ಪ್ರತ್ಯಗಾತ್ಮ ಚಿಂತನ `ನನ್ನ ಕೋಳಿಯ ಕೂಗು ಕೇಳಿಯೇ ಬೆಳಗಬಹುದುನನ್ನೊಲೆಯ ಬೆಂಕಿಯಿಂ ಊರವರ ಊಟನನ್ನಿಂದಲೇ ಎಲ್ಲ’ ಎಂಬ ಮುದುಕಿಯ ಹಾಗೆಇನ್ನು ನಾವಿರಬೇಕೆ ?- || ಪ್ರತ್ಯಗಾತ್ಮ || ಬತ್ತಲೆಯ ರಾಜ್ಯದಲಿ ಬಟ್ಟಿ ಉಡುವವ ಹುಚ್ಚ,ಬತ್ತಲಿರುವನೆ ಹುಚ್ಚ, ಉಟ್ಟವರ ನಡುವೆಮೊತ್ತವಾವುದು ಹೆಚ್ಚೊ ಅದು ಹುಚ್ಚುತನವಲ್ಲಮೊತ್ತಕ್ಕೆ ಕಿಮ್ಮತ್ತು- || ಪ್ರತ್ಯಗಾತ್ಮ || ನೆರೆಯೂರಿನಲಿ ಮದುವೆ ಎಂದು ಬೀಗವ ಜಡಿದುಹರುಷದಲಿ ಮನೆ ಬಿಟ್ಟು ಪಯಣಿಸಿದರೆಲ್ಲಇರುಳು ಕಳ್ಳನು ಬಂದು ಎಲ್ಲವನು ಕದ್ದೊಯ್ದ,ಅರಿಸಿನದ ಕೂಳ ಫಲ! – || ಪ್ರತ್ಯಗಾತ್ಮ || ಸ್ವಾತಿ ಮಳೆ ಹನಿ […]
ಕಾಸಿರಲು ಕೈಯಲ್ಲಿ ದುಂದುವೆಚ್ಚವು ಬೇಡಹಾಸಿಗೆಯು ಇದ್ದಷ್ಟು ಕಾಲುಗಳ ಚಾಚುಕಾಸು ಗಳಿಸಲು ಪಟ್ಟ ಪಾಡುಗಳ ನೆನೆಯುತ್ತಕಾಸಿಗಿಹ ಬೆಲೆಯರಿಯೊ- || ಪ್ರತ್ಯಗಾತ್ಮ || ಹಣವು ಕೈಯೊಳಗಿರಲು ಸುಮ್ಮನಿರುವುದೆ ಮನವು?ಮನವು ಚಂಚಲ ಕಪಿಯು ಅದ ನಂಬಬೇಡಹಣವ ಬ್ಯಾಂಕಿನಲಿರಿಸು ಬಡ್ಡಿ ಬೆಳೆವುದು ಮತ್ತೆಮನೆಯವರ ರಕ್ಷಿಪುದು- || ಪ್ರತ್ಯಗಾತ್ಮ || ಕಿರು ಹಣತೆ ಜ್ಯೋತಿಯನು ಕಿರಿದೆನ್ನಬಹುದೇನು ?ಇರುಳ ಕಗ್ಗತ್ತಲಿನ ಕೋಣೆಗದು ಸಾಕುಇರುವೆಡೆಯೆ ಕೈಲಾದುದನಿತೆಸಗು; “ಕೊರಗದಿರು”ಕಿರಿದೆನ್ನದಿರು ಸೇವೆ- || ಪ್ರತ್ಯಗಾತ್ಮ || ಪೊಡವಿ ಲಿಂಗದ ಮೇಲೆ ನಭದ ಧಾರಾಪಾತ್ರೆಎಡೆಬಿಡದೆ ಸುರಿವ ಮಳೆ ಕುಂಭಾಭಿಷೇಕ,ಗುಡುಗು ಘಂಟಾಘೋಷ; ಮಿಂಚು […]Read More
ಹುಟ್ಟಿದೂರದು ಮತ್ತೇ ಜಾತಿ-ಮತ-ಧರ್ಮಗಳುಹುಟ್ಟಿಸಿದ ತಾಯ್ತಂದೆ, ಒಡ ಹುಟ್ಟಿದವರು,ಇಷ್ಟ ದೈವವು ಕಡೆಗೆ ಬಂಧು ಬಾಂಧವರೆಲ್ಲಒಟ್ಟು ಆಕಸ್ಮಿಕವೊ- || ಪ್ರತ್ಯಗಾತ್ಮ || ತಬ್ಬಲಿಯ ಮಗುವೊಂದು ಕಣ್ಣೆದುರಲಿರುವಾಗತಬ್ಬಿ ಮುದ್ದಿಸಬೇಡ ನಿನ್ನ ಮಗುವನ್ನುಉಬ್ಬೆಗದೊಳಾ ಮಗುವು ಕೊರಗಿ ಮರುಗುವುದೇನೊ !ಸಭ್ಯತನವಲ್ಲವದು- || ಪ್ರತ್ಯಗಾತ್ಮ || ಕಲಿತಿರುವೆನೆಂಬುದದು ಹಿಡಿಯನಿತು ಓ ಮರುಳೆ !ಕಲಿಯದಿರುವುದು ಬಾನಿನಗಲದನಿತುಂಟುಕಲೆಯ ದೇವತೆ ಇನ್ನೂ ಓದುತಿಹಳೆನಲು ನೀಕಲಿತುದೇಂ ಸಾಕಾಯ್ತೆ- || ಪ್ರತ್ಯಗಾತ್ಮ || ನೆರೆಯವರ ಕುಲವೇನೊ ಊರು ಕೇರಿಗಳೇನೊ`ನೆರೆ’ ಎಂದು ನಮ್ಮ ಮನೆ ಕೀಲಿಕೈ ಕೊಡೆವೆ?ಪರರಾದರೇನಂತೆ ದ್ರೋಹ ಬಗೆಯುವರೇನು?ಅರಿ, ನಂಬಿಕೆಯೆ ದೈವ – […]Read More
ಅನ್ನ ಭೂಮಿಯ ಋಣವು ನೀರು ಬಾನಿನ ಋಣವುನಿನ್ನ ಜನುಮವೆ ತಾಯಿ ತಂದೆಗಳ ಋಣವುಎನ್ನದಿರು ‘ಋಣಿ’ ಎಂದು ಋಣ ಮುಕ್ತನೆಂತಪ್ಪೆ?ಚೆನ್ನಾಯ್ತು ಸುಮ್ಮನಿರು -||ಪ್ರತ್ಯಗಾತ್ಮ|| ಯಾರ ಋಣವನು ಯಾರು ತೀರಿಸುವರೈ ಹೇಳುನೀರ ಋಣ ಅನ್ನ ಋಣ ತೀರಿಸುವರಾರು?ನೇರವಾಗಿಯೆ ಇನಿತು. ಮರೆಯಲ್ಲಿ ಇನ್ನೆನಿತೊ!ಬೇರು ಬಿಟ್ಟಿದೆ ಋಣವು -||ಪ್ರತ್ಯಗಾತ್ಮ|| ವಿದ್ಯೆ ಗುರುವಿನ ಋಣವು; ಪ್ರತಿಭೆ ದೇವರ ಋಣವುಬುದ್ಧಿ ಹಿರಿಯರ ಋಣವು; ಕಾವ್ಯ ಕವಿ ಋಣವುಸಿದ್ಧಿ ಗಳಿಸಲಸಾಧ್ಯ ಅವರಿವರ ಋಣವಿರದೆಶುದ್ಧ ಮಾನಸನಾಗು- ||ಪ್ರತ್ಯಗಾತ್ಮ|| ಎನ್. ಶಿವರಾಮಯ್ಯ ‘ನೇನಂಶಿ’Read More
ಗುರಿಯು ಹಿರಿಯದಾಗಿರಲಿ ತಲುಪದಿದ್ದರೂ ಸರಿಯೆಕಿರಿಯ ಗುರಿ ತಲುಪಿದರೂ ಪ್ರತಿಫಲವು ಕಡಿಮೆಹಿರಿಯ ಚೇತನವೆಲ್ಲ ಇದನೆ ಬೋಧಿಸುತಿಹವುಹಿರಿಮೆಗದು ಹೆಗ್ಗುರುತು- || ಪ್ರತ್ಯಗಾತ್ಮ || ಅಟ್ಟವೇರದ ಮನುಜ ಬೆಟ್ಟ ಏರುವನೇನು ?ಮೆಟ್ಟಿಲನು ಒಂದೊಂದೆ ಹತ್ತಿ ಗುರಿ ಮುಟ್ಟುಮೊಟ್ಟಮೊದಲಿಗೆ ಕುಳಿತು ಆಮೇಲೆ ಮಲಗುವುದುಇಷ್ಟು ತಿಳಿದರೆ ಸಾಕು- || ಪ್ರತ್ಯಗಾತ್ಮ || ಯಾರ ನಾಮದ ಬಲದಿ ಕಡಲ ಜಿಗಿದನೊ ಹನುಮಆ ರಾಮ ಅಂಬುಧಿಗೆ ಸೇತುವೆಯ ಕಟ್ಟಿವೀರ ಲಕ್ಷ್ಮಣನೊಡನೆ ಕಡಲ ದಾಟಿದನಂತೆ !ಯಾರ ಬಲ ಹೆಚ್ಚಾಯ್ತು?- || ಪ್ರತ್ಯಗಾತ್ಮ || ಉಟ್ಟ ಪಂಚೆಯು ಕಳಚಿ ಜಾರಿ […]Read More
ಮೃದು ಸ್ವಭಾವದ ಸತಿಗೆ ಕಡು ಕೋಪಿಯಾದ ಪತಿಸದುಗುಣದ ಗಂಡನಿಗೆ ಪೆಂಡಿರತಿ ಧೂರ್ತೆಇದುವರೆಗೆ ಕಾಣೆನೈ ಅನ್ಯೋನ್ಯ ದಾಂಪತ್ಯಇದು ಯಾವ ಶಾಪವೈ- || ಪ್ರತ್ಯಗಾತ್ಮ || ಬಾಳು ಹಾಳೆನಬೇಡ, ಬೀಳುಗೆಳೆಯಲು ಬೇಡಬಾಳು ಹಸನಾಗಿಸುವ ಕಜ್ಜವನು ಮಾಡುಬಾಳಿನೊಳು ನಂಬಿಕೆಯ ಕಳೆದುಕೊಳ್ಳಲು ಬೇಡಬಾಳು ಬಂಗಾರವೈ- || ಪ್ರತ್ಯಗಾತ್ಮ || ಕಲೆಗಾಗಿ ಕಲೆಯೆಂದು ತಿಳಿದವರು ಹೇಳುವರುಕಲೆಯು ಜೀವನಕಾಗಿ ನೋಡು ಕಣ್ತೆರೆದುಕಲೆಯು ಜೀವನಕಾಗಿ ಜೀವನವು ಕಲೆಗಾಗಿಕಲೆ ಬಿಟ್ಟು ಬೇರಿಲ್ಲ- || ಪ್ರತ್ಯಗಾತ್ಮ || ಬೆಕ್ಕು ಕಣ್ ಮುಚ್ಚುವುದು ಇಲಿಯ ಹಿಡಿಯಲಿಕೆಂದುಕೊಕ್ಕರೆಯ ಧ್ಯಾನವದು ಕೊಳೆ ಮೀನಿಗಾಗಿಪಕ್ಕೆಯಲಿ ಇರಿಯುವರು […]Read More
ನಿಮ್ಮ ಕುಲದವರಾರೊ ನಿಧನರಾದರು ಎಂಬದುಮ್ಮಾನ ತರುವಂಥ ಸುದ್ದಿ ತಿಳಿದೊಡನೆಉಮ್ಮಳಿಸದೆಯೆ ಅವರ ಅಂತ್ಯ ಸಂಸ್ಕಾರಕ್ಕೆಒಮ್ಮತದಿ ನೆರವಾಗು- || ಪ್ರತ್ಯಗಾತ್ಮ || ಶವದ ವಾಹಕರಾರೂ ಇರದೆ ತೊಳಲಾಡುತಿರೆಅವರ ನೀ ಸಂತೈಸಿ ಜನರ ಕಲೆ ಹಾಕು,ಶವದ ವಾಹಕನಾಗಿ ಕಷ್ಟದಲಿ ನೆರವಾಗುಅವಮಾನವೇನಿಲ್ಲ- || ಪ್ರತ್ಯಗಾತ್ಮ || ಸಿರಿವಂತನಾದವಗೆ ಸರಸತಿಯ ಒಲವಿಲ್ಲಸರಸತಿಯು ಒಲಿದವನಿಗೆ ಸಿರಿ ಒಲಿಯಲಿಲ್ಲಸರಸತಿಯ ವರಪಡೆದ ಸಿರಿವಂತರಿಳೆಯೊಳಗೆಬೆರಳೆಣಿಕೆ; ಬಹಳಿಲ್ಲ- || ಪ್ರತ್ಯಗಾತ್ಮ || ಸತಿಪತಿಗಳೊಂದಾಗಿ ಬಾಳುವುದು ಅಪರೂಪಮತಭೇದದಿಂದಾಗಿ ವಿರಸವೇ ಹೆಚ್ಚುಸತಿಯೊಮ್ಮೆ ಪತಿಯೊಮ್ಮೆ ಮೇಲುಗೈ ಪಡೆಯುವರುಸತತ ಹೋರಾಟ ಬಾಳ್- || ಪ್ರತ್ಯಗಾತ್ಮ || ಎನ್. […]Read More
ಅಟ್ಟದಿಂ ಬಿದ್ದವನ ದಡಿಯಿಂದ ಬಡಿಯದಿರುಮೊಟ್ಟಮೊದಲಿಗೆ ಅವನ ಸಾಂತ್ವಯಿಸಬೇಕುಪೆಟ್ಟು ಬಿದ್ದಿರಬಹುದು, ಅದನು ಪರಿಕಿಸಿ ನೋಡುಕೆಟ್ಟ ಮಾತಾಡದಿರು- || ಪ್ರತ್ಯಗಾತ್ಮ || ಸಾವಿಗಾಗಳುತಿರುವ ಸತ್ತ ಕೂಸಿನ ತಾಯ್ಗೆಸಾವಧಾನದಿ ಬುದ್ಧ ಅವಳ ಸಂತೈಸಿಸಾವು ಕಾಣದ ಮನೆಯ ಸಾಸಿವೆಯ ತಾರೆಂದಸಾವಿರದ ಮನೆಯುಂಟೆ ?- || ಪ್ರತ್ಯಗಾತ್ಮ || ನೂರಾರು ಭವಬಾಧೆ ಇರಲಿ, ರಾಮಾಯಣದಪಾರಾಯಣವ ಮಾಡು ಭಯಭಕ್ತಿಯಿಂದತೂರಿ ಬಿಡುವುದು ಗಾಳಿ ಜಳ್ಳು ತೂರುವ ಹಾಗೆತಾರಕೋಪಾಯವಿದು- || ಪ್ರತ್ಯಗಾತ್ಮ || ಅಂಬುಧಿಯ ನೀರ್ಕಾದು ಆವಿಯಾಗುವುದೆಂತು !ಅಂಬರದ ಮೋಡದಲಿ ಅದು ನಿಲ್ವುದೆಂತು !ತುಂಬಿ ತುಳುಕಿದ ನೀರು ಬುವಿಗೆ […]Read More
ಹರಿವ ನೀರಿಗೆ ಎದುರು ಈಜದಿರು ಎಂದೆಂದುನೀರಿನೊಳಗಿಳಿಯದಿರು ಸುಳಿಗಳಿದ್ದಾವು,ಬಿರುಗಾಳಿಯೊಡನೆ ಮಳೆ-ಗುಡುಗು-ಸಿಡಿಲುಗಳಿರಲುಹೊರ ಹೊರಡದಿರು ಜೋಕೆ- || ಪ್ರತ್ಯಗಾತ್ಮ || ಅಧಿಕಾರವಿದ್ದಾಗ ಅಧಿಕ ಗೌರವವುಂಟು,ಅಧಿಕಾರವಿಲ್ಲದಿರೆ ಕಡೆಗಣಿಪರಯ್ಯಅದಕಾಗಿ ಕೊರಗದೆಯೆ ತಾಳ್ಮೆ ವಹಿಸಲು ಬೇಕುಅದುವೆ ಲೋಕದ ರೂಢಿ- || ಪ್ರತ್ಯಗಾತ್ಮ || ಹಳೆಯ ಗೆಳೆಯರು ಇಲ್ಲ; ಒಂಟಿಯಾದೆನು ಎಂದುಕಳವಳಿಸಬೇಡಯ್ಯ ಹೇ ವಯೋವೃದ್ಧ !ಹಳೆಯದೆಲ್ಲವು ಹೋಗಿ ಹೊಸತು ಬರಲೇ ಬೇಕುಇಳೆಯ ಧರ್ಮವೆ ಹಾಗೆ- || ಪ್ರತ್ಯಗಾತ್ಮ || ಕಳೆದುಕೊಂಡಿದ್ದ ಫೋರ್ಡ್ ಒಂದು ಪೆನ್ನಿ ಹಣವಕಳವಳಿಸಿ ಕೊನೆಗದನು ಹುಡುಕಿ ಹೊರತೆಗೆದಕಳೆದುದಲ್ಪವೊ ಹಿರಿದೊ ಬಾಳಿನೊಳಗೆಂದೆಂದುಸುಳಿಯಬಾರದುಪೇಕ್ಷೆ- || ಪ್ರತ್ಯಗಾತ್ಮ || […]Read More
ಆವ ಕೊಂಬೆಯ ಹೂವು ಆರ ಮುಡಿಗೋ ಕಾಣೆ !ಆವ ನದಿ ನೀರಾವ ಹೊಲಗದ್ದೆಗಳಿಗೊ !ಆವ ಪೆಣ್ಗಂಡುಗಳ ಒಲವು ಮತ್ತಾರಿಗೋ ?ದೇವನೊಬ್ಬನೆ ಬಲ್ಲ- || ಪ್ರತ್ಯಗಾತ್ಮ || ಹುತ್ತ ಗೆದ್ದಲ ಗೂಡು; ರೊಟ್ಟಿ ಜೇನಿನ ಗೂಡು,ಕತ್ತೆ ದುಡಿತವು ಅಷ್ಟೆ, ಅವಕಿಲ್ಲ ಲಭ್ಯ,ಹುತ್ತ ಹಾವಿನ ಪಾಲು, ಜೇನು ಮನುಜರ ಪಾಲುಎತ್ತಣದ ನ್ಯಾಯವಿದು- || ಪ್ರತ್ಯಗಾತ್ಮ || ಕೂರುಗುರು, ಕೊಂಬುಗಳು, ಕೋರೆ ಹಲ್ಲಿನ ಪ್ರಾಣಿ,ಕ್ರೂರಸರ್ಪಗಳಂಥ ವಿಷ ಜಂತುಗಳಲಿಕೂರಿತಹ ಕೈದುಗಳ ಜೊತೆಗೆ ಸರಸವು ಬೇಡ.ಮಾರಿಗೌತಣವದುವೆ- || ಪ್ರತ್ಯಗಾತ್ಮ || ಕತ್ತೆ ಕುದುರೆಯ ಹಿಂದೆ […]Read More