. ಇದಾದ ನಂತರ ಚಿತ್ರಕ ಮೇಲೆದ್ದು ರಟ್ಟಾಳಿಗೆ […]Read More
ಪಾಂಥಶಾಲೆ – ಪ್ರಯಾಣಿಕರ ತಂಗುದಾಣ ಚಿತ್ರಕ ಹಾಗೂ ರಾಜಕುಮಾರಿ ರಟ್ಟಾ ಪಾಂಥಶಾಲೆಯನ್ನು ತಲುಪಿದಾಗ ಸೂರ್ಯಸ್ತವಾಗಲು ಇನ್ನೂ ಎರಡು ಗಂಟೆ ಬಾಕಿ ಇತ್ತು. ಎರಡು ರಸ್ತೆಗಳು ಸೇರುವ ಜಾಗದಲ್ಲಿ ಈ ಪಾಂಥಶಾಲೆ ಇತ್ತು. ಕಪೋತ ಕೂಟದಿಂದ ಹೊರಟು ಚಷ್ಟನ ದುರ್ಗ ಸೇರುವ ರಸ್ತೆಯು ಈ ಜಾಗದಲ್ಲಿ ರಸ್ತೆಯಿಂದ ಕವಲೊಡೆದು ಅಗ್ನಿಮೂಲೆಯ ಕಡೆಗೆ ತಿರುಗಿ ಆರ್ಯಾವರ್ತದ ದಿಕ್ಕಿಗೆ ಹೋಗುತ್ತದೆ. ಆ ಕವಲು ದಾರಿಯ ನಡುವೆ ಈ ಪಾಂಥಶಾಲೆ ಇದೆ. ಇದರ ಸುತ್ತಲೂ ಕಲ್ಲಿನಿಂದ ನಿರ್ಮಿಸಿದ ಪ್ರಾಕಾರದ ಗೋಡೆ. ಮನೋಹರವಾದ ಜಾಗ. […]Read More