ರಾಧೆಯೊಲವಿನ ಪಯಣ

ರಾಧೆಯೊಲವಿನ ಪಯಣ

ಮೊದಲ ಸಲ ನೋಡಿರಲು
ಮನದ ಕದತೆರೆದು ನಿ ಬಂದಿದ್ದೆ..!
ಒಲವಿನ ಆ ನಿನ್ನ ನೋಟಕೆ..
ಕಣ್ಣಂಚಲಿ ನಾ ಬಂಧಿಯಾಗಿದ್ದೆ!!

ಮಂದಹಾಸದಿ ನಿ ನಕ್ಕಾಗ
ನೂರೆಂಟು ಕನಸು ನಾ ಕಂಡಿದ್ದೆ..!
ಹೃದಯವು ಬಿಡದೆ ಮಿಡಿದಾಗಲೇ..
ಇನಿಯನಿವನೇ ಎಂದು ಬಗೆದಿದ್ದೆ!!

ಕಣ್ಣಬಿಂಬದಲಿ ಸದಾ ನೀನಿರಲು
ಜನ್ಮಜನ್ಮಗಳ ಪ್ರೀತಿಗೆ ನಾ ಕರಗಿದ್ದೆ..!
ನಿ ತೋರಿದ ಒಲುಮೆಯ ಭಾವಕೆ..
ಮನದಲೇ ನಿನ್ನ ನಾ ವರಿಸಿದ್ದೆ!!

ಹೇಳು ಕೃಷ್ಣಾ..ನೀನೇಕೆ ನಿನಗಾಗಿ
ಮೀಸಲಾದ ಈ ರಾಧೆಯ ತೊರೆದಿದ್ದೆ..!
ಭಾವಾಂತರಾಳದಿ ಹಗಲಿರುಳು ಕಾಯುತಾ..
ನಿನ್ನ ನಾ ಮನದುಂಬಿ ಪ್ರೀತಿಸಿದ್ದೆ!!

ಸುಮನಾ ರಮಾನಂದ
ಮುಂಬೈ

Related post