ಅವಳ ಮುಟ್ಟಲ್ಲೊಂದು ಮೂರು ದಿನದ ಗುಟ್ಟುಆ ಗುಟ್ಟಿನೋಳಗೆ ಕಾಣದ ನೋವ ಮುಚ್ಚಿಟ್ಟುತನ್ನ ಉಸಿರನ್ನು ನಿನಗಾಗೆ ಮುಡಪಿಟ್ಟುನಿನ್ನ ಶ್ರೇಷ್ಟತೆಗೆ ತಂತಾನೇ ಮೂಲೆಯಲಿ ಕೂತುಹುಟ್ಟಿಗೊಂದು ಅರ್ಥ ಕೊಟ್ಟವಳು ಈ ಮುಟ್ಟಾದವಳು. ಉಟ್ಟಂತ ಸೀರೆಯ ಗಟ್ಟಿತನದ ದಿಟ್ಟ ದಿನವದುನಿನ್ನ ಹುಟ್ಟಿಗಾಗಿಯೇ ಎಲ್ಲಾನೂ ಗಟ್ಟಿ ಮಾಡಿಕೊಂಡ ಮನಸದು..ತಾ ಬೆಚ್ಚಿ ಬಿದ್ದರೂ,ಖಾಲಿಯಾದ ಹೊಟ್ಟೆಯ ಮೇಲೆಕೈಯಿಟ್ಟು ಮತ್ತೆ ಮತ್ತೆ ನಿನ್ನನೇ ನೆನೆಯುವುದು.ಇವಳಿಗಿಂತ ಶ್ರೇಷ್ಠ ಇಲ್ಲ ಕೇಳು ಇಲ್ಲಿ ಯಾವದು.. ಅಗಸ ಒಗೆದ ಹಂಗಿಗೂ ಒಂದು ಕಿಮ್ಮತ್ತಿದೆಮುಟ್ಟಾದ ಈ ಮೂರುದಿನದ ನಿನ್ನ ಹುಟ್ಟಿಗೂ ಶ್ರೇಷ್ಠತೆಯಿದೆ.ಒಟ್ಟಿಗೆ ಅವನು ನಿನ್ನ […]Read More
ಹಿಂದಿನ ಸಂಚಿಕೆಯಿಂದ…ನೆಡೆಯುತ್ತಿರುವ ಬೆಳವಣಿಗೆಗಳನ್ನು ಕಂಡ ಅಪ್ರಮೇಯ ಮಾನಸಿಕವಾಗಿ ಸಾಯಲು ಸಿದ್ದನಾದ. ಶ್ಯಾಮ್ ಗೆ ಕಳ್ಳ ಶಿಷ್ಯ ಜಿ ಪಿ ಎಸ್ ಆನ್ ಮಾಡಿ ಶಾರ್ಪ್ ಶೂಟರ್ ಗೆ ದಾರಿ ತೋರುತಿದ್ದದ್ದು ಗೊತ್ತಾಗಿ ಅಪ್ರಮೇಯನನ್ನು ಕೃಷ್ಣನ ಗುಡಿಯಿಂದ ಹೊರಡಿಸಿಬಿಟ್ಟ. ಅವನಿಗೆ ಗೊತ್ತು ಆ ಶಾರ್ಪ್ ಶೂಟರ್ ತಮ್ಮ ಬೆನ್ನಟ್ಟುವನೆಂದು. ಈಗ ಅಪ್ರಮೇಯ ಸ್ವಾಮಿಯ ಜೀವ ರಕ್ಷಣೆ ಶ್ಯಾಮ್ ನ ಕೈಯಲ್ಲಿದೆ. ಮುಂದೆ… –ಹದಿನೆಂಟು– ನೀಲಂ ತನ್ನ ಕೈಲಿದ್ದ ಮೊಬೈಲ್ ನೋಡಿ “ಛೇ, ಇದೇನು ಈ ಶಿಷ್ಯನಿಗೆ ಬುದ್ಧಿಯೇ ಇಲ್ಲ. […]Read More
ಸಂಜೆ ಕೆಲಸವೆಲ್ಲ ಮುಗಿದ ಮೇಲೆ ತಣ್ಣನೆ ಗಾಳಿಯಲ್ಲಿ ವಾಯು ವಿಹಾರಕ್ಕೆ ಹೊರಟರೆ, ರಸ್ತೆಯ ತುದಿ ತಲುಪುವಷ್ಟರಲ್ಲಿ ಹಿತವಾದ ಸುಗಂಧ ನಮ್ಮನ್ನೇ ಅರಸಿ ಬರುವಂತೆ ಪಾರಿಜಾತದ ಪುಷ್ಪದ ಕಂಪು ಮನಸ್ಸಿಗೆ ಮುದ ನೀಡುತ್ತದೆ. ಈ ಸುಗಂಧಕ್ಕೆ ಮನ ಸೋತು ಅಲ್ಲೇ ನಿಲ್ಲುವ ಮನಸ್ಸಾಗುತ್ತದೆ. ಪ್ರಾಚೀನ ಗ್ರಂಥಗಳಲ್ಲಿ ಪಾರಿಜಾತವನ್ನು ಅತಿ ಶ್ರೇಷ್ಠ ಹಾಗು ದೇವಾನುದೇವತೆಗಳಿಗೆ ಇಷ್ಟವಾದ ಪುಷ್ಪವೆಂದ, ದೇವಲೋಕದುದ್ದಕ್ಕೂ ಪಾರಿಜಾತದ ಮರಗಳು ತಲೆದೂಗಿಸುತ್ತವೆ ಎಂದು ವರ್ಣಿಸಲಾಗುತ್ತದೆ.ಮರವಾಗಿ ಬೆಳೆವ ಪಾರಿಜಾತವು, ಅದರ ಎಳೆಗಳು ದಾಸವಾಳದ ಎಲೆಗಳನ್ನು ಹೋಲುತ್ತದೆ. ಇನ್ನು ಹೂವುಗಳು ಬಿಳಿಯ […]Read More
ಇದು ಗಂಡಿನ ನಕಲಿ ವೇಷಧಾರಿ. ಜಗತ್ತಿನಾದ್ಯಂತ ಹಯಿನಾದ ಒಂಬತ್ತು ಜಾತಿ / ಪ್ರಬೇಧಗಳಿದ್ದು ,ನಮ್ಮ ದೇಶದಲ್ಲಿ Striped Hyena ಅಥವಾ ಪಟ್ಟೆ ಕತ್ತೆ ಕಿರುಬವನ್ನು ನೋಡಬಹುದು. ಈಗ ನಾನು ಬರೆಯುತ್ತಿರುವುದು ಆಫ್ರಿಕಾದ Spotted Hyena ಬಗ್ಗೆ. ನಮ್ಮ ಪ್ರಯಾಣ ಈಗ ಆಫ್ರಿಕಾ ಕಡೆಗೆ, ಆಫ್ರಿಕಾ ಎಂದೊಡನೆ ಹೇಳಬೇಕಿಲ್ಲ, ಅದು ವನ್ಯಜೀವಿಗಳ ತವರು, ಕೃಗರ್, ಸರಂಗೇಟಿಯಂತ ದೊಡ್ಡ ದೊಡ್ಡ ರಾಷ್ಟ್ರೀಯ ಉದ್ಯಾನವನಗಳು ಅಲ್ಲಿವೆ, ಆಫ್ರಿಕಾ ಆನೆ, ಜೀರಾಫೆ, ಹಿಪ್ಪೊಗಳ ಸಮೂಹವನ್ನೇ ನೋಡಬಹುದು.ನವೆಂಬರ್ ತಿಂಗಳಲ್ಲಿ ಮಳೆಗಾಲ ಶುರುವಾದಂತೆ ವೈಲ್ಡ್ ಬೀಸ್ಟ್ […]Read More
ತೆರೆಯ ಮೇಲಿನ ಇಬ್ಬರು ಹರಿಶ್ಚಂದ್ರರ ವಿವರ ಪ್ರವರದ ಅವಲೋಕನ ಮಾಡಿದ ನನಗೆ ಇಬ್ಬರು ಪುರಂದರದಾಸರು ಕಳೆದ ವಾರ ದರ್ಶನ ನೀಡಿದರಷ್ಟೆ. ಈ ವಾರ ಇಬ್ಬರು ಕಾಳಿದಾಸರು ಅಚ್ಚರಿಗೊಳಿಸಿದ್ದಾರೆ. 1983 ರಲ್ಲಿ ತೆರೆಕಂಡ ಕವಿರತ್ನ ಕಾಳಿದಾಸ ಚಿತ್ರದಲ್ಲಿ ಕಾಳಿದಾಸನಾಗಿ ನಮ್ಮ ಮೈ ಮರೆಯುವಂತೆ ತನ್ಮಯಗೊಳಿಸಿದರೆ, ಭೋಜರಾಜನಾಗಿ ಅಚ್ಚರಿಗೊಳಿಸಿದ್ದರು. ವಿದ್ಯಾಧರೆಯಾಗಿ ಜಯಪ್ರದ ಸಮ್ಮೋಹನ ಗೊಳಿಸಿದ್ದರು. ಕಾಳಿಕಾದೇವಿಯಾಗಿ ಸಾಕ್ಷಾತ್ ಜಗನ್ಮಾತೆಯೇ ಆಗಿ ಕಂಡಿದ್ದರು. ರೇಣುಕಾಶರ್ಮರ ಚಿತ್ರಕಥೆ ಮತ್ತು ಸಮರ್ಥ ನಿರ್ದೇಶನದಲ್ಲಿ ಈ ಚಿತ್ರ ನಿಸ್ಸಂದೇಹವಾಗಿ ಪುಷ್ಕಳ ಭಾರಿ ಭೂರಿ ಭೋಜನವೇ ಆಗಿತ್ತು. […]Read More
— ೮ — ಕೆಂಪು ಸಮುದ್ರದ ತೀರ ಹಾರ್ಗೀಸಾದಲ್ಲಿ ಶಾಬ್ ಬಡಾವಣೆಗೆತಲಪುವುದೇ ಒಂದು ಆನಂದಮಯ ಅನುಭಾವ. ಅದೊಂದು ಮಿನಿ ಅರಣ್ಯದ ಹಸಿರ ರಾಶಿಯೊಳಗೆ ಹೊಕ್ಕಂತೆ. ಎಲ್ಲೆಲ್ಲೂ ಗಿಡಮರಗಳು. ದೂರದೂರದಲ್ಲಿರುವ, ಕಲ್ಲಿನಲ್ಲಿ ನಿರ್ಮಿಸಿದ ಒಂದೊಂದೇ ಚಿಕ್ಕಚಿಕ್ಕ ಬಂಗಲೆ ಥರದ ಮನೆಗಳು. ಅಲ್ಲದೆ ಮನೆಗಳು ಮುಗಿದ ನಂತರದ ಸರಹದ್ದಿನ ಆಚೆಗೆ ಇರುವುದೆಲ್ಲ ಕಾಡು; ದಟ್ಟವಾದುದಲ್ಲ. ಬಹುಶಃ ಆ ಕಾಡೊಳಗೆ ಕೆಲ ಬುಡಕಟ್ಟುಗಳ ಜನ ವಾಸಿಸುವ ಕಿರಿದಾದ ಹಳ್ಳಿಗಳು ಇದ್ದಿರಬೇಕು. ಏಕೆಂದರೆ ಅನೇಕ ಬಾರಿ, ಅಂಥವರ ಓಡಾಟ ಅಲ್ಲೆಲ್ಲ ಇದ್ದೇ ಇರುತ್ತದೆ. […]Read More
ನೀವು ಬದರಿಯಾತ್ರೆಯಲ್ಲಿದ್ದಾಗ ಇದ್ದಕ್ಕಿದ್ದಂತೆ “ಅರೆ! ಈ ಕಾಗೆಗೆ ಹಳದಿ ಕೊಕ್ಕಿದೆ!” ಎನಿಸಬಹುದು. ಹಾಗೆಯೇ, ಕಾಲು ಕೆಂಪಗಿದಯಲ್ಲಾ ಎಂದೂ ಎನಿಸಬಹುದು. ಹೌದು! ಆ ಪ್ರದೇಶಗಳಲ್ಲಿ ಹಳದಿ ಕೊಕ್ಕಿನ ಕಾಗೆ ಕಂಡುಬರುತ್ತದೆ. ಇಂಗ್ಲಿಷಿನಲ್ಲಿ ಇದನ್ನು Yellow-billed Chough Pyrrhocorax graculus ಎನ್ನುತ್ತಾರೆ. ಕಾಗೆಗಳ ಕುಟುಂಬಕ್ಕೇ ಸೇರುತ್ತವೆ. ಹಾಗೆಯೇ, ಕೆಂಪು ಕೊಕ್ಕಿನ ಕಾಗೆಯೂ ಕಂಡುಬರುತ್ತದೆ. ಹಳದಿ ಕೊಕ್ಕು, ಕೆಂಪು ಕಾಲನ್ನು ಬಿಟ್ಟರೆ ಉಳಿದಂತೆ ಕಾಗೆಯಂತೆಯೇ ಕಾಣುತ್ತದೆ. ಬೇಸಿಗೆಯಲ್ಲಿ ಆ ಪ್ರದೇಶಗಳಲ್ಲಿ ಕಂಡುಬರುವ ಕೀಟಗಳನ್ನು ತಿಂದರೆ ಚಳಿಗಾಲದಲ್ಲಿ ಹಣ್ಣುಗಳನ್ನು ತಿನ್ನುತ್ತದೆ. ಒಂದು ಬಗೆಯ […]Read More
ತುಮಕೂರು ಜಿಲ್ಲೆ ಲಲಿತ ಕಲೆಗಳ ತವರೂರು ಸಾಹಿತ್ಯ, ಸಂಗೀತ, ನೃತ್ಯ, ನಾಟಕಗಳನ್ನು ಕಟ್ಟಿ ಬೆಳೆಸಿದ ಕೀರ್ತಿ ನಮ್ಮ ಕಲಾ ಸಾಧಕರಿಗೆ ಸಲ್ಲುತ್ತದೆ. ಸಾಂಪ್ರದಾಯಿಕ ರೂಪದಲ್ಲಿದ್ದ ಚಿತ್ರಕಲೆಯನ್ನು ಜಾಗತಿಕ ಮಟ್ಟಕ್ಕೆ ಉನ್ನತೀಕರಿಸಿ ಕಲಾ ಶಿಕ್ಷಣ ನೀಡಿ ಸಾವಿರಾರುಕಲಾವಿದರು, ಶಿಕ್ಷಕರನ್ನು ನಿರ್ಮಿಸಿದ ಕೀರ್ತಿ ಇಂದು ಕಲಾಗುರು “ಕಿಶೋರ್ ಕುಮಾರ್” ರವರಿಗೆ ಸಲ್ಲುತ್ತದೆ. ಮೂಲತಃ ಗುಲಬರ್ಗಾ ಜಿಲ್ಲೆ ಷಹಪುರದ ಬಾವೈಕ್ಯ ಗ್ರಾಮದ “ಸೂರಯ್ಯ ಹಿರೇಮಠ ಹಾಗು ಸುಶೀಲಮ್ಮ” ನವರ ಮಗನಾಗಿ ಹುಟ್ಟಿದ “ಕಿಶೋರ್ ಕುಮಾರ್” ಗುಲಬರ್ಗಾದ ‘ಐಡಿಯಲ್ ಸ್ಕೂಲ್ ಆಪ್ ಆರ್ಟ್‍ನ’ […]Read More
ಮೃದು ಸ್ವಭಾವದ ಸತಿಗೆ ಕಡು ಕೋಪಿಯಾದ ಪತಿಸದುಗುಣದ ಗಂಡನಿಗೆ ಪೆಂಡಿರತಿ ಧೂರ್ತೆಇದುವರೆಗೆ ಕಾಣೆನೈ ಅನ್ಯೋನ್ಯ ದಾಂಪತ್ಯಇದು ಯಾವ ಶಾಪವೈ- || ಪ್ರತ್ಯಗಾತ್ಮ || ಬಾಳು ಹಾಳೆನಬೇಡ, ಬೀಳುಗೆಳೆಯಲು ಬೇಡಬಾಳು ಹಸನಾಗಿಸುವ ಕಜ್ಜವನು ಮಾಡುಬಾಳಿನೊಳು ನಂಬಿಕೆಯ ಕಳೆದುಕೊಳ್ಳಲು ಬೇಡಬಾಳು ಬಂಗಾರವೈ- || ಪ್ರತ್ಯಗಾತ್ಮ || ಕಲೆಗಾಗಿ ಕಲೆಯೆಂದು ತಿಳಿದವರು ಹೇಳುವರುಕಲೆಯು ಜೀವನಕಾಗಿ ನೋಡು ಕಣ್ತೆರೆದುಕಲೆಯು ಜೀವನಕಾಗಿ ಜೀವನವು ಕಲೆಗಾಗಿಕಲೆ ಬಿಟ್ಟು ಬೇರಿಲ್ಲ- || ಪ್ರತ್ಯಗಾತ್ಮ || ಬೆಕ್ಕು ಕಣ್ ಮುಚ್ಚುವುದು ಇಲಿಯ ಹಿಡಿಯಲಿಕೆಂದುಕೊಕ್ಕರೆಯ ಧ್ಯಾನವದು ಕೊಳೆ ಮೀನಿಗಾಗಿಪಕ್ಕೆಯಲಿ ಇರಿಯುವರು […]Read More
ವೃತ್ತಿಯಲ್ಲಿ ಶಿಕ್ಷಕರು ಹಾಗು ಸಾಹಿತ್ಯ ಸೇವೆಯಲ್ಲಿ ಹಿರಿಯರಾದ ಡಾ. ಪರಮೇಶ್ವರಪ್ಪ ಕುದರಿ ಯವರು ನಮ್ಮ ಸಾಹಿತ್ಯಮೈತ್ರಿ ಪತ್ರಿಕೆಗೆ ವಿನಂತಿಸಿಕೊಂಡಾಗಲೆಲ್ಲ ಪ್ರೀತಿಯಿಂದ ತಮ್ಮ ಬರಹಗಳನ್ನು ಕಳುಹಿಸಿದ್ದಾರೆ. ಕೆಲವು ದಿನಗಳ ಹಿಂದೆ ತಮ್ಮ ಪುಸ್ತಕ ಪ್ರಕಾಶನವೊಂದರ ಕೆಲಸಕ್ಕಾಗಿ ಚಿತ್ರದುರ್ಗ ದಿಂದ ಬೆಂಗಳೂರಿಗೆ ತಮ್ಮ ಆತ್ಮೀಯ ಮಿತ್ರರಾದ ಹುರಳಿ ಬಸವರಾಜ್ ಜೊತೆ ಆಗಮಿಸಿದಾಗ ವಿನಂತಿಸಿಕೊಂಡಿದ್ದಕ್ಕೆ ನಮ್ಮ ಮನೆಗೆ ಬಂದು ಪ್ರೀತಿಯಿಂದ ಆಶೀರ್ವದಿಸಿ ತಮ್ಮ ಕೆಲವು ಹನಿಗವಿತೆಗಳನ್ನು ಕೊಟ್ಟು ಖುಷಿಯಿಂದ ಹಾರೈಸಿದ್ದಾರೆ. ಅವುಗಳನ್ನು ಸಂಚಿಕೆ ರೂಪದಲ್ಲಿ ಪ್ರತಿ ವಾರ ಪ್ರಕಟವಾಗುತ್ತದೆ. ಅಕ್ಷರ ಅಂದು […]Read More