ಪುಟ್ಟಿ ಕಂಡ ಗಾಂಧಿ

ಮಹಾತ್ಮ ಗಾಂಧೀಜಿ ಅವರ ನೂರೈವತ್ತನೇ ಜನ್ಮದಿನದ ಪ್ರಯುಕ್ತ ಕನ್ನಡಪ್ರಭದ ಮಕ್ಕಳ ಪುಟಕ್ಕಾಗಿ ನಾ ಬರೆದ ಪುಟ್ಟ ಕತೆಯು ಮತ್ತೆ ಈಗ ನೆನಪಾಯ್ತು. ಇವತ್ತಿಗೆ ಇದು ಸಮಂಜಸವೆನಿಸಿತು! ಪುಟ್ಟಿ ಕಂಡ ಗಾಂಧಿ ಹೇಗಿದ್ದರು ಗೊತ್ತಾ? ‘ತಾತಾ, ನೀನು ಗಾಂಧಿ ತಾತನ್ನ ನೋಡಿದ್ದಾ? ಅವರೇ ಅಂತೇ ಬ್ರಿಟಿಷರನ್ನು ನಮ್ ದೇಶದಿಂದ ಹೊರಗೆ ಕಳಿಸಿದ್ದು! ಹೌದಾ ತಾತಾ? ಅವರನ್ನ ನೀನು ನೋಡಿದ್ದಾ?’ಎಂದು ಪುಟ್ಟಿ ತಾತನ್ನ ಕೇಳಿದಳು. ‘ಹ್ಞೂ ಮರೀ, ನೀನು ಹೇಳಿದ್ದು ಸರಿ. ನಾನು ಗಾಂಧೀಜಿ ಅವರನ್ನು ಒಂದೇ ಒಂದು ಸಾರಿ […]Read More

‘ಮಾಯೆ’ ಕೃತಿ ಲೋಕಾರ್ಪಣೆ

‘ಮಾಯೆ’ ಶ್ರೀಮತಿ ಆಶಾ ರಘು ರವರ ಹೊಸ ಕಾದಂಬರಿಯು ಇಂದು ‘ಗಾಂಧಿ ಸಾಹಿತ್ಯ ಸಂಘ’ (ಮಲ್ಲೇಶ್ವರಂ) ಸಬಾಂಗಣದಲ್ಲಿ ಲೋಕಾರ್ಪಣೆಯಾಯಿತು. ಸಾಹಿತ್ಯಲೋಕ ಪಬ್ಲಿಕೇಷನ್ಸ್ ಹಾಗು ಬುಕ್ ಬ್ರಹ್ಮ ಸಹಯೋಗದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಖ್ಯಾತ ಕಾದಂಬರಿಕಾರರಾದ ‘ಕೆ ಎನ್ ಗಣೇಶಯ್ಯ, ಲೇಖಕಿಯರ ಸಂಘದ ಅಧ್ಯಕ್ಷರಾದ ವನಮಾಲಾ ಸಂಪನ್ನಕುಮಾರ್, ಲೇಖಕರಾದ ಗಿರಿಜಾ ರೈಕ್ವ, ಕೃತಿಯ ಲೇಖಕರಾದ ಆಶಾ ರಘು ಹಾಗು ಪುಸ್ತಕ ಪ್ರಕಟಣೆ ಮಾಡಿದ ರಘುವೀರ್ ಸಮರ್ಥ್ ರವರು ಉಪಸ್ಥಿತರಿದ್ದರು. ‘ಮಾಯೆ’ ಕೃತಿಯನ್ನು ಬಿಡುಗಡೆ ಮಾಡಿದ “ಕೆ ಎನ್ ಗಣೇಶಯ್ಯ” ನವರು” […]Read More

ಡಾ. ಪರಮೇಶ್ವರಪ್ಪ ಕುದರಿ

ಶಿಕ್ಷಣ ರಂಗದಲ್ಲಿ ಯುವ ಪೀಳಿಗೆಗೆ ಪಾಠವನ್ನು ಮಾಡುತ್ತಾ ತಮ್ಮ ಬರಹಗಳಿಂದ ಸಾಹಿತ್ಯ ಸೇವೆ ಮಾಡುತ್ತಿರುವವರಲ್ಲಿ ಶಿಕ್ಷಕರು ಹಾಗು ಹಿರಿಯ ಲೇಖಕರು ಆದ ಪರಮೇಶ್ವರಪ್ಪ ಕುದರಿ ಯವರು ಕೂಡ ಒಬ್ಬರು. ಧಾರವಾಡ ತಾಲೂಕಿನ ಹೆಬ್ಬಳ್ಳಿಯವರಾದ ಶ್ರೀ ಪರಮೇಶ್ವರಪ್ಪ ಕುದರಿ ಯವರು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ರಾಮಜೋಗಿಹಳ್ಳಿಯ ಸರಕಾರಿ ಪ್ರೌಢ ಶಾಲೆಯಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಾ ಜೊತೆಗೆ ಹಲವಾರು ವರ್ಷಗಳಿಂದ ಸಾಹಿತ್ಯ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಸಾಹಿತ್ಯ ಸೇವೆಗಾಗಿ “ಇಂಡಿಯನ್ ಎಂಪಾಯರ್” ಯುನಿವರ್ಸಿಟಿ, ತಮಿಳುನಾಡು ವತಿಯಿಂದ ಅಕ್ಟೋಬರ್ ೨ […]Read More

ಕೈಯಲ್ಲುಳಿದ ತುತ್ತು

ಇಂದಿಗೆ ಸರಿಯಾಗಿ ಒಂದು ತಿಂಗಳ ಹಿಂದೆ ನಡೆದ ಘಟನೆ ಅಂದು ನನ್ನ ಯಜಮಾನರು ಮುಂಜಾನೆಯಿಂದ ತುಂಬಾ ಸಂತೋಷದಲ್ಲಿದ್ದರು.. ಆದರೆ ರಾತ್ರಿಯ ಆ ಘಟನೆ ಇನ್ನಿಲ್ಲದಂತೆ ಕಾಡುತ್ತಿದೆ ಇಂದಿಗೂ.. ಅಷ್ಟಕ್ಕೂ ಆ ರಾತ್ರಿ ನಡೆದದ್ದಾದರೂ ಏನು ? ಎಲ್ಲ ವಿವರಿಸುವೆ ಅದಕ್ಕೂ ಮುಂಚೆ ನನ್ನ ಸಣ್ಣ ಪರಿಚಯ ನಿಮಗಾಗಲಿ.. ನನ್ನ ಹೆಸರು ಗೀತ (ಹೆಸರು ಬದಲಿಸಿದೆ) ನನ್ನ ಗಂಡ ಅತ್ತೆ ಒಂದು ವರುಷದ ಮಗು ಚಿಕ್ಕ ಬಾಡಿಗೆ ಮನೆಯಲ್ಲಿ ವಾಸ.. ನನ್ನ ಮನೆಯವರು ಪ್ರೈವೇಟ್ ಕಂಪನಿಯಲ್ಲಿ ಸಾಮಾನ್ಯ ಉದ್ಯೋಗಿ. […]Read More

ಹದ್ದು – Black Kite

“…ಸಾವಿಗೆ ಆತುರ! ಹದ್ದಿನಂತೆ ಬಂದು ಹಾರಿಸಿಕೊಂಡು ಹೋಯಿತು!” ಎಂಬುದು ನಮ್ಮ ಸಾಹಿತ್ಯದಲ್ಲಿ ಆಗಾಗ್ಗೆ ಕಂಡುಬರುತ್ತದೆ. ಹದ್ದು ಅಂತಹ ಶುಭದ ಸಂಕೇತವೇನೂ ಅಲ್ಲ. ಆದರೆ, ವಿಜ್ಞಾನದ-ಪರಿಸರದ ದೃಷ್ಟಿಯಿಂದ ಯಾವುದೂ ಮೇಲಲ್ಲ, ಕೀಳಲ್ಲ. ಎಲ್ಲಕ್ಕೂ ಅದರದೇ ಆದ, ಯುಕ್ತವಾದ ಸ್ಥಾನವಿರುತ್ತದೆ. ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಸಾವಿರ ಸಾವಿರ ಅಥವಾ ಲಕ್ಷದ ಸಂಖ್ಯೆಯಲ್ಲಿ ಕಂಡುಬರುವ ಹಕ್ಕಿ ಹದ್ದು! ಆದರೆ, ಇದರ ಸಂಖ್ಯೆಯೂ ಕಡಿಮೆಯಾಗುತ್ತಿದೆ ಎಂಬ ಆತಂಕಕಾರಿ ಸುದ್ದಿ ಬರುತ್ತಿದೆ. ಇರಲಿ, ಹದ್ದು ನಮ್ಮ ಬಹು ಸಾಮಾನ್ಯವಾದ ಮಧ್ಯಮಗಾತ್ರದ ಹಕ್ಕಿ. ಮಾಸಲು ಕಂದು […]Read More

ಪುಟ್ಟಣ್ಣ ಕಣಗಾಲ್ – ತಿಳಿಯದ ಮಾಹಿತಿಗಳು

ಕನ್ನಡ ಚಿತ್ರರಂಗದ ಕಿರೀಟದ ಅಮೂಲ್ಯ ರತ್ನ ಪುಟ್ಟಣ್ಣ ಕಣಗಾಲ್ 1967 ರಲ್ಲಿ ತ್ರಿವೇಣಿಯವರ ಜನಪ್ರಿಯ ಕಾದಂಬರಿಯಾದ ‘ಬೆಳ್ಳಿ ಮೋಡ’ ಚಲನಚಿತ್ರದಿಂದ ನಿರ್ದೇಶಕರಾಗಿ ಪರಿಚಯವಾದರು ಎಂಬುದು ಎಲ್ಲರಿಗು ತಿಳಿದ ಸಂಗತಿ. ಆದರೆ ಅಸಲಿಗೆ ‘ಬೆಳ್ಳಿ ಮೋಡ’ ಅವರ ಪ್ರಥಮ ನಿರ್ದೇಶನದ ಚಿತ್ರವಲ್ಲ. ಅದಕ್ಕೂ ಮೊದಲು ಪುಟ್ಟಣ್ಣನವರು ಮಲಯಾಳಂ ನಲ್ಲಿ ಐದು ಮತ್ತು ತೆಲುಗಿನಲ್ಲಿ ಒಂದು ಒಟ್ಟು ಆರು ಚಿತ್ರಗಳನ್ನು ನಿರ್ದೇಶಿಸಿದ್ದರು. ಮಲಯಾಳಂ1 . ಸ್ಕೂಲ್ ಮಾಸ್ಟರ್ ಕನ್ನಡದ ಕ್ಲಾಸಿಕ್ ಹಿಟ್ ಚಿತ್ರದ ಅವತರಿಣಿಕೆ – 19652 . ಕಳಿಂಜು […]Read More

ಪ್ರತ್ಯಗಾತ್ಮ ಚಿಂತನ (ನೇನಂಶಿ) – 9

ಕರುಣಾಳು ನೀನಾಗು ಪರಿವಾರದವರಲ್ಲಿಪರಿಹಾರ ಕಂಡು ಹಿಡಿ ತೊಡಕುಗಳು ಬರಲು,ಅರಿಯು ಎದುರಾಗಿರಲು ಕರವಾಳ ನೀನಾಗುಅರಿ ಭಯಂಕರನಾಗು- || ಪ್ರತ್ಯಗಾತ್ಮ || ಹೊಟ್ಟಿರದ ಬೀಜವನು ಬಿತ್ತಿದರೆ ಮೊಳೆಯುವುದೆ?ಹೊಟ್ಟು ನಿಃಸತ್ವವೆಂಬ ನುಡಿ ಸಲ್ಲ,ಸೃಷ್ಟಿಯೊಳಗಾವುದೂ ನಿಷ್ಪ್ರಯೋಜಕವಲ್ಲಹೊಟ್ಟು ರಕ್ಷಾ ಕವಚ- || ಪ್ರತ್ಯಗಾತ್ಮ || ಓದು ಬೇಕೇ ಬೇಕು ವಿಷಯ ಸಂಗ್ರಹಣಕ್ಕೆಓದು ಮುಗಿವುದು ಎಂದು? ಅದಕೆ ಕೊನೆಯುಂಟೆ?ಓದು, ಓದಿನ ಮೇಲೆ ಓದು, ಹೀಗಾಗಿರಲುಓದು ಬರಹಕೆ ಶತ್ರು- || ಪ್ರತ್ಯಗಾತ್ಮ || ಕತ್ತೆ ಎರಡರ ನಡುವೆ, ಹುತ್ತವೆರಡರ ನಡುವೆಮತ್ತೆ ಹೊಡೆದಾಡುವರ ನಡುವೆ ಹೋಗದಿರು,ಕತ್ತು ಬಗ್ಗಿಸಿಕೊಂಡು ಮುಂದೆ […]Read More

ಕುರಿ-ಮೇಕೆಗಳ ಹಾಡಲ್ಲದ ಪಾಡು!

ಎಲ್ಲೋ ಹುಟ್ಟಿದೆವು…ಇನ್ನೆಲ್ಲೋ ಮೇಯಿದೆವು…ಮತ್ತೆಲ್ಲೋ ಬೆಳೆದೆವು… ಹೀಗಿದ್ದ ನಮ್ಮನ್ನ, ನಮ್ಮ ಬಂಧು-ಬಂದವರನ್ನೆಲ್ಲಾ ..ಹಿಡಿ ಹಿಡಿದು ಲಾರಿಗೆ ತುಂಬಿಸಿಟಿಗೆ ತಂದರು… ಒಂದೆಡೆ ದೂಡಿ…ನಮ್ಮ ಬೆನ್ನ ಮೇಲೆಲ್ಲಬಣ್ಣ ಬಣ್ಣದ ಪುಡಿಯ ಹಾಕಿಮೋಡಿಯ ಮಾಡಿ…ಎಂದೂ ಇಲ್ಲದ..ಹಸಿ ಹಸಿಯ ಹುಲ್ಲ ಹಾಕಿಬೆನ್ನ ಚಪ್ಪರಿಸಿ…ಬಂದ ಬಂದವರಿಗೆಲ್ಲನಮ್ಮ ಪುಷ್ಠಿಯ ಪರಿಚಯಿಸಿ..ಮಾರಾಟ ಮಾಡುವರಲ್ಲ… ಕೊಂಡವರು ನಮ್ಮ ಕೊಂಡಾಡಿ…ಎತ್ತಾಡಿ… ಮುದ್ದಾಡಿ… ಆನಂತರ… ಕತ್ತಿಯಲ್ಲಿ ಕತ್ತ ಕತ್ತರಿಸಿ…ತುತ್ತು ಅನ್ನದಿ ಬೆರೆಸಿತಿಂದು ಮುಗಿಸುವರಲ್ಲ! ನಾವು ಕೆಲರು ‘ದುರ್ಬಲರು…ನರಪೇತಲರು… ಮಾರಾಟವಾಗಲೇ ಇಲ್ಲ!’ಎಂದೆಲ್ಲ ಹರ್ಷಿಸುತ್ತಿರೆ…ಬಡಿಯಿತು ಬರ ಸಿಡಿಲುಮನಕೆ ಮನದಾಳಕೆ… ನಿನ್ನೆಯಷ್ಟೇ ಮಾರಾಟವಾಗಿದ್ದ..ನಮ್ಮ ಅಣ್ಣ, ಅಮ್ಮ, ಅಪ್ಪ, […]Read More

ಮಾಯೆ – ಕಾದಂಬರಿ ಆಶಾ ರಘು

ಕಾದಂಬರಿ : ಮಾಯೆಲೇಖಕಿ : ಆಶಾ ರಘುಪ್ರಕಟಣೆ : ಸಾಹಿತ್ಯಲೋಕ ಪಬ್ಲಿಕೇಷನ್ಸ್ಬೆಲೆ : 250/- “ಆವರ್ತ” ಕಾದಂಬರಿಯ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಐತಿಹಾಸಿಕ ಕಲ್ಪನೆಯ ಕೃತಿಗಳ ಮರು ಹುಟ್ಟನ್ನು ಕೊಟ್ಟ ಲೇಖಕಿ ಶ್ರೀಮತಿ “ಆಶಾ ರಘು” ರವರು ಮತ್ತೊಮ್ಮೆ ತಮ್ಮ ಕನಸಿನ ಕೃತಿಯಾದ “ಮಾಯೆ” ಎಂಬ ಕಾದಂಬರಿಯನ್ನು ರಚಿಸಿದ್ದಾರೆ. ಕೃತಿಯು ಅಕ್ಟೋಬರ್ 2 ರಂದು ಬೆಂಗಳೂರಿನ ಗಾಂಧೀ ಸಾಹಿತ್ಯ ಸಂಘ ಸಭಾಂಗಣದಲ್ಲಿ (ಮಲ್ಲೇಶ್ವರಂ) ಲೋಕಾರ್ಪಣೆಯಾಗಲಿದೆ. ಕೃತಿಯನ್ನು ಖ್ಯಾತ ಜನಪ್ರಿಯ ಲೇಖಕರಾದ ಶ್ರೀ “ಗಣೇಶಯ್ಯ” ನವರು ಬಿಡುಗಡೆ […]Read More

ಕ್ಷಮಿಸಿ ಬಿಡು‌…ಹೆಣ್ಣೇ

ಹೆಣ್ಣು ಎಂಬುದು ಭೋಗದ ವಸ್ತುವಲ್ಲ. ಹೆಣ್ಣನ್ನು ಶಕ್ತಿ ದೇವತೆಯಾಗಿ ಆರಾಧಿಸುತ್ತಿದ್ದ ಕಾಲವೊಂದಿತ್ತು. ಇಂದು ಸಮಾಜದಲ್ಲಿ ಆಗುವಂತಹ ಅತ್ಯಾಚಾರ ಎಂಬ ಮಾಹಾರೋಗದಿಂದ ಹೆಣ್ಣುಮಕ್ಕಳನ್ನು ಕಾಪಾಡಬೇಕಾದ ಅನಿವಾರ್ಯತೆ ಬಂದೊದಗಿದೆ.ಕಾಲ ಬದಲಾಯಿತೋ ಅಥವಾ ಜನಗಳು ಬದಲಾದರೋ ಎಂಬುದು ತಿಳಿಯದಂತಾಗಿದೆ. ಗಾಂಧೀಜಿ ಕಂಡ ಕನಸು‌ ಮರೀಚಿಕೆಯಾಗುತ್ತಿದೆ. ಯಾವ ಧೈರ್ಯದ ಮೇಲೆ‌ ಒಂದು ಹೆಣ್ಣು ಮಗಳು ಅರ್ಧ ರಾತ್ರಿಯಲ್ಲಿ ಒಬ್ಬಳೇ ಹೋಗಲು ಸಾಧ್ಯ. ಹಗಲು ಹೊತ್ತಿನಲ್ಲಿಯೇ ಹೆಣ್ಣುಮಕ್ಕಳು ಓಡಾಡದಂತಹ ಪರಿಸ್ಥಿತಿ ಬಂದಾಗಿದೆ. ಹೆಚ್ಚಿನ ಯುವಜನತೆ ಮಾದಕ ವಸ್ತುಗಳ ದಾಸರಾಗಿ ಹಾಗೂ ಕೆಲ ಪ್ರೇರಿತ ಜಾಲತಾಣಗಳ […]Read More