ಪ್ರತ್ಯಗಾತ್ಮ ಚಿಂತನ (ನೇನಂಶಿ) – 9

ಕರುಣಾಳು ನೀನಾಗು ಪರಿವಾರದವರಲ್ಲಿಪರಿಹಾರ ಕಂಡು ಹಿಡಿ ತೊಡಕುಗಳು ಬರಲು,ಅರಿಯು ಎದುರಾಗಿರಲು ಕರವಾಳ ನೀನಾಗುಅರಿ ಭಯಂಕರನಾಗು- || ಪ್ರತ್ಯಗಾತ್ಮ || ಹೊಟ್ಟಿರದ ಬೀಜವನು ಬಿತ್ತಿದರೆ ಮೊಳೆಯುವುದೆ?ಹೊಟ್ಟು ನಿಃಸತ್ವವೆಂಬ ನುಡಿ ಸಲ್ಲ,ಸೃಷ್ಟಿಯೊಳಗಾವುದೂ ನಿಷ್ಪ್ರಯೋಜಕವಲ್ಲಹೊಟ್ಟು ರಕ್ಷಾ ಕವಚ- || ಪ್ರತ್ಯಗಾತ್ಮ || ಓದು ಬೇಕೇ ಬೇಕು ವಿಷಯ ಸಂಗ್ರಹಣಕ್ಕೆಓದು ಮುಗಿವುದು ಎಂದು? ಅದಕೆ ಕೊನೆಯುಂಟೆ?ಓದು, ಓದಿನ ಮೇಲೆ ಓದು, ಹೀಗಾಗಿರಲುಓದು ಬರಹಕೆ ಶತ್ರು- || ಪ್ರತ್ಯಗಾತ್ಮ || ಕತ್ತೆ ಎರಡರ ನಡುವೆ, ಹುತ್ತವೆರಡರ ನಡುವೆಮತ್ತೆ ಹೊಡೆದಾಡುವರ ನಡುವೆ ಹೋಗದಿರು,ಕತ್ತು ಬಗ್ಗಿಸಿಕೊಂಡು ಮುಂದೆ […]Read More

ಕುರಿ-ಮೇಕೆಗಳ ಹಾಡಲ್ಲದ ಪಾಡು!

ಎಲ್ಲೋ ಹುಟ್ಟಿದೆವು…ಇನ್ನೆಲ್ಲೋ ಮೇಯಿದೆವು…ಮತ್ತೆಲ್ಲೋ ಬೆಳೆದೆವು… ಹೀಗಿದ್ದ ನಮ್ಮನ್ನ, ನಮ್ಮ ಬಂಧು-ಬಂದವರನ್ನೆಲ್ಲಾ ..ಹಿಡಿ ಹಿಡಿದು ಲಾರಿಗೆ ತುಂಬಿಸಿಟಿಗೆ ತಂದರು… ಒಂದೆಡೆ ದೂಡಿ…ನಮ್ಮ ಬೆನ್ನ ಮೇಲೆಲ್ಲಬಣ್ಣ ಬಣ್ಣದ ಪುಡಿಯ ಹಾಕಿಮೋಡಿಯ ಮಾಡಿ…ಎಂದೂ ಇಲ್ಲದ..ಹಸಿ ಹಸಿಯ ಹುಲ್ಲ ಹಾಕಿಬೆನ್ನ ಚಪ್ಪರಿಸಿ…ಬಂದ ಬಂದವರಿಗೆಲ್ಲನಮ್ಮ ಪುಷ್ಠಿಯ ಪರಿಚಯಿಸಿ..ಮಾರಾಟ ಮಾಡುವರಲ್ಲ… ಕೊಂಡವರು ನಮ್ಮ ಕೊಂಡಾಡಿ…ಎತ್ತಾಡಿ… ಮುದ್ದಾಡಿ… ಆನಂತರ… ಕತ್ತಿಯಲ್ಲಿ ಕತ್ತ ಕತ್ತರಿಸಿ…ತುತ್ತು ಅನ್ನದಿ ಬೆರೆಸಿತಿಂದು ಮುಗಿಸುವರಲ್ಲ! ನಾವು ಕೆಲರು ‘ದುರ್ಬಲರು…ನರಪೇತಲರು… ಮಾರಾಟವಾಗಲೇ ಇಲ್ಲ!’ಎಂದೆಲ್ಲ ಹರ್ಷಿಸುತ್ತಿರೆ…ಬಡಿಯಿತು ಬರ ಸಿಡಿಲುಮನಕೆ ಮನದಾಳಕೆ… ನಿನ್ನೆಯಷ್ಟೇ ಮಾರಾಟವಾಗಿದ್ದ..ನಮ್ಮ ಅಣ್ಣ, ಅಮ್ಮ, ಅಪ್ಪ, […]Read More

ಮಾಯೆ – ಕಾದಂಬರಿ ಆಶಾ ರಘು

ಕಾದಂಬರಿ : ಮಾಯೆಲೇಖಕಿ : ಆಶಾ ರಘುಪ್ರಕಟಣೆ : ಸಾಹಿತ್ಯಲೋಕ ಪಬ್ಲಿಕೇಷನ್ಸ್ಬೆಲೆ : 250/- “ಆವರ್ತ” ಕಾದಂಬರಿಯ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಐತಿಹಾಸಿಕ ಕಲ್ಪನೆಯ ಕೃತಿಗಳ ಮರು ಹುಟ್ಟನ್ನು ಕೊಟ್ಟ ಲೇಖಕಿ ಶ್ರೀಮತಿ “ಆಶಾ ರಘು” ರವರು ಮತ್ತೊಮ್ಮೆ ತಮ್ಮ ಕನಸಿನ ಕೃತಿಯಾದ “ಮಾಯೆ” ಎಂಬ ಕಾದಂಬರಿಯನ್ನು ರಚಿಸಿದ್ದಾರೆ. ಕೃತಿಯು ಅಕ್ಟೋಬರ್ 2 ರಂದು ಬೆಂಗಳೂರಿನ ಗಾಂಧೀ ಸಾಹಿತ್ಯ ಸಂಘ ಸಭಾಂಗಣದಲ್ಲಿ (ಮಲ್ಲೇಶ್ವರಂ) ಲೋಕಾರ್ಪಣೆಯಾಗಲಿದೆ. ಕೃತಿಯನ್ನು ಖ್ಯಾತ ಜನಪ್ರಿಯ ಲೇಖಕರಾದ ಶ್ರೀ “ಗಣೇಶಯ್ಯ” ನವರು ಬಿಡುಗಡೆ […]Read More

ಕ್ಷಮಿಸಿ ಬಿಡು‌…ಹೆಣ್ಣೇ

ಹೆಣ್ಣು ಎಂಬುದು ಭೋಗದ ವಸ್ತುವಲ್ಲ. ಹೆಣ್ಣನ್ನು ಶಕ್ತಿ ದೇವತೆಯಾಗಿ ಆರಾಧಿಸುತ್ತಿದ್ದ ಕಾಲವೊಂದಿತ್ತು. ಇಂದು ಸಮಾಜದಲ್ಲಿ ಆಗುವಂತಹ ಅತ್ಯಾಚಾರ ಎಂಬ ಮಾಹಾರೋಗದಿಂದ ಹೆಣ್ಣುಮಕ್ಕಳನ್ನು ಕಾಪಾಡಬೇಕಾದ ಅನಿವಾರ್ಯತೆ ಬಂದೊದಗಿದೆ.ಕಾಲ ಬದಲಾಯಿತೋ ಅಥವಾ ಜನಗಳು ಬದಲಾದರೋ ಎಂಬುದು ತಿಳಿಯದಂತಾಗಿದೆ. ಗಾಂಧೀಜಿ ಕಂಡ ಕನಸು‌ ಮರೀಚಿಕೆಯಾಗುತ್ತಿದೆ. ಯಾವ ಧೈರ್ಯದ ಮೇಲೆ‌ ಒಂದು ಹೆಣ್ಣು ಮಗಳು ಅರ್ಧ ರಾತ್ರಿಯಲ್ಲಿ ಒಬ್ಬಳೇ ಹೋಗಲು ಸಾಧ್ಯ. ಹಗಲು ಹೊತ್ತಿನಲ್ಲಿಯೇ ಹೆಣ್ಣುಮಕ್ಕಳು ಓಡಾಡದಂತಹ ಪರಿಸ್ಥಿತಿ ಬಂದಾಗಿದೆ. ಹೆಚ್ಚಿನ ಯುವಜನತೆ ಮಾದಕ ವಸ್ತುಗಳ ದಾಸರಾಗಿ ಹಾಗೂ ಕೆಲ ಪ್ರೇರಿತ ಜಾಲತಾಣಗಳ […]Read More

ಹನಿಗವನ – ರಾಘವೇಂದ್ರ ಬಟಗೇರಿ

ಅಮಾವಾಸ್ಯೆಯ ಬೆಳದಿಂಗಳು ನೋಡಲು ತುಂಬಾ ಅಂದಹಾಲು ಹುಣ್ಣಿಮೆಯ ಚಂದಿರನಿಜ, ಹಾಗಂತ ಅವನ ಪೂಜೆಗೆಂದುಅಮಾವಾಸ್ಯೆಯ ದಿನ ಬಂದಿರ ಬದಲಾವಣೆ ಮದುವೆಗೆ ಮುನ್ನ ನಿಮ್ಮ ಲೈಫಿಗೆನೀವೇ ಆಡಳಿತ ಪಕ್ಷದ ನಾಯಕಮದುವೆಯಾದರೆ ಅದೇ ಲೈಫಲಿನಿಮದೆ ವಿರೋಧ ಪಕ್ಷದ ಕಾಯಕ ಮೇಕಪ್ ಅಡುಗೆ ಪ್ರಿಯೆಯ ಅಂದದ ಮೊಗಕೆಮನಸು ಮುತ್ತಿಟ್ಟಿತ್ತುಅವಳ ಅಡುಗೆ ತಿನ್ನುತಮೊಗವು ಕಪ್ಪಿಟ್ಟಿತ್ತು ಸಂತೈಕೆ ಕೇಳುವುದು ಹೆಂಡತಿಯ ಕೋರಿಕೆಪ್ರಿಯ ಹಬ್ಬಕೆ ಕೊಡಿಸುವೆಯಾ ಚಿನ್ನಹೇಳುವುದು ಗಂಡನ ವಾಡಿಕೆಪ್ರಿಯೆ ಅದ ತೊಡದ ನೀ ನೋಡಲು ತುಂಬಾ ಚೆನ್ನ ರಾಘವೇಂದ್ರ ಗೌಡ್ ಬಟಗೇರಿRead More

ಪರಾಭವ ಭಾವನಾ – 10 ಯತಿರಾಜ್ ವೀರಾಂಬುಧಿ

ಹಿಂದಿನ ಸಂಚಿಕೆಯಿಂದ…ಹೈದರಾಬಾದಿಗೆ ಪ್ರಯಾಣಿಸಿದ ಅಪ್ರಮೇಯ ಎಂದಿನಂತೆ ಪ್ರವಚನ ಕೊಡುತ್ತ ಅಲ್ಲಿ ನೆರೆದಿದ್ದ ಜನತೆಗೆ “ಅನ್ನಮಾಚಾರ್ಯ” ರ ಬಗ್ಗೆ ಹಾಗು ಕನಕದಾಸರ ವೆಂಕಟೇಶ್ವರ ಸ್ವಾಮಿಯ ಮೇಲಿನ ಭಕ್ತಿಯ ಬಗ್ಗೆ ಬಹಳ ಸುಂದರವಾಗಿ ನಿರೂಪಿಸಿದ. ಅಷ್ಟರಲ್ಲಿ ಅವನಿಗೆ ವಿಶಾಖಪಟ್ಟಣಂ ನಲ್ಲಿ ಪ್ರವಚನಕ್ಕೆ ಆಹ್ವಾನ ಬಂದಿತು. ಅಪ್ರಮೇಯನ ಮನದಲ್ಲಿ ಯಾಕೋ ಈ ವಿಗ್ರಹದ ದೆಸೆಯಿಂದ ಅಕಾಲ ಮೃತ್ಯುವಿಗೆ ಈಡಾಗಬಹುದು ಎನಿಸಿತು. ಮುಂದೆ… -ಹತ್ತು- ನಾಯಕ್‌ ತಲೆಯ ಮೇಲೆ ಕೈಹೊತ್ತು ಕುಳಿತಿದ್ದ. ಅವನ  ಮಾದಕ ವಸ್ತುಗಳಿದ್ದ ದೊಡ್ಡ ಕನ್‌ಸೈನ್‌ಮೆಂಟನ್ನು ನಾರ್ಕೋಟಿಕ್ಸ್‌ ಸ್ಕ್ವಾಡ್‌ನವರು ಇಂದು […]Read More

ಪ್ರಾಜೆಕ್ಟ್ ನಗ್ನ – ಟೀಮ್ ಅಂತರಂಗ ದಿಂದ ನಾಟಕ

ಅಂತರಂಗ ತಂಡ ಕ್ರಿಯಾಶೀಲ ರಂಗಕ್ರಿಯೆಯನ್ನು ನಡೆಸಿಕೊಂಡು ಬಂದು ತನ್ನದೇ ಆದ ಛಾಪನ್ನು ಹವ್ಯಾಸಿ ರಂಗಭೂಮಿಯಲ್ಲಿ ಮೂಡಿಸಿದೆ. ಈ 40 ವರ್ಷಗಳ ರಂಗಭೂಮಿಯ ಅನುಭವದಲ್ಲಿ 42 ರಂಗ ನಾಟಕಗಳು ಹಾಗೂ 8 ಬೀದಿ ನಾಟಕಗಳು ಮೂಡಿಬಂದಿದೆ. ಯಾವುದೇ ಸಮಯದಲ್ಲಿ ನಿಷ್ಕ್ರಿಯತೆಯತ್ತ ವಾಲದೆ ಇಷ್ಟು ದೀರ್ಘಕಾಲ ರಂಗಭೂಮಿಯಲ್ಲಿ ಸಕ್ರಿಯವಾಗಿರುವುದು ಒಂದು ಸಾಧನೆಯೇ ಸರಿ. ಈ ತಂಡದ ಪ್ರತಿಯೊಬ್ಬ ಸದಸ್ಯರ ಸಹಕಾರ, ಈ ಸಾಧನೆಗೆ ಕಾರಣ. ಅಂತರಂಗ ತಂಡದ ನಾಟಕಗಳು ಕರ್ನಾಟಕವಲ್ಲದೇ, ದೇಶಾದ್ಯಂತ ಪ್ರದರ್ಶನಗೊಂಡು ಪ್ರೇಕ್ಷಕರ ಮತ್ತು ಪತ್ರಿಕೆಗಳ ಪ್ರಶಂಸೆ ಗಳಿಸಿವೆ. […]Read More

ಒಂಟಿಮನೆ-4

ಇಲ್ಲಿಯವರೆಗೆ ಒಂಟಿ ಮನೆಯನ್ನು ಖರೀದಿಸಿದ ದಂಪತಿಗಳಿಗೆ ಮನೆಯಲ್ಲಿನ ವಿಕೃತ ಅನುಭವಗಳು ಬೆಚ್ಚಿಬೀಳಿಸಿ ಮನೆಯಲ್ಲಿ ಸಿಕ್ಕ ತಾಮ್ರ ಹಾಳೆಯಲ್ಲಿ ಬರೆದಿರುವಂತೆ ಆತ್ಮ ಕಥೆಯನ್ನು ಹೇಳತೊಡಗುತ್ತದೆ. ದಂಪತಿಗಳು ಕಥೆಯ ಪಾತ್ರಗಳಾಗಿ ನೋಡುತ್ತಿರುವಂತೆ ಒಬ್ಬ ಮಾಂತ್ರಿಕನ ಎದುರು ಒಂದು ಹೆಣ್ಣು ಆತ್ಮ ಗೋಚರಿಸಿ ಆತನು ಕೈಯಿಂದ ಹರಿದ ರಕ್ತದ ಕಣಗಳಿಗೆ ಹಪಹಪಿಸುತ್ತಿರುವಾಗಲೇ ಮಾಂತ್ರಿಕನ ಆಜ್ಞೆಯಂತೆ ಸಹಚರರು ಆ ಹೆಣ್ಣಿನ ರೂಪದಲ್ಲಿರುವ ಆತ್ಮವನ್ನು ಹಿಡಿದು ಕಟ್ಟಿಹಾಕಿ ಸಮಾಧಿಯ ಒಳಗೆ ಎಸೆಯಲು ಸೂಚಿಸಿತ್ತಾನೆ. ಮುಂದೆ…. ಮಾಂತ್ರಿಕನ ಮಾತು ಕೇಳುತ್ತಿದ್ದಂತೆ ಆಕೆಯನ್ನು ಹಿಡಿಯಲು ಸಹಚರರು ಒಂದು […]Read More

ಗರುಡ – Bramhiny Kite

ಗರುಡ ಎಂದ ಕೂಡಲೆ ನಮ್ಮಲ್ಲಿ ಅನೇಕರಿಗೆ ಹಿರಿಯರು ಆಕಾಶದಲ್ಲಿ ಗರುಡ ಕಂಡ ಕೂಡಲೆ ಕೈಗಳ ಬೆರಳುಗಳನ್ನು ವಿಶಿಷ್ಟವಾಗಿ ಒಳಸೇರಿಸಿಕೊಂಡು ಕೈಮುಗಿಯುವ ದೃಶ್ಯ ಕಣ್ಣಮುಂದೆ ಬರಬಹುದು. ಇದು ನಮ್ಮ ಸಂಸ್ಕೃತಿಯಲ್ಲಿ ಹೇಗೆ ಬೆಸೆದಿಕೊಂಡಿದೆ ಎಂಬುದರ ದ್ಯೋತಕವಿದು. ಇದಕ್ಕೂ ಗರುಡಪುರಾಣ ಎಂಬ ಗ್ರಂಥಕ್ಕೂ ಸಂಬಂಧವಿಲ್ಲ. ವಿಷ್ಣುವಿನ ವಾಹನವೆಂಬ ನಂಬಿಕೆ ಆಳವಾಗಿ ಬೇರೂರಿದೆ. ಇದನ್ನು ಕಾಣುವುದು ವಿಷ್ಣುವನ್ನು ಕಂಡಷ್ಟೇ ಪುಣ್ಯವೆಂಬ ನಂಬಿಕೆಯೂ ಇದೆ. ಇಂತಹ ಧಾರ್ಮಿಕ ನಂಬಿಕೆಗಳು ಭಾರತದಲ್ಲಿ ಮಾತ್ರವಲ್ಲ ಈ ಹಕ್ಕಿ ಕಂಡುಬರುವ ಏಷ್ಯಾದ ರಾಷ್ಟ್ರಗಳಲ್ಲೆಲ್ಲಾ ಕಂಡುಬರುತ್ತದೆ. ಆಕಾಶದಲ್ಲಿ ಎತ್ತರದಲ್ಲಿ […]Read More

ಡೈನಾಮಿಕ್ ದೇವರಾಜ್ – 60ನೇ ಹುಟ್ಟು ಹಬ್ಬ

ಒಬ್ಬ ವ್ಯಕ್ತಿ ನಿಜವಾಗಿ ನಾಯಕನಾಗಬೇಕೆಂದರೆ 7 ಅಡಿ ಎತ್ತರ ಇರಬೇಕು,ಚಾಕ್ಲೇಟ್ ಸ್ಕಿನ್ ಹೊಂದಿರಬೇಕು, ಹತ್ತಾರು ಸಂಘ-ಸಂಸ್ಥೆಗಳಿರಬೇಕು, ಎನ್ನುವಂತಹ ರೂಲ್ಸ್ ಏನಿಲ್ಲಾ. ಒಬ್ಬ ನಾಯಕನಲ್ಲಿ ‘ಮುಖ ಲಕ್ಷಣಗಳಿಗಿಂತ ಗುಣ ಲಕ್ಷಣಗಳೆ ಮುಖ್ಯವಾಗಿರುತ್ತದೆ’. ನಾಯಕನೆಂದರೆ ಸಾಮಾನ್ಯ ವ್ಯಕ್ತಿಯಾಗಿದ್ದರು ಸಾಮಾಜಿಕ ಮೌಲ್ಯಗಳನ್ನು, ರಾಜಕೀಯ ದೌರ್ಬಲ್ಯಗಳನ್ನು ಜನಗಳಿಗೆ ತೋರಿಸಿ, ಉತ್ತಮ ಸಮಾಜ ನಿರ್ಮಿಸುವಂತಹ ಧೈರ್ಯ, ಸಾಹಸ ಹೊಂದಿರುವಂತಹವರು ನಿಜವಾದ ಹೀರೊಗಳೆ. ಇಂತಹ ಪಾತ್ರಗಳ ಮೂಲಕವೆ ಜನ-ಮನ ಮುಟ್ಟಿದಂತಹ ನಾಯಕನಟರು ನಮ್ಮ ಕನ್ನಡ ಚಿತ್ರರಂಗದ ಅಭಿಜಾತ ನಟರಾದಂತಹ ‘ಡೈನಾಮಿಕ್ ಸ್ಟಾರ್’ ದೇವರಾಜ್ ರವರು. ಸೆಪ್ಟಂಬರ್ […]Read More