ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಸ್ವೀಕರಿಸಿದ ಶ್ರೀ ಎಂ.ಎಚ್. ಪೂಜಾರಿ
ಕವಿತೆ
ಅಂತರಾಳದ ನೋವಿಗೆ
ಸಂಗಾತಿ ನೀನು
ಸುಖಾ ಸುಮ್ಮನೆ ಖುಷಿಗೆ
ಜೊತೆಗಾರ ನೀನು
ನೊಂದವರ ಹೆಗಲ ಅಪ್ಪುಗೆ
ಸಲಹೆಗಾರ ನೀನು
ಕಣ್ಣಿಗೆ ಕಾಣುವ ಅಕ್ಷರ ಗಳಿಗೆ
ಸುಂದರ ಧ್ವನಿ ನೀಡಿ
ಭಾವ ಸ್ಪರ್ಶಕೆ ಮನಸನು
ಕಾವ್ಯದೊಳಗಿನ ಕನಸು
ಮನಸ ಲಹರಿಯ
ತೆರೆದಿಡುವ ನೀನು
ನನ್ನೊಳಗಿನ ಕವಿತೆ
ಫೌಝಿಯಾ ಹರ್ಷದ್