ಹಿಂದಿನ ಸಂಚಿಕೆಯಿಂದ…. ರಟ್ಟಾ ಮತ್ತು ಚಿತ್ರಕ ಮೇಲಕ್ಕೆ ಹೋಗಲು ಅರ್ಧ ಗಂಟೆ ಹಿಡಿಯಿತು. ಅದು ಸಂಘವೆಂದು ರಟ್ಟಾ ಗುರುತಿಸಿದಳು. ಕಲ್ಲನ್ನು ಕಡಿದು ನಿರ್ಮಿಸಿರುವ ಕೆಲವು ಕೊಠಡಿಗಳು. ಎದುರಿಗೆ ಸಮತಲವಾದ ಒಂದು ಜಗಲಿ. ಜಗಲಿಯ ಮಧ್ಯದಲ್ಲಿ ತಥಾಗತನ ಶಿಲಾಮೂರ್ತಿ. ತಪ್ಪಲಿನ ಕಡೆಯಿಂದ ಕಾಣಿಸಿದ ಕಿಟಕಿಗಳು ಸಂಘದ ಹಿಂಭಾಗದ್ದು. ರಟ್ಟಾ ಮೊದಲು ಬುದ್ಧನ ಧ್ಯಾನ ಮುದ್ರೆಯಲ್ಲಿದ್ದ ಮೂರ್ತಿಯ ಮುಂದೆ ಹೋಗಿ ನಿಂತಳು. ಚಿತ್ರಕನೂ ಪಕ್ಕದಲ್ಲಿ ಬಂದು ನಿಂತನು. ರಟ್ಟಾ ಕೈ ಜೋಡಿಸಿ ಭಕ್ತಿ ನಮ್ರ ಧ್ವನಿಯಲ್ಲಿ-ನಮೋ ತಸ್ಸ ಭಗವತೋ ಅರಹತೋ […]Read More
ಹಿಂದಿನ ಸಂಚಿಕೆಯಿಂದ…. ಚಿತ್ರಕನು ಚಕಿತನಾಗಿ ಆಕೆಯ ಕಡೆ ನೋಡಿದನು. ರಟ್ಟಾ- ‘ಆಸಮುದ್ರ ಆರ್ಯಭೂಮಿಯ ಏಕಚ್ಛತ್ರ ಅಧೀಶ್ವರರಾದ ಸ್ಕಂದಗುಪ್ತರ ದೂತರನ್ನು ಅಜ್ಞಾತ ಕುಲ ಶೀಲರೆಂದು ಹೇಳಿದರೆ ಸ್ಕಂದಗುಪ್ತರಿಗೆ ಅವಮಾನ ಮಾಡಿದಂತಾಗುವುದಿಲ್ಲವೆ? ಇದೆಲ್ಲ ವ್ಯರ್ಥಾಲಾಪವಲ್ಲವೆ? ತಾವು ಕಳ್ಳರೂ ಕೆಟ್ಟ ಸ್ವಭಾವದವರೂ ಆಗಿದ್ದೀರೆಂದುಕೊಳ್ಳೋಣ. ಆದರೆ ಆ ವಿಷಯವನ್ನು ಈಗ ಏಕೆ ಹೇಳುತ್ತಿದ್ದೀರಿ? ಕಳ್ಳನಾದವನು ತನಗೇ ವಿರುದ್ಧವಾಗಿ ಬೇರೆಯವರಿಗೆ ಎಚ್ಚರಿಕೆ ವಹಿಸುವಂತೆ ಹೇಳುತ್ತಾನೇನು?’ ಹೀಗೆಂದು ಹೇಳಿದವಳೇ ಜೋರಾಗಿ ನಗಲಾರಂಭಿಸಿದಳು. ರಟ್ಟಾಳಿಗೆ ತನ್ನ ನಿಜವಾದ ಸಂಗತಿಯನ್ನು ತಿಳಿಸಿ ಅವಳ ಮುಖಭಾವದ ಬದಲಾವಣೆಗಳನ್ನು ಪರೀಕ್ಷಿಸಿ ನೋಡಬೇಕೆಂದು […]Read More
ಪರಿಚ್ಛೇದ – 11ಸಡಿಲವಾದ ಕಗ್ಗಂಟು ಉತ್ತರ ದಿಕ್ಕಿನ ನಗರದ್ವಾರವನ್ನು ದಾಟಿ ರಟ್ಟಾ ರಕ್ಷಕಭಟರೊಂದಿಗೆ ಮುಂದೆ ನಡೆದಳು. ಇನ್ನು ಮುಂದೆ ರಾಜಮಾರ್ಗವು ಮೃಗಯಾ- ಕಾನನದಿಂದ ಸುತ್ತುವರಿದು ಹಾವಿನ ನಡೆಯಂತೆ ಅಂಕು ಡೊಂಕಾಗಿ, ಕೆಲವು ಕಡೆ ಏರುತ್ತ ಕೆಲವು ಕಡೆ ಇಳಿಯುತ್ತ ಮುಂದೆ ಹೋಗಿ ಕಾಡಿನಲ್ಲಿ ಮರೆಯಾಗಿತ್ತು. ಬೆಳಗಿನ ಎಳೆ ಬಿಸಿಲಲ್ಲಿ ಈ ದೃಶ್ಯವು ಮನೋಹರವಾಗಿ ಕಾಣುತ್ತಿತ್ತು. ಈ ಸುಂದರವಾದ ಪ್ರಕೃತಿಯ ದೃಶ್ಯದ ಮೇಲೆ ಒಮ್ಮೆ ದೃಷ್ಟಿ ಹಾಯಿಸಿ ರಟ್ಟಾ ಕುದುರೆಯನ್ನು ನಿಲ್ಲಿಸಿ, ಸೇನಾನಿಯನ್ನು ಹತ್ತಿರ ಕರೆದು, ‘ನಕುಲ, ನೀನು […]Read More
ಹಿಂದಿನ ಸಂಚಿಕೆಯಿಂದ… ಮರುದಿನ ಮಧ್ಯಾಹ್ನ ಚಷ್ಟನ ದುರ್ಗದಿಂದ ಸಂದೇಶ ವಾಹಕನು ಬಂದನು. ಮಹಾರಾಜ ರಟ್ಟ ಧರ್ಮಾದಿತ್ಯರು ಪತ್ರ ಕಳುಹಿಸಿದ್ದರು. ಪತ್ರವನ್ನು ಓದಿದ ಮಂತ್ರಿ ಚತುರಾನನ ಭಟ್ಟರು ಚಿಂತೆಗೊಳಗಾಗಿ ರಟ್ಟಾಳ ಬಳಿಗೆಬಂದರು.‘ಮಹಾರಾಜರ ಆರೋಗ್ಯ ಚೆನ್ನಾಗಿಲ್ಲ. ಅವರು ಇನ್ನೂ ಕೆಲವು ದಿನಗಳು ಚಷ್ಟನ ದುರ್ಗದಲ್ಲಿಯೇ ಇರುವರು, ಆದರೆ ತಮ್ಮ ಮಗಳನ್ನು ನೋಡಲೇಬೇಕೆಂದು ಅವರು ಚಡಪಡಿಸುತ್ತಿದ್ದಾರೆ. ‘ನಾನು ತಂದೆಯವರ ಬಳಿಗೆ ಹೋಗುತ್ತೇನೆ’ ಎಂದು ರಟ್ಟಾ ಹೇಳಿದಳು.ಚತುರಾನನ ಭಟ್ಟ- ಹೋಗುವುದು ಸರಿಯೋ ಅಲ್ಲವೋ ಎಂಬುದು ತಿಳಿಯದಾಗಿದೆ.‘ಏಕೆ ಹೀಗೆ ಸಂಶಯಪಡುತ್ತೀರಿ?’ಸ್ವಲ್ಪ ಹಿಂದೆ ಮುಂದೆ ನೋಡಿ […]Read More
ಸೊಕ್ಕಿನಲಿ ಲಂಚಗುಳಿ ಲಂಚ ಸ್ವೀಕರಿಸುತಿರೆಸಿಕ್ಕಿ ಬಿದ್ದನು ಗುಪ್ತಚರರ ಜಾಲಕ್ಕೆ,ಇಕ್ಕಿ ಬಡಿಯುವ ಕೋಲ ಕಾಣಲಿಲ್ಲವು ಬೆಕ್ಕುನೆಕ್ಕಿತೈ ಹಾಲನ್ನು- || ಪ್ರತ್ಯಗಾತ್ಮ || ಲಂಚಗುಳಿಯಧಿಕಾರಿ ಮೈ ಸೊಕ್ಕಿನಿಂ ಕೊಬ್ಬಿಸಂಚಯನ ಮಾಡುವನು ಅಕ್ರಮದಿ ಧನವ,ಹೊಂಚು ಹಾಕುತಲಿರುವ ಗುಪ್ತಚರರನು ಕಾಣಲಂಚ ಒಂದನೆ ಕಾಂಬ || ಪ್ರತ್ಯಗಾತ್ಮ || ರಾಜಕೀಯವ ಮಾಳ್ವ ಶಿಕ್ಷಕರು ಬಹಳಿಹರುಓಜೆಯಲಿ ಮಕ್ಕಳನು ಬಳಿಸಿಕೊಳ್ಳುವರುಪೂಜೆಗೊಳುವರು ಮತ್ತೆ ಎಲ್ಲರಿಂದಲು ಆಹಾ !ಸೋಜಿಗವದೇನೆಂಬೆ- || ಪ್ರತ್ಯಗಾತ್ಮ || ಮರವೆ ಮನೆಯಾದವಗೆ ಗುಡಿಸಲಲಿ ಇರುವಾಸೆಗರಿಯ ಗುಡಿಸಲವಂಗೆ ಕರಿ ಹೆಂಚಿನಾಸೆಕರಿಯ ಹೆಂಚಿನರುವವಗೆ ಕೆಂಪು ಹೆಂಚಿನ ಆಸೆಇರುದದುಕೆ ತುಡಿವಾಸೆ- […]Read More
ಹಿಂದಿನ ಸಂಚಿಕೆಯಿಂದ…. ಚಿತ್ರಕನ ಕಣ್ಣುಗಳಿಗೆ ಬೆಳುದಿಂಗಳ ಬೆಳ್ಳಿ ಬೆಳಕು ರಕ್ತ ವರ್ಣವಾಗಿ ಕಂಡಿತು. ರಟ್ಟಾಳಿಗೆ ತಾನು ಅಪಾಯದ ಸ್ಥಿತಿಯಲ್ಲಿ ಇರುವ ಬಗ್ಗೆ ಅರಿವಿಲ್ಲ. ಆಕೆ ತನ್ನ ಪಾಡಿಗೆ ತಾನು ನಿರ್ಭಯವಾಗಿ ಗೋಡೆಯ ಮೇಲೆ ಕುಳಿತಿದ್ದಾಳೆ. ಚಿತ್ರಕನು ಒಂದು ರೀತಿಯ ಕಟಕಿ ನಗೆ ನಕ್ಕು ‘ರಾಜಕುಮಾರಿ, ತಾವು ಕುಳಿತಿರುವ ಸ್ಥಳದಿಂದ ಒಂದು ಸಲ ಬಗ್ಗಿ ನೋಡಿರಿ. ಅಲ್ಲಿಂದ ಏನಾದರೂ ಕೆಳಗೆ ಬಿದ್ದರೆ ಜೀವಂತವಾಗಿ ಉಳಿಯುವಿರಾ?’ ಎಂದು ಎಚ್ಚರಿಸಿದನು. ರಟ್ಟಾ ತಿರಸ್ಕಾರ ಭಾವದಿಂದ ಒಂದು ಸಲ ಕೆಳಗೆ ಬಗ್ಗಿ ನೋಡಿ […]Read More
ಹಿಂದಿನ ಸಂಚಿಕೆಯಿಂದ…. ಇತ್ತ ಲಕ್ಷ್ಮಣ ಕಂಚುಕಿಯು ಹಿಂದಿನ ದಿನ ರಾತ್ರಿ ಕೆಟ್ಟ ಯೋಚನೆಗಳಲ್ಲಿ ಮುಳುಗಿ ನಿದ್ದೆ ಹೋಗಿರಲಿಲ್ಲ. ಆದರೆ ಈ ದಿನ ಬೆಳಗ್ಗೆ ಚಿತ್ರಕ, ಪಲಾಯನ ಮಾಡುವ ಯಾವುದೇ ಪ್ರಯತ್ನ ಮಾಡದೆ, ತಾನಾಗಿಯೇ ಅರಮನೆಗೆ ಹಿಂದಿರುಗಿ ಬಂದಿರುವುದನ್ನು ಕಂಡು ಬಹಳ ಸಂತೋಷವಾಯಿತು. ಚತುರಾನನ ಕಂಚುಕಿಗೆ ಅನ್ನಿಸಿತು. ಅವನು ಈಗ ಇಮ್ಮಡಿ ಗೌರವದಿಂದ ಚಿತ್ರಕನ ಸೇವೆ ಶುಶ್ರೂಷೆಯಲ್ಲಿ ತೊಡಗಿದನು. ಮಧ್ಯಾಹ್ನ ಊಟಮಾಡಿ ವಿಶ್ರಾಂತಿಗೆಂದು ಹಾಸಿಗೆಯ ಮೇಲೆ ಉರುಳಿಕೊಂಡಾಗ ಕಂಚುಕಿ ‘ಈ ದಿನ ತಾವು ಏಕೋ ಮೊದಲಿನಂತೆ ಹರ್ಷಚಿತ್ತರಾಗಿದ್ದಂತಿಲ್ಲ. ಚಿಂತೆಗೆ […]Read More
ಹಿಂದಿನ ಸಂಚಿಕೆಯಿಂದ…. ಆ ರಾತ್ರಿ ಚಿತ್ರಕನು ಅರಮನೆಗೆ ಹಿಂದಿರುಗಿ ಹೋಗಲಿಲ್ಲ. ಅನುಮಾನಗೊಂಡ ಕಂಚುಕಿಯು ಗುಟ್ಟಾಗಿ ರಕ್ಷಕಭಟರನ್ನು ಕಳುಹಿಸಿದ್ದನು. ಅವರು ರಾತ್ರಿಯೆಲ್ಲಾ ಸುಗೋಪಾಳ ಕುಟೀರದ ಹೊರಗೆ ಕಾವಲು ಕಾಯುತ್ತಿದ್ದರು. ಮಧ್ಯರಾತ್ರಿಯ ಹೊತ್ತಿಗೆ ಪೃಥಾ ಪ್ರಜ್ಞಾಹೀನಳಾದಳು. ಚಿತ್ರಕನು ಆಕೆಯ ಹಾಸಿಗೆಯ ಬಳಿ ನಿಂತು, ಸುಗೋಪಾಳ ಹೆಗಲ ಮೇಲೆ ಕೈಯಿಟ್ಟು ‘ಸುಗೋಪಾ ನೀನು ನನ್ನ ಸೋದರಿ. ನಾವಿಬ್ಬರೂ ಒಬ್ಬ ತಾಯಿಯ ಹಾಲು ಕುಡಿದವರು’ ಎಂದು ಹೇಳಿದನು. ಸುಗೋಪಾ ಅಶ್ರುಪೂರಿತ ನಯನಳಾಗಿ ಚಿತ್ರಕನನ್ನು ನೋಡಿದಳು. ಚಿತ್ರಕ- ಈ ದಿನ ನೀವು ಕೇಳಿದ ಈ […]Read More
ಹಿಂದಿನ ಸಂಚಿಕೆಯಿಂದ… ಪೃಥಾ ಹಾಸಿಗೆಯಲ್ಲಿ ಅಲುಗಾಡದೆ ಮಲಗಿದ್ದಳು. ಗುಳಿ ಬಿದ್ದ ಕಣ್ಣುಗಳು. ಊರ್ಧ್ವದೃಷ್ಟಿ. ಚಿತ್ರಕನು ಸದ್ದು ಮಾಡದೆ ಆಕೆಯ ಹಾಸಿಗೆಯ ಬಳಿಗೆ ಬಂದು ನಿಂತುಕೊಂಡನು. ಪೃಥೆಯ ದೃಷ್ಟಿ ಅವನ ಕಡೆ ಹೊರಳಿತು. ಬಹಳ ಹೊತ್ತು ಅವನನ್ನೇ ದಿಟ್ಟಿಸಿ ನೋಡಿ ಕ್ಷೀಣ ಧ್ವನಿಯಲ್ಲಿ ‘ನೀನೇ ಏನು ಅವನು?’ ಎಂದು ಕೇಳಿದನು. ಸುಗೋಪಾ ಹಾಸಿಗೆಯ ಪಕ್ಕದಲ್ಲಿ ಮಂಡಿಯೂರಿ ಕುಳಿದು ಆಕೆಯ ಕೆನ್ನೆಯ ಮೇಲೆ ಕೈಯಿಟ್ಟು ಮೃದು ಮಧುರ ಧ್ವನಿಯಲ್ಲಿ ‘ಹೌದಮ್ಮಾ, ಇವರೇ ಅವನು’ ಎಂದು ಹೇಳಿದಳು. ಇನ್ನೂ ಸ್ವಲ್ಪ ಹೊತ್ತು […]Read More
ಹಿಂದಿನ ಸಂಚಿಕೆಯಿಂದ…. ಇಬ್ಬರೂ ಕುಳಿತ ನಂತರ ರಟ್ಟಾ ಮುಖ ಮುಚ್ಚಿಕೊಂಡು ಸ್ವಲ್ಪ ನಕ್ಕಳು. ಕಂಚುಕಿಯನ್ನು ಚಿತ್ರಕನ ಜೊತೆಗೆ ಕಂಡು, ವಿಷಯವನ್ನು ಗ್ರಹಿಸಿ ಕೌತುಕ ಮಿಶ್ರಿತ ಧ್ವನಿಯಲ್ಲಿ ‘ಆರ್ಯ ಲಕ್ಶ್ಮಣ ಅವರು ಈ ಅಂತಃಪುರದ ಬಗ್ಗೆತೋರುತ್ತಿರುವ ಇಷ್ಟೊಂದು ಮುಂಜಾಗರೂಕತೆ, ಸ್ನೇಹ- ಮಮತೆ – ಕಾಳಜಿಯನ್ನು ತಾಯಂದಿರೂ ಕೂಡ ತಮ್ಮ ಮಕ್ಕಳ ಬಗ್ಗೆ ತೋರುವರೋ ಇಲ್ಲವೋ ತಿಳಿಯದು’ ಎಂದು ಹೇಳಿದಳು. ಲಕ್ಷ್ಮಣನು ಅಪ್ರತಿಭನಾದನು. ಚಿತ್ರಕನು ರಾಜಕುಮಾರಿಯ ಮಾತನ್ನು ಪುಷ್ಟೀಕರಿಸಿ ‘ಕಂಚುಕಿ ಮಹಾಶಯರು ನಮ್ಮ ಬಗ್ಗೆಯೂ ಕೂಡ ಬಹಳ ಸ್ನೇಹ ಶೀಲರು. […]Read More