ಕತ್ತೆ ಬಾಲವ ಹಿಡಿದು ಜಗ್ಗಿದನು ಬಡ ಹುಡುಗಕತ್ತೆ ಒದೆಯಿತು ಎತ್ತಿ ಎರಡು ಕಾಲ್ಗಳನುಸತ್ತೇನೆನ್ನುತ ಹುಡುಗ ಅರೆ ಜೀವವಾಗಿರಲುಹೆತ್ತವರ ಗತಿಯೇನು ?- || ಪ್ರತ್ಯಗಾತ್ಮ || ಶೌಚಗೃಹ ಸ್ನಾನಗೃಹ ಕೊಳಚೆ ಗುಂಡಿಗಳೆಂದುಪಾಶ್ಚಾತ್ಯರೆಮ್ಮನ್ನು ನಿಂದಿಸುವುದುಂಟುಸ್ವಚ್ಛತೆ ಸುಸಂಸ್ಕೃತಿಯ ಕುರುಹು ಎಂಬುದನರಿತುಸ್ವಚ್ಛತೆಗೆ ಗಮನ ಕೊಡು- || ಪ್ರತ್ಯಗಾತ್ಮ || ಪಾಶ್ಚಾತ್ಯ ರಾಷ್ಟ್ರಗಳ ಪ್ರಾಮಾಣಿಕತೆ, ವಿನಯ,ಸ್ವಚ್ಛತೆಯು, ರಾಷ್ಟ್ರಾಭಿಮಾನ, ನಿಸ್ಪೃಹತೆಕೊಂಚವಾದರೂ ಸರಿಯೆ ನಮ್ಮವರು ಅನುಕರಿಸೆಮೆಚ್ಚುಗೆಯ ಗಳಿಸುವರು- || ಪ್ರತ್ಯಗಾತ್ಮ || ಅಪ್ಪಿಕೋ ಚಳುವಳಿಯು ನಾಡಿನೆಲ್ಲೆಡೆ ಹಬ್ಬಿತಪ್ಪಿದರೆ ಕಾಡುಗಳ ಕಡಿವ ಹಾವಳಿಯುತಪ್ಪದೆಯೆ ಮಳೆ ಬಂದು ಬರ ಹಿಂಗೆ […]
ಸರ್ವರೊಳಗೊಂದೊಂದು ನುಡಿಗಲಿತು ಮಾನವನುಸರ್ವಜ್ಞನಾಗುವನು ಸಂದೇಹವಿಲ್ಲಸರ್ವರೊಳಗೊಂದಾಗಿ ನಗುನಗುತ ಮಾತಾಡುಸರ್ವಜನ ಮಾನ್ಯನಹೆ- || ಪ್ರತ್ಯಗಾತ್ಮ || ತಲೆ ಬಾಚಿ ಹೂ ಮುಡಿದು ಹಣೆಗೆ ತಿಲಕವನಿಟ್ಟುಮಲಿನವಲ್ಲದ ಸೀರೆ ಕುಪ್ಪಸವ ಧರಿಸಿಬಳಲಿ ಬಹ ಪತಿಯೆದಿರು ಸತಿ ಸುಳಿಯೆ ಪತಿಗಾಗಬಳಲಿಕೆಯು ಹಿಂಗುವುದು- || ಪ್ರತ್ಯಗಾತ್ಮ || ಜನುಮ ನೀಡಿದ ಜನನಿ ಜನಕರೇ ಪರದೈವಅನುನಯದೊಳವರನ್ನು ಮುಪ್ಪಿನಲಿ ಸಲಹು.ನಿನಗಾಗಿ ಅವರೆನಿತು ಕಷ್ಟಗಳ ಸಹಿಸಿದರೊ !ನೆನೆಯ ಬೇಡವೆ ನೀನು- || ಪ್ರತ್ಯಗಾತ್ಮ || ಹದಿ ಹರೆಯದ ಹೆಣ್ಣ ಹೊಳೆವ ಕಣ್ಣೇ ಚಂದಅದಕಿನಿತು ಕಾಡಿಗೆಯು ಮತ್ತಷ್ಟು ಚಂದಮುದಿತನದಲಿ ಮಂಜಾಗಿ ಸುಕ್ಕಾಗಿ […]Read More
ಹನಿಗೂಡಿದರೆ ಹಳ್ಳ ತೆನೆಗೂಡಿದರೆ ಬಳ್ಳಅಣುವಿನಿಂದೇನೆಂದು ಸಲ್ಲದು ಉಪೇಕ್ಷೆಇನಿತಾದರೂ ಉಳಿಸಿ ಹಣವನೊಂದಡೆ ಇರಿಸುಘನ ನಿಧಿ ಭವಿಷ್ಯಕ್ಕೆ- || ಪ್ರತ್ಯಗಾತ್ಮ || ಇರುಳ ಕಾರ್ಗತ್ತಲಲಿ ದಾರಿ ತಪ್ಪಿದವಂಗೆಸರಿದಾರಿ ತೋರುವುದು ಕೋಲ್ಮಿಂಚು ಬೆಳಗಿಕೊರಗದಿರು ನೀಗೈದ ಸೇವೆ ಅಲ್ಪವದೆಂದುಕಿರಿದೆ ಅಳಿಲಿನ ಸೇವೆ ?- || ಪ್ರತ್ಯಗಾತ್ಮ || ಕೊಳಲಿನಿಂಚರ ಕೇಳಿ ತಲೆದೂಗದವರುಂಟೆ ?ಉಲಿವ ವೀಣೆಯ ದನಿಗೆ ಸೋಲದವರುಂಟೆ ?ಎಳೆಯ ಮಕ್ಕಳ ಮುದ್ದು ತೊದಲು ಮಾತನು ಕೇಳಿನಲಿಯದವರುಂಟೇನು ?- || ಪ್ರತ್ಯಗಾತ್ಮ || ಬಲಿಕೊಡುವರೇ ಹೇಳು ಆನೆ ಕುದುರೆಗಳನ್ನುಹುಲಿಯನೆಂದಾದರೂ ಬಲಿಕೊಟ್ಟುದುಂಟೆ ?ಬಲಿ ಪಶುವು ಕುರಿ-ಮೇಕೆ, […]Read More
ಕರೆಯದಿರೆ ಹೋಗದಿರು ಶುಭಕಾರ್ಯವೆಂದನಲುಪರಿಣಾಮ ರಮಣೀಯವಲ್ಲವದು ಕಾಣಮರಣ ವಾರ್ತೆಯ ಕೇಳಿ ಚಣಕಾಲನಿಲ್ಲದಿರುಮರುಕವೇ ಕರೆಯೋಲೆ- || ಪ್ರತ್ಯಗಾತ್ಮ || ಕರೆಯದಿದ್ದರೂ ಕೂಡ ದಕ್ಷ ಯಜ್ಞಕೆ ತೆರಳಿಕೆರಳಿ ದಾಕ್ಷಾಯಣಿಯು ಮರಣವಪ್ಪಿದಳುಕರೆಯದೆಯೆ ಹೋಗುವುದು ಮರ್ಯಾದೆಗದು ಕುಂದುನೆರೆ ವಿಚಾರಿಸಿ ನೋಡು- || ಪ್ರತ್ಯಗಾತ್ಮ || ಗಾಂಧಿ ನಿಧನದ ವಾರ್ತೆ ಕೇಳಿ ಕಂಗಾಲಾಗಿಮಂದಿ ಲಕ್ಷಕು ಮೀರಿ ದಿಲ್ಲಿ ಸೇರಿದರುನೊಂದು ದರ್ಶನ ಪಡೆದು ಅಶ್ರುಸುರಿಸಿದರವರನಂದು ಕರೆದವರಾರು ?- || ಪ್ರತ್ಯಗಾತ್ಮ || ತಂತಿಯನು ಅತಿ ಬಿಗಿದರದು ಕಡಿದು ತುಂಡಹುದುತಂತಿ ಸಡಿಲವ ಮಾಡೆ ನಾದ ಹೊರಬರದುತಂತಿ ಹದವಾಗಿರಲು ಸುಶ್ರಾವ್ಯ […]Read More
ಗಿಡದೊಳಗೆ ಹೂವಿರಲು ಕಂಡು ಆನಂದಪಡುಬಿಡದೆ ಪರಿಮಳ ಸೂಸೆ ಆಘ್ರಾಣಿಸದನುಗಿಡದಿ ಹೂವಿರಲಿ ಬಿಡು, ಕಿತ್ತು ಮುಡಿಯಲು ಬೇಡಬಿಡು ಸ್ವಾರ್ಥ ಭಾವನೆಯ- || ಪ್ರತ್ಯಗಾತ್ಮ || ಎದೆಯ ಬಡಿತವೆ ದೇಹದೆಲ್ಲ ಕ್ರಿಯೆಗಳ ಮೂಲಮದು ಮಕ್ಕಳೇ ಮೂಲ ಮದುವೆ ಮನೆಗೆಲ್ಲಸುದತಿಯರ ಸಂತಸಕೆ ಸಂತಾನವೇ ಮೂಲಮದವೆ ಕೆಡುಕಿನ ಮೂಲ- || ಪ್ರತ್ಯಗಾತ್ಮ || ಕ್ರಿಮಿ-ಕೀಟ-ಪಶು-ಪಕ್ಷಿ ಜೀವರಾಶಿಗಳೆಲ್ಲಸಮಯ ಸಮಯದಿ ಹೆಣ್ಣು ಗಂಡುಗಳು ಕೂಡಿತಮ್ಮ ಸಂತಾನವನು ಬೆಳೆಸಿಕೊಳುವೀ ಅರಿವುಅಮಮ! ಏಂ ದೈವಿಕವೊ !- || ಪ್ರತ್ಯಗಾತ್ಮ || ನೀರು ನೆಲ ಒಂದೆ ಬಗೆ; ಹಣ್ಣುಗಳ ರುಚಿ […]Read More
ಮುಳ್ಳುಗಿಡಗಳ ನಡುವೆ ಹಳೆಯ ಗುಡಿ ಗೋಪುರವುಎಲ್ಲಿಯಾದರೂ ಮಾಸ್ತಿ-ವೀರಗಲ್ಲುಗಳುಕಲ್ಲು ಶಾಸನ ನಿಮ್ಮ ಊರಬಳಿ ಇರಬಹುದುಎಲ್ಲವನು ಕಾಪಾಡು- || ಪ್ರತ್ಯಗಾತ್ಮ || ಗಾಳಿ ಹೊಡೆತಕೆ ಸಿಲುಕಿ ಮನೆದೀಪ ನಂದಿರಲುಕಾಳ ಕತ್ತಲೆ ಕವಿಯೆ ಮತ್ತೆ ಬೆಳಗಿಸರೆ?ಬಾಳ ಗೆಳತಿಯು ಮಡಿಯೆ ಬೇರೊಬ್ಬಳನು ತಂದುಬಾಳ ಬೆಳಗಿಸದಿಹರೆ ?- || ಪ್ರತ್ಯಗಾತ್ಮ || ನೂರಾರು ಶಾಸ್ತ್ರಗಳು ನೂರು ಬಗೆ ಹೇಳುವುವುನೂರು ಗೋಜಲು ಗಂಟು ಶಾಸ್ತ್ರಿಗಳ ತರ್ಕಯಾರ ಗೊಡೆವೆಯೂ ಬೇಡ ನಮ್ಮ ಹಿರಿಯರು ನಡೆದದಾರಿಯೇ ಒಳ್ದಾರಿ- || ಪ್ರತ್ಯಗಾತ್ಮ || ಸುದತಿಯರ ಸೌಂದರ್ಯ, ಶೃಂಗಾರ ವೈವಿದ್ಯಎದೆ-ನಡುವಿನಲುಗಾಟ, ಹೂ […]Read More
ಊನವಾಗಿಹ ಒಂದು ಅಂಗಕ್ಕೆ ಎಷ್ಟು ಬೆಲೆ ?ಏನು ಮಾಡಿದರೇನು ಅದು ಕೃತಕವಷ್ಟೇ!ನಿನ್ನ ಅಂಗಾಂಗಗಳೆ ಕೋಟಿ ಹೊನ್ನಿಗು ಮಿಗಿಲುಇನ್ನು ನೀ ಬಡವನೇಂ? – || ಪ್ರತ್ಯಗಾತ್ಮ || ಒಡಲೆಂಬ ಒಡವೆಯನು ಪಡೆದಿದ್ದರೂ ಕೆಲರುಬಡವನೆನ್ನುತ ಕೈಯ ಚಾಚುವರು ಬಾಗಿಬಡವನೆಂಬುದೆ ಸಲ್ಲ; ಅಂಗವಿಕಲನೆ ಬಡವದೃಢಕಾಯ ಸಂಪತ್ತು- || ಪ್ರತ್ಯಗಾತ್ಮ || ನಿನ್ನ ವಂಶದ ಮೂಲ ಪುರುಷರಾರೆಂಬುದನು,ನಿನ್ನ ಬುಡಕಟ್ಟು ಶಾಖೆಗಳ ತಿಳಿಯೆಇನ್ನು ತಡಮಾಡದೆಯೆ ವಂಶವೃಕ್ಷವ ಬರೆದುಚೆನ್ನಾಗಿ ಕಾಪಾಡು- || ಪ್ರತ್ಯಗಾತ್ಮ || ತಾಳೆಗರಿ ಗ್ರಂಥ ಮೇಣ್ ತಾಮ್ರ ಶಾಸನಗಳನುಜಾಳು ಜಾಳಾಗಿರುವ ಹಳೆ ಕಡತಗಳನುಬೀಳುಗಳೆಯದೆ […]Read More
ಯಾವುದೇ ಕ್ರಿಮಿ ಕೀಟ ಹಕ್ಕಿಗಳಿಗಾಹಾರಹಾವುಗಳು ಕಪ್ಪೆಗಳ ತಿಂದು ಜೀವಿಪುವುಹಾವು ಮೀನುಗಳೆಲ್ಲ ಗರುಡ ಪಕ್ಷಿಯ ಬಾಯ್ಗೆಜೀವ ಜೀವಕೆ ಉಣಿಸು_ || ಪ್ರತ್ಯಗಾತ್ಮ || ಇದು ಗಂಗೆ, ಇದು ಯಮುನೆ, ಇದುವೆ ಗೋದಾವರಿಯು,ಇದು ಸಿಂಧು, ಕಾವೇರಿ-ನರ್ಮದಾ-ತಪತಿಇದು ತುಂಗೆ, ಇದು ಭದ್ರೆ-ಮನವು ನಿರ್ಮಲವಿರಲುಉದಕವೆಲ್ಲವು ತೀರ್ಥ- || ಪ್ರತ್ಯಗಾತ್ಮ || ಏನೇನೋ ನೆಪ ಹೇಳಿ ಇನಿಯನಿಂ ಹಣ ಪಡೆದುಮನೆಯ ಮುನ್ನಡೆಸುತ್ತ ಅದರೊಳಗೆ ಮಿಗಿಸಿಮಾನ ಹೋಗುವ ವೇಳೆ ಗಂಡನಿಗೆ ನೆರವಪ್ಪಮಾನವತಿ ಸತಿ ಲೇಸು- || ಪ್ರತ್ಯಗಾತ್ಮ || ಸತಿ ಸುತರು ಒಂದಾಗಿ ದೂರದೂರಿಗೆ ಹೋಗಿಅತಿ […]Read More
ಹಾದಿ ಬೀದಿಯ ನಡುವೆ ಕಲಹಕ್ಕೆ ಇಳಿಯದಿರುಓದು ಬರೆಹವ ಬಲ್ಲರೊಡನೆ ಕಾದದಿರುಐದಾರು ಜನರಿರುವ ಜನ ಸಂದಣಿಯಲ್ಲಿವಾದಿಸದೆ ಸುಮ್ಮನಿರು- || ಪ್ರತ್ಯಗಾತ್ಮ || ಹುಟ್ಟು ದೈವಾಯತ್ತ; ಬಯಕೆ ಪುರುಷಾಯತ್ತಹುಟ್ಟಿದ್ದನೆಂಬುದಕೆ ಕುರುಹು ಬಿಡಬೇಕುಅಟ್ಟು ಉಂಡರೆ ಸಾಕೆ ? ಸೃಷ್ಟಿಸೈ ಹೊಸತೊಂದು,ಹುಟ್ಟು ಸಾರ್ಥಕ ವಹುದು- || ಪ್ರತ್ಯಗಾತ್ಮ || ಹತ್ತಾರು ಮಕ್ಕಳನು ತಾಯ್ತಂದೆ ಸಾಕುವರುಹತ್ತು ಮಕ್ಕಳು ಕೂಡಿ ಅವರ ಸಾಕುವರೆ ?ಮುತ್ತಿನಂತಹ ಮಡದಿ ಮನೆಗೆ ಬಂದಿರುವಾಗಹೆತ್ತವರ ಮಾತೇಕೆ?- || ಪ್ರತ್ಯಗಾತ್ಮ || ಹಳೆಯದಿದು ಹಾಳೆಂದು ಹಳೆಯದಿರು ಓ ಜಾಣ !ಹಳೆಯಲ್ಲವೆ ಮರವು ಕಣ್ […]Read More
ಅತಿ ವಿನಯದಿಂ ನಮಿಪ ದುರ್ಜನನ ನಂಬದಿರುಕಿತವನಹಿ ಮಿತ್ರನನು ನಂಬದಿರಬೇಕುಅತಿ ಕುಲಟೆ ಪತ್ನಿಯನು ದಿಟದೆ ನೀ ನಂಬದಿರುಮೃತಿ ನಿನಗೆ ನಂಬಿದರೆ- || ಪ್ರತ್ಯಗಾತ್ಮ || ಬಡಪಾಯಿ ಜಿಂಕೆಗಳ ವ್ಯಾಧ ಬಿಡದೆಯೆ ಕೊಲುವಜಲಚರ ಮೀನುಗಳ ಬೆಸ್ತರವ ಹಿಡಿವಮುಗುದ ಸಜ್ಜನರ ದುರ್ಜನನು ಹಿಂಸಿಸುವಬಿಡದಿವರ ಕಾಯ್ವರಾರ್? – || ಪ್ರತ್ಯಗಾತ್ಮ || ಹೊಟ್ಟೆ ಹೊರೆಯುವುದಕ್ಕೆ ಬೇಟೆಯಾಡಲೆ ಬೇಕುಪಟ್ಟಿ ಹುಲಿಗಾವುದೇ ಕಾಡಾದರೇನು ?ರಟ್ಟೆ ಬಲವಿದ್ದು ದುಡಿದು ಜೀವಿಸುವವಗೆಹುಟ್ಟಿದೂರೇ ಏಕೆ ? – || ಪ್ರತ್ಯಗಾತ್ಮ || ದಿನಸಿ ಬೆಲೆಗಳು ಏರೆ ಧನಿಕರದ ಚಿಂತಿಸರುದಿನಗೂಲಿಯಾಳುಗಳಿಗಾ ಪರಿವೆ […]Read More