ನಮ್ಮ ಅತಿ ಸುಂದರ ಹಕ್ಕಿಗಳಲ್ಲಿ ಈ ಮಧುರಕಂಠವೂ ಒಂದು. ಹೆಸರಿಗೆ ತಕ್ಕಂತೆ ಇದು ಶ್ರಾವ್ಯವಾಗಿ ಹಾಡುತ್ತದೆ. ಇಂಗ್ಲಿಷಿನಲ್ಲಿ ಇದನ್ನು ಐಯೋರ ಎಂಬ ಇಂಪಾದ ಹೆಸರಿನಿಂದಲೇ ಕರೆಯುತ್ತಾರೆ. (Common Iora Aegithina tiphia)ದಕ್ಷಿಣ ಏಷ್ಯಾದಲ್ಲಿ ಎರಡು ಜಗತ್ತಿನಲ್ಲಿ ನಾಲ್ಕು ಬಗೆಯ ಮಧುರಕಂಠಗಳು ಕಂಡುಬರುತ್ತವೆ. ಎಲ್ಲವೂ ಹಸಿರು, ಹಳದಿ, ಬಿಳಿ ಹಾಗೂ ಕಪ್ಪು ವರ್ಣಗಳ ಸಂಯೋಜನೆಯ ಹಕ್ಕಿಗಳೇ. ಗಂಡು ಹೆಣ್ಣಿನ ವರ್ಣ ಸಂಯೋಜನೆ ಬೇರೆ ಬೇರೆ. ಮರಿ ಮಾಡುವ ಕಾಲದಲ್ಲಿ ಗಂಡು ಹಕ್ಕಿ ಕಪ್ಪು ಟೋಪಿಯನ್ನು ಮೆರೆಸುತ್ತದೆ. ಇದರ ಪ್ರೇಮಯಾಚನಾ ಪ್ರಸಂಗ […]
Feature post
ಪಶ್ಚಿಮ ಹಾಗೂ ಘಟ್ಟಗಳ, ಒಟ್ಟಾರೆ ದಕ್ಕನ್ಪ್ರಸ್ಥ ಭೂಮಿಯ ರಮಣೀಯ ಸೌಂದರ್ಯದಲ್ಲಿ ಈ ಹಕ್ಕಿಯದ್ದು ವಿಶಿಷ್ಟಪಾಲಿದೆ. ಕನ್ನಡದಲ್ಲಿ ಕಾಕರಣೆ ಹಕ್ಕಿ ಎಂದು ಕರೆಯಲಾಗುವ ಇದಕ್ಕೆ ಸ್ಥಳೀಯವಾಗಿ ಕಕ್ಕರಣೆ ಹಕ್ಕಿ ಎಂಬ ಹೆಸರೂ ಇದೆ. ಇಂಗ್ಲಿಷಿನಲ್ಲಿ ಮಲಬಾರ್ ಟ್ರೋಗಾನ್ (Malabar Trogon Harpactes fasciatus)ಎಂದು ಕರೆಯುತ್ತಾರೆ. ಗಂಡು ಹಾಗೂ ಹೆಣ್ಣು ಎರಡೂ ವಿಶಿಷ್ಟವಾದ ಸೌಂದರ್ಯದಿಂದ ಕೂಡಿದೆ. ಗಂಡು ಪ್ರಧಾನವಾಗಿ ಕೆಂಪಾಗಿದ್ದು ಕಪ್ಪು ತಲೆ, ಕುತ್ತಿಗೆಯನ್ನು ಹೊಂದಿರುತ್ತದೆ, ಈ ಕಪ್ಪು ಎದೆಯ ಮೇಲ್ಭಾಗದವರೆಗೂ ವ್ಯಾಪಿಸಿರುತ್ತದೆ. ದೇಹದ ಕೆಳಭಾಗ ಕೆಂಪು! ಈ ಕೆಂಪು-ಕಪ್ಪನ್ನು ಬೇರ್ಪಡಿಸುವುದು […]Read More
ಅತಿ ಉದ್ದವಾದ ಕೊಕ್ಕು, ಎಷ್ಟೋ ಪಕ್ಷಿಗಳ ಕೊಕ್ಕಿನ ಮೇಲೆ ಒಂದು ಉದ್ದವಾದ ಗುಬುಟಿನಂತಹ ರಚನೆ, ದೊಡ್ಡಗಾತ್ರದ ಹಕ್ಕಿ ಒಮ್ಮೆ ನೋಡಿದರೆ ಮರೆಯುವುದೇ ಇಲ್ಲ. ಅಂತಹ ಹಕ್ಕಿಯಿದು. ಇದನ್ನು ಕುರಿತಾಗಿ ಸಂತೋಷದ, ಆಶ್ಚರ್ಯದ ಹಾಗೂ ವಿಷಾದದ ವಿಷಯಗಳಿವೆ. ಮಂಗಟ್ಟೆ ಹಕ್ಕಿಗಳು ಕೀಟ, ಸಣ್ಣ-ದೊಡ್ಡ ಜೀವಿಗಳನ್ನು ತಿನ್ನುತ್ತದೆಯಾದರೂ ಫಲಾಹಾರಿ ಹಕ್ಕಿಗಳು. ಇವು ಹಣ್ಣುತಿಂದು ಕಾಡಿನ ದೂರದೂರದವರೆಗೂ ಹೋಗಿ ವಿಸರ್ಜಿಸುವುದರಿಂದ ಕಾಡಿನ ಬೆಳವಣಿಗೆಗೆ ಮತ್ತು ಮರಗಳ ಹರವು ವಿಸ್ತಾರವಾಗಲು ನೆರವಾಗುತ್ತದೆ. ಮಂಗಟ್ಟೆ ಹಕ್ಕಿ ಹಾಗೂ ಇದರ ಸುಂದರ ರೂಪ ಸಂತೋಷ ತರುವ […]Read More
ನವಿಲುಗಳು ನವಿಲು ಎಂದು ಕೇಳಿದೊಡನೆ ಸಂತೋಷ ಪಡದವರು ಪ್ರಾಯಃ ಯಾರೂ ಇಲ್ಲ. ನವಿಲು ನಮ್ಮ ಸಾಹಿತ್ಯ, ಸಂಸ್ಕೃತಿಗಳಲ್ಲಿ ಹಾಸುಹೊಕ್ಕಾಗಿರುವ ಹಕ್ಕಿ, ಸುಬ್ರಹ್ಮಣ್ಯ ಸ್ವಾಮಿಯ ವಾಹನ, ಬೌದ್ಧ ಧರ್ಮದಲ್ಲಿಯೂ ಇದರ ಪ್ರಸ್ತಾಪವಿದೆ. ಹಾಗಾಗಿ ಇದಕ್ಕೆ ಆಧ್ಯಾತ್ಮದ ಸ್ಪರ್ಶವೂ ಇದೆ. ಮಯೂರ ಎಂಬುದು ಇದರ ಇನ್ನೊಂದು ಹೆಸರು. ನರ್ತಿಸುವ ನವಿಲು “ಗಂಡು”. ಹಾಗಾಗಿಯೇ ನೃತ್ಯ ನಿಪುಣೆಯರನ್ನು “ನಾಟ್ಯ ಮಯೂರಿ” ಎಂದು ಕರೆಯುವುದು. ಸೌಂದರ್ಯದ ಪ್ರತೀಕ ಈ ನಮ್ಮ ನವಿಲು. ನವಿಲು ನಮ್ಮ ರಾಷ್ಟ್ರಪಕ್ಷಿ. ನಮ್ಮ ವಿನ್ಯಾಸಲೋಕದ ಅನಭಿಷಿಕ್ತ ದೊರೆಯೇ ನವಿಲು! […]Read More
ನಮ್ಮಲ್ಲಿ ಮದುವೆಗಳಲ್ಲಿ ಮೊದಲು ಜೀರಿಗೆ ಬೆಲ್ಲ ಹಾಕಿದೋರ ಮಾತನ್ನು ವಧು/ವರ ಜೀವನ ಪರ್ಯಂತ ಕೇಳುವಂತಾಗುತ್ತದೆ ಎಂಬುದು ಒಂದು ಹಾಸ್ಯಪೂರ್ಣವಾದ ನಂಬಿಕೆ! ಆಮೇಲೆ ಗಂಡು ಹೆಣ್ಣಿಗೆ ಅಡ್ಡಬೀಳುವುದು ಇದ್ದೇ ಇದೆ ಎಂಬು ಮಾತೂ ಬಂದು ಹೋಗುತ್ತದೆ, ವಾಸ್ತವವೇನೇ ಇದ್ದರೂ! ಇರಲಿ, ಇವೆಲ್ಲವೂ ಹಾಸ್ಯಕ್ಕೆ ಹೇಳುವುದು. ಎಷ್ಟೇ ಅದರೂ ಗಂಡಿನ ಬಾಳು! ನಮ್ಮ ಬಹು ಸುಂದರ ಹಕ್ಕಿಗಳಲ್ಲಿ ಒಂದಾದ ನೀಲಕಂಠ ಹಕ್ಕಿ ಸಂಗಾತಿಯನ್ನು ಪಡೆಯಲೋಸುಗ ಹೆಣ್ಣಿನ ಮುಂದೆ ಲಾಗ ಹಾಕುತ್ತದೆ! ವಿಶಿಷ್ಟ ಬಗೆಯ ಹಾರುವ ಸರ್ಕಸ್ಸನ್ನು ಗಾಳಿಯಲ್ಲಿ ಹೆಣ್ಣಿನ ಮುಂದೆ […]Read More
ಗಿಳಿ ಗೊರವಂಕಗಳಂತೆ ಬಾಳಿದರು ಎಂದು ನಾವು ಸಾಮಾನ್ಯವಾಗಿ ಹಿಂದಿನ ಸಾಹಿತ್ಯದಲ್ಲಿ ನೋಡುತ್ತೇವೆ. ಇದು ಗಿಳಿಗಳು ಹಾಗೂ ಗೊರವಂಕಗಳು ಒಟ್ಟಿಗೆ ಜೀವಿಸುವುದನ್ನು ನೋಡಿ ಬೆಳೆದುಬಂದಿರುವ ನುಡಿಗಟ್ಟು. ಈ ಎರಡೂ ಪ್ರಭೇದದ ಹಕ್ಕಿಗಳು ಸಾಮಾನ್ಯವಾಗಿ ಒಟ್ಟೊಟ್ಟಾಗಿರುವುದರಿಂದಲೂ ಹಾಗೂ ಒಂದೇ ಸಂಗಾತಿಗೆ ಅಂಟಿಕೊಂಡಿರುವುದರಿಂದಲೂ ಈ ಮಾತು ಬಂದಿರಬೇಕು. ಇಂದಿನ ಅಂಕಣದಲ್ಲಿ ಕೇವಲ ಗೊರವಂಕಗಳನ್ನು ಮಾತ್ರ ಪರಿಗಣಿಸಲಾಗಿದೆ. ಗೊರವಂಕಗಳನ್ನು ಮೈನಾಗಳೆಂದೂ ಕರೆಯುತ್ತಾರೆ ಮತ್ತು ಈ ಹೆಸರೇ ನಗರ ಪ್ರದೇಶಗಳಲ್ಲಿ ಹಾಗೂ ನಗರ ಪ್ರದೇಶಗಳಿಂದ ಬಂದ ಜನರಲ್ಲಿ ಹೆಚ್ಚು ಪ್ರಚಲಿತವಾಗಿದೆ. ಇವುಗಳಲ್ಲಿಯೂ ಅನೇಕ ಪ್ರಭೇದಗಳಿವೆ. […]Read More
ಮಹಾಕವಿಯ ಚೇತನಕ್ಕೊಂದು ಮಂತ್ರ! – ಕುಟುರ Barbet – Psilopogon viridis ಕುಟುರ್…ಕುಟುರ್….ಕುಟುರ್… ಕೇಳಿದೊಡನೆಯೇ ಕುವೆಂಪು ಭಾವಪರವಶರಾಗುತ್ತಿದ್ದರಂತೆ. ಅವರ ಸುಪುತ್ರ ಏಕೆಂದು ಕೇಳಿದರೆ, “ಕುಟುರನ ಹಕ್ಕಿಯ ಕೂಗು ಕೇಳಿದೊಡನೆಯೇ ನನ್ನ ಚೇತನ ಈ ಊರಿನ ಸದ್ದು ಗೊಂದಲಗಳಿಂದ ಪಾರಾಗಿ ಮಲೆನಾಡಿನ ವಿಸ್ತಾರವಾದ ಕಾಡಿಗೆ ಸ್ಥಳಾಂತರಗೊಳ್ಳುತ್ತದೆ. ನಿಮಗೆಲ್ಲ ಅದೊಂದು ಹಕ್ಕಿಯ ಕೂಗಾದರೆ, ನನಗೆ ಅದೊಂದು ಮಂತ್ರ!” ಎಂದರಂತೆ. ಆ ಹಕ್ಕಿಯೇ ಬಿಳಿ ಕೆನ್ನೆಯ ಕುಟುರ. ಸೊಪ್ಪುಕುಟಿರ, ಕುಟಿರ ಎಂದೆಲ್ಲ ಕರೆಸಿಕೊಳ್ಳುವ ಹಕ್ಕಿ ನಮ್ಮಲ್ಲಿ ಸಾಮಾನ್ಯವಾಗಿ ಕಂಡುಬರುವ ಹಕ್ಕಿಗಳಲ್ಲಿ ಒಂದು. […]Read More
ಗಿಣಿಯು ಪಂಜರದೊಳಿಲ್ಲಾ, ರಾಮ ರಾಮಾ ಎಂಬ ದಾಸರ ಪದವನ್ನು ನಾವೆಲ್ಲರೂ ಕೇಳಿರುತ್ತೇವೆ. ಒಬ್ಬ ಸಂತನ ಮತ್ತು ಕಟುಕನ ಮನೆಯಲ್ಲಿ ಬೆಳೆದ ಒಂದೇ ಗಿಣಿಯ ಎರಡು ಮರಿಗಳು ಮುಂದೆ ಏನಾದವು ಎಂಬುದು ನಮಗೆ ತಿಳಿದೇ ಇದೆ. ಮದುವೆಗೆ ಮೊದಲು ಹುಡುಗಿಗೆ ಗಿಣಿಯಂತೆ ಮಾತಾಡುತ್ತೀಯಲ್ಲೇ ಎಂದವರು ಮುಂದೆ “ಗಿಣಿ ತರ ಮಾತಾಡ್ಬೇಡ ನೀನು ಎಂದಿರುತ್ತೇವೆ!” ಗಿಣಿ ಭವಿಷ್ಯ ಕೇಳಿರುವುದೂ ಉಂಟು! ಗಿಣಿಯ ಪ್ರಸ್ತಾಪವಿರುವ ಪ್ರಣಯ ಗೀತೆಗಳು ಕಡಿಮೆ ಇವೆಯೇ! (ಪಂಚರಂಗಿ!) ರಾಮ ರಾಮ! ಇವೆಲ್ಲಾ ಏನೇ ಇರಲಿ, ಗಿಣಿ ಸಾಮಾನ್ಯವಾಗಿ […]Read More
ಪಕ್ಷಿಲೋಕ – 1 ಕಾಗೆಗಳು “…ಅನ್ನದಲ್ಲಿ ಕೂತ ಕಾಗೆ ತನ್ನ ಬಳಗವನ್ನೆಲ್ಲಾ ಕರೆಯುತ್ತದೆ!” ಈ ಮಾತನ್ನು ನಾವು ಅನೇಕ ಬಾರಿ ಕೇಳಿರುತ್ತೇವೆ. ಒಳ್ಳೆಯದಕ್ಕೂ ಕೆಟ್ಟದಕ್ಕೂ ಇದನ್ನು ಒಪ್ಪವಿಡುತ್ತೇವೆ. “ಅವನು ಬದುಕಿದ್ದಾಗ ಒಬ್ಬರಿಗೆ ಕೈಯೆತ್ತಿ ಒಂದು ಕಾಸು ಕೊಡಲಿಲ್ಲ, ಅವನ ಪಿಂಡದಲ್ಲಿ ಕೂತ ಕಾಗೆ ತನ್ನ ಬಳಗವನ್ನೆಲ್ಲ ಕರೀತು ನೋಡಿ ಎಂದು”. ಹಾಗೆಯೇ “…ಇದನ್ನ ಮಾಡ್ದೆ ಇದ್ರೆ ಅವಗೆ ಕಾಕಿಪಿಂಡ ಆಗಂಗಿಲ್ಲ!” ಎಂಬುದೂ ಒಂದು ಮಾತು! ಅದನ್ನು ಅವನು ಮಾಡೇ ಮಾಡುತ್ತಾನೆ ಎಂಬುದು ಅರ್ಥ. ಒಟ್ಟಾರೆ, ನಮ್ಮ ಸಂಸ್ಕೃತಿಯಲ್ಲಿ […]Read More
ಕೋಗಿಲೆ ಎಂದ ಕೂಡಲೆ ನಮ್ಮ ಮನಸ್ಸಿಗೆ ಬರುವುದು ಮೂರು. “ವಸಂತಕಾಲ, ಮಧುರ ಕಂಠ ಮತ್ತು ಪರಪುಟ್ಟ”. ಸದ್ಯ ನಾವು ಅದೇ ಕಾಲದಲ್ಲಿಯೇ ಇದ್ದೇವೆ. ಮೊದಲೆರೆಡನ್ನು ಬಿಟ್ಟು ಮೂರನೆಯದನ್ನು ಕುರಿತಾಗಿ ತಿಳಿದುಕೊಳ್ಳೋಣ. ಗಂಡು ಕೋಗಿಲೆ ಹೆಣ್ಣು ಕೋಗಿಲೆ ಮರಿ ಕೋಗಿಲೆ ಕೋಗಿಲೆ ಗೂಡುಕಟ್ಟುವುದಿಲ್ಲ, ಬದಲಿಗೆ ಕಾಗೆಯ ಗೂಡಿನಲ್ಲಿ ಮೊಟ್ಟೆಯಿಡುತ್ತದೆ. ಕಾಗೆ ಇದರ ಮೊಟ್ಟೆಗೆ ಕಾವುಕೊಟ್ಟು ಮರಿಮಾಡಿ ಸಾಕುತ್ತದೆ ಎಂಬುದನ್ನು ನಮ್ಮ ಪೂರ್ವೀಕರು ಗಮನವಿಟ್ಟು ನೋಡಿ ತಿಳಿದುಕೊಂಡಿದ್ದರು. ಅದರಿಂದಲೇ ಕೋಗಿಲೆಗೆ ಪರಪುಟ್ಟ ಎಂಬ ಹೆಸರು. ಕೋಗಿಲೆ ಸೋಮಾರಿ ಎಂದಾಯಿತು! ಆದರೆ, […]Read More