ನಂದನವನದ ಪಕ್ಷಿಗಳು – Birds of Paradise ಪಕ್ಷಿಗಳಿಗೆ ಗರಿಗಳು ಮುಖ್ಯವಾಗಿ ಮೂರು ಉದ್ದೇಶಗಳಿಗೋಸ್ಕರ ಇರುತ್ತವೆ. ಹಾರಾಟ, ರಕ್ಷಣೆ ಮತ್ತು ಆಕರ್ಷಣೆ. ಪಕ್ಷಿ ಲೋಕದಲ್ಲಿ ಸ್ವರ್ಗಲೋಕದ ಹಕ್ಕಿಗಳು ಅಥವಾ ನಂದನವನದ ಹಕ್ಕಿಗಳೆಂದೇ ಸುಪ್ರಸಿದ್ದವಾಗಿರುವ ಪಪುವಾ ನ್ಯುಗಿನಿಯಾದ “ಪ್ಯಾರಾಡೈಸೀಈಡೇ” ಕುಟುಂಬಕ್ಕೆ ಸೇರಿದ ಈ ಪಕ್ಷಿಗಳು ಪಕ್ಷಿ ಜಗತ್ತಿನಲ್ಲಿಯೇ ಅತ್ಯಂತ ಆಕರ್ಷಣೀಯ ರೆಕ್ಕೆ ಗರಿಗಳನ್ನ ಹೊಂದಿವೆ. ಈ ಪಕ್ಷಿಗಳು ವಿಶೇಷವಾಗಿ ಇಂಡೋನೇಷ್ಯಾ , ಆಸ್ಟ್ರೇಲಿಯಾ ಮತ್ತು ಪಪುವಾ ನ್ಯುಗಿನಿಯಾ ದೇಶಗಳ ಅರಣ್ಯಪ್ರದೇಶಗಳಲ್ಲಿ ಕಂಡುಬರುತ್ತವೆ. 4.7 ರಿಂದ 39 ಇಂಚುಗಳವರೆಗೆ ಗಾತ್ರದಲ್ಲಿರುವ […]
Feature post
ಕಳ್ಳ ಖದೀಮ ಕಡಲ ಹಕ್ಕಿ – ಫ್ರಿಗೇಟ್ ಅಟ್ಲಾಂಟಿಕ್ ಮಹಾಸಾಗರ ಹಾಗು ಪೆಸಿಫಿಕ್ ಸಾಗರದ ತೀರದಲ್ಲಿ ಪೆಂಗ್ವಿನ್ ತರಹದ ಬೂಬಿ ಎಂಬ ಸಣ್ಣ ಗಾತ್ರದ ಹಕ್ಕಿಗಳು ಕಾಣಸಿಗುತ್ತವೆ, ಈ ಆಕರ್ಷಕ ಹಕ್ಕಿಗಳ ಮುಖ್ಯ ಆಹಾರ ಸಾಗರದ ಮೀನುಗಳು. ಬೂಬಿ ಹಕ್ಕಿಗಳು ದಿನದಲ್ಲಿ ಸಾಕಷ್ಟು ಮೀನು ಹಿಡಿಯುತ್ತವಾದರೂ ಅವುಗಳ ಹೊಟ್ಟೆಗೆ ಸೇರುವುದು ಅದರಲ್ಲಿನ ಶೇಕಡ 40 ರಷ್ಟು ಮಾತ್ರ. ಮೀನನ್ನು ಹಿಡಿದ ಖುಷಿಯಲ್ಲಿ ಬೂಬಿ ಹಕ್ಕಿಗಳು ತನ್ನ ಸಂಗಾತಿಯತ್ತ ತಿರುಗುವಷ್ಟರಲ್ಲಿ ಅದೆಲ್ಲಿರುತ್ತದೋ ಕಳ್ಳ ಖದೀಮ ಫ್ರಿಗೇಟ್ ಹಕ್ಕಿ ಯುದ್ಧ […]Read More
ನವಿಲೇನೋ ಕುಣಿಬೇಕು ‘ಮುಗಿಲನು ಮುದ್ದಿಡೆ ನೆಲದ ಬೆಳೆಚಿಗಿವುದು, ಜಿಗಿವುದು ನೆಗೆವುದಿಳೆ;ಚಿಕ್ಕೆ ಇರುಳು ಕುಣಿದಂತೆ ಕುಣೀಕುಣಿ ಕುಣಿ ನವಿಲೇ ಕುಣೀ ಕುಣೀ’– ಡಾ|| ದ ರಾ ಬೇಂದ್ರೆ ಹಿರಿಯ ಕವಿ ಡಾ|| ದ ರಾ ಬೇಂದ್ರೆಯವರು ಹೇಳಿದಂತೆ ಮಳೆಗೆ ಇಳೆ, ಇಳೆಯಿಂದ ಹೊರಬಂದ ಬೆಳೆ ಅಷ್ಟೇ ಅಲ್ಲದೆ ತನ್ನ ಸುಂದರವಾದ ಗರಿ ಬಿಚ್ಚಿ ನಮ್ಮ ರಾಷ್ಟ್ರ ಪಕ್ಷಿ ನವಿಲು ಸಹ ಕುಣಿಯುತ್ತದೆ. ಗಂಡು ನವಿಲು ತನ್ನ ಆಕರ್ಷಕ ರೆಕ್ಕೆಯ ಗರಿಗಳನ್ನು ತೆರೆದು ಕುಣಿಯುವುದು ಮುಖ್ಯವಾಗಿ ತನ್ನ ಸಂಗಾತಿಯನ್ನು ಆಕರ್ಷಿಸಿ […]Read More
ಅಂಟಾರ್ಟಿಕಾ ಮತ್ತು ಆರ್ಕ್ಟಿಕ್ ಪ್ರದೇಶಗಳು ‘ಅಂಟಾರ್ಟಿಕಾ ಮತ್ತು ಆರ್ಕ್ಟಿಕ್ ಪ್ರದೇಶಗಳು ಈ ಭೂಮಿಯ ಭೂಷಣಗಳು ಎಂದೇ ವ್ಯಾಖ್ಯಾನಿಸಬಹುದು. ‘ಅಂಟಾರ್ಟಿಕಾ’ ಭೂಮಿಯ ದಕ್ಷಿಣ ದೃವದ ಸುತ್ತ ಹೆಪ್ಪುಗಟ್ಟಿದ ಸಮುದ್ರದಿಂದ ಸುತ್ತುವರೆದ ಒಂದು ಭೂಖಂಡ (Around South Pole). ಆದರೇ ಆರ್ಕ್ಟಿಕ್ ಭೂಮಿಯ ಉತ್ತರ ದೃವದಲ್ಲಿನ ಹೆಪ್ಪುಗಟ್ಟಿದ ಸಮುದ್ರ. ಅದು ಭೂಖಂಡ ಅಲ್ಲ (Around North Pole Arctic Ocean). ಈ ಎರಡೂ ಪ್ರದೇಶಗಳಿಗೆ ಸೂರ್ಯನ ಕಿರಣಗಳು ಓರೆಯಾಗಿ ತಲುಪುವುದರಿಂದ ತೀರಾ ಕಡಿಮೆ ಉಷ್ಣಾಂಶದಿಂದಾಗಿ ಇಲ್ಲಿನ ಪ್ರದೇಶಗಳು ಹೆಪ್ಪುಗಟ್ಟಿದ ಹಿಮದಿಂದ […]Read More
ಚೇಳು ಚೇಳುಗಳನ್ನು “ಲಾಟ್ರೋಡಕ್ಟಸ್ ಮ್ಯಾಕ್ಟನ್ಸ್” ವೈಜ್ಞಾನಿಕ ಹೆಸರಿನಿಂದ ಗುರುತಿಸುತ್ತಾರೆ. ಇವು ಜೇಡದಂತ ಕೀಟಗಳ ಜಾತಿಗೆ ಸೇರುತ್ತವೆ. ಇವುಗಳ ಗಾತ್ರ 2 ಸೆಂಟಿಮೀಟರಿನಿಂದ ಹಿಡಿದು 3.3 ಮೀಟರ್ ವರೆಗೆ ಇರುತ್ತವೆ. ಇವುಗಳಿಗೆ 4 ಜೊತೆ ಕಾಲುಗಳು, ತಲೆ, ಕುಟುಕು ಅಂಗ ಮತ್ತು ಶರೀರ ಇರುತ್ತದೆ. ಇವು ಅಕಶೇರುಕಗಳಾಗಿದ್ದು ಶರೀರವನ್ನು ರಕ್ಷಿಸಲು ಕವಚ ಹೊಂದಿರುವ ಬಹು ಕಾಲಿನ ಪ್ರಾಣಿಗಳಾಗಿವೆ. ಇವುಗಳಿಗೆ ಎಲುಬುಗಳಿಲ್ಲ, ರಕ್ತವಿಲ್ಲ. ಚಳಿಗಾಲದಲ್ಲಿ ಚೇಳುಗಳು ಶೀತನಿದ್ರೆಗೆ ಜಾರುತ್ತವೆ. ಅವುಗಳ ಜೀವಿತಾವಧಿಯಲ್ಲಿ ಚೇಳುಗಳು 7 ಸಲ ಅವುಗಳ ಕವಚವನ್ನು ಬದಲಾಯಿಸುತ್ತವೆ. […]Read More
ವಿಶಿಷ್ಟ ಪ್ರಣಯದ ಹಕ್ಕಿ ಈ ಕುಂಜಪಕ್ಷಿ ಹದಿಹರೆಯದ ಹುಡುಗರು ಹುಡುಗಿಯರನ್ನು ಆಕರ್ಷಿಸಿ ತನ್ನ ಸಂಗಾತಿಯನ್ನಾಗಿ ಮಾಡಿಕೊಳ್ಳಲು ಬಗೆ ಬಗೆಯ ಕಸರತ್ತುಗಳನ್ನು ಮಾಡುವುದು ಒಂದೆರಡಲ್ಲ! ಅದು ಪ್ರಕೃತಿ ಸಹಜವಾದ ನಿಯಮವು ಹೌದು. ಅದೇ ರೀತಿ ಪಕ್ಷಿಪ್ರಪಂಚದಲ್ಲೂ ಕೂಡ ಗಂಡು ಹಕ್ಕಿ ಹೆಣ್ಣು ಹಕ್ಕಿಯನ್ನು ಆಕರ್ಷಿಸಲು ನಾನಾ ರೀತಿ ಕೂಗುವುದು, ಗಾಳಿಯಲ್ಲಿ ಮೇಲಕ್ಕೆ ಕೆಳಕ್ಕೆ ಹಾರುತ್ತ ಶಿಳ್ಳೆ ಹೊಡೆಯುವುದು, ನರ್ತಿಸುವುದು, ಇನ್ನೂ ಅನೇಕ ವಿಧದಲ್ಲಿ ಪ್ರಣಯಕ್ಕೆ ಸೆಳೆಯಲು ಪ್ರಯತ್ನಿಸಿ ಸಂತಾನೋತ್ಪತ್ತಿಯನ್ನು ಮಾಡಿಕೊಳ್ಳುವುದು ಪ್ರಕೃತಿ ಆಯೋಜಿಸಿರುವ ನಿಯಮ ಎನ್ನಬಹುದು. ಇದರಲ್ಲಿ ಕೊಂಚ […]Read More
ಆಸ್ಟ್ರೇಲಿಯದ ಸಂರಕ್ಷಿತ ಪಕ್ಷಿ – ಕಾಕಟೂ “ಕ್ಯಾಕಟುಯಿಡೆ” ಕುಟುಂಬಕ್ಕೆ ಸೇರಿದ 21 ಜಾತಿಯ ಗಿಳಿಗಳಲ್ಲಿ ಕಾಕಟೂ ಹಕ್ಕಿಯು ಒಂದು. ಕಪ್ಪು ಕಾಕಟೂ ಅಥವಾ ಕಪ್ಪುರೆಕ್ಕೆಯ ಕಾಕಟೂ ಆಸ್ಟ್ರೇಲಿಯಾದ ಸ್ಥಳೀಯ ಪಕ್ಷಿ. ಈ ಪಕ್ಷಿಗಳು ಹೊಳೆಯುವ ಕಪ್ಪುರೆಕ್ಕೆಗಳನ್ನು ಹೊಂದಿದ್ದು, ರೆಕ್ಕೆಯ ಅಂಚುಗಳು ಬಿಳಿಯಾಗಿರುತ್ತವೆ. ಅವುಗಳ ಮೇಲೆ ಸೂರ್ಯ ಬೆಳಗಿದಾಗ ಹೆಚ್ಚು ಆಕರ್ಷಕವಾಗಿ ಕಾಣುತ್ತವೆ. ಅದರಲ್ಲೂ ಕೆಂಪುಬಾಲದ ಮತ್ತು ಕಪ್ಪು ರೆಕ್ಕೆಯಿರುವ ಕಾಕಟೂಗಳು ಸುಂದರವಾಗಿರುತ್ತವೆ. ಗಂಡು ಕಾಕಟೂಗಳು ಕೆಂಪುಬಾಲವನ್ನು ಹೊಂದಿದ್ದು, ಇವುಗಳ ತೂಕ 670ರಿಂದ 920 ಗ್ರಾಮ್ ಇದ್ದರೆ ಹೆಣ್ಣು […]Read More
ಹಮ್ಮಿಂಗ್ ಬರ್ಡ್ ಗಾಳಿಯಲ್ಲಿ ಹಿಂದಕ್ಕೂ ಮುಂದಕ್ಕೂ ಮೇಲಕ್ಕೂ ಕೆಳಗೂ ನಿರಂತರವಾಗಿ ರೆಕ್ಕೆ ಬಡಿಯುತ್ತಾ ಹಾರಾಟವನ್ನ ನಿಯಂತ್ರಿಸಿಕೊಂಡು ಹಾರಾಟದ ದಿಕ್ಕನ್ನ ಬದಲಾಯಿಸುತ್ತಾ ಹಾರಾಡಬಲ್ಲ ಜಗತ್ತಿನ ಏಕೈಕ ಹಕ್ಕಿ ಹಮ್ಮಿಂಗ್ ಬರ್ಡ್. ಈ ಪಕ್ಷಿಗಳ ರೆಕ್ಕೆಗಳ ರಚನೆಯೇ ಇದಕ್ಕೆ ಮುಖ್ಯ ಕಾರಣ. ಇವುಗಳಿಗೆ ಇತರೇ ಪಕ್ಷಿಗಳಂತೆ ಟೊಳ್ಳಾದ ಮೂಳೆ ವಿಶಾಲ ಎದೆ ಎಲ್ಲ ಇದ್ದರೂ ರೆಕ್ಕೆಗಳ ಚಲನೆಯ ದಿಕ್ಕು ಮಾತ್ರ ಅವುಗಳಂತಿಲ್ಲ. ಸಾಮಾನ್ಯವಾಗಿ ಎಲ್ಲ ಪಕ್ಷಿಗಳು ತಮ್ಮ ರೆಕ್ಕೆಗಳನ್ನ ಮೇಲಕ್ಕೂ ಕೆಳಕ್ಕೂ ಬಡಿದು ಹಾರಾಟ ಮಾಡಲು ಬೇಕಾಗುವ ಒತ್ತಡ ಪಡೆದುಕೊಳ್ಳುತ್ತವೆ […]Read More
ಚಮಚ ಕೊಕ್ಕಿನ ಮರಳು ಪೀಪಿ – Spoonbilled Sand Piper ನಿರಂತರವಾಗಿ ಬರುತಿದ್ದ ಮನೆಯ ನೆಂಟರು ಕ್ರಮೇಣವಾಗಿ ಕಡಿಮೆಯಾಗುತ್ತಾ ಬಂದರೆ! ನಂತರ ಬರುವುದನ್ನೇ ನಿಲ್ಲಿಸಿದರೆ ಬರುತ್ತಿದ್ದ ನೆಂಟರಿಗೆ ಏನಾಯಿತೋ ಏನೋ ಎಂದು ಕಳವಳವಾಗುವುದು ಸಹಜ. ರಷ್ಯಾ ದೇಶದಿಂದ ಚಳಿಗಾಲದ ಅತಿಥಿಯಾಗಿ ಭಾರತಕ್ಕೆ ಆಗಮಿಸುತಿದ್ದ “ಸ್ಪೂನ್ ಬಿಲ್ಡ್ ಸ್ಯಾಂಡ್ ಪೈಪರ್” ಎಂಬ ಪುಟ್ಟ ಅಲೆಮಾರಿ ವಲಸೆ ಹಕ್ಕಿಯ ಸಂತತಿ ಬಗ್ಗೆ ನಿಜಕ್ಕೂ ಈಗ ಆಗುತ್ತಿರುವುದು ಅದೇ ಕಳವಳ. ರಷ್ಯಾದ ಚುಕೋಟ್ಸ್ಕ್ ಹಾಗು ಕಮ್ಚಟ್ಕಾ ಎಂಬ ಪರ್ಯಾಯ ದ್ವೀಪದಲ್ಲಿ ಸಂತಾನವೃದ್ಧಿ […]Read More
ಅಂತರಾಷ್ಟ್ರೀಯ ಹುಲಿ ದಿನ – ಜುಲೈ 29 ಹುಲಿಗಳು ಮೂಲತಃ ಬೆಕ್ಕಿನ ವಂಶವಾದ ಪೆಲಿಡೇ ಕುಟುಂಬಕ್ಕೆ ಸೇರಿದ್ದು. ಬೆಕ್ಕಿನ ವಂಶದ ಜೀವಿಗಳು 70 ಮಿಲಿಯನ್ನು ವರ್ಷಗಳ ಹಿಂದೆ ಏಷಿಯಾ ಖಂಡದಲ್ಲಿ ಜನ್ಮ ತಾಳಿವೆ ಎಂದು ಸಂಶೋದನೆ ಹೇಳುತ್ತದೆ. ಪ್ರಸ್ತುತ ಜಗತ್ತಿನಲ್ಲಿ 37 ಬೆಕ್ಕಿನ ಜಾತಿಯ ಪ್ರಾಣಿಗಳನ್ನು ನೋಡಬಹುದು , ಭಾರತದಲ್ಲಿ 15 ಜಾತಿಗಳಿಗೆ. ಇವುಗಳಲ್ಲಿ ಅನೇಕ ಉಪ ಪ್ರಭೇದಗಳು ಇವೆ. ಸಣ್ಣ ಬೆಕ್ಕುಗಳನ್ನು “ಫೆಲಿನಿ” (Felini) ಹಾಗು ದೊಡ್ಡ ಬೆಕ್ಕುಗಳನ್ನು “ಪ್ಯಾಂಥರಿಣಿ” (Pantherini) ಎಂದು ಎಂದು ಗುಂಪುಗಳಲ್ಲಿ […]Read More