ಯೋಗಾ ಯೋಗ.. ಯೋಗ ಭಾರತೀಯ ಸಂಸ್ಕೃತಿಯ ಹೆಮ್ಮೆ. ವರ್ಷದ ಅತೀ ದೀರ್ಘ ದಿನವಾದ, ಅಥವಾ ಉತ್ತರ ಗೋಳಾರ್ಧದಲ್ಲಿ ವರ್ಷದ ಅತಿ ಉದ್ದದ ದಿನವಾದ ಜೂನ್ 21ನ್ನು ಅಂತರರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸಲಾಗುತ್ತದೆ. ಮೊದಲು ಆದಿಯೋಗಿಯಾದ ಶಿವ ಯೋಗವನ್ನು ಸಪ್ತರ್ಷಿಗಳಿಗೆ ಬೋಧಿಸಿದರೆಂದು, ನಂತರ ಯೋಗವೆಂಬುದು ಅಸ್ತಿತ್ವಕ್ಕೆ ಬಂತು ಎಂದು ಹೇಳಲಾಗುತ್ತದೆ. ಆನಂತರ ಆದಿಶೇಷ ಯೋಗದ ವಿಸ್ತಾರತೆಯನ್ನು ತಿಳಿಯುವ ಸಲುವಾಗಿ, ಮತ್ತು ಜಗತ್ತಿಗೆ ತಿಳಿಸುವ ಸಲುವಾಗಿ ಪತಂಜಲಿ ಮಹರ್ಷಿಯಾಗಿ ಜನ್ಮವೆತ್ತಿ ಯೋಗಾಭ್ಯಾಸ ಮಾಡಿ ಭೂಮಿಯಲ್ಲಿ ಯೋಗದ ಮಹತ್ವವನ್ನು ಸಾರಿದರು ಎಂದು […]Read More
ಯಕೃತ್ತು (ಲಿವರ್ ) ಎಂಬ ಸಂಸ್ಕರಣ ಅಂಗ ಇತ್ತೀಚಿಗೆ ಲಿವರ್ ಖಾಯಿಲೆಗಳು ಹೆಚ್ಚಾಗುತ್ತಿವೆಇದು ಅತಿ ಅಪಾಯಕಾರಿ ಹಾಗೂ ದುಬಾರಿ ಖಾಯಿಲೆಆದ್ದರಿಂದ ಇವತ್ತು ಅದರ ಆರೋಗ್ಯದ ಬಗ್ಗೆ ತಿಳಿದುಕೊಳ್ಳೋಣ. ಯಕೃತ್ತು ಒಂದು ಜೀವಧಾರಕ ಅಂಗ. ಚಯಾಪಚಯ ಎಂದರೆ ಜೀವಿಯಲ್ಲಿ ಆರೋಗ್ಯ ಸ್ಥಿತಿಯ ಜೈವಿಕ ಕ್ರಿಯೆಯಾಗಿ ನಿರಂತರ ಜರಗುವ ಸಮಸ್ತ ರಾಸಾಯನಿಕ ಕ್ರಿಯೆಗಳು ಮತ್ತು ಶಕ್ತಿಯ ಬಿಡುಗಡೆ ಈ ಕಾರ್ಯದಲ್ಲಿ ಯಕೃತ್ತು ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಯಕೃತ್ತು 11/2 kg ತೂಕ ಇದ್ದು, ಸಮವಾಗಿಲ್ಲದ 4 ಭಾಗಗಳನ್ನು ಒಳಗೊಂಡಿದೆ. ಇದು […]Read More
ಗುಮ್ನಾಮಿ ಬಾಬಾ – ಸುಭಾಷ್! ಉತ್ತರ ಪ್ರದೇಶದ ಅಯೋಧ್ಯೆಯ ಸಮೀಪದ ಪಟ್ಟಣವಾದ ಫೈಜಾಬಾದಿನಲ್ಲಿ 1985ರವರೆಗೆ ವಾಸವಾಗಿದ್ದು, ಆ ರಾಜ್ಯದಾದ್ಯಂತ ಸುತ್ತಾಡುತ್ತಿದ್ದ ಸನ್ಯಾಸಿಯೊಬ್ಬರನ್ನು ಅಲ್ಲಿನ ಜನರು ಭಗವಾನ್, ಬಾಬಾಜಿ, ಗುಮ್‌ನಾಮಿ ಬಾಬಾ ಎಂದೆಲ್ಲಾ ಕರೆಯುತ್ತಿದ್ದರು. ಫೈಜಾಬಾದ್ ಪಟ್ಟಣದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಇವರು ತನ್ನನ್ನು ಭೇಟಿ ಮಾಡುವ ಭಕ್ತಾದಿಗಳನ್ನು ಮುಖಕ್ಕೆ ಮುಖ ಕೊಟ್ಟು ಮಾತನಾಡಿಸುವ ಬದಲು ಬಟ್ಟೆಯ ಪರದೆಯ ಒಳಗಡೆಯೇ ಇದ್ದು, ಮಾತಾನಾಡಿಸುತ್ತಿದ್ದರು, ಆದರೆ ಯಾರಿಗೂ ತನ್ನ ಮುಖವನ್ನು ತೋರಿಸುತ್ತಾ ಇರಲಿಲ್ಲ ಎನ್ನುತ್ತಾರೆ ಅಲ್ಲಿನ ಜನರು. ಈ ಕಾರಣಕ್ಕೆ […]Read More
ಆಮೆಯೆಂಬ ಅದ್ಭುತ ಪ್ರಾಣಿ! ಆಮೆ ನಿಧಾನ ವೇಗಕ್ಕೆ ಹೆಸರುವಾಸಿ. ಆದರೆ ಅದು ಜೀವಜಗತ್ತಿನ ಓಟದಲ್ಲಿ ಹಿಂದೆ ಬಿದ್ದಿಲ್ಲ. ಆಮೆ ಮತ್ತು ಮೊಲದ ಓಟದ ಸ್ಪರ್ಧೆಯ ಕಥೆಯನ್ನು ಸಾಕಷ್ಟು ಬಾರಿ ಕೇಳಿ ಕೊನೆಗೆ ಆಮೆಯ ನಿಧಾನವೇ ಪ್ರಧಾನದ ವೇಗವೇ ಉತ್ತಮ ಎಂದು ತೀರ್ಮಾನಿಸಿಯಾಗಿ ಶತಮಾನಗಳೇ ಕಳೆದಿವೆ. ಮೊಲ ಮತ್ತು ಆಮೆ ನಡುವಿನ ಓಟದ ಕಥೆಯು ಅದ್ಭುತವಾದ ಮಕ್ಕಳ ಕಥೆಯಾಗಿದೆ. ನಿಧಾನ ಮತ್ತು ಸ್ಥಿರವಾದ ವೇಗ ಹೊಂದಬೇಕು ಎಂಬುದಕ್ಕೆ ಈ ಕಥೆಯು ಮಕ್ಕಳಿಗೆ ನಿಧಾನ ಮತ್ತು ನಿರಂತರ ಪರಿಶ್ರಮದ ಮಹತ್ವವನ್ನು […]Read More
ಬದುಕಿನ ಲೆಕ್ಕಾಚಾರ At the end of the day, ನಾನೊಮ್ಮೆ ನನ್ನ ಬದುಕನ್ನ ಹಿಂತಿರುಗಿ ನೋಡಿದಾಗ ನನಗೆ ಎಷ್ಟು ಪಾಪ ಪ್ರಜ್ಞೆ ಕಾಡುತ್ತದೆ, ಮತ್ತು ಯಾಕೆ ಕಾಡುತ್ತದೆ. ನಾನೆಷ್ಟು ಬಾರಿ ನಿಜವಾಗಿಯೂ ಬದುಕಿದ್ದೆ, ಮತ್ತು ಹೇಗೆ? ನಾನು ಹೀಗೆ ಮಾಡಬಾರದಿತ್ತ? ಅಥವಾ ಇಲ್ಲ ನಾನು ಮಾಡಿದ್ದು ಸರಿಯಾಗಿಯೆ ಇತ್ತು! ಹೀಗೆ ಎಷ್ಟೊ ಲೆಕ್ಕಾಚಾರಗಳು ಕಣ್ಣೆದುರು ಬಂದು ನಿಂತುಬಿಡಬಹುದು. ಕೆಲವು ವಿಚಾರಗಳು ಕಾಡಬಹುದು, ಕೆಲವೊಂದು ಮನಸ್ಸಿಗೆ ಹತ್ತಿರವೆನಿಸಬಹುದು, ಹಲವು ಕಾಡುವ ಪಾತ್ರಗಳು ಜೀವನದಲ್ಲಿ ಬಂದು ಹೋಗಿರಬಹುದು, ಇದೆಲ್ಲದರ […]Read More
ಏಳು ಬೀಳಿನ ದಾರಿ ನಡೆಯುತ್ತೇನೆ ನಾನುನನ್ನದೇ ಲಯದಲ್ಲಿಮನದೊಳಗಿನಆಲಯದೊಳಗಿಳಿಯುವಪ್ರಯತ್ನ ಮಾಡುತ್ತಾಕೆಲವೊಮ್ಮೆ ತಪ್ಪುತ್ತೇನೆಹೆಜ್ಜೆಗಳ ಲೆಕ್ಕಾಚಾರವನ್ನೂ ಇಣುಕುತ್ತೇನೆ ಅಲ್ಲಿ ಇಲ್ಲಿಕಣ್ಣಿಗೆ ಬೀಳುವಮೂಲೆ ಕಂದರಗಳಲ್ಲಿಎಳೆಯುತ್ತೇನೆ ಪರದೆಆಗಾಗ ಮನದ ಭಾವನೆಗಳಿಗೂ ಹತ್ತುತ್ತೇನೆ ಇಳಿಯುತ್ತೇನೆಗಟ್ಟಿಯಾಗಿ ಹೆಜ್ಜೆಯೂರಲಾರದೇಕಣ್ಣಿನ ಪೊರೆ ಕಳಚಿಹೊಸ ದಾರಿ ಹುಡುಕಲಾಗದೇಯಾವುದೋ ಅರ್ಥಕಂಡುಕೊಳ್ಳುವಲ್ಲಿ ಸೋಲುತ್ತೇನೆ ಆದರೂ ಗೆಲ್ಲುತ್ತೇನೆಸದಾಕಾಲವಲ್ಲದಿದ್ದರೂಸಾವಕಾಶವಾಗಿಆಗೊಮ್ಮೆ ಈಗೊಮ್ಮೆಯಾವುದೋ ಸಣ್ಣ ಬೆಳಕುಹಿಡಿದು ದಾರಿ ಸಾಗುವಾಗ ಸೌಜನ್ಯ ದತ್ತರಾಜRead More
ವ್ಯಾಯಾಮವೇ ಭಾಗ್ಯ ವ್ಯಾಯಾಮವು ನಮ್ಮ ಜೀವನದ ಒಂದು ಅತ್ಯಂತ ಪ್ರಮುಖವಾದ ಅಂಗ. ಪ್ರತಿಯೊಬ್ಬ ಜೀವಿಗೂ ಅತ್ಯಂತ ಅವಶ್ಯಕವಾದ ಈ ವ್ಯಾಯಾಮವು ಮಾನಸಿಕ ಹಾಗೂ ಶರೀರಿಕ ಆರೋಗ್ಯವನ್ನು ಕಾಪಾಡುವುದರಲ್ಲಿ ಮೊದಲನೆಯ ಸ್ಥಾನದಲ್ಲಿದೆ. ನಮ್ಮ ದೇಹದ ಅಂಗಾಂಗಗಳನ್ನು ಸುಸ್ಥಿರವಾಗಿ ಇಡಲು, ಧೀರ್ಘವಾದ ಆಯಸ್ಸನ್ನು ಹೊಂದಿರಲು ನಿಯಮಿತ ವ್ಯಾಯಾಮ ಸಹಾಯ ಮಾಡುತ್ತದೆ. ಇಲ್ಲಿ ನಿಯಮಿತ ಎನ್ನುವುದು ಅತ್ಯಂತ ಮುಖ್ಯವಾದ ಪದವಾಗಿದೆ, ನಮ್ಮ ದೇಹದ ಸ್ನಾಯುಗಳಿಗೆ ಜ್ಞಾಪಕ ಇಟ್ಟುಕೊಳ್ಳುವಂಥ ಶಕ್ತಿ ಇದೆ ದಿನವೂ ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ಸ್ನಾಯುಗಳು ನೆನಪಿನಲ್ಲಿಟ್ಟುಕೊಂಡು ವೃದ್ಧಿಸುತ್ತವೆ, ಸ್ನಾಯುಗಳು […]Read More
ಬೆಳದಿಂಗಳ ಲಹರಿಯಲಿ… ಕಾಣದ ಆ ದೇವನು ಸೃಷ್ಟಿಸಿದಬುವಿಯಲಿ ಸಕಲವೂ ಸುಂದರ!ಶಶಿ ಮೂಡಿಸಿಹ ಬೆಳದಿಂಗಳಲಿ..ಹೊಳೆವ ತಾರೆಗಳದೇ ಚಿತ್ತಾರ!! ಪ್ರಕೃತಿಯ ಚೆಂದದ ಮಡಿಲಲಿಅಡಗಿದೆ ಸಾವಿರಾರು ವಿಚಿತ್ರ!ಧರೆಯಂಗಳದಿ ಮೂಡಿದ ತಂಪಲಿ..ತಂಗದಿರ ನೀಡಿಹನು ಹಾಲ್ಬೆಳಕ ಸೂತ್ರ!! ರವಿ ವಸುಂಧರೆಗೆ ತರುವಂತೆಕಣ್ಕೋರೈಸುವ ಹೊಂಗಿರಣವನು!ಚಂದಿರ ಅವನಿಂದ ಕಡ ತಂದ..ಬೆಳಕಿಂದ ಹಾಸಿಹನು ಬೆಳದಿಂಗಳನು!! ಆಗಸದಿ ಹರಡಿದ ತಾರೆಗಳಒಟ್ಟುಗೂಡಿಸಿ ನಲಿವನು ಚಂದಿರ!ಕಡುಬಿಸಿಲ ತಾಪಕೆ ಬಳಲಿದ ಇಳೆಯ..ತಾ ತಂಪಾಗಿಸಿ ಬೆಳಗಿಹನು ಅಂಬರ!! ಸುಮನಾ ರಮಾನಂದRead More
ನೇತಾಜಿ ನಿಗೂಢ ಕಣ್ಮರೆ!!!! ನಮಗೆಲ್ಲರಿಗೂ ತಿಳಿದರುವ ಪ್ರಕಾರ ನಮ್ಮ ದೇಶಕ್ಕೆ ಆಗಸ್ಟ್ 15 ರ 1947 ರಲ್ಲಿ ಸ್ವಾತಂತ್ರ‍್ಯ ಸಿಕ್ಕಿತು. ಆದರೆ ಇದಕ್ಕೂ ಸುಮಾರು ನಾಲ್ಕು ವರ್ಷಗಳ ಮೊದಲೇ ಬ್ರಿಟಿಷರಿಗೆ ಸಡ್ಡು ಹೊಡೆದಿದ್ದ ನೇತಾಜಿಯು ಬ್ರಿಟಿಷರಿಂದ ಭಾರತಕ್ಕೆ ಸ್ವಾತಂತ್ರ‍್ಯ ಘೋಷಿಸಿ ತಮ್ಮ ನೇತೃತ್ವದಲ್ಲಿ ಸರ್ಕಾರವನ್ನೂ ರಚಿಸಿದ್ದರು. 1943 ಡಿಸೆಂಬರ್ 29 ರಂದು ಅಂಡಮಾನ್ ನಿಕೋಬಾರಿನಲ್ಲಿ ನೇತಾಜಿಯು ಪ್ರಾಂತೀಯ ಸರ್ಕಾರ ರಚಿಸುವ ಮೂಲಕ ಇತಿಹಾಸವನ್ನು ಬರೆದಿದ್ದರು. ಜೊತೆಗೆ ಡಿ.30 ರಂದು ಪೋರ್ಟ್ ಬ್ಲೇರ್‌ನ ಜಿಮ್ಖಾನಾ ಮೈದಾನದಲ್ಲಿ ಇಂಡಿಯನ್ ನ್ಯಾಷನಲ್ […]Read More
ಗ್ಯಾಲಾಪಾಗಸ್ ದ್ವೀಪದ ಬೃಹತ್ ಆಮೆಗಳು ಗ್ಯಾಲಾಪಾಗಸ್ ದ್ವೀಪ ಸಮೂಹದ ದೈತ್ಯಾಕಾರದ ಆಮೆಗಳು ಭೂಮಿಯ ಮೇಲೆ ವಾಸಿಸುವ ಭೂಚರಗಳು. 400 kg ತೂಕ ಮತ್ತು 1.8 ಉದ್ದ ಬೆಳೆಯವ ಈ ಆಮೆಗಳು ದೈತ್ಯದೇಹ ಮತ್ತು ದೀರ್ಘ ಆಯುಷ್ಯಕ್ಕೆ ಪ್ರಸಿದ್ಧವಾಗಿವೆ. ನೂರು ವರ್ಷಕ್ಕಿಂತಲೂ ಅಧಿಕ ಕಾಲ ಬದುಕುವ ಈ ಆಮೆಗಳು “ಗ್ಯಾಲಾಪಾಗಸ್ ದ್ವೀಪ ಸಮೂಚ್ಚಯಗಳ ಅಚ್ಚರಿಗಳಲ್ಲಿ ಒಂದಾಗಿವೆ. ಬಹುಶಃ ಗ್ಯಾಲಾಪಾಗಸ್ ದ್ವೀಪಸಮುಚ್ಚಯಗಳಲ್ಲಿ ಕಂಡುಬರುವಂತ ವಿಶಿಷ್ಟ ಹಾಗು ವೈವಿಧ್ಯಮಯ ಜೀವ ಪ್ರಭೇದಗಳು ಪ್ರಪಂಚದ ಬೇರೆ ಯಾವ ದ್ವೀಪಗಳಲ್ಲೂ ಕಂಡುಬರುವುದಿಲ್ಲ. ಹಾಗಾಗಿಯೇ ಈ […]Read More