ಇತ್ತೀಚೆಗೆ ಯಾಕೋ ಮಳೆಗಾಲ ಯಾವಾಗ ಶುರು, ಯಾವಾಗ ಕೊನೆ ಎಂಬುವುದೇ ಮರೆತು ಹೋಗುವಂತಿದೆ. ಬರಬೇಕಾದ ಕಾಲದಲ್ಲಿ ಮಳೆ ಬರುವುದಿಲ್ಲ. ಯಾವಾಗೆಂದರೆ ಆವಾಗ ದಿಢೀರನೆ ಬಂದು ಬಿಡುತ್ತಾ ಇದೆ. ಅದರಿಂದಾಗುವ ಅವಾಂತರ ಹೇಳುವುದೇ ಬೇಡ. ನಾವು ಸಣ್ಣವರಿರುವಾಗ ಶಾಲೆಗಳಲ್ಲಿ ಮಳೆಗಾಲ, ಚಳಿಗಾಲ, ಬೇಸಿಗೆಕಾಲ ಎಂದು ಇಷ್ಟಿಷ್ಟು ತಿಂಗಳುಗಳು ಎಂದು ವಿಂಗಡಿಸಿ ಹೇಳುತ್ತಾ ಇದ್ದರು. ಆದರೆ ಈಗಿನ ಮಕ್ಕಳಿಗೆ ತಿಳಿಸುವಾಗ ಶಿಕ್ಷಕರು ಕೂಡಾ ಪರದಾಡಬೇಕಾಗುತ್ತದೆನೋ. ಹಾಗಿದೆ ನಮ್ಮ ಮಳೆಗಾಲ. ಇದರ ಕಾರಣಗಳ ಜಾಡನ್ನು ಹಿಡಿದಾಗ ನಮಗೆಲ್ಲಾ ಗೊತ್ತಾಗುವ ವಿಚಾರವೆಂದರೆ, ಇದೆಲ್ಲಾ […]Read More
ಬೈಕ್ ಮಳೆಯಲ್ಲಿ ನೆನೆದು ಸ್ಟಾರ್ಟ್ ಆಗದ ಕಾರಣ, ಊರಿಂದ ನಗರದ ಕೆಲಸಕ್ಕಾಗಿ ಬಸ್ಟ್ಯಾಂಡಿನ್ಯಾಗ ನನ್ನ ಗೆಳೆಯ ಕಾದು ಕೂತಿದ್ನಂತೆ. ಬಸ್ ಬರಬೇಕಿದ್ದ ಸಮಯಕ್ಕೆ ಆ ದಾರಿಯಲ್ಲಿ ಒಂದು ಆರ್.ಎಕ್ಸ್ ಬೈಕ್ ಬರುವ ಸದ್ಧಾಯಿತಂತೆ. ನನ್ನ ಗೆಳೆಯ ಉತ್ಸಾಹಿತನಾಗಿ ಬಸ್ಟ್ಯಾಂಡಿನಿಂದ ಹೊರಬಂದು ಆರ್.ಎಕ್ಸ್ ಬೈಕಿನ ಮೇಲೆ ಕುಳಿತವನ ಕಾಲು ನೋಡಿದನಂತೆ. ಆತನ ಕಾಲುಗಳಲ್ಲಿ ಚಪ್ಪಲಿಯೂ ಇರಲಿಲ್ಲ ರಕ್ತವೂ ಇರಲಿಲ್ಲ. ಇಷ್ಟನ್ನು ನನ್ನೊಂದಿಗೆ ಹೇಳುತ್ತಾ ತನ್ನ ಬುದ್ಧಿಮತ್ತೆಯ ಬಗ್ಗೆ ತಾನೇ ಛೇಡಿಸಿಸಿಕೊಂಡು ನಗುತ್ತಿದ್ದ. ಈ ರಕ್ತದ ಚಪ್ಪಲಿಯ ಕಾಲುಗಳ ಬಗ್ಗೆ […]Read More
“ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ ಮತದಲ್ಲಿ ಮೇಲ್ಯಾವುದೋ ?”ಅಂದಿಗೂ ಇಂದಿಗೂ ಈ ಹಾಡು ಜನಮಾನಸದಲ್ಲಿ ಬಹು ಜನಪ್ರಿಯ ಹಾಗೆ ವೀರಬಾಹು ಪಾತ್ರದಲ್ಲಿ ಅಮೋಘವಾಗಿ ಅಭಿನಯಿಸಿದ ಶ್ರೀಯುತ ಎಂ.ಪಿ. ಶಂಕರ್ ಕೂಡ. ನಮ್ಮ ಚಿತ್ರರಂಗದ ಕಪ್ಪು-ಬಿಳುಪಿನ ಕಾಲದ ಚಿತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದಂತಹ ಅಭಿಜಾತ ಕಲಾವಿದರಲ್ಲಿ ನಟ,ನಿರ್ಮಾಪಕ ಎಂ.ಪಿ ಶಂಕರವರು ಕೂಡ ಒಬ್ಬರು. ನಮ್ಮ ಚಿತ್ರರಂಗ ಕಂಡಂತಹ ಅದ್ಭುತ ಕಲಾವಿದರು. ಕುಸ್ತಿಗೆ ಹೇಳಿ ಮಾಡಿಸಿದಂತಹ ಎತ್ತರದ ಗರಡಿ ಮೈ, ಶಾರ್ದೂಲದಂತಹ ಕಠೋರ ಧ್ವನಿ, ಸಿಡಿಲಿನಂತಹ ಕಣ್ಣುಗಳು, ಹುಲಿಯಂತೆ ಅಭಿನಯದ […]Read More
ಕೊಕ್ಕರೆಗಳು ದೊಡ್ಡ ಗಾತ್ರದ ಹಕ್ಕಿಗಳು. ಈಗಾಗಲೇ ಈ ಅಂಕಣದಲ್ಲಿ ಕೆಲವು ಕೊಕ್ಕರೆಗಳನ್ನು ಪರಿಚಯ ಮಾಡಿಕೊಂಡಿದ್ದೀವಿ. ಇದು ಅದರ ಮುಂದುವರೆದ ಭಾಗ. ನೀವು ಬೆಂಗಳೂರಿನಿಂದ ಮೈಸೂರಿಗೆ ರೈಲಿನಲ್ಲಿ ಪಯಣಿಸುತ್ತಿರುವಾಗ ಕಿಟಕಿ ಪಕ್ಕದಲ್ಲಿ ಕೂತಿದ್ದರೆ ಈ ಪಕ್ಷಿ ನಿಮ್ಮ ಕಣ್ಣಿಗೆ ಬೀಳುವ ಸಾಧ್ಯತೆಯಿದೆ. ಗಂಟಲಿನ ಮೇಲೆ ದಟ್ಟವಾದ ಬಿಳಿ ಗರಿಗಳಿರುವ ಇದನ್ನು ಸುಲಭವಾಗಿ ಪತ್ತೆಹಚ್ಚಬಹುದು. ದೇಹದ ಮೇಲ್ಭಾಗ ಬಹುತೇಕ ಕಪ್ಪು. ಕುತ್ತಿಗೆಯ ಸಮೀಪದ ಗರಿಗಳು ಹೊಳೆಯುತ್ತವೆ. ಈ ಹೊಳೆಯುವ ಗರಿಗಳು ಉದ್ದವಾಗಿದ್ದು ಪ್ರದರ್ಶನ ಮಾಡುವಾಗ ಈ ಗರಿಗಳನ್ನು ಹಕ್ಕಿ ಎದ್ದುನಿಲ್ಲಿಸುತ್ತದೆ. […]Read More
ಸೋತೆ ಪ್ರೀತಿಯ ಕನಸೇನನ್ನ ಪ್ರೀತಿಯನ್ನುಕನಸಾಗೇ ಇರಿಸಿದೆ ನೀನು!ನನಸಾಗಲು ಹವಣಿಸಿಸೋತೆ ನಾನುನೀನು ಸಹಕರಿಸಲಿಲ್ಲಅವಳು ಸಹಕರಿಸಲಿಲ್ಲ!!! ಕೂಡಿಡಲಾಗಿದೆ ನನ್ನ ಹೃದಯವೆಂಬಪೆನ್ ಡ್ರೈವಲ್ಲಿಮನಸ್ಸೆಂಬಸಿಮ್ ಕಾರ್ಡಲ್ಲಿಜೀವನ ಎಂಬಲ್ಯಾಪ್ ಟ್ಯಾಪಲ್ಲಿಎಲ್ಲ ನೆನಪುಗಳನ್ನುಕೂಡಿಡಲಾಗಿದೆ!! ಸುದ್ದಿ ಇದೀಗಬಂದ ಸುದ್ದಿ!ಅವಳಿನ್ನೂನನ್ನ ನೆನಪಲ್ಲೇಬದುಕಿದ್ದಾಳಂತೆ!!! ಜೀವಂತ ನೆನಪುಗಳೆಂದೂಬದಲಾಗುವುದಿಲ್ಲಅವು ನೆನಪಾಗಿಉಳಿಯುವಂತೆಜೀವಂತವಾಗಿಡಬೇಕುಸದಾ ಅವುಗಳನ್ನುಮಾತನಾಡಿಸುತ್ತಿರಬೇಕು!! ಡಾ. ಪರಮೇಶ್ವರಪ್ಪ ಕುದರಿRead More
ಇನ್ನು ಚೆನ್ನಾಗಿ ನೆನಪಿದೆ, 1993 ನೇ ಇಸವಿ ನಾನಾಗ ಆರನೇ ಕ್ಲಾಸು, ನಮ್ಮ ತಂದೆ ಬರಿ ಓದುವುದರಿಂದ ಪ್ರಯೋಜನವಿಲ್ಲ ನಿನ್ನ ನಾನು ಚಿತ್ರಕಲೆ ಶಾಲೆಗೆ ಹಾಕುವೆ ಎಂದು ಹೇಳಿದರು. ಸ್ವತಃ ಶಿಕ್ಷಕರಾದ ನಮ್ಮ ತಂದೆಗೆ ಮಕ್ಕಳು ಓದುವುದರ ಜೊತೆಗೆ ಇನ್ನ್ಯಾವುದಾದರೂ ಕ್ಷೇತ್ರದಲ್ಲಿ ಗುರುತಿಸಿಕೊಬೇಕು ಎಂಬ ಆಸೆ! ಅಲ್ಲಿ ತರಕಾರಿ ಹೂವು-ಹಣ್ಣು, ಗಿಡ-ಮರ ಇತ್ಯಾದಿ ಬಿಳಿ ಪರದೆ ಮೇಲೆ ಬಿಡಿಸುವುದು ಹೇಗೆ ಎಂದು ಸರಳವಾಗಿ ಹೇಳಿಕೊಡುತ್ತಾರೆ ನೀನು ಹೋಗು ಕಲಿತುಕೊ ಎಂಬ ಆಜ್ಞೆ! ಬೆಳಗಿನ ಸವಿ ನಿದ್ದೆಗೆ ಅಡ್ಡಿಯಾಗುತ್ತಿದ್ದದ್ದು […]Read More
ಗುರಿಯು ಹಿರಿಯದಾಗಿರಲಿ ತಲುಪದಿದ್ದರೂ ಸರಿಯೆಕಿರಿಯ ಗುರಿ ತಲುಪಿದರೂ ಪ್ರತಿಫಲವು ಕಡಿಮೆಹಿರಿಯ ಚೇತನವೆಲ್ಲ ಇದನೆ ಬೋಧಿಸುತಿಹವುಹಿರಿಮೆಗದು ಹೆಗ್ಗುರುತು- || ಪ್ರತ್ಯಗಾತ್ಮ || ಅಟ್ಟವೇರದ ಮನುಜ ಬೆಟ್ಟ ಏರುವನೇನು ?ಮೆಟ್ಟಿಲನು ಒಂದೊಂದೆ ಹತ್ತಿ ಗುರಿ ಮುಟ್ಟುಮೊಟ್ಟಮೊದಲಿಗೆ ಕುಳಿತು ಆಮೇಲೆ ಮಲಗುವುದುಇಷ್ಟು ತಿಳಿದರೆ ಸಾಕು- || ಪ್ರತ್ಯಗಾತ್ಮ || ಯಾರ ನಾಮದ ಬಲದಿ ಕಡಲ ಜಿಗಿದನೊ ಹನುಮಆ ರಾಮ ಅಂಬುಧಿಗೆ ಸೇತುವೆಯ ಕಟ್ಟಿವೀರ ಲಕ್ಷ್ಮಣನೊಡನೆ ಕಡಲ ದಾಟಿದನಂತೆ !ಯಾರ ಬಲ ಹೆಚ್ಚಾಯ್ತು?- || ಪ್ರತ್ಯಗಾತ್ಮ || ಉಟ್ಟ ಪಂಚೆಯು ಕಳಚಿ ಜಾರಿ […]Read More
ಅನಂತ ಕೋಟಿ ಬ್ರಹ್ಮಾಂಡ ಇದು ನಾವೆಲ್ಲರೂ ಉಪಯೋಗಿಸುವ ಸಾಮಾನ್ಯ ಪದ. ಬ್ರಹ್ಮಾಂಡ ನಮ್ಮ ಊಹೆಗೂ ನಿಲುಕ್ಕದ್ದು. ಅದರಲ್ಲಿ ಸೂರ್ಯ ಒಂದು ತಾರೆ ಅಷ್ಟೇ ಇಂತಹ ತಾರೆಗಳು ಬ್ರಹ್ಮಾಂಡದಲ್ಲಿ ಅಗಣ್ಯ. ನಮ್ಮ ಸೂರ್ಯವ್ಯೂಹ ಅದರ ಸುತ್ತ ಸುತ್ತುವ ಗ್ರಹಗಳು, ಅವುಗಳ ಹುಟ್ಟು, ಮಹತ್ವ, ಜೀವಾಂಶ ಅವುಗಳ ಉಪಗ್ರಹಗಳು ಎಂದೆಂದಿಗೂ ವಿಸ್ಮಯ. ಬನ್ನಿ ವಾರದಿಂದ ವಾರಕ್ಕೆ ಅವುಗಳನ್ನು ಒಂದೊಂದಾಗಿ ತಿಳಿಯೋಣ… ಸೌರವ್ಯೂಹದ ಹುಟ್ಟು ಆಕಾಶಗಂಗೆಯ ಒಂದು ಪ್ರದೇಶ, ಅದರಲ್ಲಿನ ಬೃಹತ್ ಅಶ್ವಿಕ ಮೋಡ (Horizontal cloud) ತನ್ನ ಗುರುತ್ವ ಕುಸಿತದಿಂದ […]Read More
ಅವಳ ಮುಟ್ಟಲ್ಲೊಂದು ಮೂರು ದಿನದ ಗುಟ್ಟುಆ ಗುಟ್ಟಿನೋಳಗೆ ಕಾಣದ ನೋವ ಮುಚ್ಚಿಟ್ಟುತನ್ನ ಉಸಿರನ್ನು ನಿನಗಾಗೆ ಮುಡಪಿಟ್ಟುನಿನ್ನ ಶ್ರೇಷ್ಟತೆಗೆ ತಂತಾನೇ ಮೂಲೆಯಲಿ ಕೂತುಹುಟ್ಟಿಗೊಂದು ಅರ್ಥ ಕೊಟ್ಟವಳು ಈ ಮುಟ್ಟಾದವಳು. ಉಟ್ಟಂತ ಸೀರೆಯ ಗಟ್ಟಿತನದ ದಿಟ್ಟ ದಿನವದುನಿನ್ನ ಹುಟ್ಟಿಗಾಗಿಯೇ ಎಲ್ಲಾನೂ ಗಟ್ಟಿ ಮಾಡಿಕೊಂಡ ಮನಸದು..ತಾ ಬೆಚ್ಚಿ ಬಿದ್ದರೂ,ಖಾಲಿಯಾದ ಹೊಟ್ಟೆಯ ಮೇಲೆಕೈಯಿಟ್ಟು ಮತ್ತೆ ಮತ್ತೆ ನಿನ್ನನೇ ನೆನೆಯುವುದು.ಇವಳಿಗಿಂತ ಶ್ರೇಷ್ಠ ಇಲ್ಲ ಕೇಳು ಇಲ್ಲಿ ಯಾವದು.. ಅಗಸ ಒಗೆದ ಹಂಗಿಗೂ ಒಂದು ಕಿಮ್ಮತ್ತಿದೆಮುಟ್ಟಾದ ಈ ಮೂರುದಿನದ ನಿನ್ನ ಹುಟ್ಟಿಗೂ ಶ್ರೇಷ್ಠತೆಯಿದೆ.ಒಟ್ಟಿಗೆ ಅವನು ನಿನ್ನ […]Read More
ಹಿಂದಿನ ಸಂಚಿಕೆಯಿಂದ…ನೆಡೆಯುತ್ತಿರುವ ಬೆಳವಣಿಗೆಗಳನ್ನು ಕಂಡ ಅಪ್ರಮೇಯ ಮಾನಸಿಕವಾಗಿ ಸಾಯಲು ಸಿದ್ದನಾದ. ಶ್ಯಾಮ್ ಗೆ ಕಳ್ಳ ಶಿಷ್ಯ ಜಿ ಪಿ ಎಸ್ ಆನ್ ಮಾಡಿ ಶಾರ್ಪ್ ಶೂಟರ್ ಗೆ ದಾರಿ ತೋರುತಿದ್ದದ್ದು ಗೊತ್ತಾಗಿ ಅಪ್ರಮೇಯನನ್ನು ಕೃಷ್ಣನ ಗುಡಿಯಿಂದ ಹೊರಡಿಸಿಬಿಟ್ಟ. ಅವನಿಗೆ ಗೊತ್ತು ಆ ಶಾರ್ಪ್ ಶೂಟರ್ ತಮ್ಮ ಬೆನ್ನಟ್ಟುವನೆಂದು. ಈಗ ಅಪ್ರಮೇಯ ಸ್ವಾಮಿಯ ಜೀವ ರಕ್ಷಣೆ ಶ್ಯಾಮ್ ನ ಕೈಯಲ್ಲಿದೆ. ಮುಂದೆ… –ಹದಿನೆಂಟು– ನೀಲಂ ತನ್ನ ಕೈಲಿದ್ದ ಮೊಬೈಲ್ ನೋಡಿ “ಛೇ, ಇದೇನು ಈ ಶಿಷ್ಯನಿಗೆ ಬುದ್ಧಿಯೇ ಇಲ್ಲ. […]Read More