ಶಿವ ಕೊಟ್ಟ ಜೋಳಿಗೆಯ ಗೂಟಕ್ಕೆ ತಗುಲಿಸಿರೆಶಿವ ಬಂದು ಉಣಲಿಕ್ಕಿ ತಣಿಸುವನೆ ಹೇಳುಶಿವ ನಾಮ ಧ್ಯಾನದಲಿ ಊರೂರು ತಿರಿದು ಬರೆಶಿವನು ಕರುಣಿಪನೂಟ- || ಪ್ರತ್ಯಗಾತ್ಮ || ಮೃಗರಾಜ ತಾನೆಂದು ಗುಹೆಯೊಳಗೆ ಮಲಗಿರಲುಮೃಗಗಳೇ ತಾ ಬಂದು ಬಾಯ್ಗೆ ಬೀಳುವುವೆ?ಮೃಗರಾಜನಾದರೇಂ ಬೇಟೆಯಾಡಲೆ ಬೇಕುಜಗದೊಳಗೆ ಶ್ರಮಕೆ ಬೆಲೆ- || ಪ್ರತ್ಯಗಾತ್ಮ || ಬೇಸಿಗೆಯ ಬೇಗೆಯನು ತಾಳಲಾರದೆ ಬರಿದೆಘಾಸಿ ಪಟ್ಟರೆ ಗಾಳಿ ಬೀಸುವುದೆ? ಹೇಳುಬೀಸಣಿಗೆಯನು ಹಿಡಿದು ಬೀಸಿಕೊಂಡರೆ ಮಾತ್ರಬೀಸುವುದು ಗಾಳಿಯದು- || ಪ್ರತ್ಯಗಾತ್ಮ || ದಿನದಿನವು ಇನಿತಿನಿತು ಅಭ್ಯಾಸ ಮಾಡುತಿರೆಕೊನೆಗೆ ದಡ್ಡನು ಕೂಡ ವಿದ್ವಾಂಸನಹನುದಿನ […]
ಸಾವಧಾನದಿ ಕುಳಿತು ಉಣ್ಣುವರ ನಾ ಕಾಣೆಯಾವುದೋ ಧಾವಂತ ಯಾವುದೋ ಚಿಂತೆಯಾವ ಪುರುಷಾರ್ಥಕ್ಕೆ ಈ ಪರಿಯ ದುಡಿಮೆ!ಯಾವ ಕಾಲಕೆ ಬಿಡುವು_ || ಪ್ರತ್ಯಗಾತ್ಮ || ಎರಡು ಕೈಗಳ ಬಳಸಿ ಕೋತಿಗಳು ಮುಕ್ಕುವುವುಸರಸರನೆ ಹಕ್ಕಿಗಳು ಕುಕ್ಕಿ ತಿನ್ನುವುವುಗುರುಗುಟ್ಟಿ ಅತ್ತಿತ್ತ ನೋಡಿ ತಿಂಬುದು ನಾಯಿನರನಿದಕೆ ಹೊರತೇನು? || ಪ್ರತ್ಯಗಾತ್ಮ || ಹಕ್ಕಿಗಳು ತಮ್ಮವರನೊಂದು ಚಣವಗಲಿರವುಅಕ್ಕರೆಯೊಳೊಂದಾಗಿ ಒಲವ ತೋರುವುವುರೊಕ್ಕ ಸಂಪಾದನೆಗೆ ನರನು ಅಲೆಯುತ ಮಡದಿ-ಮಕ್ಕಳನು ಅಗಲುವನು- || ಪ್ರತ್ಯಗಾತ್ಮ || ಇರುಳಿನಲಿ ವಿಶ್ರಮಿಸಿ ಪ್ರಾಣಿ ಪಕ್ಷಿಗಳೆಲ್ಲಇರುವನಿತು ಕಾಲವನು ಸುಖಿಸಿ ಬಾಳುವುವುಇರುಳು ಹಗಲೆನ್ನದೆಯೆ ದುಡಿದು […]Read More
ತನ್ನ ಮತ ಧರ್ಮಗಳ ಪಾಲಿಸದೆ ಇದ್ದವನುಅನ್ಯ ಮತ ಧರ್ಮಗಳ ಗೌರವಿಪನೆಂತು?ತನ್ನ ತಾಯಿಗೆ ಕೊಡದ ಗೌರವವ, ಕೊಡುವನೇಅನ್ಯ ಮಾತೆಗೆ ? ಹೇಳು- || ಪ್ರತ್ಯಗಾತ್ಮ || ತಾಯಿಯೇ ಮೊದಲ ಗುರು; ಮನೆಯೆ ಮೊದಲ ಶಾಲೆತಾಯಿ ನುಡಿ ನಿನ್ನ ನುಡಿ; ಅವಳೆ ಶ್ರೀರಕ್ಷೆತಾಯಿ ವಾತ್ಸಲ್ಯದಲಿ ಬೆಳೆದ ಮಕ್ಕಳೆ ಧನ್ಯತಾಯಿ ಪ್ರೇಮದ ಮೂರ್ತಿ- || ಪ್ರತ್ಯಗಾತ್ಮ || ತಾಯಂದಿರುಗಳೆಲ್ಲ ತಮ್ಮ ಮಕ್ಕಳ ಕರೆದುಬಾಯಿ ಪಾಠವ ಹೇಳಿ ಕೊಡುತಿದ್ದುದುಂಟುತಾಯಿ ಕಲಿಸಿದ ವಿದ್ಯೆ ಆಜೀವ ಪರ್ಯಂತಮಾಯವಾಗಿದೆ ಇಂದು ! – || ಪ್ರತ್ಯಗಾತ್ಮ || […]Read More
ಹಾಲು ನೀರುಗಳೊಳಗೆ ಹಾಲು ಉತ್ತಮವೆಂದುಮೇಲಾದ ಹಾಲಿನಲಿ ಬಾಳೆಂದು ಮೀನ –ಮೇಲೆತ್ತಿ ನೀರಿನಿಂ ಹಾಲಿನೊಳು ಹಾಕಿದರೆಬಾಳಲಾರದು ಕಾಣ- || ಪ್ರತ್ಯಗಾತ್ಮ || ಆವೇಶಕೊಳಗಾಗಿ ದಾನ ಮಾಡಲು ಬೇಡಆವೇಶವಿಳಿದಾಗ ಪರಿತಪಿಸಬೇಡಆವ ಪರಿಯಲು ನೀನು ಮತಿ ವಿಕಳನಾಗದಿರುಆವೇಶ ಸಲ್ಲದೈ- || ಪ್ರತ್ಯಗಾತ್ಮ || ಹದವರಿತು ಪಾಳಿಸುವ ಕಲ್ಕುಟಿಕ ವಡ್ಡನೇಂ ?ಮಿದುವಾದ ಮೇಣವೇಂ ಕಲ್ಲು ಅರೆಬಂಡೆ ?ಚದುರನಹ ರೂವಾರಿಗೀ ಹೆಸರು ತರವಲ್ಲಅದ ವಿಚಾರಿಸಿ ನೋಡು – || ಪ್ರತ್ಯಗಾತ್ಮ || ಮತದ ಲಾಂಛನ ಧರಿಸೆ ಸಂಕೋಚವೇಕಯ್ಯ ?ಸತಿಯ ಕ್ಯೆ ಹಿಡಿವಾಗ ಮತ ಧರ್ಮ […]Read More
ಎತ್ತು ಕೋಣಗಳಲ್ಲಿ ಮೂಗುದಾರದ ಬಳಕೆಕುತ್ತಿಗೆಗೆ ಹಗ್ಗ, ಬಾಯ್ ಬೀಗ ಕೆಲವಕ್ಕೆಹಸ್ತಿಗಂಕುಶ ಚುಚ್ಚಿ ದುಡಿಸಿಕೊಳ್ಳುವೀ ಬುದ್ಧಿ-ಮತ್ತೇ ನರನಿಗೆ ಮಾತ್ರ- || ಪ್ರತ್ಯಗಾತ್ಮ || ಕವಿ ಚುರುಕು ಕುರುಡಂಗೆ, ಅಂತೆ ಸ್ಪರ್ಶಜ್ಞಾನಕಿವುಡುನಿಗೆ ಕಣ್ ಚುರುಕು ಗಮನಿಸಿರಬೇಕುಅವರಿವರ ಕೈ ಬಾಯ ಸನ್ನೆಯರಿವನು ಮೂಗಇವರು ಯಾರಿಗೆ ಕಡಿಮೆ ? || ಪ್ರತ್ಯಗಾತ್ಮ || ಕಣ್ಣಂತೆ ಕುರುಡಂಗೆ ಕೈ ಕಾಲು ಕಿವಿಗಳೆಯೆಸನ್ನೆ ಕೈ ಬಾಯ್ಗಳದೆ ಮಾತು ಮೂಗನಿಗೆ,ಕಣ್ಣೆ ಕಿವಿ ಕಿವುಡನಿಗೆ, ಹೆಳವನಿಗೆ ಕೈಯೆ ಕಾಲ್,ಅನ್ಯೋನ್ಯ ಸಹಕಾರ- || ಪ್ರತ್ಯಗಾತ್ಮ || ಸ್ವರಗಳೇಳೇ ಏಳು ಸಂಗೀತ […]Read More
ತನ್ನ ಮಗ ತನಗಿಂತ ಮೇಲೇರಲೆಂಬುದಕೆತನ್ನ ಒಳಗಿನ ಸ್ವಾರ್ಥ ತಂದೆಗಿರಬಹುದುತನ್ನ ಶಿಷ್ಯರ ಏಳ್ಗೆ ಚಿಂತಿಸುವ ಗುರುವಿನಲಿಇನ್ನಾವ ಸ್ವಾರ್ಥವಿದೆ?- || ಪ್ರತ್ಯಗಾತ್ಮ || ಕಲ್ಲು ಬಂಡೆಯ ಬಿಡಿಸಿ ಪಾಳಿಪನು ಕಲ್ಕುಟಿಕಕಲ್ಲಿನಲಿ ಶಿಲ್ಪವನು ಬಿಡಿಸುವುದು ಶಿಲ್ಪಿಕಲ್ಲು ಕುಟ್ಟುವುದಲ್ಲ; ಬಿಡಿಸುವುದು ಕಡುಕಷ್ಟಎಲ್ಲ ಕೈ ಚಳಕವೋ!- || ಪ್ರತ್ಯಗಾತ್ಮ || ಸತಿ ಪತಿಯ ಎದುರಿನಲಿ, ಪತಿ ಸತಿಯ ಎದುರಿನಲಿಅತಿ ಉಪಾಯದಿ ಗೆಲುವ ನಿರ್ಧಾರ ತಾಳಿಗತಿ ಕಾಣದೆಯೆ ಸೋತು ಗೆಲುವ ಪಡೆವನು ಕಡೆಗೆಅತಿ ವಿಚಿತ್ರದ ಗೆಲುವು- || ಪ್ರತ್ಯಗಾತ್ಮ || ಮೂಕ ಪಶುಗಳಿಗಿಂತ ನರನ ಶಕ್ತಿಯು […]Read More
ಮಲರುಗಳ ಮಕರಂದ ಹೀರಿ ಜೇನನು ಮಾಡಿನಲವಿಂದ ನೀಡಿಹುದು ದುಂಬಿ ಸವಿ ಅದನುಹಳಿಯದಿರು ನೀನದನು ದುಂಬಿ ಎಂಜಲು ಎಂದುತಿಳಿ ಎಂಜಲೆಲ್ಲಿಲ್ಲ ! || ಪ್ರತ್ಯಗಾತ್ಮ || ಕರುವಿನೆಂಜಲು ಹಾಲು, ದುಂಬಿ ಎಂಜಲು ಜೇನುಮಿರುಮಿರುಗುವಾ ರೇμÉ್ಮ ಹುಳವೆಂಜಲಲ್ತೆಹಿರಿಹಿಗ್ಗಿ ಒಲಿದೀವ ಅಕ್ಕರೆಯ ಮುತ್ತುಗಳುಬರಿ ಎಂಜಲಲ್ಲೇನು?- || ಪ್ರತ್ಯಗಾತ್ಮ || ಕಣ್ಣು ಕಾಣದ ಕುರುಡ ವಿಧವೆಯೊಬ್ಬಳ ವರಿಸಿಬನ್ನ ಪಟ್ಟನು ನೂರು ಮಕ್ಕಳನು ಹೆತ್ತುಕಣ್ಣು ಎಂಬುದೆ ಅರಿವು; ಅದುವೆ ಇಲ್ಲದ ಮೇಲೆಇನ್ನು ಸುಖವೆಲ್ಲಿಯದು- || ಪ್ರತ್ಯಗಾತ್ಮ || ಸೋಲ ಬಯಸುವ ಮನುಜ ಬುವಿಯೊಳಗೆ ಇಹನೇನು?ಸೋಲ […]Read More
ತಲೆ ಎತ್ತಿ ‘ಮೃಗರಾಜ’ ಪದವಿ ಪಡೆಯಿತು ಸಿಂಹತಲೆಯ ತಗ್ಗಿಸಿ ಕುರಿಯು `ಕುರಿಯೆ’ ಆಗಿಹುದುತಲೆಯೆತ್ತಿ ಧೈರ್ಯದಿಂ ನುಗ್ಗಿದವನಿಗೆ ಜಯವುಚಳಿಬಿಟ್ಟು ಮುನ್ನುಗ್ಗು- || ಪ್ರತ್ಯಗಾತ್ಮ || ಕಾಲ ಮರುಭೂಮಿಯಲಿ ಹೆಜ್ಜೆ ಇಕ್ಕುತ ನಡೆಯೊಬಾಳ ಬಟ್ಟೆಯ ನಡೆದು ಬಸವಳಿದ ಪಥಿಕನಾಳೆ ಯಾವನೊ ನಿನ್ನ ಹೆಜ್ಜೆ ಗುರುತನು ಹಿಡಿದುಬಾಳ ಪಥ ಸಾಗಿಸುವ- || ಪ್ರತ್ಯಗಾತ್ಮ || ಒಂದು ಗೊತ್ತಾದ ಸರಿ ದಾರಿಯನು ಹಿಡಿದು ನಡೆಹಿಂದೆ ಹೆಜ್ಜೆಯ ಗುರುತು ಬಿಟ್ಟು ನಡೆ ಮುಂದೆಎಂದಾದರೊಂದು ದಿನ ದಾರಿ ತಪ್ಪಿದ ಜನಕೆಮುಂದೆ ನೆರವಹುದೇನೊ – || ಪ್ರತ್ಯಗಾತ್ಮ […]Read More
ಪರಮಾತ್ಮ ಸೃಷ್ಟಿಯೊಳು ಹಿರಿದು ಮಾನವ ಜನ್ಮನರನಾಗಿ ಜನಿಸಿದವ ಗುರುವಾಗಬಹುದುಗುರುವೇನು? ಅಮರತ್ವ ಪದವಿಗೇರಲು ಬಹುದುನರನು ಅಮರರ ಅಂಶ- || ಪ್ರತ್ಯಗಾತ್ಮ || ಸರಿತಪ್ಪುಗಳ ಅರಿವು ನರನಿಗಷ್ಟೇ ಉಂಟುಪರರ ದುಃಖವನರಿವ ಅನುಕಂಪೆಯುಂಟುನೆರೆ ಹೊರೆಯ ಜನರೊಡನೆ ಸಹಕಾರವಿಲ್ಲುಂಟುಬದಲಾವಣೆ ಕುರಿ ಕೋಳಿಗೇನುಂಟು- || ಪ್ರತ್ಯಗಾತ್ಮ || ಮಗಮಗಿಪ ಮಲ್ಲಿಗೆಯ ಬಚ್ಚಿಟ್ಟರೇನಂತೆಸೊಗಸಾದ ಪರಿಮಳವ ಸುತ್ತ ಸೂಸುವುದುಸುಗುಣಶಾಲಿಯು ನಾಡ ಮೂಲೆಯೊಳಗಿರಲೇನು?ಜಗದ ಮನ್ನಣೆ ಪಡೆವ- || ಪ್ರತ್ಯಗಾತ್ಮ || ‘ತಿಳಿ’ ನೀನು ಈ ಜಗದ ಎಲ್ಲ ವಿದ್ಯೆಗಳನ್ನು‘ಕಳೆ’ ನೀನು ಅದರೊಳಗೆ ತ್ಯಾಜ್ಯವೆಂಬುದನು‘ಉಳಿಸಿಕೊ’ ನಿನಗಾವುದುಚಿತವೆಂಬುದನರಿತುತಿಳಿವಳಿಕೆ ಮರ್ಮವಿದು- || ಪ್ರತ್ಯಗಾತ್ಮ […]Read More
ಚುಚ್ಚು ಮಾತುಗಳಿಂದ ಅನ್ಯಾಯದಿಂ ಜರೆದುತುಚ್ಛನೊಬ್ಬನು ನಿನ್ನ ಮನವ ನೋಯಿಸಲುಕೊಚ್ಚಿ ಬಿಡುವೆನು ಎಂದು ಅಬ್ಬರಿಸಿ ಗುಡುಗಿ ಬಿಡುಕಚ್ಚದಿರು ಬುಸ್ಸೆನ್ನು- || ಪ್ರತ್ಯಗಾತ್ಮ || ಧರಣಿ ತಿರುಗುವುದಿಲ್ಲ ಸೂರ್ಯ ತಿರುಗುವನೆಂದುಮರಣ ಭೀತಿಯ ತೋರೆ ಗೆಲಿಲಿಯೋ ನುಡಿದಅರೆಬರೆಯ ಹುಚ್ಚರಿಗೆ ವಿಜ್ಞಾನಿಗುಂ ಸೋಲು,ಅರಿವುಳ್ಳವನು ಸೋಲ್ವ- || ಪ್ರತ್ಯಗಾತ್ಮ || ಮಾಗಿಯೊಳು ಸೆಕೆ ಎನಲಿ, ಕಾಗೆಯನು ಬಿಳುಪೆನಲಿ,ಸಾಗರವು ಹರಿಯುವುದು ಎಂದೆನಲಿ ಕೂಗಿಹೀಗೆಯೇ ಏನೇನೊ ನುಡಿವ ಮೂರ್ಖರ ನುಡಿಗೆರೇಗದಿರು; ಸುಮ್ಮನಿರು- || ಪ್ರತ್ಯಗಾತ್ಮ || ಅನ್ನದಗುಳನು ಕಂಡು ಕಾಗೆ `ಕಾ’ ಎನ್ನುವುದು,ತನ್ನ ಬಳಗವ ಕರೆದು ಕೂಡಿ […]Read More