ಬೆಳದಿಂಗಳ ಊಟ

ಮೊನ್ನೆ ಸಂಜೆ ಪಕ್ಕದ ಮನೆಯ ಪೂರ್ಣಿಮಾ ಬಂದು “ ಅಂಕಲ್, ನಾಳೆ ರಾತ್ರಿ ಊಟ ಎಲ್ಲರೂ ಸೇರಿ ನಮ್ಮನೆ ಮಾಳಿಗೆ ಮೇಲೆ ಮಾಡೋಣ.ನೀವು ಮರೆತು ಬಿಟ್ಟೀರಿ ನಾಳೆ ಹುಣ್ಣಿಮೆ “ ಎಂದಳು.“ ಆಂಟಿ ನೀವು ಚಿತ್ರನ್ನ, ಮೆಣಸಿನಕಾಯಿ ಮಾಡಿ , ಗಾಯತ್ರಿ ಆಂಟಿಗೆ ಚಪಾತಿ , ಬಜ್ಜಿ ಮಾಡೋಕೆ ಹೇಳಿದ್ದೀನಿ.ಸುಮಾ ಆಂಟಿ ಏನಾದ್ರೂ ಸ್ವೀಟ್ ಮಾಡ್ತಾರಂತೆ.” ಎಂದು ನನ್ನವಳಿಗೆ ಹೇಳ್ತ್ದ ಪೂರ್ಣಿಮಾ, ಸರ ಸರನೆ ಹೊರಟು ಹೋದಳು. ನನಗೆ ಇಪ್ಪತ್ತು ವರ್ಷಗಳ ಹಿಂದಿನ ನೆನಪು ಕಾಡತೊಡಗಿದವು.ಬೆಳದಿಂಗಳ ಊಟದ […]Read More

ತಂಗ್ಯಮ್ಮ

ಬೆನ್ನ ಹಿಂದೆ ಹುಟ್ಟಿದ ಪುಟ್ಟ ನೀನುದೂಕುತ್ತಿದ್ದೆನಲ್ಲ ಪುಟ್ಟಿಆಟದಲ್ಲಿ ಕೂಟದಲ್ಲಿ!ಅಯ್ಯೋ ಅರಿವಿರದೆ ಹೋಯಿತೇ? ಒಡಹುಟ್ಟಿ ಮನೆಯ ದೀಪಹಚ್ಚಿಸಿದ ಅಪ್ಪನ ಪ್ರೀತಿಯ ಪುಟ್ಟಿನಿನ್ನ ಕೂದಲು ಎಳೆದುಜಗಳವಾಡುವ ಆಸೆ ನಿನ್ನ ಮದುವೆಯಲ್ಲಿಪೀಪಿ ಊದಿ ಮುತ್ತಣ್ಣನಂತೆಬೀಗುವ ಆಸೆಯಿದ್ದರುಹೆಗಲಿಗೆ ಮದುವೆಯ ಜವಾಬ್ದಾರಿ? ಪುಟ್ಟ ಅಳಿಯ ಮನೆಯಲ್ಲಿಅಂಬೆಗಾಲಿಡುವ ಕನಸುಮಾಮ ಎಂದು ತಬ್ಬುವಗಾಡಿ ಮೇಲೆ ರೌಂಡ್ ಹೊಡೆಯುವ ಈ ಅಣ್ಣನ ಪ್ರೀತಿ ಇಷ್ಟೇಯ?ಅಲ್ಲಲ್ಲಾ…. ಬೇಕಾದಷ್ಟುಭೂಮಿ ತಬ್ಬುವಷ್ಟುಕೊಡುತ್ತಿದ್ದ ಕೈತುತ್ತುಬೇಕು ನನಗೆ ಈಗಲೂ ಕೊಡುವೆಯಾ ಕಂದಅಣ್ಣನಾದರೂನಿನ್ನ ಪುಟ್ಟ ತಮ್ಮ ನಾನುನನ್ನಮ್ಮ ನೀನು. ಕು ಶಿRead More

ಒಂಟಿಮನೆ-5

ಹಿಂದಿನ ಭಾಗದಲ್ಲಿ ಮಾಂತ್ರಿಕನಿದ್ದ ಜಾಗ ಸಮೀಪಿಸುತ್ತಿದ್ದಂತೆ ಆಕೆ ಬಿಕ್ಕಿ ಬಿಕ್ಕಿ ಅಳ ತೊಡಗಿದಳು, ಆಕೆಯ ಅಳುವನ್ನು ಗಮನಿಸಿದ ಮಾಂತ್ರಿಕನ ಪ್ರಿಯತಮೆಯ ಆತ್ಮಕ್ಕೆ ಖುಷಿಯೋ ಖುಷಿ .. ಆತ್ಮ ಸೇರಿದ್ದ ಸೀಸೆಯನ್ನ ಮಾಂತ್ರಿಕನ ಕಾಲಿನ ಪಕ್ಕದ ಮುಂದೆ ಒಂದೆಡೆ ಇರಿಸಿ, ಮೂರ್ಚೆ ಹೋಗಿದ್ದ ಆಕೆಯ ಪತಿಯನ್ನು ಪಕ್ಕಕ್ಕೆ ಮಲಗಿಸಿ ಆಕೆಯನ್ನು ಪೂಜಾ ಕುಂಡದ ಮುಂದೆ ಕೂರಿಸಿ ಅವಳ ಮೇಲೆ ರಕ್ತ, ಕುಂಕುಮ, ಅರಿಶಿನವನ್ನು ಚೆಲ್ಲಿದರು. ಆ ಸನ್ನಿವೇಶದಲ್ಲಿ ಆಕೆ ಪೂಜೆಗೆ ಬಲಿ ಕೊಡುವ ಕುರಿಯಂತೆ ಕಾಣುತ್ತಿದ್ದಳು. ಮುಂದುವರೆದ ಭಾಗ […]Read More

ಕೆಲಸಕ್ಕಾಗಿ ಕಗ್ಗತ್ತಲೆಯ ಖಂಡದತ್ತ-3

-ಮತ್ತೊಂದು ವೀಸಾ ಪ್ರಹಸನ- ಅಂತೂ ಇಂತೂ ಏಡನ್ ತಲಪಿದ್ದಾಗಿತ್ತು. ವಿಮಾನದ ಏಣಿ ಇಳಿದು ನಿಲ್ದಾಣದತ್ತ ನಡೆವ ಇತರ ಪ್ರಯಾಣಿಕರ ಜೊತೆಗೆ ನಾವೂ ಹೆಜ್ಜೆ ಇಟ್ಟೆವು. ಪ್ರಪ್ರಥಮವಾಗಿ ಹೊರದೇಶವೊಂದರ ನೆಲದ ಮೇಲೆ ದಂಪತಿ ಇಬ್ಬರೂ ಒಟ್ಟಾಗಿ ಹೆಜ್ಜೆ ಊರಿದ್ದು ನನಗೆ ಖುಷಿ ನೀಡಿತ್ತು. ಇವಳಿಗೆ? ಇಲ್ಲ ಅಂತ ಹೇಗೆ ಹೇಳಲಿ; ಗಂಡನೊಡನೆ ಪ್ರಯಾಣ ಮಾಡಿದ್ದಾದರೂ ಖಂಡಿತ ಖುಷಿಯಾಗಿರುತ್ತೆ. ಏಡನ್ನಿನ ವಿಮಾನ ನಿಲ್ದಾಣ ಅಂಥ ದೊಡ್ಡದೇನೂ ಆಗ ಆಗಿರಲಿಲ್ಲ. ನಮ್ಮ ಬೆಂಗಳೂರಿನದ್ದೇ ಸಾಮಾನ್ಯ ಅಂದ ಮೇಲೆ, ಏಡನ್ನಿನದ್ದು ಅತೀ ಸಾಮಾನ್ಯ. […]Read More

ಪರಾಭವ ಭಾವನಾ – 13 ಯತಿರಾಜ್ ವೀರಾಂಬುಧಿ

ಹಿಂದಿನ ಸಂಚಿಕೆಯಿಂದ…ಅಪ್ರಮೇಯ ವೈಜಾಗ್ ನಲ್ಲಿ ಎಂದಿನಂತೆ ಪ್ರವಚನ ಕೊಟ್ಟು ಭಗವದ್ಗೀತೆಯ ಸಾರವನ್ನು ನೆರೆದ ಜನಕ್ಕೆ ತಿಳಿಸಿ ಎಲ್ಲರೊಡನೆ ಭಜನೆ ಮಾಡ್ಡುತ್ತಿದ್ದ ಸಮಯದಲ್ಲಿ ಇಂಟರ್ಪೊಲೈನ ಏಜೆಂಟ್ “ಸ್ಯಾಮ್” ವಿಮಾನ ನಿಲ್ದಾಣಕ್ಕೆ ಬಂದಿಳಿದ್ದ. ಮುಂದೆ… -ಹದಿಮೂರು- ಅವರೀಗಾಗಲೇ ಎರಡೂವರೆ ಗಂಟೆಗಳ ಕಾಲ ಪ್ರಯಾಣ ಮಾಡಿದ್ದರು. ಅಪ್ಪುವಿಗೆ ಹಿಂದಿನ ರಾತ್ರಿಯ ನೆನಪಾಯಿತು. ಪುರಂದರದಾಸರ ಬಗೆಗಿನ ಪ್ರವಚನ ಮುಗಿಸಿ ಬಂದಾಗ ಅವನ ರೂಮಿನಲ್ಲಿ ಏನೋ ವ್ಯತ್ಯಾಸ ಕಂಡಿತ್ತು. ಅವನೇನೂ ಯಾರ ಮೇಲೂ ಅಪನಂಬಿಕೆ ಇಟ್ಟವನಲ್ಲ. ಆದರೆ ಅವನ ವಸ್ತುಗಳನ್ನು ಯಾರೋ ಕದಲಿಸಿದಂತೆ ಕಂಡಿತು. […]Read More

ಮುನಿಯಾ – ರಾಟವಾಳಗಳು

ಬೆಳಗಿನ ಆರು ಗಂಟೆಯ ಸಮಯದಲ್ಲಿ ಊರಿನ ತುಸುವೇ ಆಚೆ ಕುರುಚಲು ಪ್ರದೇಶಕ್ಕೆ ಬಂದರೆ, ಅಲ್ಲಿನ ಪೊದೆಯ ಭಾಗಗಳು ಕುಣಿಯುತ್ತಿರುವಂತೆ ಕಾಣುತ್ತದೆ. ಸೂಕ್ಷ್ಮವಾಗಿ ಗಮನಿಸಿದರೆ ತಿಳಿಯುತ್ತದೆ, ಅಲ್ಲಿ ಕುಣಿಯುತ್ತಿರುವಂತೆ ಕಾಣುತ್ತಿರುವುದು ನಮ್ಮ ಮುನಿಯ ಹಕ್ಕಿಗಳ  ಹಾರಾಟ ಎಂಬುದು.  ಇವುಗಳ ಹಾರಾಟ ಅಲೆಅಲೆಯಾಗಿದ್ದು, ವೇಗಭರಿತವಾಗಿದ್ದು ಸುರುಳಿಯಾಕಾರದಲ್ಲಿರುತ್ತದೆ. ಬೆಳಗಿನ ಹೊತ್ತು ಇವನ್ನು ನೋಡುವುದು ಒಂದು ಚೇತೋಹಾರಿ ಅನುಭವ. ಮುಖ್ಯವಾಗಿ ಕಾಳುಗಳನ್ನು ತಿನ್ನಲು ವಿಕಾಸವಾಗಿರುವ ಕೊಕ್ಕುಗಳಿರುವ ಹಕ್ಕಿಗಳದ್ದೇ ಒಂದು ಅಧ್ಯಾಯ, ವಿಕಾಶವಾದದಲ್ಲಿ. ಮುನಿಯ, ಫಿಂಚ್‍ಗಳು, ವ್ಯಾಕ್ಸ್‍ಬಿಲ್‍ ಇತ್ಯಾದಿ ಹಕ್ಕಿಗಳು ಕುತೂಹಲಕಾರಿ ಹಕ್ಕಿಗಳು.  ಅದರಲ್ಲಿಯೂ […]Read More

ನಮ್ಮ ಲಜ್ಜೆತನಗಳು

ಇಲ್ಲಿ ಎಲ್ಲರೂ ನಟ-ನಟಿಯರೇ..ಯಾರಿಗೂ ಅನುಮಾನ ಬರದಂತೆನಟನೆಯೇ ಹೆದರುವಂತೆಮನೋಜ್ಞವಾಗಿ ನಟಿಸುತ್ತೇವೆ ಪರದೆಯ ಒಳಗೂ, ಹೊರಗೂವ್ಯತ್ಯಾಸವಿಲ್ಲದಂತೆಸಭ್ಯಸ್ಥರಂತೆ ಕಣ್ಣು ಮುಚ್ಚಿಕೊಂಡುಯಾರ್ ಯಾರನ್ನೋ ನೆನೆಸಿಕೊಂಡುಕನಸಿನಲ್ಲಿಯೇ ಸ್ಖಲಿಸುತ್ತೇವೆಒದ್ದೆಯಾದ ನಂತರನಮ್ಮ ಮೇಲೆ ನಮಗೇ ಅಸಹ್ಯ ಹುಟ್ಟುತ್ತದೆ ಎಲ್ಲವೂಪ್ರಕೃತಿಯ ಸಹಜ ಕ್ರಿಯೆಗಳೇ ಸರಿಆದರೆ ವಿಕೃತ ಮನಸ್ಥಿತಿಗಳ ಕಥೆ ಹಾಗಲ್ಲಅವರಿಗೇನೋ ತುಡಿತಮತ್ತೇನನ್ನೋ ಪಡೆಯುವ ಹಂಬಲಎಲ್ಲದರ ಬಗ್ಗೆ ವಿಪರೀತ ಆಸೆಗಳುಎಲ್ಲರೊಟ್ಟಿಗೂ ಬೆರೆತುತಮ್ಮನ್ನು ತಾವು ಮರೆಯುವ ಹೆಬ್ಬಯಕೆ ಪರಿಚಿತರ ಜೊತೆನಂಬಿಕಸ್ಥರ ಜೊತೆಸ್ವಲ್ಪ ಹೆಚ್ಚೇ ಮಾತಡಬಹುದುಅದರಲ್ಲೇನೂ ತಪ್ಪಿಲ್ಲ ಬಿಡಿ!ಆದರೆ ವಿನಾಕಾರಣ ಚುಚ್ಚುತ್ತಾ..ಯಾರನ್ನೂ ಬಿಡದೆ ಹಿಂಬಾಲಿಸುತ್ತಾ..ಸಮಯ ಕಾಯ್ದು ಚಪಲ ಹಿಂಗಿಸಿಕೊಳ್ಳುವಮಹಾನುಭಾವಿಗಳು ನಮ್ಮೆಲ್ಲರಿಗೂ ಗೊತ್ತು! ಮೊದಲು […]Read More

ಪ್ರತ್ಯಗಾತ್ಮ ಚಿಂತನ (ನೇನಂಶಿ) – 11

ಕೂಸು ತಿನ್ನಲು ತಂದ ರೊಟ್ಟಿ ಕಾಗೆಯ ಪಾಲುಕಾಸಿಟ್ಟ ಹಾಲನ್ನು ಬೆಕ್ಕು ಕುಡಿದಿತ್ತು,ಲೇಸಾಯ್ತು ಆ ವಸ್ತು ನಿನ್ನದಲ್ಲವು ತಿಳಿಯೊಬೇಸರವು ಅದಕೇಕೆ- || ಪ್ರತ್ಯಗಾತ್ಮ || ಕಳೆ ಕಿತ್ತು ಹೊಲದ ಬೆಳೆ ಕಾಪಿಡುವ ರೈತನೋಲ್ಇಳೆಯ ಪಾಲಿಪ ರಾಜನಿರಬೇಕು ಜಗದಿ,ಕೊಲೆ ಸುಲಿಗೆ ಕಳ್ಳತನ ಮಾಳ್ಪವರ ಶಿಕ್ಷಿಸುತಸಲಹಿ ಕಾಪಿಡಬೇಕು- || ಪ್ರತ್ಯಗಾತ್ಮ || ಗುಡಿಸಿ ಸಾರಿಸಿ ಮತ್ತೆ ರಂಗವಲ್ಲಿಯನಿಟ್ಟುಸಡಗರದಿ ಬಾಗಿಲಿಗೆ ಕುಂಕುಮವನಿಟ್ಟುಮಡಿಯುಟ್ಟು ಶ್ರೀಮಾತೆ ತುಳಸಿ ಪೂಜೆಯ ಗೈವಮಡದಿಯೇ ಸದ್‍ಗೃಹಿಣಿ- || ಪ್ರತ್ಯಗಾತ್ಮ || ಇಂದೇನೊ ಮುಂದೇನೊ ಕಾಂಬರಾರಿಹರಿಲ್ಲಿ ?ಬಂದುದನು ಸಂತಸದಿ ಉಣ್ಣುತಿರಬೇಕು,ಮಂದಹಾಸವ ಬೀರಿ […]Read More

ಪರಾಭವ ಭಾವನಾ – 12 ಯತಿರಾಜ್ ವೀರಾಂಬುಧಿ

ಹಿಂದಿನ ಸಂಚಿಕೆಯಿಂದ…ಅಪ್ರಮೇಯ ಮತ್ತು ಶಿಷ್ಯರು ನಾಗ ಗಾಂಧಾರಿಯನ್ನು ಬಿಟ್ಟು ವಿಶಾಖಪಟ್ಟಣಕ್ಕೆ ತೆರಳಿದರು. ಎಂದಿನಂತೆ ಪ್ರವಚನ ಕೊಟ್ಟ ಅಪ್ರಮೇಯ ಪುರಂದರ ದಸರಾ ಕೀರ್ತನೆಗಳನ್ನು ಹೊಗಳಿ ಅದರ ಮಹಾತ್ಮೆಯನ್ನು ವಿವರಿಸಿದ. ಅಷ್ಟರಲ್ಲಿ ಕುಖ್ಯಾತ ವಿಗ್ರಹಗಳ ಕಳ್ಳಸಾಗಣೆದಾರ ಫಿಲಿಪ್ ಹೈದರಾಬಾದ್ ಗೆ ಬಂದಿಳಿದ. ಮುಂದೆ… -ಹನ್ನೆರಡು- ಹೊಟೇಲ್‌ ‘ದಸಪಲ್ಲಾ’ ಸಾಕಷ್ಟು ದೊಡ್ಡ ಹೊಟೇಲ್. ಸಂಜೆ ಎಂಟು ದಾಟಿತ್ತು ಅವರು ವೈಝಾಗ್‌ ಅಥವಾ ವಿಶಾಖಪಟ್ಟಣಂ ತಲುಪಿದಾಗ. ಬ್ರಿಟಿಷರು ನಮ್ಮ ದೇಶವನ್ನಾಳುತ್ತಿದ್ದ ಕಾಲದಲ್ಲಿ ವಿಶಾಖಪಟ್ಟಣಂ ಎಂದು ಹೇಳಲು ಅವರ ನಾಲಗೆ ಹೊರಳದಿದ್ದುದರಿಂದ ಬಹುಶಃ ವೈಝಾಗ್‌ […]Read More

ನರಕೋಟಕ – ನಾರ್ಕೋಟಿನ್

“ಧಮ್ ಮಾರೋ ಧಮ್ ಮಿಟಜಾಯೆ ಗಮ್, ಬೋಲೋ ಸುಬ್ ಶಾಮ್ ಹರೇ ಕೃಷ್ಣ ಹರೇ ರಾಮ್” ಹಿಂದಿ ಸಿನಿಮಾದ ಈ ಪ್ರಸಿದ್ಧ ಹಾಡು ಎಲ್ಲರಿಗೂ ಚಿರಪರಿಚಿತ ಅಲ್ವೆ. ಈ ಹಾಡು ನೆನಪಿಸೋದು “ನಾರ್ಕೋಟಿಕ್” ಅನ್ನೋ “ನರಕೋಟಕ” ಮಾದಕದ್ರವ್ಯವನ್ನ. ಯಾಕೆ ಅಂತೀರಾ ಅದನ್ನ ಸೇವನೆ ಮಾಡಿದವರಿಗೆ “ನಾರ್ಕೋಟಿನ್” ಅನ್ನೋ ಅಂಶ ಅವರಿಗೆ ಸ್ವರ್ಗದಲ್ಲಿ ತೇಲಿದ ಅನುಭವ ಕೊಡುತ್ತಂತೆ, ಹಾಗೆ ಅದರಿಂದ ಆರೋಗ್ಯದ ಮೇಲೆ ಆಗೋ ಅತಿ ಕೆಟ್ಟ ಪರಿಣಾಮ ಅದನ್ನ ತೆಗೆದುಕೊಂಡಿದ್ದವರ ನರನರಗಳಿಗೂ ನರಕದ ಮೂಲೆ ಮೂಲೆಯ “ನರಕೋಟಕ” […]Read More