ನಾಝಿ ನಾಯಕರ ಸಹೃದಯಿ ಸಹೋದರರು (ಭಾಗ -2)

ಹಿಂದಿನ ಲೇಖನದಲ್ಲಿ “ಆಲ್ಬರ್ಟ್ ಗೋರಿಂಗ್” ಬಗ್ಗೆ ಪ್ರಸ್ತಾಪಿಸಿದ್ದು ಈಗ ಹೇಳ ಹೊರಟಿರುವುದು ಇನ್ನೊಬ್ಬ ಕ್ರೂರ ನಾಝಿ ನಾಯಕ “ರೀನ್ಹಾರ್ಡ್ ಹೆಡ್ರಿಕ್” ನ ಸಹೋದರ “ಹೈಂಜ್ ಹೆಡ್ರಿಕ್” ಬಗ್ಗೆ. ತನ್ನ ಕೊನೆಯ ಕಾಲದಲ್ಲಿ ಪಶ್ಚಾತಾಪದಿಂದ ಕೊಂಚ ಒಳ್ಳೆಯ ಮಾನವೀಯ ಕೆಲಸವನ್ನು ಮಾಡಿದವ. ಮೊದಲನೇ ಮಹಾಯುದ್ಧದ ( 1914  -1918 ) ಸೋಲು ಜರ್ಮನಿಯ ಎಲ್ಲೆಡೆ ಅರಾಜಕತೆಯನ್ನು ಸೃಷ್ಟಿಸಿರುತ್ತದೆ. ಕ್ರಮೇಣ ಅಡಾಲ್ಫ್ ಹಿಟ್ಲರ್ 1933 ರಲ್ಲಿ ಜರ್ಮನಿಯ ನಾಯಕನಾಗಿ (ಕುಲಪತಿ) ಆಯ್ಕೆಯಾಗುತ್ತಿದ್ದಂತೆ ನಾಝಿ ಪಾರ್ಟಿ (ಜರ್ಮನ್ ನ್ಯಾಷನಲ್ ಪೀಪಲ್ ಪಾರ್ಟಿ) […]Read More

ಪಕ್ಷಿಲೋಕ – ಗಿಣಿಯು ಪಂಜರದೊಳಿಲ್ಲಾ

ಗಿಣಿಯು ಪಂಜರದೊಳಿಲ್ಲಾ, ರಾಮ ರಾಮಾ ಎಂಬ ದಾಸರ ಪದವನ್ನು ನಾವೆಲ್ಲರೂ ಕೇಳಿರುತ್ತೇವೆ. ಒಬ್ಬ ಸಂತನ ಮತ್ತು ಕಟುಕನ ಮನೆಯಲ್ಲಿ ಬೆಳೆದ ಒಂದೇ ಗಿಣಿಯ ಎರಡು ಮರಿಗಳು ಮುಂದೆ ಏನಾದವು ಎಂಬುದು ನಮಗೆ ತಿಳಿದೇ ಇದೆ. ಮದುವೆಗೆ ಮೊದಲು ಹುಡುಗಿಗೆ ಗಿಣಿಯಂತೆ ಮಾತಾಡುತ್ತೀಯಲ್ಲೇ ಎಂದವರು ಮುಂದೆ “ಗಿಣಿ ತರ ಮಾತಾಡ್ಬೇಡ ನೀನು ಎಂದಿರುತ್ತೇವೆ!” ಗಿಣಿ ಭವಿಷ್ಯ ಕೇಳಿರುವುದೂ ಉಂಟು! ಗಿಣಿಯ ಪ್ರಸ್ತಾಪವಿರುವ ಪ್ರಣಯ ಗೀತೆಗಳು ಕಡಿಮೆ ಇವೆಯೇ! (ಪಂಚರಂಗಿ!) ರಾಮ ರಾಮ! ಇವೆಲ್ಲಾ ಏನೇ ಇರಲಿ, ಗಿಣಿ ಸಾಮಾನ್ಯವಾಗಿ […]Read More

ಬಂಧು ಒಂದು ಮನವಿ

ಕಲಕಬೇಡ ಕುಲುಕಬೇಡ ನಮ್ಮ ಬದುಕ ಬಂಧು ಕಲಕಿ ಕದಡಿ ಬಗ್ಗಡ  ಮಾಡಿಬಿಡಬೇಡ ನೋಡುಗಣ್ಣುಗಳಿಗೆ ಕುಚೋದ್ಯಕಾರಣ ಆಗಿ ಆ ಕಲುಷಿತ ಬದುಕು ದುರ್ಗಂಧ ಉಗ್ಗೀತು…! ನಮ್ಮ ನಾವಿದ್ದ ಹಾಗೆಯೆ ಬಿಟ್ಟು ಬಿಡುವ ಕೃಪೆತೋರು ನಮ್ಮ ಹುಟ್ಟೇ ಹಾಗಿರಬಹುದು ಬಹುಷಃ ನಿನ್ನ ಕಣ್ಣೀಗ ಹೇಗೆ ನೋಡುತ್ತಿದೆಯೋ ಹಾಗೆ ಅಥವ ಕಾಣದೆಯೂ ಇರಬಹುದು ನಿನಗೆ ನಿನ್ನ ಕಣ್ಣ ಸೋಂಕಿಂದ ನಮ್ಮ ನೈಜ ರೂಪುರೇಖೆ      ಹೇಗೋ ಏನೋ ನಾವಂತು ಅರಿಯೆವು ಆದರೂ ನೀ ನಮ್ಮ ಬಂಧು ಅದು ಯಾವ ರೀತಿಯೇ ಇರಲಿ ನಂಟಾಗಲಿ […]Read More

ನಾಝಿ ನಾಯಕರ ಸಹೃದಯಿ ಸಹೋದರರು (ಭಾಗ -1)

ಕಳೆದ ಶತಮಾನದ ಮಹಾಯುದ್ಧದಲ್ಲಿ ತಮ್ಮ ಕ್ರೂರತೆಯಿಂದ ಮೆರೆದು ಲಕ್ಷಾಂತರ ಜನಸಾಮಾನ್ಯರ ಮಾರಣಹೋಮಕ್ಕೆ ಕಾರಣರಾದ ನಾಝಿ ನಾಯಕರ (ಹಿಟ್ಲರ್ ಸಹಿತ) ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಆದರೆ ಇವರುಗಳ ಮದ್ಯೆ ಈ ಕ್ರೂರ ನಾಯಕರ ಇಬ್ಬರು ಸಹೋದರರ ಮಾನವತೆಯ ಬಗ್ಗೆ ತಿಳಿಯಲೇಬೇಕು. ಆಲ್ಬರ್ಟ್ ಗೋರಿಂಗ್: ಆಸ್ಟ್ರಿಯಾ ದೇಶದ ವಿಯೆನ್ನಾ ನಗರದಲ್ಲಿನ ಒಂದು ಸಂಜೆ, ಯಹೂದಿಗಳ ಗುಂಪೊಂದು ನಾಝಿಗಳ ಆದೇಶದ ಮೇರೆಗೆ ನಗರದ ರಸ್ತೆಗಳ್ಳನ್ನು ಸ್ವಚ್ಛಗೊಳಿಸುತಿತ್ತು. ಅವರುಗಳ ಮೇಲ್ವಿಚಾರಣೆ ಹೊತ್ತಿದ್ದ ಎಸ್ ಎಸ್ ಆಫೀಸರ್ ಒಬ್ಬ ಗುಂಪಲ್ಲಿ ಕೆಲಸ ಮಾಡುತಿದ್ದ […]Read More

ಪಕ್ಷಿಲೋಕ – ಕಾಗೆಗಳು

ಪಕ್ಷಿಲೋಕ – 1 ಕಾಗೆಗಳು “…ಅನ್ನದಲ್ಲಿ ಕೂತ ಕಾಗೆ ತನ್ನ ಬಳಗವನ್ನೆಲ್ಲಾ ಕರೆಯುತ್ತದೆ!” ಈ ಮಾತನ್ನು ನಾವು ಅನೇಕ ಬಾರಿ ಕೇಳಿರುತ್ತೇವೆ. ಒಳ್ಳೆಯದಕ್ಕೂ ಕೆಟ್ಟದಕ್ಕೂ ಇದನ್ನು ಒಪ್ಪವಿಡುತ್ತೇವೆ. “ಅವನು ಬದುಕಿದ್ದಾಗ ಒಬ್ಬರಿಗೆ ಕೈಯೆತ್ತಿ ಒಂದು ಕಾಸು ಕೊಡಲಿಲ್ಲ, ಅವನ ಪಿಂಡದಲ್ಲಿ ಕೂತ ಕಾಗೆ ತನ್ನ ಬಳಗವನ್ನೆಲ್ಲ ಕರೀತು ನೋಡಿ ಎಂದು”. ಹಾಗೆಯೇ “…ಇದನ್ನ ಮಾಡ್ದೆ ಇದ್ರೆ ಅವಗೆ ಕಾಕಿಪಿಂಡ ಆಗಂಗಿಲ್ಲ!” ಎಂಬುದೂ ಒಂದು ಮಾತು! ಅದನ್ನು ಅವನು ಮಾಡೇ ಮಾಡುತ್ತಾನೆ ಎಂಬುದು ಅರ್ಥ. ಒಟ್ಟಾರೆ, ನಮ್ಮ ಸಂಸ್ಕೃತಿಯಲ್ಲಿ […]Read More

ನಾಯಿ ಕಳೆದಿದೆ

ನಾಟಕ (ರಚನೆ -ನಿರ್ದೇಶನ ರಾಜೇಂದ್ರ ಕಾರಂತ್) ರಂಗದ ಮೇಲೆ ಕಾರಂತರ ‘ನಾಯಿ ಕಳೆದಿದೆ’! ‘ಎಲ್ಲೋ ಹುಡುಕಿದೆ ಇಲ್ಲದ  ದೇವರ…’ ಎಂಬ ಹಾಡಿನ ಹಿನ್ನೆಲೆಯಲ್ಲಿ ‘ನಾಯಿ ಕಳೆದಿದೆ’ ಎಂಬ ನಾಟಕ ಆರಂಭವಾಯ್ತು! ನಗರ ಮಧ್ಯದಲ್ಲಿ ಒಂದು ಮನೆ, ಅಲ್ಲಿ ವಯಸ್ಸಾದ ದಂಪತಿಗಳು. ಮಗ ಹಾಗೂ ಸೊಸೆಗೆ ಐಟಿ ಕಂಪನಿಯಲ್ಲಿ ಕೆಲಸ. ಹಾಗಾಗಿ ಇವರು ಆಫೀಸ್ಗೆ ಹತ್ತಿರವೇ ಮನೆ ಮಾಡಿಕೊಂಡಿರುತ್ತಾರೆ. ಆಗಾಗ ಈ ಮನೆಗೂ ಬರುತ್ತಾರೆ. ಬರುವಾಗ ಸೊಸೆಯ ಮುದ್ದಿನ ನಾಯಿಯೂ ಬರುತ್ತೆ! ನಾಯಿ ಕಂಡರೆ ಆಗದ ಈ ಹಿರಿಯ […]Read More

ಮೋಹ

ಈ ನನ್ನ ಹೃದಯದಲ್ಲಿ ನಿನ್ನ ನೆನಪಿನ ಪ್ರತಿಬಿಂಬಗಳು ಹಾದು ಹೋಗುವಾಗ ನನ್ನ ಹೃದಯದ ಬಡಿತದ ಪ್ರತಿ ಮಿಡಿತವು ನಿನ್ನೆಸರ ಜಪಿಸುತಿದೆ ನಾನು ಒಂಟಿಯಾದರು ಒಂಟಿಯಲ್ಲ ನನ್ನ ಜೊತೆ ಮತ್ತೊಂದು ಆತ್ಮವಿದೆ ಈ ನನ್ನ ಪ್ರೀತಿ ಪ್ರೀತಿಯಲ್ಲ, ಆದರೂ ಅರ್ಥವಿದೆ, ಈ ಪ್ರಪಂಚ ಸುಂದರವಿದ್ದರೂ ಇಲ್ಲಿ ದೋಷವಿದೇ ಆದರೆ ನನಗೆ ಕಾಡುವುದಿಷ್ಟೇ ಈ ಹೆಣ್ಣು ಎನ್ನುವ ಮನಸ್ಸಿನಲ್ಲಿ ಏನಿದೆ ? ಈ ನನ್ನ ಪ್ರೀತಿ ಶುದ್ಧವಾಗಿಯೂ ನಿಸ್ವಾರ್ಥದಿಂದಲು ಕೂಡಿದೆ ಎಂದು ನಾ ಹೇಳಲಾರೆ. ಅದಕ್ಕೆ ನನ್ನ ಆತ್ಮ ಒಪ್ಪುವುದಿಲ್ಲ! […]Read More

ಭೂರಮೆ ವಿಲಾಸ’ ಹಾಗೂ ‘ವೈಫ್ ಆಫ್ ಸೋಲ್ಜರ್

ನಾಲ್ಕು ವರ್ಷದ ಸೃಜನಿಯ ಕಲಾಕೃತಿಗಳ ಪ್ರದರ್ಶನ ನಾಲ್ಕು ವರ್ಷದ ಬಾಲ ಕಲಾವಿದೆ ಎಸ್.ವಿ.ಸೃಜನಿಯ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಮತ್ತು ಕಗ್ಗೆರೆಪ್ರಕಾಶ್ ಅವರ 4ನೇ ಕವನ ಸಂಕಲನ, 21ನೇ ಪುಸ್ತಕ ‘ಭೂರಮೆ ವಿಲಾಸ’ಹಾಗೂ ಎಸ್.ಭಾಗ್ಯ ಅವರ ಅನುಭವ ಕಥನ ‘ವೈಫ್ಆಫ್ಸೋಲ್ಜರ್’ ಬಿಡುಗಡೆ ಕಾರ್ಯಕ್ರಮ ಇದೇ ಏಪ್ರಿಲ್ 25ನೇ ತಾರೀಖು ಭಾನುವಾರ ಬೆಂಗಳೂರಿನ ಕೆಜಿಎಲ್ಡಿ ಆರ್ಟ್ಗ್ಯಾಲರಿಯಲ್ಲಿ ನಡೆಯಲಿದೆ.  ಇಂಥ ಅಪರೂಪದ ಕಾರ್ಯಕ್ರಮಕ್ಕೆ ತಮ್ಮೆಲ್ಲರಿಗೂ ಪ್ರೀತಿಯ ಸ್ವಾಗತ. • ಕಗ್ಗೆರೆ ಪ್ರಕಾಶನದ ಹೆಮ್ಮೆಯ ಕೊಡುಗೆ • ನಾಲ್ಕು ವರ್ಷದ ಸೃಜನಿ ಕಲಾಕೃತಿಗಳ […]Read More

ಹರಿದ ಲುಂಗಿ

ಹರಿದ ಲುಂಗಿ ***** ಅವ್ವ ನನ್ನ ಕಾಚ ಹರಿದು ಚಿಂದಿ ಚಿಂದಿ ತುಂಬ ತುಂಬಾ ಹಳೆಯದು ಅಣ್ಣ ಕೊಟ್ಟೇ ವರುಷಕ್ಕು ಮಿಗಿಲು ಅವನಿಗೆ ಚಿಕ್ಕದೆಂದು ಆಗಲೇ ಅದಕೆ ಅರ್ಧ ಜೀವ ಈಗ ಬಣ್ಣ ಪೂರ್ತಿ ಕಳೆದು ಹುಡುಕಬೇಕು ಹರಿಯದೆ ಉಳಿದ ಜಾಗ! ಇದ್ದರೆ ಕೊಡು ಬೇರೆ ಎಲ್ಲಿ ತರಲಿ ಮಗಾ ಕಾಚ ಚಡ್ಡಿ ಎಲ್ಲ ನಮಗಾ ನಿಜ ಅಲ್ಲ ಎಂದೂ ಅಲ್ಲ! ನಾವು ನೇಯುವುದು ನಮ್ಮ ಹೊಟ್ಟೆಗೆ ಇತರರ ಬಟ್ಟೆಗೆ ಅವರ ಎಲ್ಲ ನಮೂನೆಯ ಉಡುಗೆ ತೊಡುಗೆಗೆ… […]Read More

ಪೃಥಾ

ಒಂಟಿ ನಾವಿಕನ ಬದುಕಲ್ಲಿ ನಡು ದಾರಿಯಲ್ಲಿ ಬಡಿದ ಹೆದ್ದೆರೆಯಂತವಳು! ಬಡಿದ ರಭಸಕ್ಕೆ ಬದುಕು ಅಲ್ಲೋಲ ಕಲ್ಲೋಲ ನಸುಕಿನ ಬಾನಿನಲ್ಲಿ ಆಕಾಶಕ್ಕೆ ಉಕ್ಕಿದ ಸ್ವರ ಹಿಗ್ಗಿ ತಳ ತಳ ಹೊಳೆದು ಎಳೆದು ತನ್ನೊಳಸೆಳೆದು ನಿಶ್ಚಲ ಮೂರ್ತಿಗೆ ಜೀವ ನಾದವಾದಂತೆ! ಅನುಭಾವಿಯಂತೆ ಮದ್ಯೆ ನೀರವದಿ ಕಾವು ಕೂತು ಕಣ್ಮುಚ್ಚಿ ತೆರೆವ ಹೊಸ ಭಾವದ ರೆಕ್ಕೆ ವಚನಕ್ಕೆ ವಚನ ಕೊಟ್ಟಂತೆ ಕಟ್ಟಿದ ಸೇತು ಬಂಧ ಯಾವ ಚೌಕಟ್ಟಿಗೂ ಸಿಗದ ಆತ್ಮ ಬಂಧವಿವಳು – ಕುಮಾರ್ ಕೆ ಪಿRead More