ಭರವಸೆ

ಭರವಸೆ ಬೆಂಕಿಯ ಕಾವು ಸೋಕಿಪದರುಗುಟ್ಟುವಪತಂಗದಂತಾದಮನವ ಹೊತ್ತು,ದೇವರಮನೆಯಲಿಹಚ್ಚಿಟ್ಟ ಸೊಡರಿನೆದುರುಮೌನದಲಿ ಕುಳಿತಾಗ,ನಡುಗುತ್ತಿದ್ದ ಮನಕೆಬೆಚ್ಚನೆಯ ಭಾವವೊಂದುಭರವಸೆಯನಿತ್ತಂತಿದೆ!! ದೇವರಿಗಾಗಿ ಹಚ್ಚಿದಗಂಧದ ಕಡ್ಡಿ ಮತ್ತುಕರ್ಪೂರಗಳುರಿದುಗಾಳಿಯಲಿ ಸೇರಿದಂತೆ,ಅಸಡ್ಡೆ, ಅವಮಾನದಕಟು ಮಾತಿನಿರಿತದಿಂದಮನಕಾದ ನೋವು,ತಂತಾನೆ ಕರಗಿ ನೀರಾಗಿಮನ ಹಗುರಾಗಿ,ಬದುಕು ಹಸನಾದಂತಿದೆ !! ಶ್ರೀವಲ್ಲಿ ಮಂಜುನಾಥRead More

ದೃಷ್ಟಿ

ದೃಷ್ಟಿ ಇತರರ ಯಶಸ್ಸಿನ ಕಡೆಗೆ ನೋಡುವಾಗ ನಮ್ಮ ಮನಸ್ಸಿನ ಕಿಟಕಿಯ ಗಾಜುಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳೋಣ. ಹಳ್ಳಿಯಲ್ಲಿ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಕೊಂಡಿದ್ದ ಹರೀಶನು ತನ್ನ ಭವಿಷ್ಯವನ್ನು ರೂಪಿಸಿಕೊಳ್ಳುವ ಉದ್ದೇಶದಿಂದ ತನ್ನ ಹೆಂಡತಿ ಜೊತೆಗೆ ಪಟ್ಟಣಕ್ಕೆ ಉದ್ಯೋಗಕ್ಕೆಂದು ಬಂದನು. ಪಟ್ಟಣದಲ್ಲಿ ಈ ದಂಪತಿಗಳಿಬ್ಬರು ಬಾಡಿಗೆಯ ಮನೆಯೊಂದರಲ್ಲಿ ವಾಸವಾಗಿದ್ದರು. ಒಂದು ದಿನ ಹರೀಶನ ಹೆಂಡತಿ ಮಂಜುಳಾ ತನ್ನ ಪಕ್ಕದ ಮನೆಯಲ್ಲಿ ವಾಸವಾಗಿದ್ದ ಮಹಿಳೆಯೊಬ್ಬಳು ತನ್ನ ದೈನಂದಿನ ಬಟ್ಟೆಗಳನ್ನು ಒಗೆದು ಒಣಗಲು ಹಾಕಿರುವುದನ್ನು ಕಿಟಕಿಯ ಮೂಲಕ ನೋಡಿದಳು. ಕಿಟಕಿಯ ಮೂಲಕ ಹೊರಗೆ […]Read More

ಆತ್ಮಪ್ರೀತಿಯ ಮೋಡಿ

ಆತ್ಮಪ್ರೀತಿಯ ಮೋಡಿ ನಿನ್ನುಸಿರು ನನ್ನುಸಿರಲಿ ಒಂದಾಗಿಬಾಳುವ ಬಾಳದು ಸುಂದರ!ಸವಿನೆನಪಿನ ಚಿತ್ತಾರವಿರಲುಬದುಕಲಿ ಕಾಡದು ಬೇಸರ!! ಮನದಾಸೆ ನಿನ್ನಲಿ ಹೇಳಿರಲುಕನಸೆಲ್ಲಾ ನನಸಾಗುವ ಕಾತುರ!ಕಾಣದ ದೈವಬಲವು ಬೆರೆತಿರಲುನಲ್ಮೆಯ ಪ್ರೇಮವಿದು ಅಮರ!! ಕಲ್ಲುಮುಳ್ಳಿನ ಹಾದಿಯು ಸರಿದುಹೂವಿನ ನಡಿಗೆಯಾದ ಪರಿ !ಜನ್ಮಜನ್ಮಗಳ ಆತ್ಮಪ್ರೀತಿಯಮೋಡಿ ಕಂಡು ಮನದಿ ಅಚ್ಚರಿ!! ದಿಗಂತದಿ ಬುವಿ ಬಾನುಒಂದಾದಂತೆ ನಮ್ಮೊಲುಮೆ!ಸಿಹಿಸಾಂಗತ್ಯದಿ ದೊರೆತಿರಲು..ಸವಿಸಂತಸದ ಚಿಲುಮೆ!! ಸುಮನಾ ರಮಾನಂದಮುಂಬೈRead More

ಮೈನಾ ಓ ಮೈನಾ

ಮೈನಾ ಓ ಮೈನಾ ಪಾರಿವಾಳ, ಗಿಳಿ, ಬಾತುಕೋಳಿ ಇನ್ನೂ ಮುಂತಾದ ಪಕ್ಷಿಗಳು ಮನುಷ್ಯನ ಸ್ನೇಹಜೀವಿಗಳು. ಮನುಷ್ಯನ ಕಂಡರೆ ಭೀತಿ ಇಲ್ಲದೆ, ಆಸುಪಾಸು ಓಡಾಡಿ, ಹಾರಡಿ, ಅವ ಇಡಿದು ಪಳಗಿಸಿ ಪಂಜರದಲ್ಲಿಟ್ಟರೆ, ಸಾಕು ಪಕ್ಷಿಗಳಾಗಿ ಕೆಲವೊಮ್ಮೆ ಅವನ ಹೊಟ್ಟೆಗೆ ಆಹಾರವಾಗಿ ತನ್ನ ಜೀವಿತಾವದಿಯನ್ನು ಕಳೆಯುವುದುಂಟು. “ಮೈನಾ” ಹಕ್ಕಿ ಕೂಡ ಈ ಸ್ನೇಹಜೀವಿ ಪಕ್ಷಿಗಳ ಸಾಲಿನಲ್ಲಿ ಸೇರುತ್ತದೆ. ಹಿಲ್ಲ್ ಮೈನಾ, ಕಾಮನ್ ಮೈನಾ ಮತ್ತು ಬಾಲಿ ಮೈನಾ ಎಂದು ಮೈನಾ ಹಕ್ಕಿಗಳನ್ನು ಪ್ರಮುಖವಾದ ಮೂರು ವಿಧದಲ್ಲಿ ವಿಂಗಡಿಸಲಾಗಿದೆ . ಹಿಲ್ಲ್ […]Read More

ಸಮಯದ ಮಹತ್ವ

ಸಮಯದ ಮಹತ್ವ ಕ್ರಾಂತಿಕಾರಿಗಳ ಸಾಲಿನಲ್ಲಿ ಚಾಪೆಕರ್ ಸಹೋದರರ ಹೆಸರು ಅಜರಾಮರವಾಗಿದೆ. ಈ ಮೂರು ಮಂದಿ ಚಾಪೆಕರ್ ಸಹೋದರರು ದೇಶಕ್ಕಾಗಿ ನಗುನಗುತ್ತಲೇ ನೇಣುಗಂಬಕ್ಕೆ ಏರಿದ್ದರು. ಇದೇ ರೀತಿ ಅದೊಂದು ದಿನ ದಾಮೋದರ ಚಾಪೆಕರ್ ಅವರನ್ನು ಸರವರಾ ಜೈಲಿನಲ್ಲಿ ನೇಣಿಗೇರಿಸಲು ಬ್ರಿಟೀಷರು ಕರೆದುಕೊಂಡು ಬಂದಿದ್ದರು. ದಾಮೋದರ ಚಾಪೆಕರರು ಮಾತ್ರ ಆ ದಿನ ನಗು ಮುಖದಿಂದ ಮತ್ತು ಆನಂದದಿಂದಿದ್ದರು. ಅವರ ಕೈಯಲ್ಲಿ ಭಗವದ್ಗೀತೆಯ ಪುಸ್ತಕವಿದ್ದು, ಅವರು ಭಗವದ್ಗೀತೆಯನ್ನು ಓದುತ್ತಲೇ ನೇಣಿನ ಶಿಕ್ಷೆಗಾಗಿ ಸಿದ್ಧರಾಗಿದ್ದರು. ನೇಣುಗಂಬಕ್ಕೆ ಏರುವ ಸಮಯವಾದರೂ ಬ್ರಿಟೀಷ್ ಅಧಿಕಾರಿಗಳು ಅವರನ್ನು […]Read More

ನನ್ನಪ್ಪ

ನನ್ನಪ್ಪ ಹರಿವ ನದಿಯಂತೆಓಡುತ್ತಾ ಕಡಲ ಸೇರಿದ ನನ್ನಪ್ಪಅಲೆಯ ರೂಪದಲಿತೀರಕ್ಕೆ ಬಂದುಮತ್ತೆ ಕಡಲೊಡಲ ಸೇರುವ ಅಪ್ಪಇಂದಿಗೂ ನಗುತ್ತಲೇ ಇದ್ದಾನೆ ತಂಗಾಳಿ ಹೊತ್ತು ತರುವಹಸಿರು ತುಂಬಿ ಉಸಿರು ಕೊಡುವಬೆಟ್ಟದಂತ ಮರ ಉಯ್ಯಾಲೆ ಆಡುವಂತೆಹೆಗಲ ಸಿಂಹಾಸನದಲ್ಲಿ ಕುಳ್ಳಿರಿಸಿಕೊಂಡುಮಹಾರಾಜನಂತೆ ಮಹಾನಗರ ಸುತ್ತಿಸಿದ್ದ ನನ್ನಪ್ಪಇಂದಿಗೂ ನನ್ನ ಮಹಾನಾಯಕ ಭಾರವಾಗದ ಮೋಡದಲ್ಲಿಬಹುದೊಡ್ಡ ಬಂಡೆಯಂತೆ ತೇಲುವನೀಲಾಕಾಶದ ನೀಲಿ ಕಡಲಲ್ಲಿ ನೆರಳಿಲ್ಲದೆನೆತ್ತಿಯ ಮೇಲಿನ ಸುಡು ಬಿಸಿಲಿಗೆತಂಪೆರೆಯಲು ಮಳೆಯಾಗಿಮುಗಿಲಿಂದ ಇಳಿದು ಬರುವ ನನ್ನಪ್ಪಇಂದಿಗೂ ಮೋಡದಲ್ಲಿಯೇ ಕುಳಿತುನನ್ನೆಡೆಗೆ ನೋಡುವ ದೂರ ದೃಷ್ಟಿಯ ಕನಸುಗಾರ ಕಬ್ಬಿನಂತೆ ಗಟ್ಟಿಯಾಗಿಕಚ್ಚಿದರೆ ನೋಯದೆ,ನೋಯಿಸದೆನಮ್ಮನ್ನೆಲ್ಲ ಸಿಹಿ ಸಾಗರದಲ್ಲಿ ಮುಳುಗಿಸಿತೇಲಿಸಿ […]Read More

ಅವಳಿ – ಜವಳಿ

ಅವಳಿ – ಜವಳಿ ಸಮೀರ್ ನಿಗೆ ಒಂದು ವಾಟ್ಸ್ ಆಪ್ ಮೇಸಜ್ ನಲ್ಲಿ ತಂಗಿ ಸುಮಯ್ಯ ಒಂದು ಹುಡುಗಿಯ ಫೋಟೋ ಕಳಿಸುತ್ತಾಳೆ. ಓಪನ್ ಮಾಡಿ ನೋಡಿದ ಸಮೀರ್ ನಿಗೆ ಸನಾ ಒಂದೇ ನೋಟಕ್ಕೆ ಇಷ್ಟವಾದಳು ಫೋನ್ ಮಾಡಿ ಸುಮಯ್ಯ ಳಿಗೆ ನನಗೆ ಹುಡುಗಿ ಒಪ್ಪಿಗೆ ಬರುವ ವಾರವೇ ಊರಿಗೆ ಬರುತ್ತಿದ್ದೇನೆ ಒಂದು ತಿಂಗಳು ರಜೆ ಇದೆ ಮದುವೆ ಆಗಿಯೇ ಬರುತ್ತೇನೆ ಎಂದು ಫೋನ್ ಕಟ್ ಮಾಡಿದ. ಸನಾ ತುಸು ಉತ್ಸಾಹ ದಿಂದಲೇ ಕನ್ನಡಿಯ ಮುಂದೆ ನಿಂತು ಅಲಂಕಾರ […]Read More

ಕವಿತೆ

ಕವಿತೆ ಅಂತರಾಳದ ನೋವಿಗೆಸಂಗಾತಿ ನೀನುಸುಖಾ ಸುಮ್ಮನೆ ಖುಷಿಗೆಜೊತೆಗಾರ ನೀನುನೊಂದವರ ಹೆಗಲ ಅಪ್ಪುಗೆಸಲಹೆಗಾರ ನೀನು ಕಣ್ಣಿಗೆ ಕಾಣುವ ಅಕ್ಷರ ಗಳಿಗೆಸುಂದರ ಧ್ವನಿ ನೀಡಿಭಾವ ಸ್ಪರ್ಶಕೆ ಮನಸನುಕಾವ್ಯದೊಳಗಿನ ಕನಸುಮನಸ ಲಹರಿಯತೆರೆದಿಡುವ ನೀನುನನ್ನೊಳಗಿನ ಕವಿತೆ ಫೌಝಿಯಾ ಹರ್ಷದ್Read More

ನೀನೆ ಹೇಳು

ನೀನೆ ಹೇಳು ಹೂವಂತ ಕಣ್ಗಳಲಿಮುಳ್ಳಮೊನೆಹೊಕ್ಕಿರಲು ಹೇಗೆನಗುವುದು ಕಣ್ಣುನೀನೆ ಹೇಳು; ಕನ್ನಡಿಯಂತಿದ್ದನನ್ನ ಮನವಿಂದೀಗಚೂರುಚೂರಾಗಿರಲುಪ್ರತಿಬಿಂಬವೆಲ್ಲಿಹುದುನೀನೆ ಹೇಳು ; ನಂದಗೋಕುಲದಾನಂದಾದೀಪವದುನಂದುತಿರೆ ಮನೆ-ಮನದಿ ಬೆಳಕೆಲ್ಲಿನೀನೆ ಹೇಳು ; ಅಡಿಗಡಿಗೆ ನನ್ನಲ್ಲಿಬೇವಿನಂತಹ ನುಡಿಯಆಡಿ ಮನ ಕೆಡಿಸುತಿರೆ,ಸವಿ ಭಾವಕೆಡೆಯೆಲ್ಲಿನೀನೆ ಹೇಳು ; ನನಗರಿವಾಗದೆಯೆನನ್ನ ಮನಃ ಸಂತೋಷನೀ ಕಸಿದುಕೊಳ್ಳುತಿರೆನಾ ನಗುತಲಿರುವುದುಹೇಗೆ ಹೇಳು !! ಶ್ರೀವಲ್ಲಿ ಮಂಜುನಾಥRead More

ಗರ್ಭಕಂಠದ ಕ್ಯಾನ್ಸರ್‌ ( Cervical Cancer )

ಗರ್ಭಕಂಠದ ಕ್ಯಾನ್ಸರ್‌ ( Cervical Cancer ) ಗರ್ಭಕಂಠದ ದ್ವಾರ ಅಥವಾ ಅದರ ಸುತ್ತ ಮುತ್ತ ಕಂಡು ಬರುವ ತೀವ್ರ ಸ್ವರೂಪದ ಗೆಡ್ಡೆ ಆಗುವುದನ್ನು ಗರ್ಭ ಕಂಠದ ಕ್ಯಾನ್ಸರ್ ಎನ್ನುತ್ತಾರೆ. ಇದು ಗರ್ಭಕೋಶದ ಕ್ಯಾನ್ಸರ್ ಅಲ್ಲ ಗರ್ಭಕೋಶದಿಂದ ಮುಂದೆ ಅದರ ಕಂಠ ಇರುತ್ತದೆ ಅದನ್ನು ಸರ್ವಿಕ್ಸ ಎಂದು ಕರೆಯುತ್ತಾರೆ. ರೋಗ ಲಕ್ಷಣಗಳು ಗರ್ಭಕಂಠದ ಕ್ಯಾನ್ಸರ್‌‌ನ ಆರಂಭಿಕ ಹಂತಗಳು 1-ಸಂಪೂರ್ಣ ಲಕ್ಷಣ ರಹಿತವಾಗಿರಬಹುದು2-ಸಾಧಾರಣ  ಯೋನಿ ಸ್ರಾವ,3-ಸಂಪರ್ಕದಿಂದ ಉಂಟಾಗುವ ರಕ್ತಸ್ರಾವ ಅಥವಾ4-ಯೋನಿಯ ದುರ್ಮಾಂಸದ (ಅಪರೂಪಕ್ಕೊಮ್ಮೆ) ಬೆಳವಣಿಗೆಯಿಂದ ಗುರುತಿಸಬಹುದಾಗಿದೆ.5-ಲೈಂಗಿಕ ಸಂಭೋಗ ಕ್ರಿಯೆಯಲ್ಲಿ ತೊಡಗಿದಾಗ ಅಲ್ಪ ಪ್ರಮಾಣದ ನೋವು […]Read More