ಸಲೋನಿ ಶಾಲೆಯಲ್ಲಿ ಬೆಳ್ಳಿ ಹಬ್ಬದ ಸಂಭ್ರಮ

ಸಲೋನಿ ಶಾಲೆಯಲ್ಲಿ ಬೆಳ್ಳಿ ಹಬ್ಬದ ಸಂಭ್ರಮ

ಬೇಗೂರು ವಿಶ್ವಪ್ರಿಯ ಬಡಾವಣೆಯಲ್ಲಿ ಸಲೋನಿ ಶಾಲೆಯು 25 ವರ್ಷ ಪೂರೈಸಿ ತನ್ನ ಬೆಳ್ಳಿ ಹಬ್ಬವನ್ನು ಆಚರಿಸುತ್ತಿರುವುದು ಸಂತಸದ ವಿಷಯ.

ಈ ಸಂದರ್ಭದಲ್ಲಿ ದಿನಾಂಕ: 26-07-2025 ರಂದು ಶನಿವಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಖ್ಯಾತ ಕಲಾವಿದ ಗಣಪತಿ ಎಸ್. ಹೆಗಡೆ ಗೀತ ಚಿತ್ರ ಬಿಡಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಗಣಪತಿ ಹೆಗಡೆಯವರು ಮಾತನಾಡಿ ಮಕ್ಕಳಿಗೆ ಶಿಕ್ಷಣದಲ್ಲಿ ಕಲೆಯ ಮಹತ್ವವನ್ನು ತಿಳಿಸಿದರು. ಗೀತ ಚಿತ್ರಕ್ಕೆ ಹಾಡಿನ ಮೂಲಕ ಅನೂಪ ಹೆಗಡೆ ಸಾಥ್ ನೀಡಿದರು. ನೂರಾರು ಮಕ್ಕಳಿಂದ ಕಲಾ ಪ್ರದರ್ಶನ ಏರ್ಪಡಿಸಲಾಗಿತ್ತು.

ಈ ಸಂದರ್ಭದಲ್ಲಿ ಪ್ರಕಾಶ ಹೆಗಡೆ, ಲಲಿತಾ ಹೆಗಡೆ, ಅನೂಪ ಹೆಗಡೆ ಮತ್ತು ಸ್ವಾತಿ ಹೆಗಡೆ ಉಪಸ್ಥಿತರಿದ್ದರು. ಇದೊಂದು ವಿನೂತನ ಕಾರ್ಯಕ್ರಮವಾಗಿತ್ತು. ಶಾಲೆಯಲ್ಲಿ ಹಬ್ಬದ ವಾತಾವರಣವಿತ್ತು. ಮಕ್ಕಳೆಲ್ಲ ಸಂಭ್ರಮಿಸಿದರು. ಇದರಿಂದ ಕಾರ್ಯಕ್ರಮದ ಮೆರಗು ಇನ್ನೂ ಹೆಚ್ಚಿಗೆಯಾಯಿತು.

ಸಾಹಿತ್ಯಮೈತ್ರಿ

Related post