ಕಳ್ಳಹಕ್ಕಿ! – Treepie

ನಮ್ಮಲ್ಲಿ ಹಕ್ಕಿಗಳಿಗೆ ಹೆಸರಿಡುವಾಗ ಎಷ್ಟು ಯೋಚಿಸಿರುತ್ತಾರೆ ನಮ್ಮ ಜನರು/ಜನಪದರು ಎಂಬುದು ಆ ಗೌರವ ತರುವ ವಿಷಯ. ಮಟಪಕ್ಷಿ ಎಂದೂ ಕರೆಯಲಾಗುವ ಈ ಕಳ್ಳಹಕ್ಕಿಗಳ ಇಂಗ್ಲಿಷ್ ಹೆಸರು ಟ್ರೀ ಪೈ ಎಂದು. ಇದು ಇತರ ಹಕ್ಕಿಗಳ ಮೊಟ್ಟೆ, ಮರಿಗಳನ್ನು ಕದ್ದು ತಿನ್ನುತ್ತದೆಯಾದ್ದರಿಂದ ಇದು ಕಳ್ಳಹಕ್ಕಿ. ಕರ್ನಾಟಕದಲ್ಲಿ ಎರಡು ಬಗೆಯ ಕಳ್ಳಹಕ್ಕಿಗಳು ಕಂಡುಬರುತ್ತವೆ. ಒಂದು ಕೆಂಗಂದು ಕಳ್ಳಹಕ್ಕಿ (Rufous Treepie Dendrocitta vagabunda) ಉದ್ದಬಾಲದ (ಸುಮಾರು ಮುವ್ವತ್ತು ಸೆಂಟಿಮೀಟರ್‍) ಚಿಕ್ಕ, ಆದರೆ ಗಟ್ಟಿಯಾದ ಕೊಕ್ಕನ್ನು ಹೊಂದಿರುವ ಹಕ್ಕಿ. ಬೂದು, ತೆಳುಹಳದಿ/ಕೆಂಗಂದು ವಿಶ್ರಿತ […]Read More

ದಸರಾ ವೈಭವ

ಇಡೀ ಜಗತ್ತಿನಲ್ಲೇ ನಮ್ಮ ಭಾರತ ದೇಶವು ಸಂಸ್ಕೃತಿಗೆ ಹೆಸರುವಾಸಿಯಾದದ್ದು. ನಮ್ಮ ಭಾರತದಲ್ಲಿ ಆಚರಿಸುವಸ್ಟು ಹಬ್ಬಗಳು ಇನ್ನೆಲ್ಲೂ ಆಚರಿಸಲ್ಪಡುವುದಿಲ್ಲ. ತಲೆಮಾರುಗಳಿಂದ ಸಂಪ್ರದಾಯಗಳು ನಮ್ಮ ಹಬ್ಬಗಳನ್ನು ಮೆರಗು ತರಿಸುತ್ತ ಬಂದಿವೆ. ಹಬ್ಬಗಳು ಎಂದರೆ ಎಲ್ಲೆಡೆ ಸಂಭ್ರಮ, ತೋರಣ, ಹೊಸ ಉಡುಗೆಗಳು, ಪೂಜೆ, ಜಾತ್ರೆ, ಅಬ್ಬಾ ಆಚರಣೆಗೆ ಮಿತಿಯೇ ಇಲ್ಲ. ನಮ್ಮ ಸಂಸ್ಕೃತಿಯ ನಾಡಿನ ಎಲ್ಲೆಡೆ ಆಚರಿಸುವ ದಸರಾ ಹಬ್ಬಗಳಲ್ಲಿ ಇನ್ನಷ್ಟು ವಿಜೃಂಬಿಸುವುದು. ನಮ್ಮ ಕರ್ನಾಟಕದಲ್ಲಿ ಆಚರಿಸುವ ದಸರಾ ಹಬ್ಬದ ಆಚರಣೆ ಎಲರಿಗೂ ತಿಳಿದುದ್ದೆ. ದೇಶದ ಪ್ರಮುಖ ನಗರಗಳಲ್ಲಿನ ದಸರಾ ಆಚರಣೆಯ […]Read More

ಲೋಳೆ ಸರದ ಸದ್ಬಳಿಕೆ

ಸಸ್ಯರಾಶಿಯಲ್ಲಿ ಬಹಳ ವಿಶಿಷ್ಟ ಎನಿಸುವ ಅಲೋವೆರಾ ಎಂದು ಕರೆಯುವ ಲೋಳೆ ಸರವನ್ನು ಬಹಳಷ್ಟು ಮನೆಯ ಕುಂಡಗಳಲ್ಲಿ ಬೆಳೆಯುವುದನ್ನು ಕಾಣಬಹುದಾಗಿದೆ. ‘ಆಸ್ಫಾಡೆಲೆಸಿಯಾ’ ಎಂಬ ಸಸ್ಯ ಕುಟುಂಬಕ್ಕೆ ಸೇರಿದ ಇದು ದಕ್ಷಿಣ ಆಫ್ರಿಕಾ ದೇಶ ದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ತನ್ನ ಹೆಸರಿಗೆ ತಕ್ಕಂತೆ ಈ ಸಸ್ಯವು ರಸಭರಿತವಾಗಿದ್ದು ಅದರೊಳಗೆ ಅಂತೂ ಲೋಳೆ ತುಂಬಿರುತ್ತದೆ. ಎಲ್ಲಾ ಸಸ್ಯ ಮೂಲಿಕೆಯಂತೆ ಈ ಸಸ್ಯಕ್ಕೆ ಬೇರು ಇರುವುದೇ ಹೊರತು ಗಿಡಕ್ಕೆ ಕಾಂಡ ಎಳೆಗಳು ಇರುವುದಿಲ್ಲ. ಇದು ನೀರು ಲಭ್ಯವಿಲ್ಲದ ಸಮಯದಲ್ಲಿ , ಎಲೆಯಲ್ಲಿರುವ ಕ್ಲೋರೋಫಿಲ್ […]Read More

ಕಬ್ಬೆಕ್ಕುಗಳು – CIVETS

ವಿವೆರಿಡೀ (Viverridae) ಕುಟುಂಬದ ಕಬ್ಬೆಕ್ಕುಗಳು ಬೆಕ್ಕುಗಳಿಗೆ ಹೋಲಿಕೆ ಕಂಡು ಬಂದರೂ ಮುಂಗುಸಿಗಳಿಗೆ ಹತ್ತಿರದವು, ಉದ್ದ ಶರೀರ ಗಿಡ್ಡ ಕಾಲು, ಪ್ರತಿ ಕಾಲಿಗೆ ಭಾಗಶಃ ಒಳ ಸೇರುವ ಉಗುರುಳ್ಳ ಐದು ಬೆರಳುಗಳಿವೆ, ನೀಳ ತಲೆ ಚೂಪಾದ ಮುಸುಡಿ ಇದೆ, ಇವು ಮಿಶ್ರಹಾರಿಗಳು. ನಮ್ಮ ರಾಜ್ಯದಲ್ಲಿ ಮೂರು ಜಾತಿಯ ಕಬ್ಬೆಕ್ಕುಗಳನ್ನು ನೋಡಬಹುದು. ಇಂಗ್ಲೀಷಿನಲ್ಲಿ ಇವಕ್ಕೆ ‘Civet‘ ಎಂದು ಕರೆಯುತ್ತಾರೆ. 1) ಸಾಮಾನ್ಯ ಕಬ್ಬೆಕ್ಕು: ‘Asian palm civet‘ ಇದು ರಾಜ್ಯದೆಲ್ಲೆಡೆ ಕಂಡುಬರುತ್ತದೆ, ಮರ ಹಾಗು ನೆಲ ವಾಸಿ, ಮಿಶ್ರಹಾರಿ, ಸಾಮಾನ್ಯ […]Read More

ಕಿರು- ಕವಿತೆಗಳು

ಜಾಡಮಾಲಿ ಮುರಿದು ಮೂಲೆಗುಂಪಾದನನ್ನ ಕಳೆದಿರುಳ ಕನಸುಗಳಕಸಗುಡಿಸಿ ಹಾಕಲುಉದ್ದುದ್ದ ಕಿರಣಗಳಪೊರಕೆ ಹಿಡಿದುಮೊದಲ ದಿಸೆಯಲ್ಲಿಕಾಣಿಸಿಕೊಳ್ಳುತ್ತಾನೆಬೆಳಿಗ್ಗೆಯ ಜಾಡಮಾಲಿಸೂರ್ಯ ಮಾಯಾ ಹೆಂಡ ಕುಡಿದಮಂಗನ ಮಂಗತ್ವಹೆಚ್ಚಾಗುತ್ತದೆಆದರೆ ಹೆಣ್ಣು ಕಂಡಮನುಷ್ಯನ ಮನುಷ್ಯತ್ವಮಾಯವಾಗುವುದೇಕೆ ? ಡಿ ಎನ್ ಸುರೇಶ್ ಹವ್ಯಾಸಿ ಪತ್ರಕರ್ತರುRead More

ಪುಟ್ಟಣ್ಣ ಕಣಗಾಲ್ – ತಿಳಿಯದ ಮಾಹಿತಿಗಳು – 2

1968 ರಲ್ಲಿ ಮೈಸೂರು ಮೈತ್ರಿ ಫಿಲಂಸ್ ಲಾಂಛನದಲ್ಲಿ ಡಾ. ಡಿ. ಬಿ. ಬಸವೇಗೌಡರು ಪುಟ್ಟಣ್ಣನವರ ನಿರ್ದೇಶನದಲ್ಲಿ “ಸಾವಿರ ಮೆಟ್ಟಲು” ಚಿತ್ರದ ತಯಾರಿಕೆ ಪ್ರಾರಂಭಿಸಿದರು. ಕಲ್ಯಾಣ್ಕುಮಾರ್, ಅಶ್ವಥ್, ಪಂಡರೀಭಾಯಿ, ಜಯಂತಿ ಹಾಗು ವಜ್ರಮುನಿ,ಸುಂದರ ಕೃಷ್ಣ ಅರಸ್‌ (ಇಬ್ಬರದೂ ಮೊದಲ ಪರಿಚಯ) ಮುಂತಾದವರೊಂದಿಗೆ ಚಾಮುಂಡಿ ಬೆಟ್ಟದ ಪರಿಸರದಲ್ಲಿ ಚಿತ್ರೀಕರಣ ನೆಡೆಯುತಿದ್ದು, ಕ್ರಮೇಣ ನಿರ್ಮಾಪಕ ಮತ್ತು ನಿರ್ದೇಶಕರ ನಡುವೆ ಉಂಟಾಗಿ ಗಂಭೀರ ಪರಿಸ್ಥಿತಿಯಿಂದ ಸ್ಥಗಿತವಾಯಿತು. ಆ ವೇಳೆಗಾಗಲೇ ಪುಟ್ಟಣ್ಣನವರು ಖ್ಯಾತರೆನಿಸಿ ಸಮಯವೇ ಸಿಗದಷ್ಟು ಬ್ಯುಸಿಯಾಗಿದ್ದರು. ಹಾಗಾಗಿ ಚಿತ್ರ ಮುಂದೆ ಹೋಗದೆ ನಿಂತೇ […]Read More

ಕೆಲಸಕ್ಕಾಗಿ ಕಗ್ಗತ್ತಲೆಯ ಖಂಡದತ್ತ-2

-ಎರಡು – ಏಡನ್ ತಲುಪಿದೆವು! ಲಕೋಟೆಯಿಂದ ಏರ್ ಟಿಕೆಟ್ ತೆರೆದು ತೋರಿಸಿದ್ದೇ ತಡ ನನ್ನ ತಾಯಿಯ ಕಣ್ಣುಗಳು ನೀರು ತುಂಬಿಕೊಂಡವು. ‘ದೊಡ್ಡವನೂ ಕಷ್ಟ ಸುಖಕ್ಕೆ ಇಲ್ಲದಷ್ಟು ದೂರ ಹೋದ; ಈಗ ನೀನೂ ಕೂಡ’ ಎಂಬ ದುಃಖ ಅವರಿಗೆ. ಮೇಲಾಗಿ ನಾನು ಕಿರಿಯ ಮಗ. ದಿನಕಳೆದಂತೆ ಅವರೊಡನೆ ಮಾತಿನ ಮಧ್ಯೆ, ನಮ್ಮ ಪ್ರಯಾಣದ ಬಗ್ಗೆಯೂ ಒಂದಿಷ್ಟಿಷ್ಟೇ ಹೇಳುತ್ತ ಧೈರ್ಯ ತುಂಬಿದೆ; ಅಥವಾ ಹಾಗೆ ನಾನೇ ಸಮಾಧಾನ ತಂದುಕೊಂಡೆ. ಎಷ್ಟೇ ಆದರೂ ತಾಯಿ; ಅವರು ನನಗೋಸ್ಕರ, ಮುಖದ ಮೇಲೆ ಗೆಲುವನ್ನು […]Read More

ಜೀವನದ ಅಮೂಲ್ಯ ರತ್ನಗಳು

ನಮ್ಮ ಜೀವನದಲ್ಲಿ ನಂಬಿಕೆ‌, ಪ್ರೀತಿ ಇವೆರಡು ರತ್ನಗಳು ದೈವದತ್ತವಾಗಿ ನಮಗೆ ಭಾವನೆಗಳ ಮೂಲಕ ಬಂದಂತಹ ಒಂದು ಕೊಡುಗೆಯಾಗಿದೆ. ಜೀವನದಲ್ಲಿ ಇವುಗಳಿಗೆ ಇದರದೇ ಆದ ಒಂದು ಪಾವಿತ್ರ್ಯ ಮೌಲ್ಯವಿದೆ. ನಮ್ಮ‌ ಜೀವನದಲ್ಲಿ‌ ಎಲ್ಲ ವಸ್ತುಗಳನ್ನು ದುಡ್ಡು ಕೊಟ್ಟು ಪಡೆಯಬಹುದು. ಆದರೆ, ನಂಬಿಕೆ, ಪ್ರೀತಿ ಮನುಷ್ಯನ ಭಾವನೆಯಿಂದ ಮೂಡುವಂತಹ ಪ್ರಕ್ರಿಯೆ. ಪ್ರತೀ ಮಾನವ ಜೀವನದಲ್ಲಿ ಇವುಗಳು ಇಲ್ಲದೇ ಬಾಳಲು ಸಾದ್ಯವಿಲ್ಲ. ಜೀವನದ ತಳಹದಿಗೆ ಇವುಗಳು ಆದಾರಸ್ತಂಭಗಳಾಗಿವೆ. ಇದರಲ್ಲಿ‌ ಒಂದನ್ನು ಕಳೆದುಕೊಂಡರು ನಮ್ಮ ಜೀವನ‌ದ ಲಯ ಕಳೆದುಕೊಂಡಂತೆ. ಆದರೆ, ಇಂದು ಎಲ್ಲೋ […]Read More

ಕೆಲಸಕ್ಕಾಗಿ ಕಗ್ಗತ್ತಲೆಯ ಖಂಡದತ್ತ-1

ಡಾ. ಅರಕಲಗೂಡು ನೀಲಕಂಠ ಮೂರ್ತಿ ಯವರು ವೃತ್ತಿಯಿಂದ ವೈದ್ಯರು ಹಾಗು ಹವ್ಯಾಸಿ ಸಾಹಿತಿಗಳು. ಹಲವಾರು ವರ್ಷಗಳ ಹಿಂದೆ ಅವರು ಕೆಲಸದ ನಿಮಿತ್ತ ಸೊಮಾಲಿಯಾದಲ್ಲಿ (ಆಫ್ರಿಕಾ) ನೆಲೆಸಿದ್ದಾಗ ಅಲ್ಲಿನ ತಮ್ಮ ಅನುಭವಗಳನ್ನು ಪತ್ರಿಕೆಗೆ ಲೇಖನ ರೂಪದಲ್ಲಿ ಹಂಚಿಕೊಂಡಿದ್ದಾರೆ. ಮುಂದೆ ಓದಿ… (ಆಫ್ರಿಕಾಕ್ಕೆ ಪ್ರಪ್ರಥಮವಾಗಿ ‘ಕಗ್ಗತ್ತಲೆಯ ಖಂಡ’ ಎಂಬ ಅಡ್ಡಹೆಸರು ಕೊಟ್ಟದ್ದು, ವೇಲ್ಸ್ (ಯು.ಕೆ. ಯ ಒಂದು ಪ್ರಾಂತ್ಯ) ಭಾಗದ ಪತ್ರಕರ್ತ ಮತ್ತು ಅನ್ವೇಷಕ, ಹೆನ್ರಿ ಮಾರ್ಟನ್ ಸ್ಟ್ಯಾನ್ಲೆ) -ಒಂದು- ಲಕೋಟೆಯೊಂದು ಬಂತು! ನಾನಾಗ ಬೆಂಗಳೂರಿನ ಪ್ರಸನ್ನ ಟಾಕೀಸ್ ಸನಿಹ […]Read More

ಪರಾಭವ ಭಾವನಾ – 11 ಯತಿರಾಜ್ ವೀರಾಂಬುಧಿ

ಹಿಂದಿನ ಸಂಚಿಕೆಯಿಂದ…ನಾಯಕ್ ತನ್ನ ಮಾದಕ ವಸ್ತುಗಳ ಸಾಗಾಣಿಕೆಯನ್ನು ನೊರ್ಕೋಟಿಕ್ ವಿಭಾಗದವರು ಪತ್ತೆ ಹಚ್ಚಿ ಸೀಜ್ ಮಾಡಿದ್ದರಿಂದ ಯೋಚನೆ ಹತ್ತಿ ಕ್ರೂರಿ ಆಲ್ಬೆರ್ತೋ ಗಾರ್ಸಿಯಾ ಗೆ ಏನು ಹೇಳುವುದೆಂದು ತಿಳಿಯದಾಯಿತು. ಅಷ್ಟರಲ್ಲಿ ವಿಗ್ರಹ ಕಳ್ಳ ಸಾಗಣೆದಾರ ಫಿಲಿಪ್ ಸ್ಟೋನ್ಬ್ರಿಡ್ಜ್ ಗೆ ಕರೆ ಮಾಡಿ ಅಪ್ರಮೇಯನ ಬಳಿ ಇರುವ ಮೂರು ವಿಗ್ರಹಗಳ ಬಗ್ಗೆ ಹಾಗು ಅದು ಉತ್ತರ ಭಾರತದ ಕಡೆಗೆ ಸಾಗುತ್ತಿರುವ ವಿಷಯವನ್ನು ಹೇಳಿ ಅದನ್ನು ಲಪಟಾಯಿಸಿ ಕಳಿಸುತ್ತೇನೆಂದು ಹೇಳುತ್ತಾನೆ. ಮುಂದೆ… -ಹನ್ನೊಂದು- ಬೆಳಗ್ಗೆ ಐದೂವರೆಗೇ ಹೊಟೇಲ್‌ ಚೆಕ್‌ ಔಟ್‌ […]Read More