ಆಮೆಯೆಂಬ ಅದ್ಭುತ ಪ್ರಾಣಿ! ಆಮೆ ನಿಧಾನ ವೇಗಕ್ಕೆ ಹೆಸರುವಾಸಿ. ಆದರೆ ಅದು ಜೀವಜಗತ್ತಿನ ಓಟದಲ್ಲಿ ಹಿಂದೆ ಬಿದ್ದಿಲ್ಲ. ಆಮೆ ಮತ್ತು ಮೊಲದ ಓಟದ ಸ್ಪರ್ಧೆಯ ಕಥೆಯನ್ನು ಸಾಕಷ್ಟು ಬಾರಿ ಕೇಳಿ ಕೊನೆಗೆ ಆಮೆಯ ನಿಧಾನವೇ ಪ್ರಧಾನದ ವೇಗವೇ ಉತ್ತಮ ಎಂದು ತೀರ್ಮಾನಿಸಿಯಾಗಿ ಶತಮಾನಗಳೇ ಕಳೆದಿವೆ. ಮೊಲ ಮತ್ತು ಆಮೆ ನಡುವಿನ ಓಟದ ಕಥೆಯು ಅದ್ಭುತವಾದ ಮಕ್ಕಳ ಕಥೆಯಾಗಿದೆ. ನಿಧಾನ ಮತ್ತು ಸ್ಥಿರವಾದ ವೇಗ ಹೊಂದಬೇಕು ಎಂಬುದಕ್ಕೆ ಈ ಕಥೆಯು ಮಕ್ಕಳಿಗೆ ನಿಧಾನ ಮತ್ತು ನಿರಂತರ ಪರಿಶ್ರಮದ ಮಹತ್ವವನ್ನು […]
Feature post
ಗ್ಯಾಲಾಪಾಗಸ್ ದ್ವೀಪದ ಬೃಹತ್ ಆಮೆಗಳು ಗ್ಯಾಲಾಪಾಗಸ್ ದ್ವೀಪ ಸಮೂಹದ ದೈತ್ಯಾಕಾರದ ಆಮೆಗಳು ಭೂಮಿಯ ಮೇಲೆ ವಾಸಿಸುವ ಭೂಚರಗಳು. 400 kg ತೂಕ ಮತ್ತು 1.8 ಉದ್ದ ಬೆಳೆಯವ ಈ ಆಮೆಗಳು ದೈತ್ಯದೇಹ ಮತ್ತು ದೀರ್ಘ ಆಯುಷ್ಯಕ್ಕೆ ಪ್ರಸಿದ್ಧವಾಗಿವೆ. ನೂರು ವರ್ಷಕ್ಕಿಂತಲೂ ಅಧಿಕ ಕಾಲ ಬದುಕುವ ಈ ಆಮೆಗಳು “ಗ್ಯಾಲಾಪಾಗಸ್ ದ್ವೀಪ ಸಮೂಚ್ಚಯಗಳ ಅಚ್ಚರಿಗಳಲ್ಲಿ ಒಂದಾಗಿವೆ. ಬಹುಶಃ ಗ್ಯಾಲಾಪಾಗಸ್ ದ್ವೀಪಸಮುಚ್ಚಯಗಳಲ್ಲಿ ಕಂಡುಬರುವಂತ ವಿಶಿಷ್ಟ ಹಾಗು ವೈವಿಧ್ಯಮಯ ಜೀವ ಪ್ರಭೇದಗಳು ಪ್ರಪಂಚದ ಬೇರೆ ಯಾವ ದ್ವೀಪಗಳಲ್ಲೂ ಕಂಡುಬರುವುದಿಲ್ಲ. ಹಾಗಾಗಿಯೇ ಈ […]Read More
ಮಂಗಟ್ಟೆ ಹಕ್ಕಿಗಳು – Hornbill ಅತಿ ಉದ್ದನೆಯ ಕೊಕ್ಕು, ಕೊಕ್ಕಿನ ಮೇಲೆ ಒಂದು ಉದ್ದವಾದ ಗುಬುಟಿನಂತಹ ರಚನೆ, ದೊಡ್ಡಗಾತ್ರದ ಆಕರ್ಷಕ ಮೈ ಬಣ್ಣದ ಹಕ್ಕಿಗಳು ತಮ್ಮ ಕೂಗುಗಳು ಒಂದು ತರಹದ ಕೀರಲು ಧ್ವನಿಯಿಂದ ಕೂಡಿದ್ದು, ಜೋಡಿಗಳಾಗಿ ಅಥವಾ ಸಣ್ಣ ಗುಂಪುಗಳಾಗಿ ಹಾರಾಡುವ ಅತ್ಯಾಕರ್ಷಕ ಹಕ್ಕಿಗಳೇ ಮಂಗಟ್ಟೆ ಹಕ್ಕಿಗಳು… ಸಂಪೂರ್ಣ ಬೆಳವಣಿಗೆ ಹೊಂದಿದ ಮಂಗಟ್ಟೆ ಹಕ್ಕಿ ರೆಕ್ಕೆ ಅಗಲಿಸಿ ಹಾರುವಾಗ ಸುಮಾರು ಐದು ಅಡಿಗಳಷ್ಟು ಉದ್ದಕ್ಕೆ ಹರಡಿಕೊಳ್ಳುತ್ತದೆ. ಅಲ್ಲದೇ ಹಾರಾಡುವಾಗ ತನ್ನ ರೆಕ್ಕೆಗಳಿಂದ ಪಟಪಟ ಎಂಬ ಶಬ್ದವನ್ನು ಸೃಷ್ಟಿಸುತ್ತದೆ. […]Read More
ಚಿಟ್ಟೆಗಳು ಒಂದು ಪ್ರದೇಶ ಆರೋಗ್ಯಕರ ಪರಿಸರ ಹೊಂದಿದೆ ಎಂದು ಹೇಳಬೇಕಾದರೆ ಆ ಪ್ರದೇಶದಲ್ಲಿ ಹಲವು ಗುಣಲಕ್ಷಣಗಳು ಇರುತ್ತವೆ. ಆ ಲಕ್ಷಣಗಳು ಪ್ರಾಣಿ ಪಕ್ಷಿ ಹುಳಹುಪ್ಪಟೆ ಸೇರಿದಂತೆ ಹಲವಾರು ವಿದದ ವೃಕ್ಷಗಳು ಇತ್ಯಾದಿಗಳು ಇರಬಹುದು. ಚಿಟ್ಟೆ ಮತ್ತು ಜೇನ್ನೋಣಗಳು ನಮ್ಮ ಸುತ್ತಲಿನ ಆರೋಗ್ಯಕರ ಪರಿಸರವನ್ನ ಸೂಚಿಸುತ್ತವೆ.ಇವುಗಳ ಮುಖ್ಯ ಆಹಾರ ಹೂವುಗಳ ಮಕರಂದ. ಎಲ್ಲಿ ಹೂವುಗಳು ಇರುತ್ತವೆಯೋ ಅಲ್ಲಿ ಮಕರಂದ ಹೀರಲು ಚಿಟ್ಟೆ ಹಾಗೂ ಜೇನ್ನೊಣಗಳು ಧಾವಿಸುತ್ತವೆ. ಯಾವ ಪ್ರದೇಶದಲ್ಲಿ ಅಪಾರ ಪ್ರಮಾಣದ ವೈವಿಧ್ಯಮಯ ಹೂವುಗಳು ಇದಾವೆ ಎಂದರೆ ಅಲ್ಲಿ […]Read More
ಮಳ್ಳಿ ಮಳ್ಳಿ ಬಿಳಿ ಮಿಂಚುಳ್ಳಿ ಬಗೆ ಬಗೆಯ ಪ್ರಾಣಿ ಪಕ್ಷಿಗಳಲ್ಲಿ ವಿಧವಿಧವಾದ ಬೇಟೆಯ ಕ್ರಮಗಳಿವೆ, ಮಿಂಚುಳ್ಳಿ ಹಕ್ಕಿಯ ಬೇಟೆಯ ವಿಧಾನ ಬಹಳ ಆಕರ್ಷಕ. ನದಿ ತೊರೆಗಳ ಮೇಲೆ ಚಾಚಿದ ಮರಗಳ ಕೊಂಬೆಗಳಲ್ಲಿ ಅಥವಾ ನೀರಿನ ಹೆಬ್ಬಂಡೆಗಳ ಮೇಲೆ ತಪಸ್ಸಿಗೆ ಕೂತ ಮುನಿಗಳಂತೆ ಏಕಾಗ್ರತೆಯಿಂದ ಕಾದು ಕುಳಿತು, ದಿಡೀರನೆ ನೀರಿಗೆ ಚಂಗನೆ ನೆಗೆದು ಮೀನನ್ನು ಕೊಕ್ಕಿನಲ್ಲಿ ಕಚ್ಚಿಕೊಂಡು ಹೊರಬರುತ್ತವೆ. ಮೀನನ್ನು ಬೇಟೆಯಾಡುವ ಪಕ್ಷಿಗಳಲ್ಲೇ ಅತ್ಯಂತ ನಿಖರವಾಗಿ ನೀರಿನ ಆಳಕ್ಕೆ ಜಿಗಿದು ತಪ್ಪದೇ ಮೀನನ್ನು ಹೊರತರುವ ಮಿಂಚುಳ್ಳಿಯ ಬೇಟೆಯ ವಿಧಾನದಿಂದಾಗಿ […]Read More
ಭಾರತದ ಮೊಲಗಳು ನಮ್ಮ ಕಾಡುಗಳಲ್ಲಿ ಕಂಡುಬರುವ ಮೊಲಗಳಿಗೆ ನಾವು ಸಾಮಾನ್ಯವಾಗಿ Rabbits ಎನ್ನುತ್ತೇವೆ, ಆದರೆ ನಿಜ ಸಂಗತಿ ಎಂದರೆ Rabbits ಗಳು ನಮ್ಮ ದೇಶದಲ್ಲಿ ಇಲ್ಲ!!! ನಮ್ಮಲ್ಲಿ ಕಂಡುಬರುವ ಮೊಲಗಳೆಂದರೆ ಹೇರ್ (Hare) ಬ್ಲಾಕ್ ನಾಪ್ಪೆಡ್ ಹೇರ್ ಇದು ನಮ್ಮ ರಾಜ್ಯದಲ್ಲಿ ಕಂಡು ಬರುವ ಮೊಲ. HARE’S ಹಾಗು RABBITS ಗಳು Leporidae ಕುಟುಂಬಕ್ಕೆ ಸೇರಿವೆ. ಇವೆರಡೂ ವಿಪುಲ ಸಂತಾನಿಗಳು. ಹಾಗಾದರೆ HARE’S ಹಾಗು Rabbits ನಡುವಿನ ವ್ಯತ್ಯಾಸಗಳೇನು? ಮೇಲ್ನೋಟಕ್ಕೆ ಇವೆರಡರ ನಡುವೆ ವ್ಯತ್ಯಾಸ ಕಂಡು ಹಿಡಿಯುವುದು […]Read More
ಥಾಯ್ ಲ್ಯಾಂಡಿನ ಆನೆ ಏಶಿಯಾ ಮತ್ತು ಆಪ್ರಿಕಾದ ಆನೆಗಳಲ್ಲಿ ಪ್ರಮುಖ ವ್ಯತ್ಯಾಸವೆಂದರೆ ಅವುಗಳ ದಂತಗಳು ಹಾಗು ಕಿವಿಗಳು. ಏಶಿಯಾದ ಗಂಡು ಆನೆಗಳಿಗೆ ಮಾತ್ರವೆ ದಂತಗಳಿದ್ದರೆ ಆಪ್ರಿಕಾದ ಗಂಡು ಮತ್ತು ಹೆಣ್ಣು ಆನೆ ಎರಡಕ್ಕೂ ದಂತಗಳಿರುತ್ತವೆ ಹಾಗು ಕಿವಿಗಳು ಬಹಳ ಅಗಲವಾಗಿರುತ್ತವೆ. ಆಪ್ರಿಕಾದ ಆನೆಗಳ ಚರ್ಮಕ್ಕೆ ಹೋಲಿಸಿದಲ್ಲಿ ಏಶಿಯಾ ಆನೆಗಳ ಚರ್ಮ ಮೃದುವಾಗಿರುತ್ತದೆ . ಉದ್ದನೆಯ ದಂತ ಆನೆಗಳಿಗೆ ಹೆಚ್ಚು ಬಾರದ ವಸ್ತುಗಳನ್ನ ಎತ್ತಲು, ಆಹಾರ ಸಂಗ್ರಹಿಸಲು, ಮರದಿಂದ ತೊಗಟೆಗಳನ್ನ ಸೀಳಿ ಸುಲಿದು ತೆಗೆಯಲು ಮತ್ತು ಅತಿಮುಖ್ಯವಾಗಿ ಕಾಳಗದಲ್ಲಿ […]Read More
ಪರಾವಲಂಬಿ ಪಕ್ಷಿಗಳು – Brood Parasitism ಮಕ್ಕಳು ಬೇಕು ಎಂದು ಯಾವ ದಂಪತಿಗಳಿಗೆ ಇಸ್ಟವಿರೋದಿಲ್ಲ ಹೇಳಿ! ಮಕ್ಕಳನ್ನು ಹೆರಬೇಕು, ಬೆಳೆಸಬೇಕು, ವಿದ್ಯೆ ಕಲಿಸಿ ಅವುಗಳನ್ನು ಸಮಾಜದಲ್ಲಿ ಉನ್ನತ ನಾಗರಿಕರನ್ನಾಗಿ ಮಾಡಬೇಕು ಎಂಬುದು ಎಲ್ಲ ಪೋಷಕರ ಮೊದಲ ಆದ್ಯತೆ. ಅದೇ ರೀತಿ ಪಕ್ಷಿಗಳಲ್ಲಿ ಕೂಡ ಗೂಡು ಕಟ್ಟಿ, ಮೊಟ್ಟೆ ಇಟ್ಟು, ಕಾವು ಕೊಟ್ಟು ಮರಿಗಳಿಗೆ ಗುಕ್ಕು ಉಣಿಸಿ ಅವು ಬೆಳೆದ ಮೇಲೆ ಸ್ವತಂತ್ರವಾಗಿ ಹಾರಲು ಕಲಿಸುವುದನ್ನು ಎಲ್ಲಾ ಪಕ್ಷಿಗಳು ಮನುಷ್ಯನ ರೀತಿ ಪಾಲಿಸುತ್ತವೆ ಆದರೆ ಕೆಲ ಜಾತಿಯ ಪಕ್ಷಿಗಳು […]Read More
ಆಮೇಜಾನ್ ಕಾಡಿನ ಜಾಗ್ವಾರ್ ಅಘ್ರ ಪರಭಕ್ಷಕ ವನ್ಯಜೀವಿಗಳಲ್ಲಿ ಧೈಹಿಕ ಶಕ್ತಿ ಸಾಮರ್ಥ್ಯ, ಭೇಟೆಯಾಡುವ ಕುಶಲತೆ ಮತ್ತು ಯಾವ ಪ್ರದೇಶದಲ್ಲಿ ಭೇಟೆಯಾಡುತ್ತಿದೆಯೋ ಆ ಪ್ರದೇಶಕ್ಕೆ ತಕ್ಕಂತೆ ಹೊಂದಿಕೊಂಡು ಭೇಟೆಯಾಡಲು ಸಹಕರಿಸುವ ಅವುಗಳ ದೇಹದ ಗುಣಲಕ್ಷಣಗಳು ಸಹ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ. ಬೆಕ್ಕಿನ ಕುಲದ ( Cat family) ಅಘ್ರಪರಭಕ್ಷಕ ಪಟ್ಟಿಗೆ ಬಂದಾಗ ಹುಲಿ ಸಿಂಹಗಳು ನಿಸ್ಸಂದೇಹವಾಗಿ ಪ್ರಥಮ ಶ್ರೇಣಿಯಲ್ಲಿ ನಿಲ್ಲುತ್ತವೆ ಎನ್ನುವುದು ನಿಜ. ಈ ಕ್ಯಾಟ್ ಪ್ಯಾಮಿಲಿಯ ಹೆಚ್ಚಿನವು ನೀರಿನಲ್ಲಿ ಆರಾಮವಾಗಿ ಈಜಬಲ್ಲವಾದರೂ ಹೆಚ್ಚಾಗಿ ನೀರಿನಿಂದ ದೂರವೇ […]Read More
ಆರ್ಕಿಡ್ ಮಿಡತೆ ಹೆಣ್ಣನ್ನ ಹೂವಿಗೆ ಹೋಲಿಸಿ ಸಂಪಿಗೆಯ ನಾಸಿಕದವಳೇ ,ಮಲ್ಲಿಗೆಯ ಮೈಯವಳೇ ,ಹೂವಂತ ಮನಸ್ಸಿನವಳೇ ಅಂತೆಲ್ಲಾ ಅಗಾಧ ರಸಿಕತೆಯಿಂದ ಬರೆಯವ ಪೇಸ್ಬುಕ್ ಕವಿಗಳ ಕವನಗಳನ್ನ ಓದುವಾಗ , ಒಂದೊಂದ್ಸಲಾ ನನಗೂ ಆ ತರ ಬರೆಯಲಿಕ್ಕೆ ಬರುವುದಿಲ್ಲವಲ್ಲ ಅಂತ ಮತ್ಸರವಾಗುತ್ತೆ. ನಾನೂ ಒಂದಿನ ನಿಮ್ಮನೆಲ್ಲಾ ಮೀರಿಸೋವಂತ ಒಂದು ಕವನದ ಗ್ರಂಥವನ್ನೇ ಬರೆದುಬಿಡ್ತೇನೆ .ಹ್ಞಾಂ ಇರಲಿ… ಅಂದಂಗೆ ಭಾರತೀಯ ಉಪಖಂಡಕ್ಕೆ ಹೊಂದಿಕೊಂಡಿರುವ ಆಗ್ನೇಯ ಏಷ್ಯಾದ ಬರ್ಮಾ, ಬ್ರೂನಿ, ಕಾಂಬೋಡಿಯಾ, ಇಂಡೋನೇಶಿಯಾ, ಲಾವೋಸ್,ಮಲೇಷಿಯಾ, ಫಿಲಿಪೀನ್ಸ್, ಸಿಂಗಾಪುರ್, ವಿಯೆಟ್ನಾಂ ದೇಶಗಳ ನಿತ್ಯಹರಿದ್ವರ್ಣದ ಮಳೆಕಾಡುಗಳಲ್ಲಿ […]Read More