ಪರಿತಪಿಸುವರು ಕೆಲರು ಹಲ್ಲು ಮಸೆವರು ಕೆಲರುಪರಿಪರಿಯುಪಾಯಗಳ ಚಿಂತಿಪರು ಕೆಲರುಸೆರೆಯವಧಿ ಮುಗಿದಂದು ಸೇಡು ತೀರಿಸಿಕೊಳುವಸೆರೆಯಾಳುಗಳು ಎನಿತೊ! || ಪ್ರತ್ಯಗಾತ್ಮ || ಉಂಡುಂಡು ತೇಗಿದರೆ ದಿಂಡುರುಳಿ ಮಲಗಿದರೆಉಂಡಾಡಿಯಂತಿರಲು ಬಂದ ಫಲವೇನು?ಭಂಡತನದಿಂ ಬಾಳ ನೂಕಿದರೆ ಬಂತೇನು?ದಂಡಿಸೆಲೊ ಕಾಯವನು- || ಪ್ರತ್ಯಗಾತ್ಮ || ಸಂಜೆ ಮುಂಜಾನೆಯೊಳು ನಿದ್ರಿಸುವ ಮನೆಗಳಲಿಗಂಜಿಗುಂ ಗತಿಯಿಲ್ಲದಾಗುವುದು ಸಹಜ,ಕಂಜದಳ ನೇತ್ರೆಯಾ ಲಕುಮಿ ನೆಲೆಸಳು ಅಲ್ಲಿಅಂಜಿ ಬಾಳಲೊ ನೀನು- || ಪ್ರತ್ಯಗಾತ್ಮ || ಅನ್ನದಗುಳಿನ ಮೇಲೆ ತಿನ್ನುವರ ಹೆಸರಿಹುದುಭಿನ್ನ ಭಾವನೆ ಬಿಟ್ಟು ಬಂದವಗೆ ಉಣಿಸು,ನಿನ್ನ ಭಾಗದ ತಿನಿಸು ಬೇರೊಬ್ಬನುಣ್ಣುವುದುನಿನ್ನ ನೆನಪಿಗೆ ಬರದೆ?- […]Read More
ಸೀತೆ ಕಾಯುತ್ತಾಳೆಅಶೋಕ ವನದಲ್ಲಿಬಂದರು ಬರಬಹುದುರಾಮಇಂದಲ್ಲ ನಾಳೆಸಾಗರವ ದಾಟಿಲಂಕೇಶನನ್ನು ನಿವಾರಿಸಿಕರೆದೊಯ್ಯಲುಬಹುದುಬೆಂಕಿಗೆ ಬಿದ್ದರುಎದ್ದು ಬರಲು ಬಹುದು ಸೀತೆಯರು ಕಾಯುತ್ತಾರೆಮಿಥಿಲೆಯಲ್ಲಿಆದರೆರಾಮರು ಬರುವುದಿಲ್ಲಸಂಪ್ರದಾಯಗಳ ದಾಟಿಶಿವಧನುವ ಮುರಿದುಹೂ ಮಾಲೆಗೆಗೋಣು ಚಾಚುವುದಿಲ್ಲಹಾಗೊಮ್ಮೆ ಬಂದರುಶಿವಧನುವನೆತ್ತಿಎದೆ ಏರಿಸುವುದುಬಲು ಕಷ್ಟ ಧನುಸ್ಸು ಮುರಿದರೂಬೆಂಕಿಗೆ ಬಿದ್ದುಎದ್ದು ಬರುವುದಸಾದ್ಯಹಾಗಾಗಿಮಿಥಿಲೆಯ ಸೀತೆಯರಿಗೆಮಾಂಗಲ್ಯ ಯೋಗಬಂಗಾರದ ಜಿಂಕೆಯ ಹಾಗೆಮರೀಚಿಕೆ ಡಿ. ಎನ್. ಸುರೇಶ್ಹವ್ಯಾಸಿ ಪತ್ರಕರ್ತರುRead More
ಪುದೀನ ಸಸ್ಯವು ಸಹಜವಾಗಿ ಎಲ್ಲೆಲ್ಲೂ ನೋಡಲ್ಪಡುವ ಗಿಡಮೂಲಿಕೆ. ಬರಿಯ ನೀರಿನಲ್ಲಿಯೂ ಸಹ ಬೆಳೆಯುವ ಸಾಮರ್ಥ್ಯ ಉಳ್ಳಂತಹ ಸಸ್ಯ. ದೀರ್ಘ ಕಾಲಿಕ ಮೂಲಿಕೆಯಾಗಿರುವ ಪುದೀನ ಸಸ್ಯವು ಅತ್ಯಂತ ಪರಿಮಳಯುಕ್ತ. ಮೆಂಥಾ ಆರ್ವೆನ್ಸಿಸ್ ಎಂಬ ವೈಜ್ಞಾನಿಕ ಹೆಸರುಳ್ಳ ಪುದೀನ ಸಸ್ಯವು ಲ್ಯಾಮಿನೇಸಿ ಕುಟುಂಬಕ್ಕೆ ಸೇರಿದ್ದು, ಸಮಶೀತೋಷ್ಣ ಪ್ರದೇಶಗಳಾದ ಏಷ್ಯಾ, ಸೈಬೀರಿಯಾ, ಉತ್ತರ ಅಮೇರಿಕಾ, ಯುರೋಪ್ ಖಂಡ ಹಾಗು ದೇಶಗಳಲ್ಲಿ ಕಂಡು ಬರುತ್ತದೆ. ಗಾಢ ಹಸುರಿನ ಬಣ್ಣದ ಎಲೆಯುಳ್ಳ ಈ ಗಿಡಮೂಲಿಕೆಯಲ್ಲಿ ಎಳೆಯ ನೇರಳೆ ಬಣ್ಣದ ಹೂಗಳು ಕಂಗೊಳಿಸುತ್ತವೆ. ಸಣ್ಣದೊಂದು ಸಸಿಯ […]Read More
ಭಾರತ ದೇಶ ತನ್ನದೇ ಆದ ಸಾಂಸ್ಕೃತಿಕ ಹಿರಿಮೆ ಗರಿಮೆಗಳಿಂದ ವಿಶ್ವಮನ್ನಣೆ ಪಡೆದಿದೆ. ಭಾರತಾಂಬೆಯ ಮಡಿಲಲ್ಲಿ ಜನಿಸಿದ ಅನೇಕ ಸತ್ಪುರುಷರ ಆದರ್ಶದ ಬದುಕು ನಮಗೆ ದಾರಿದೀಪ. ರಾಷ್ಟ್ರಪಿತಾ ಮಹಾತ್ಮಾ ಗಾಂಧೀಜಿಯವರಷ್ಟೇ ಎತ್ತರಕ್ಕೆ ನಿಲ್ಲಬಲ್ಲ ವ್ಯಕ್ತಿತ್ವ ಇವರದ್ದು. ಅವರ ಜನ್ಮ ಜಯಂತಿಯನ್ನು ಗಾಂಧೀಜಿಯವರ ಜಯಂತಿಯ ಜೊತೆಗೆ ಆಚರಿಸುತ್ತೇವೆ. ಅವರೇ “ಲಾಲ್ ಬಹದ್ಧೂರ್ ಶಾಸ್ತ್ರೀ”. ಒಬ್ಬ ವ್ಯಕ್ತಿ ಸತ್ತಾಗ ನಾವು ಅವರ ಬಳಿ ಒಡವೆ, ವಸ್ತ್ರ, ಆಸ್ತಿಪಾಸ್ತಿಗಳ ವಿವರಕ್ಕಾಗಿ ಹುಡುಕಾಡುತ್ತೇವೆ. ಆದರೆ ಭಾರತದ ಪ್ರಧಾನಿಯೊಬ್ಬರು ಸತ್ತಾಗ ಅವರ ಬಳಿ ಹುಡುಕಿದಾಗ ಜೇಬಿನಲ್ಲಿ […]Read More
ಮಹಾತ್ಮ ಗಾಂಧೀಜಿ ಅವರ ನೂರೈವತ್ತನೇ ಜನ್ಮದಿನದ ಪ್ರಯುಕ್ತ ಕನ್ನಡಪ್ರಭದ ಮಕ್ಕಳ ಪುಟಕ್ಕಾಗಿ ನಾ ಬರೆದ ಪುಟ್ಟ ಕತೆಯು ಮತ್ತೆ ಈಗ ನೆನಪಾಯ್ತು. ಇವತ್ತಿಗೆ ಇದು ಸಮಂಜಸವೆನಿಸಿತು! ಪುಟ್ಟಿ ಕಂಡ ಗಾಂಧಿ ಹೇಗಿದ್ದರು ಗೊತ್ತಾ? ‘ತಾತಾ, ನೀನು ಗಾಂಧಿ ತಾತನ್ನ ನೋಡಿದ್ದಾ? ಅವರೇ ಅಂತೇ ಬ್ರಿಟಿಷರನ್ನು ನಮ್ ದೇಶದಿಂದ ಹೊರಗೆ ಕಳಿಸಿದ್ದು! ಹೌದಾ ತಾತಾ? ಅವರನ್ನ ನೀನು ನೋಡಿದ್ದಾ?’ಎಂದು ಪುಟ್ಟಿ ತಾತನ್ನ ಕೇಳಿದಳು. ‘ಹ್ಞೂ ಮರೀ, ನೀನು ಹೇಳಿದ್ದು ಸರಿ. ನಾನು ಗಾಂಧೀಜಿ ಅವರನ್ನು ಒಂದೇ ಒಂದು ಸಾರಿ […]Read More
‘ಮಾಯೆ’ ಶ್ರೀಮತಿ ಆಶಾ ರಘು ರವರ ಹೊಸ ಕಾದಂಬರಿಯು ಇಂದು ‘ಗಾಂಧಿ ಸಾಹಿತ್ಯ ಸಂಘ’ (ಮಲ್ಲೇಶ್ವರಂ) ಸಬಾಂಗಣದಲ್ಲಿ ಲೋಕಾರ್ಪಣೆಯಾಯಿತು. ಸಾಹಿತ್ಯಲೋಕ ಪಬ್ಲಿಕೇಷನ್ಸ್ ಹಾಗು ಬುಕ್ ಬ್ರಹ್ಮ ಸಹಯೋಗದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಖ್ಯಾತ ಕಾದಂಬರಿಕಾರರಾದ ‘ಕೆ ಎನ್ ಗಣೇಶಯ್ಯ, ಲೇಖಕಿಯರ ಸಂಘದ ಅಧ್ಯಕ್ಷರಾದ ವನಮಾಲಾ ಸಂಪನ್ನಕುಮಾರ್, ಲೇಖಕರಾದ ಗಿರಿಜಾ ರೈಕ್ವ, ಕೃತಿಯ ಲೇಖಕರಾದ ಆಶಾ ರಘು ಹಾಗು ಪುಸ್ತಕ ಪ್ರಕಟಣೆ ಮಾಡಿದ ರಘುವೀರ್ ಸಮರ್ಥ್ ರವರು ಉಪಸ್ಥಿತರಿದ್ದರು. ‘ಮಾಯೆ’ ಕೃತಿಯನ್ನು ಬಿಡುಗಡೆ ಮಾಡಿದ “ಕೆ ಎನ್ ಗಣೇಶಯ್ಯ” ನವರು” […]Read More
ಶಿಕ್ಷಣ ರಂಗದಲ್ಲಿ ಯುವ ಪೀಳಿಗೆಗೆ ಪಾಠವನ್ನು ಮಾಡುತ್ತಾ ತಮ್ಮ ಬರಹಗಳಿಂದ ಸಾಹಿತ್ಯ ಸೇವೆ ಮಾಡುತ್ತಿರುವವರಲ್ಲಿ ಶಿಕ್ಷಕರು ಹಾಗು ಹಿರಿಯ ಲೇಖಕರು ಆದ ಪರಮೇಶ್ವರಪ್ಪ ಕುದರಿ ಯವರು ಕೂಡ ಒಬ್ಬರು. ಧಾರವಾಡ ತಾಲೂಕಿನ ಹೆಬ್ಬಳ್ಳಿಯವರಾದ ಶ್ರೀ ಪರಮೇಶ್ವರಪ್ಪ ಕುದರಿ ಯವರು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ರಾಮಜೋಗಿಹಳ್ಳಿಯ ಸರಕಾರಿ ಪ್ರೌಢ ಶಾಲೆಯಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಾ ಜೊತೆಗೆ ಹಲವಾರು ವರ್ಷಗಳಿಂದ ಸಾಹಿತ್ಯ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಸಾಹಿತ್ಯ ಸೇವೆಗಾಗಿ “ಇಂಡಿಯನ್ ಎಂಪಾಯರ್” ಯುನಿವರ್ಸಿಟಿ, ತಮಿಳುನಾಡು ವತಿಯಿಂದ ಅಕ್ಟೋಬರ್ ೨ […]Read More
ಇಂದಿಗೆ ಸರಿಯಾಗಿ ಒಂದು ತಿಂಗಳ ಹಿಂದೆ ನಡೆದ ಘಟನೆ ಅಂದು ನನ್ನ ಯಜಮಾನರು ಮುಂಜಾನೆಯಿಂದ ತುಂಬಾ ಸಂತೋಷದಲ್ಲಿದ್ದರು.. ಆದರೆ ರಾತ್ರಿಯ ಆ ಘಟನೆ ಇನ್ನಿಲ್ಲದಂತೆ ಕಾಡುತ್ತಿದೆ ಇಂದಿಗೂ.. ಅಷ್ಟಕ್ಕೂ ಆ ರಾತ್ರಿ ನಡೆದದ್ದಾದರೂ ಏನು ? ಎಲ್ಲ ವಿವರಿಸುವೆ ಅದಕ್ಕೂ ಮುಂಚೆ ನನ್ನ ಸಣ್ಣ ಪರಿಚಯ ನಿಮಗಾಗಲಿ.. ನನ್ನ ಹೆಸರು ಗೀತ (ಹೆಸರು ಬದಲಿಸಿದೆ) ನನ್ನ ಗಂಡ ಅತ್ತೆ ಒಂದು ವರುಷದ ಮಗು ಚಿಕ್ಕ ಬಾಡಿಗೆ ಮನೆಯಲ್ಲಿ ವಾಸ.. ನನ್ನ ಮನೆಯವರು ಪ್ರೈವೇಟ್ ಕಂಪನಿಯಲ್ಲಿ ಸಾಮಾನ್ಯ ಉದ್ಯೋಗಿ. […]Read More
“…ಸಾವಿಗೆ ಆತುರ! ಹದ್ದಿನಂತೆ ಬಂದು ಹಾರಿಸಿಕೊಂಡು ಹೋಯಿತು!” ಎಂಬುದು ನಮ್ಮ ಸಾಹಿತ್ಯದಲ್ಲಿ ಆಗಾಗ್ಗೆ ಕಂಡುಬರುತ್ತದೆ. ಹದ್ದು ಅಂತಹ ಶುಭದ ಸಂಕೇತವೇನೂ ಅಲ್ಲ. ಆದರೆ, ವಿಜ್ಞಾನದ-ಪರಿಸರದ ದೃಷ್ಟಿಯಿಂದ ಯಾವುದೂ ಮೇಲಲ್ಲ, ಕೀಳಲ್ಲ. ಎಲ್ಲಕ್ಕೂ ಅದರದೇ ಆದ, ಯುಕ್ತವಾದ ಸ್ಥಾನವಿರುತ್ತದೆ. ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಸಾವಿರ ಸಾವಿರ ಅಥವಾ ಲಕ್ಷದ ಸಂಖ್ಯೆಯಲ್ಲಿ ಕಂಡುಬರುವ ಹಕ್ಕಿ ಹದ್ದು! ಆದರೆ, ಇದರ ಸಂಖ್ಯೆಯೂ ಕಡಿಮೆಯಾಗುತ್ತಿದೆ ಎಂಬ ಆತಂಕಕಾರಿ ಸುದ್ದಿ ಬರುತ್ತಿದೆ. ಇರಲಿ, ಹದ್ದು ನಮ್ಮ ಬಹು ಸಾಮಾನ್ಯವಾದ ಮಧ್ಯಮಗಾತ್ರದ ಹಕ್ಕಿ. ಮಾಸಲು ಕಂದು […]Read More
ಕನ್ನಡ ಚಿತ್ರರಂಗದ ಕಿರೀಟದ ಅಮೂಲ್ಯ ರತ್ನ ಪುಟ್ಟಣ್ಣ ಕಣಗಾಲ್ 1967 ರಲ್ಲಿ ತ್ರಿವೇಣಿಯವರ ಜನಪ್ರಿಯ ಕಾದಂಬರಿಯಾದ ‘ಬೆಳ್ಳಿ ಮೋಡ’ ಚಲನಚಿತ್ರದಿಂದ ನಿರ್ದೇಶಕರಾಗಿ ಪರಿಚಯವಾದರು ಎಂಬುದು ಎಲ್ಲರಿಗು ತಿಳಿದ ಸಂಗತಿ. ಆದರೆ ಅಸಲಿಗೆ ‘ಬೆಳ್ಳಿ ಮೋಡ’ ಅವರ ಪ್ರಥಮ ನಿರ್ದೇಶನದ ಚಿತ್ರವಲ್ಲ. ಅದಕ್ಕೂ ಮೊದಲು ಪುಟ್ಟಣ್ಣನವರು ಮಲಯಾಳಂ ನಲ್ಲಿ ಐದು ಮತ್ತು ತೆಲುಗಿನಲ್ಲಿ ಒಂದು ಒಟ್ಟು ಆರು ಚಿತ್ರಗಳನ್ನು ನಿರ್ದೇಶಿಸಿದ್ದರು. ಮಲಯಾಳಂ1 . ಸ್ಕೂಲ್ ಮಾಸ್ಟರ್ ಕನ್ನಡದ ಕ್ಲಾಸಿಕ್ ಹಿಟ್ ಚಿತ್ರದ ಅವತರಿಣಿಕೆ – 19652 . ಕಳಿಂಜು […]Read More