ಕಳೆದ ಬಾರಿ ಜಗತ್ತಿನ ನಾನಾ ಭಾಗಗಳಲ್ಲಿ ಗೂಬೆಯನ್ನು ಅಪಶಕುನದ ದ್ಯೋತಕವಾಗಿಯೂ ಜ್ಞಾನದ ದ್ಯೋತಕವಾಗಿಯೂ ಕಾಣುವುದನ್ನು ನೋಡಿದ್ದೇವೆ. ಈ ಬಾರಿ ಈ ಪ್ರವೃತ್ತಿ ಕೇವಲ ಜನಸಾಮಾನ್ಯರಲ್ಲಿ ಮಾತ್ರವಲ್ಲ ಸಾಹಿತಿಗಳ, ಕಲಾವಿದರ ಕೃತಿಗಳಲ್ಲಿಯೂ ಇದು ಹಾಗೇ ಎಂಬುದನ್ನು ನೋಡೋಣ. ಜಗತ್ತಿನ ಮಹಾನ್ ಕಾವ್ಯಗಳಲ್ಲಿ ಒಂದಾದ ಮಹಾಭಾರತದಲ್ಲಿ ಕುರುಕ್ಷೇತ್ರ ಯುದ್ಧದಲ್ಲಿನ ಕೊನೆಯ ಅಂಕ ದುರ್ಯೋಧನ ಕೊನೆಯ ಘಳಿಗೆಗಳನ್ನು ಎಣಿಸುತ್ತಿರುವಾಗ ಅಶ್ವತ್ಥಾಮ “ಪಾಂಡವರೈವರ ತಲೆಗಳನ್ನು ತರಿದು ತರುವೆ” ಎಂದು ಮಧ್ಯರಾತ್ರಿ ಅವರ ಪಾಳಯಕ್ಕೆ ಹೋಗುವುದನ್ನು ವಿವರಿಸುವಾಗ ವ್ಯಾಸ ಮಹರ್ಷಿಗಳು ಅಶ್ವತ್ಥಾಮ ಗೂಬೆಯನ್ನು ಕಂಡ […]
Feature post
ತಿಂಗಳ ಕೊನೆ ದಿವಸದ ಆಫೀಸ್ ಕೆಲಸದ ಒತ್ತಡ, ಮನೆಯಿಂದ ಡಬ್ಬಿ ಬೇರೆ ತಂದಿರಲಿಲ್ಲ. ಸುಹಾಸ್ ಹಾಗು ಮೇಘನಾಳ ಜೊತೆ ಜೋಳದ ರೊಟ್ಟಿ ಊಟಕ್ಕೆ ಅಂತ ಹೊರಟಿದ್ದೆವು. ಇದ್ದಕಿದ್ದಂತೆ ಸುಹಾಸ್ ನಿಂತಿದ್ದ ಕಾರ್ ಒಂದರ ಬಳಿ ಬಗ್ಗಿ ಏನನ್ನೋ ಎತ್ತಿಕೊಂಡ. ಏನು ಅಂತ ನೋಡಿದರೆ ಪುಟ್ಟ ಹಸಿರು ಬಣ್ಣದ ಹಕ್ಕಿ ಮರಿ. ಸುಹಾಸ್ ಹಕ್ಕಿಯನ್ನು ಪರಿಶೀಲಿಸಿ ಸರ್ ಕಾಲು ಸೊಟ್ಟಗಾಗಿದೆ, ರೆಕ್ಕೆಗೆ ಏನು ಆಗಿಲ್ಲ ಎಂದ. ನಾನು ಸಹ ದಿಟ್ಟಿಸಿ ನೋಡಿದೆ ಹೌದು ಅದರ ಕಾಲು ತಿರಿಚಿಕೊಂಡಿತ್ತು. ಬಳಿಯಲ್ಲಿದ್ದ […]Read More
ಏಯ್! ಗೂಬೆ! ಹೀಗೆ ಬೈಸಿಕೊಳ್ಳದವರೇ ಅಪರೂಪ, ನಮ್ಮ ದೇಶದಲ್ಲಿ. ಅತಿ ದೊಡ್ಡ ದಡ್ಡ ಎಂದರೆ ಅವನು ಗೂಬೆಯೇ! ಕಳಂಕಕ್ಕೂ ಗೂಬೆ ಎಂದೇ ಹೆಸರು. ನಮ್ ತಲೆ ಮೇಲೆ ಗೂಬೆ ಕೂರಿಸಬೇಡಿ ಎನ್ನುವಲ್ಲಿ ಇದೇ ಭಾವ. ಗೂಬೆ ಇದ್ದಹಾಗೆ ಇದಾನೆ ಎನ್ನುತ್ತಾ ಇದಕ್ಕೆ ರೂಪಕಾಲಂಕಾರದ ಪ್ರಯೋಗವೂ ನಡೆಯುತ್ತದೆ. ಹೀಗೆ ಸಾಕಷ್ಟು ಹೇಳುತ್ತಾ ಹೋಗಬಹುದು. ಹಾಗಾದರೆ, ಒಟ್ಟಾರೆ ಅಭಿಪ್ರಾಯವೇನು? ಗೂಬೆ ಎಂದರೆ ಕೆಟ್ಟದ್ದು, ಅನಿಷ್ಟ ಎಂದೆ? ಹಾಗೇನೂ ಇಲ್ಲ! ಈ ಗೂಬೆ ಲಕ್ಷ್ಮಿಯ ವಾಹನ! ಇದನ್ನು ನೋಡುವುದು ಅದೃಷ್ಟವನ್ನು ಕಂಡಂತೆ! […]Read More
ಕೈರಾತ! ಇದು ಹಕ್ಕಿಯ ಕನ್ನಡದ್ದೇ ಹೆಸರಾದರೂ ಬಹುತೇಕರು ಕೇಳಿಲ್ಲ. ಇಂಗ್ಲಿಷಿನಲ್ಲಿ ಮಲ್ಕೊಹ (Malkoha) ಎನ್ನುತ್ತಾರೆ. ಹಿಂದೆ ನಾವು ಪರಪುಟ್ಟಹಕ್ಕಿ ಕೋಗಿಲೆ ಬಗ್ಗೆ ತಿಳಿದುಕೊಳ್ಳುವಾಗ ಬೇರೆ ಹಕ್ಕಿಗಳ ಗೂಡಿನಲ್ಲಿ ಮೊಟ್ಟೆಯಿಡುವ ಪರತಂತ್ರಹಕ್ಕಿಗಳನ್ನು ಕುರಿತಾಗಿ ತಿಳಿದಿದ್ದೆವು. ಇತರ ಹಕ್ಕಿಗಳ ಗೂಡಿನಲ್ಲಿ ಮೊಟ್ಟೆಯಿಡುವ ಕೋಗಿಲೆಯಂತಹ ಕುಕ್ಕು ಹಕ್ಕಿಗಳು ಪರತಂತ್ರಹಕ್ಕಿಗಳಾದರೆ, ಗೂಡು ಕಟ್ಟುವ ಕೈರಾತಗಳು ಪರತಂತ್ರವಲ್ಲದ ಕುಕ್ಕು ಹಕ್ಕಿಗಳು. ದಕ್ಷಿಣ ಏಷ್ಯಾದಲ್ಲಿ ನಾಲ್ಕು ಬಗೆಯ ಕೈರಾತಗಳು ಕಂಡುಬರುತ್ತವೆ. ಕೆಂಗಂದು ಕೈರಾತ (ಸಿರ್ಕೀರ್ ಮಲ್ಕೋಹ, Sirkeer Malkoha Taccocua leschenaultii ) ಹೊರತುಪಡಿಸಿ ಉಳಿದವು ಮರವಾಸಿಗಳು. […]Read More
ಮಕರಂದವ ಕುಡಿವ ಈ ಬೆಟ್ಟುದ್ದ ಹಕ್ಕಿಗಳು! ತಾಳಿ ತಾಳಿ ಬೆಟ್ಟುದ್ದ ಹಕ್ಕಿಗಳು ಎಂದ ಕೂಡಲೆ ಹಮ್ಮಿಂಗ್ ಹಕ್ಕಿಗಳು ಎಂದುಕೊಳ್ಳ ಬೇಡಿ! ಹಮ್ಮಿಂಗ್ ಹಕ್ಕಿಗಳು ಭಾರತದಲ್ಲಿ ಇಲ್ಲ. ದಕ್ಷಿಣ ಅಮೇರಿಕಾದಲ್ಲಿ ಕಂಡುಬರುತ್ತವೆ. ನಮ್ಮ ದೇಶದಲ್ಲಿ ಕಂಡುಬರುವ ಪುಟ್ಟಹಕ್ಕಿಗಳು ಹಲವಾರು ಇವೆ, ಸೂರಕ್ಕಿಗಳು, ಹೂ ಕುಟುಕಗಳು, ಜೇಡಹಿಡುಕಗಳು ಹೀಗೆ. ಇಂದು ನಾವು ಕೇವಲ ಸೂರಕ್ಕಿಗಳನ್ನು ಕುರಿತು ತಿಳಿಯೋಣ. ಇವು ಪುಟ್ಟಗಾತ್ರದ ಆದರೆ ತುಸು ಬಾಗಿದ, ಉದ್ದವಾದ ಕೊಕ್ಕಿರುವ ಹಕ್ಕಿಗಳು. ಈ ರೂಪದ ಕೊಕ್ಕು ಇವಕ್ಕೆ ಹೂವಿನ ತಳಭಾಗವನ್ನು ತಲುಪಿ ಮಕರಂದ […]Read More
ಬಣ್ಣವೊಂದನ್ನು ಬಿಟ್ಟರೆ ಬೆಳ್ಳಕ್ಕಿಯ ದೊಡ್ಡಣ್ಣನೇ ಎನಿಸುವ ಈ ಬಕ, ಮುಖ್ಯವಾಗಿ ಕರಾವಳಿ ಪ್ರದೇಶಗಳಲ್ಲಿ ಕಂಡುಬರುತ್ತದೆ. ನಮ್ಮ ಉಡುಪಿಯ ಸಮುದ್ರ ತಟದಲ್ಲಿಯೂ ಕಂಡುಬರುತ್ತದೆ. ಇಂಗ್ಲೀಷಿನಲ್ಲಿ Western Reef Heron ಅಥವಾ Western Reef Egret ಎನ್ನಲಾಗುವ ಇದರ ವೈಜ್ಞಾನಿಕ ಹೆಸರು Egretta gularis. ಏನಿದು ವೈಜ್ಞಾನಿಕ ಹೆಸರು ಎಂಬ ಪ್ರಶ್ನೆ ಏಳಬಹುದು, ಕೆಲವರಿಗೆ. ಭೂಮಿಯ ಮೇಲಿನ ಸಕಲ ಜೀವಿಗಳಿಗೂ ಒಂದೊಂದು ಅನನ್ಯವಾದ ಹೆಸರು ಬೇಕಲ್ಲವೆ? ಇಲ್ಲವಾದಲ್ಲಿ ಒಂದಕ್ಕೇ ಅನೇಕ ಕಡೆ ಅನೇಕ ಹೆಸರುಗಳು ಇದ್ದು ಅಧ್ಯಯನ, ಗುರುತುಹಚ್ಚುವಿಕೆಗೆ ತೊಂದರೆಯಾಗುತ್ತದೆ. […]Read More
ಸ್ವರ್ಗದ ಹಕ್ಕಿ! ಎಂಬ ಹೆಸರೇ ಚಕಿತಗೊಳಿಸುತ್ತದೆ. ಅದನ್ನು ನೋಡಿದ ಕೂಡಲೆ ಯಾಕೆ ಅದನ್ನು ಸ್ವರ್ಗದ ಹಕ್ಕಿ ಎನ್ನುತ್ತಾರೆ ಎಂಬುದು ಅರ್ಥವಾಗಿ ಹೋಗುತ್ತದೆ. ಬಿಳಿ ಅಥವಾ ಕಂದು ದೇಹದ ಪುಟ್ಟ ಹಕ್ಕಿಗಳು. ಗಂಡು ಹಕ್ಕಿಗೋ ಬಾಲ ದೇಹದ ಸರಿಸುಮಾರು ಹತ್ತರಷ್ಟು ಉದ್ದವಿರುತ್ತದೆ. ಇದೇ ಆ ಹಕ್ಕಿಗೆ ಒಂದು ಅಪೂರ್ವ ಸೌಂದರ್ಯವನ್ನು ತಂದುಕೊಡುತ್ತದೆ. ಇಂಗ್ಲಿಷಿನಲ್ಲಿ ಈ ಹಕ್ಕಿಯನ್ನು ಇಂಡಿಯನ್ ಪ್ಯಾರಡೈಸ್ ಪ್ಲೈ ಕ್ಯಾಚರ್ (Indian Paradise-Flycatcher Terpsiphone paradisi) ಎನ್ನುತ್ತಾರೆ. ಅಂದಹಾಗೆ, ಈ ಪ್ಲೈಕ್ಯಾಚರ್ ಎಂಬ ಪದಪುಂಜ ಮುಖ್ಯ. ಇಲ್ಲಿ ಪ್ಲೈ […]Read More
ಕಲ್ಗುಂಡಿ ನವೀನ್ ನಮ್ಮ ತೋಟಗಳಲ್ಲಿ, ಉದ್ಯಾನಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಹಕ್ಕಿಗಳಲ್ಲಿ ಬೆಳ್ಗಣ್ಣ ಸಹ ಒಂದು! ಪ್ರಧಾನವಾಗಿ ಹಸಿರು-ಹಳದಿ ಬಣ್ಣದ ಸರಿಸುಮಾರು ಗುಬ್ಬಚ್ಚಿ ಗಾತ್ರದ ಈ ಹಕ್ಕಿಯ ಕಣ್ಣಿನ ಸುತ್ತ ಅಚ್ಚಬಿಳಿಬಣ್ಣದ ಉಂಗುರವಿರುತ್ತದೆ. ಅದೇ ಕಾರಣಕ್ಕೆ ಈ ಹಕ್ಕಿಯನ್ನು ಬೆಳ್ಗಣ್ಣ ಎಂದು ಕರೆಯುವುದು. ಇಂಗ್ಲಿಷಿನಲ್ಲಿಯೂ ಇದನ್ನು ವೈಟ್ ಐ (Indian White-eye Zosterops palpebrouses) ಎಂದೇ ಕರೆಯುತ್ತಾರೆ. ದಕ್ಷಿಣ ಏಷ್ಯಾದಲ್ಲಿ ಎರಡು, ಜಗತ್ತಿನಾದ್ಯಂತ 94 ಬಗೆಯ ಬೆಳ್ಗಣ್ಣಗಳಿವೆ. ದಕ್ಷಿಣ ಏಷ್ಯಾದಲ್ಲಿನ ಎರೆಡು ಬಗೆಯವು ಎಂದರೆ ಭಾರತದಲ್ಲಿ ಕಂಡುಬರುವ ಬೆಳ್ಗಣ್ಣ […]Read More
ಅದೊಂದು ಸ್ಕೌಟ್ಗೈಡ್ ಉತ್ಸವ. ಚಿಕ್ಕಂದಿನಿಂದಲೆ ಹಲವಾರು ಸದ್ಗುಣಗಳನ್ನು, ಸರಳವಾಗಿ ಬದುಕುವುದನ್ನು ಮತ್ತು ಸಾಹಸ ಪ್ರವೃತ್ತಿಯನ್ನು ಬೆಳೆಸಲು ಆರಂಭಿಸಿದ ಚಳವಳಿ ಸ್ಕೌಟ್ಸ್ ಮತ್ತು ಗೈಡ್ಸ್. ಇದರಲ್ಲಿ ಪುಟ್ಟ ಗಂಡು ಮಕ್ಕಳ ತಂಡವನ್ನು ಕಬ್ಸ್ ಎಂದೂ ಪುಟ್ಟ ಹೆಣ್ಣುಮಕ್ಕಳ ತಂಡವನ್ನು ಬುಲ್ಬುಲ್ಸ್ ಎಂದು ಕರೆಯುತ್ತಾರೆ. ಆ ಪುಟ್ಟಮಕ್ಕಳ ಚಟುವಟಿಕೆಯನ್ನು ಕಂಡಾಗ ಸಂತೋಷ, ಆಶ್ಚರ್ಯ ಎರಡೂ ಆಗುತ್ತದೆ. ಅಂದಹಾಗೆ, ಬುಲ್ಬುಲ್ ಎಂದರೇನು? ಅದೇ ನಮ್ಮ ಸುಂದರ ಹಕ್ಕಿಗಳಲ್ಲಿ ಒಂದು! ಕನ್ನಡದಲ್ಲಿ ಇದನ್ನು ಪಿಕಳಾರ ಎನ್ನುತ್ತಾರೆ. ನಮ್ಮ ಬಹುತೇಕ ಪಕ್ಷಿಛಾಯಾಗ್ರಾಹಕರ ಅತ್ಯುತ್ತಮ ಚಿತ್ರಗಳಲ್ಲಿ […]Read More
ಈ ಬಾರಿ ಮುಖ್ಯವಾಗಿ ಮನುಷ್ಯ ಆಹಾರ ನೀಡುತ್ತಿರುವ ಕಾರಣದಿಂದ ತನ್ನ ಸಂಖ್ಯೆಯನ್ನು ಅತಿಯಾಗಿ ಹೆಚ್ಚಿಸಿಕೊಂಡಿರುವ ಪಾರಿವಾಳಗಳನ್ನು ಕುರಿತಾಗಿ ತಿಳಿಯೋಣ. ಶಾಂತಿಗೆ ಪರ್ಯಾಯ ಹೆಸರೇ ಪಾರಿವಾಳ. ಅದರಲ್ಲಿಯೂ ಬಿಳಿ ಬಣ್ಣದ ಪಾರಿವಾಳ. ಸಮಾರಂಭಗಳಲ್ಲಿ ಬಿಳಿಪಾರಿವಾಳಗಳನ್ನು ಹಾರಿಬಿಡುವುದು ಶಾಂತಿಯ ಸಂಕೇತ ಎಂದೇ ತಿಳಿಯಲಾಗಿದೆ. ಪ್ರಾಚೀನ ಕಾಲದಲ್ಲಿ ಇವು ಬಹಳ ಮುಖ್ಯವಾದ ಸಂದೇಶವಾಹಕಗಳಾಗಿಯೂ ಕೆಲಸ ಮಾಡುತ್ತಿದ್ದವು. ಗುಪ್ತ ಸಂದೇಶಗಳ ರವಾನೆಯಲ್ಲಿ ಇವುಗಳದ್ದು ಬಹಳ ವಿಶ್ವಾಸಾರ್ಹವಾದ ಪಾತ್ರವಾಗಿತ್ತು. ಸೇನೆಯಲ್ಲಿಯೂ ಇವನ್ನು ಸಂದೇಶವಾಹಕವಾಗಿ ಬಳಸಲಾಗುತ್ತಿತ್ತು. ಲಕ್ಷಾಂತರ ಜನ ಸೈನಿಕರ ಪ್ರಾಣವನ್ನು ಈ ಸಂದೇಶವಾಹಿ ಪಾರಿವಾಳಗಳು […]Read More