ಸಿನಿಮಾ ಸ್ವಾರಸ್ಯಕರ ಸಂಗತಿಗಳು-4

ಸತ್ಯ ಹರಿಶ್ಚಂದ್ರ – ಮುಂದುವರೆದ ಭಾಗ ಕಳೆದ ವಾರ ಹರಿಶ್ಚಂದ್ರ ಕಥೆಯಾಧರಿಸಿ ಕನ್ನಡದಲ್ಲಿ ತೆರೆಕಂಡ ಎರಡು ಚಿತ್ರಗಳನ್ನು ನೆನಪು ಮಾಡಿಕೊಂಡೆವಷ್ಟೇ. ಅದರಲ್ಲಿ ಒಂದು ಮಾಹಿತಿ ಜಾರಿಹೋಗಿದೆ. ವಿಜಯ ಪ್ರೊಡಕ್ಷನ್ ರವರು ಅದನ್ನು ಏಕ ಕಾಲದಲ್ಲಿ ಕನ್ನಡ ಮತ್ತು ತೆಲಗು ಎರಡೂ ಭಾಷೆಯಲ್ಲಿ ನಿರ್ಮಿಸಿದ್ದು ತೆಲುಗಿನಲ್ಲಿ ಎನ್. ಟಿ. ರಾಮರಾವ್ ಹರಿಶ್ಚಂದ್ರ ನಾಗಿ ನಟಿಸಿದ್ದರು. ಇದು ಮಾತ್ರವಲ್ಲದೆ 1963 ರಲ್ಲಿ ಹರಿಶ್ಚಂದ್ರ ಕಥೆ ಹಿಂದಿಯಲ್ಲಿ ತೆರೆ ಕಂಡಿತ್ತು. ಆ ಚಿತ್ರದ ಹೆಸರು “ಹರಿಶ್ಚಂದ್ರ ತಾರಾಮತಿ” ಎಂದು.ಬಿ. ಕೆ. ಆದರ್ಶ್ […]Read More

ಒಂಟಿ ಮನೆ – ಅಂತಿಮ ಭಾಗ

ಹಿಂದಿನ ಸಂಚಿಕೆಯಿಂದ…ದಂಪತಿಗಳ ಪ್ರೀತಿ ಪಾತ್ರವಾದ ಆತ್ಮವು ಸದ್ದು ಬಂದ ಜಾಗದ ಬಾಗಿಲನ್ನು ಒದ್ದನಂತರ ಅಲ್ಲಿದ್ದ ದುಷ್ಟ ಆತ್ಮಗಳು ಬೆದರಿ ಕಂಗಾಲಾಗಿ ವಾಪಸ್ಸು ಅಲ್ಲಿದ್ದ ಅಷ್ಟದಿಗ್ಬಂಧನದಲ್ಲಿ ಸೇರಿ ಹೋಗುತ್ತವೆ. ದಂಪತಿಗಳು ಆ ಅಷ್ಟ ದಿಗ್ಬಂಧನದ ಸಮಸ್ಯೆಯಿಂದ ಹೊರಬರಲು ಮುಂದಿನ ದಾರಿ ತೋರುವಂತೆ ಮೊರೆಯಿಡ್ಡುತ್ತಾರೆ. ಆತ್ಮವು ಅವಿತಿರುವ ಶಿವಲಿಂಗವನ್ನು ಹುಡುಕಿ ತೆಗೆದು ಪೂಜೆ ಸಲ್ಲಿಸಿದರೆ ಪರಿಹಾರ ದೊರಕಿ ನನಗೂ ಸಹ ಮುಕ್ತಿ ದೊರೆಯುವುದು ಎಂದು ಹೇಳಿತು. ಆಗ ದಂಪತಿಗಳು ಮಕ್ಕಳ ನೆರವಿನಿಂದ ಶಿವಲಿಂಗವನ್ನು ಹುಡುಕಿ ತೆಗೆದು ಪೂಜೆ ಸಲ್ಲಿಸಿದಾಗ ತಕ್ಷಣವೇ […]Read More

ಪರಾಭವ ಭಾವನಾ – 17 ಯತಿರಾಜ್ ವೀರಾಂಬುಧಿ

ಹಿಂದಿನ ಸಂಚಿಕೆಯಿಂದ…ಡ್ರೈವರ್ ರೂಪದಲ್ಲಿದ್ದ ಶ್ಯಾಮ್ ಗೆ ಅಪ್ರಮೇಯನನ್ನು ಕೊಲ್ಲಲು ಶಾರ್ಪ್ ಶೂಟರ್ ಆಗಮಿಸಿರುವ ಸುದ್ದಿ ಕಳವಳನ್ನುಂಟು ಮಾಡಿತ್ತು. ಆದರಿಂದ ಪುಣೆ ಗೆ ತಾನು ಬರುವೆನು ಎಂದು ಅಪ್ರಮೇಯನ ಜೊತೆಯಲ್ಲೇ ಹೊರಟ. ಮುಂದೆ… —ಹದಿನೇಳು– ರಸ್ತೆಯ ಮೇಲೆ ಕಾರೋಡುತ್ತಿತ್ತು. ಅಪ್ಪುವಿನ ಮನಸ್ಸು ಈಗ ಬಹಳವೇ ಶಾಂತವಾಗಿತ್ತು. ಸಾಯಲು ಸಿದ್ಧನಾದ ಮೇಲೆ ಬೇರೆಲ್ಲವೂ ಗೌಣವಾಗಿಬಿಡುವುದೆಂಬ ವಿಷಯ ಅವನಿಗೆ ತಿಳಿದಿತ್ತು. ನೆನ್ನೆ ಡ್ರೈವರ್‌ ಶ್ಯಾಮ್‌ ಬಳಿ ವಾಸಾಂಸಿ ಜೀರ್ಣಾನಿ ಶ್ಲೋಕವನ್ನು ಹೇಳಿದ ಮೇಲೆ ಅವನ ಮನಸ್ಸಿನಲ್ಲಿ ಜಾತಸ್ಯ ಹಿ ಧ್ರುವೋ ಮೃತ್ಯುಃ| […]Read More

ಕೆಲಸಕ್ಕಾಗಿ ಕಗ್ಗತ್ತಲೆಯ ಖಂಡದತ್ತ-7

–ಶಬೆಲ್ಲಿ ತೊರೆದು– ಮುಂದೇನು ಹಾಗಾದರೆ! ಮುಸ್ತಫಾ,ಘಂಟೆ ಕಳಚಿ ಕಾಲ ಮೇಲೆ ಬಿದ್ದಂತೆ ಕೊಟ್ಟಿದ್ದ ಖಡಕ್ ಏಟು, ಅದರಿಂದ ಮುಖದಮೇಲೆ ಆವರಿಸಿದ್ದ ಕಟುಸತ್ಯದ ಗಂಟುಗಳಿದ್ದ ಹಾಗೆಯೇ, ಚಾಲಕನಿಗೆ ಥ್ಯಾಂಕ್ಸ್ ಹೇಳಿ, ಪೆಟ್ಟು ತಿಂದ ಪ್ರಾಣಿಯ ಥರ ಹೋಟೆಲ್ ರೂಮ್ ಸೇರಿದವನೇ, ಹಸಿವಾಗುವವರೆಗೂ ರೂಮಲ್ಲಿ ಬಿದ್ದುಕೊಂಡಿದ್ದು, ಊಟ ಎಂಬ ಮತ್ತೊಂದು ‘ಸಂಭ್ರಮ’ ಕ್ಕಾಗಿ ಮೇಲೆ ಹೋಗಿ ಕೂತೆ.‘ಹೌದು, ಅಣ್ಣ ಹೇಳಿದ್ದ ಆ ಡಾ. ಜಾರ್ಜ್ ಬಗ್ಗೆ, ಯಾರನ್ನ ಕೇಳಲಿ?ನನಗೆ ಪರಿಚಯಗಳಾದರೂ ಎಲ್ಲಿ, ಈ ಊರಲ್ಲಿ? ಅಕಸ್ಮಾತ್ ಅವರು ಬರಲೇ ಇಲ್ಲ; […]Read More

ವಿರಹದುಸಿರು

ಶಬ್ದಗಳು ಬಿಕ್ಕುತ್ತಲಿವೆ.ನಿನ್ನ ವಣಿ೯ಸಲುಕಂಗಳ ಕಾಂತಿ ಹಿಂಗುತಿದೆನಿನ್ನ ನೋಡುತಲಿ. ಎದೆಯೊಳಗೆ ಚಿತ್ತಾರಮನದೊಳಗೆ ರಂಗವಲ್ಲಿಎಂದು ಮುದ್ರಿಸಿದನೋನನ್ನೂಳಗಿನ ಪ್ರೇಮಿ! ಅಳಿಸಿಹಾಕು ವಿರಹಉಳಿಸು ಈ ಜೀವದುಸಿರಈ ಸಂಕಟದಿಂದಎಂದೆಂದಿಗೂ ನಿರಂತರ ಪವನ ಕುಮಾರ ಕೆ ವಿ ಬಳ್ಳಾರಿRead More

ಕಿತ್ತಳೆ ನೆಲಸಿಳ್ಳಾರ – Orange-headed Thrush

ನಮ್ಮ ಸುಂದರ ಹಕ್ಕಿಗಳಲ್ಲಿ ಒಂದಾದ ನೆಲಸಿಳ್ಳಾರಗಳು ನೆಲದ ಮೇಲೆ ಆಹಾರ ಅರಸುವ ಪ್ರಭೇದ. ಇದರ ಹೆಸರಿನಲ್ಲರಿವ “ನೆಲ” ಅದನ್ನೇ ಸೂಚಿಸುತ್ತದೆ. ಹೀಗೆಯೇ ಬಂಡೆ ಇಲ್ಲವೆ ಕಲ್ಲು ಸಿಳ್ಳಾರಗಳೂ ಇವೆ. ಅವು ಬಂಡೆಗಳ ನಡುವೆ ಹೆಚ್ಚು ಕಾಣಸಿಗುತ್ತವೆ. ನೆಲಸಿಳ್ಳಾರಗಳು ಕಾಡಿನ ನೆಲಹಾಸಿನಲ್ಲಿ ಒಣ ಎಲೆಗಳನ್ನು ತಲಕೆಳಗು ಮಾಡುತ್ತಾ ಹುಳ, ಜೇಡ ಇತ್ಯಾದಿಗಳನ್ನು ಹುಡುಕಿ, ಹಿಡಿದು ತಿನ್ನುತ್ತವೆ. ಒಟ್ಟಾರೆಯಾಗಿ ಸಿಳ್ಳಾರಗಳನ್ನು ತೆಗೆದುಕೊಂಡರೆ ದಕ್ಷಿಣ ಏಷ್ಯಾದಲ್ಲಿ ಇಪ್ಪತ್ತೆಂಟು ಇಲ್ಲವೆ ಇಪ್ಪತ್ತೊಂಬತ್ತು ಪ್ರಭೇದಗಳ ಸಿಳ್ಳಾರಗಳು ಕಂಡುಬರುತ್ತವೆ. ಜೊತೆಗೆ ನಾಲ್ಕು ಅಲೆಮಾರಿ ಹಾಗೂ ಎರಡು […]Read More

ಅನ್ನೆ ಸೊಪ್ಪು – Water Spinach

ಅಮ್ಮನು ಮಾಡುವ ಅನ್ನೆ ಸೊಪ್ಪಿನ ಮಜ್ಜಿಗೆ ಸಾರನ್ನು ನೆನೆದರೆ ಈಗಲೂ ಬಾಯಲ್ಲಿ ನೀರೂರಿಸುತ್ತದೆ. ಚಳಿಗಾಲಕ್ಕೆ ಸವಿಯಲು ಅತ್ಯಂತ ರುಚಿಕರವಾದ ಖಾದ್ಯ. ಅಷ್ಟೇ ಅಲ್ಲದೆ ಅನ್ನೆ ಸೊಪ್ಪಿನಿಂದ ಮಾಡಿದ ಪಲ್ಯ ಸಾರು ಇತ್ಯಾದಿಗಳು ನಾಲಿಗೆಗೆ ಮುದವನ್ನು ನೀಡುತ್ತದೆ. ಅನ್ನೆ ಸೊಪ್ಪು ಬಹಳ ವಿಶೇಷವಾದದ್ದು ಏಕೆಂದರೆ ಹೊಲದಲ್ಲಿ ಅಲ್ಲಲ್ಲಿ ಬೆಳೆಯುವ ಸಸ್ಯವಾಗಿದೆ. “ಐಪೊಮೊಯಿ ಅಕ್ವಾಟಿಕಾ” (Ipomoea Aquatica) ಎಂಬ ವೈಜ್ಞಾನಿಕ ಹೆಸರುಳ್ಳ ಉಭಯಚರ ಸಸ್ಯವಾಗಿದ್ದು ಇದನ್ನು ಆಂಗ್ಲ ಭಾಷೆಯಲ್ಲಿ “ವಾಟರ್ ಸ್ಪಿನಾಚ್” (Water Spinach) ಎಂದು ಸಾಮಾನ್ಯವಾಗಿ ಕರೆಯಲಾಗುತ್ತದೆ. ದಕ್ಷಿಣ […]Read More

ಅವಳ ಸಂದೇಶ

ಇಂದಿನ ವೈಜ್ಞಾನಿಕ ಯುಗದಲ್ಲಿರುವ ನಮಗೆ ಬಹಳಷ್ಟು ತಂತ್ರಜ್ಞಾನ ಬಳಕೆಯು ಅಭ್ಯಾಸವಾಗಿ ಹೋಗಿದೆ. ಅದರಲ್ಲಿಯೂ ಜಂಗಮವಾಣಿ (ಮೊಬೈಲ್) ಎಷ್ಟು ಸೌಲಭ್ಯಗಳನ್ನು ಹೊಂದಿದೆ ಎಂದರೆ, ಕೂತ ಜಾಗದಿಂದಲೇ ಬೇಕಾದವರನ್ನು ನೋಡಬಹುದು, ರಂಜಿಸಬಹುದು, ಕಲಿಯಬಹುದು, ಮಿತಿಯೇ ಇಲ್ಲದಷ್ಟು ಉಪಯೋಗ ಜಂಗಮವಾಣಿಯಲ್ಲಿ ತುಂಬಿದೆ. ಜಂಗಮವಾಣಿಯ ಸಹಾಯದಿಂದ ಜನರು ಪರಸ್ಪರ ತಮ್ಮ ಭಾವನೆಗಳನ್ನು ಹಂಚಿಕೊಳ್ಳುವುದು ಸಹಜವಾಗಿದೆ. ಇನ್ನು ಅದರ ದುರ್ಬಳಕೆ ಅವರವರ ಭಾವನೆಗೆ ಬಿಟ್ಟದ್ದು ಅಲ್ಲವೇ? ಹೀಗೆ ಅದೊಂದು ತಣ್ಣನೆಯ ಚಳಿ ತುಂಬಿದ, ಮಳೆ ಸುರಿಯುತ್ತಿರುವ ಮುಂಜಾನೆ, ನವ ವಿವಾಹಿತ ಸತಿ ಪತಿಯರ ವಿರಹಕಾಲ. […]Read More

ಎಲ್ಲರಂತಲ್ಲ ಅವಳು!

ಅವಳು ಅವಳಲ್ಲ!ಕ್ಷಮಿಸಿ,ಎಲ್ಲರೂ ಊಹಿಸಿದ ಹಾಗಲ್ಲ!ಅವನೊಳಗೆ ಅವಳಾಗಿಎಲ್ಲ ಭಾವಗಳಲ್ಲೊಂದಾಗಿಗೊಂದಲಕ್ಕೀಡು ಮಾಡುತ್ತಾಳೆನನ್ನನ್ನೇ ನಾ ಪ್ರಶ್ನೆ ಮಾಡಿಕೊಳ್ಳವಂತೆ! ಗಂಡಸಿನ ನಡೆಗಡಸು ಕಾಲುಗಳುಮಾತೂ ಕೂಡ ಒರಟುಹೆಚ್ಚು ಕೆಮ್ಮಿದರೆ ಒಂದೇ ಏಟುಪಟಾಕಿ ಸಿಡಿಯುವ ಹಾಗೆಸಿಡಿಲಾಗಿ ಭೋರ್ಗರೆವಳುಕೋಪಕ್ಕೆ ಇವಳದೇ ರೂಪವಿರಬೇಕು ಮೋಟು ಜಡೆಯಜೀನ್ಸ್ ತೊಡುಗೆಯಗೋಧಿ ಬಣ್ಣದ ಒಣಕಲು ದೇಹಕಾಜಲ್ ಬೇಡದ ಕಣ್ಣುಗಳುಲಿಪ್ಸ್ಟಿಕ್ಕನ್ನೇ ಹೋಲುವ ತುಟಿಗಳುಗುಳಿಕೆನ್ನೆಗಳೇ ಅವಳ ಅಲಂಕಾರಮೂಗುತಿಯೇ ದೃಷ್ಟಿಬೊಟ್ಟುಮುಟ್ಟಿದರೆ ಖಂಡಿತ ದೊಡ್ಡ ಪೆಟ್ಟು ಆದರೂ..ನನ್ನವಳು ನೀವಂದುಕೊಂಡ ಹಾಗಲ್ಲ!ಹೂದೋಟಕ್ಕೇ ಸುಗಂಧ ಸೂಸುವ ದುಂಬಿಇಳೆಗೆ ಮಳೆಯ ಆಹ್ವಾನಿಸೋ ಮೂರುತಿರಾಶಿ ಹಣ್ಣುಗಳಲ್ಲಿನ ಸ್ವಾದಮನಬಿಚ್ಚಿ ಹಾರಾಡೋ ಹಕ್ಕಿರಚ್ಚೆ ಹಿಡಿವಳು ಬಿಕ್ಕಿ ಬಿಕ್ಕಿನನ್ನನ್ನೇ […]Read More

ಭಲೇ ಭಲೇ ಭಜರಂಗಿ

ಭಜರಂಗಿ ಮೊದಲ ಚಿತ್ರಕ್ಕು ಇದಕ್ಕೂ ಸಂಬಂಧವಿಲ್ಲ ನಿಜಇಂತದೊಂದು ಕಲ್ಪನೆ ಹರ್ಷ ಅವರಿಗೆ ಬಂದದ್ದು ಅದಕ್ಕೆ ಶಿವಣ್ಣ ನ ಒಪ್ಪಿಗೆ ಮೆಚ್ಚುವಂತದ್ದೇ.ಕಾಲ್ಪನಿಕ – Fantasy ಕಥೆಈ ಚಿತ್ರವನ್ನು ಹಾಗೆ ನೋಡಬೇಕುಲೋಪ ದೋಷಗಳು ಏನೇ ಇದ್ದರೂ ರಪ್ಪಂತ ಪಾಸ್ ಹಾಗುತ್ತವೆ ಮೊದಲರ್ದ ಅಕ್ಕನ ಪ್ರೀತಿಯಲ್ಲಿ ಶೃತಿ ಪ್ರೇಕ್ಷಕರನ್ನು ಆಕ್ರಮಿಸುತ್ತಾರೆ. ಇನ್ನು ನೆಪ ಮಾತ್ರಕ್ಕೆ ಅಂಜನಾ ಮತ್ತೆ ಇನ್ನು ಬರುವ ಪಾತ್ರಗಳು ಮೊದಲ ಭಜರಂಗಿ ಚಿತ್ರದಲ್ಲಿ ಅಬ್ಬರಿಸಿದ ಸೌರವ್ ಲೋಕೇಶ್ ಇಲ್ಲಿ ವೈದ್ಯೋ ನಾರಾಯಣ ಹರಿ ಇನ್ನು ಶಿವಣ್ಣ ಅಭಿನಯ ದೂಸ್ರಾ […]Read More