ನಿಮ್ಮ ಕುಲದವರಾರೊ ನಿಧನರಾದರು ಎಂಬದುಮ್ಮಾನ ತರುವಂಥ ಸುದ್ದಿ ತಿಳಿದೊಡನೆಉಮ್ಮಳಿಸದೆಯೆ ಅವರ ಅಂತ್ಯ ಸಂಸ್ಕಾರಕ್ಕೆಒಮ್ಮತದಿ ನೆರವಾಗು- || ಪ್ರತ್ಯಗಾತ್ಮ || ಶವದ ವಾಹಕರಾರೂ ಇರದೆ ತೊಳಲಾಡುತಿರೆಅವರ ನೀ ಸಂತೈಸಿ ಜನರ ಕಲೆ ಹಾಕು,ಶವದ ವಾಹಕನಾಗಿ ಕಷ್ಟದಲಿ ನೆರವಾಗುಅವಮಾನವೇನಿಲ್ಲ- || ಪ್ರತ್ಯಗಾತ್ಮ || ಸಿರಿವಂತನಾದವಗೆ ಸರಸತಿಯ ಒಲವಿಲ್ಲಸರಸತಿಯು ಒಲಿದವನಿಗೆ ಸಿರಿ ಒಲಿಯಲಿಲ್ಲಸರಸತಿಯ ವರಪಡೆದ ಸಿರಿವಂತರಿಳೆಯೊಳಗೆಬೆರಳೆಣಿಕೆ; ಬಹಳಿಲ್ಲ- || ಪ್ರತ್ಯಗಾತ್ಮ || ಸತಿಪತಿಗಳೊಂದಾಗಿ ಬಾಳುವುದು ಅಪರೂಪಮತಭೇದದಿಂದಾಗಿ ವಿರಸವೇ ಹೆಚ್ಚುಸತಿಯೊಮ್ಮೆ ಪತಿಯೊಮ್ಮೆ ಮೇಲುಗೈ ಪಡೆಯುವರುಸತತ ಹೋರಾಟ ಬಾಳ್- || ಪ್ರತ್ಯಗಾತ್ಮ || ಎನ್. […]Read More
–ಹದಿನಾರು– ನಾವು ಕಥೆಯಲ್ಲಿ ಈಗ ಸ್ವಲ್ಪ ಹಿಂದೆ ಹೋಗಬೇಕು. ಅಪ್ರಮೇಯ ತೀರ್ಥಹಳ್ಳಿಯವನು. ಅವನ ತಂದೆ ಅವನನ್ನು ಕುಮಾರಾನಂದಸ್ವಾಮಿಗಳಿಗೆ ಒಪ್ಪಿಸುವೆನೆಂದ. ಹದಿನಾರನೇ ವಯಸ್ಸಿಗೆ ಸರಿಯಾಗಿ ಮೊದಲೇ ಹೇಳಿದಂತೆ ಅಪ್ರಮೇಯ ಅಥವಾ ಅಪ್ಪು ಜೋಷಿಮಠದ ಗುರುಗಳ ಆಶ್ರಮ ಸೇರಿದ. ಗುರುಗಳು ಅವನನ್ನು ನಾನಾ ರೀತಿಯಲ್ಲಿ ಪರೀಕ್ಷಿಸಿದರು. ಇವನೇನಾದರೂ ತಂದೆಯ ಬಲವಂತಕ್ಕೆ ಇಲ್ಲಿಗೆ ಬಂದನೇ ಅಥವಾ ಅವನಿಗೂ ಇಲ್ಲಿ ಇರಲು ಇಚ್ಛೆ ಇದೆಯೇ? ಇಂತಹ ಅನೇಕ ಪ್ರಶ್ನೆಗಳು ಗುರುಗಳನ್ನು ಬಾಧಿಸಿದ್ದವು. ಅದಕ್ಕೆ ಅಚ್ಚರಿ ಪಡಬೇಕಿರಲಿಲ್ಲ. ಏಕೆಂದರೆ ಚಿಕ್ಕವಯಸ್ಸಿನಲ್ಲೇ ಸ್ವಾಮೀಜಿಗಳಾದವರು ನಡೆಸುವ ಆಟಗಳು, […]Read More
ಶಬೆಲ್ಲಿ ವಾಸ್ತವ್ಯ ಹೋಟೆಲ್ ರೂಮಿನಲ್ಲಿ ಒಬ್ಬನೇ ಕೂತು ಏನು ಮಾಡುವುದು; ಒಂದೇ ಒಂದು ಪುಸ್ತಕ ಇಲ್ಲ. ಈ ಊರಲ್ಲಿ ಸದ್ಯ ಯಾರೂ ಪರಿಚಯವೂ ಇಲ್ಲ. ಎಲ್ಲಕ್ಕಿಂತ ಮೊದಲು ಊಟ ಮಾಡಿ ಬರೋಣ ಅನ್ನಿಸಿ, ಅಂತಿಮ ಮಹಡಿಯಲ್ಲಿದ್ದ ಉಪಾಹಾರಸ್ಥಳಕ್ಕೆ ಹೋಗಿ ಕೂತೆ. ಸರ್ವ್ ಮಾಡಲು ಬಂದವನಿಗೆ ತಿಳಿಯುವ ಹಾಗೆ ಅರ್ಧಂಬರ್ಧ ಇಂಗ್ಲೀಷ್ ಭಾಷೆಯಲ್ಲಿ ಏನಿದೆ ಊಟಕ್ಕೆಂದು ಕೇಳಿದೆ. ಆತ “ಬ್ರೆಡ್ ಬಟರ್, ರೈಸ್ ಅಂಡ್ ಮೀಟ್” ಎಂದ. ಎಂಥ ‘ಮೀಟ್’ ಅಂತ ಕೇಳಿದ್ದಕ್ಕೆ ಬೀಫ್ ಅಂದ. ಚಿಕನ್ ಕೇಳಿದರೆ […]Read More
ಒಂದು ನಿರ್ದಿಷ್ಟ ಜೀವಿಗೆ ಅದರ ಮೂಲ ಕಾರ್ಯಗಳನ್ನು ಪೂರೈಸಲು ಅಗತ್ಯವಾದ ಪೋಷಕಾಂಶಗಳು ಮತ್ತು ಶಕ್ತಿಯನ್ನು ನೀಡುವ ಒಂದು ಮೂಲ ಆಹಾರ. ಆಹಾರದಲ್ಲಿ ಅನ್ನದ ಅವಶ್ಯಕತೆ ಎಷ್ಟಿದೆ ಹಾಗೂ ಅದರ ಬೆಲೆ ಏನು ಎಂಬುದು ಹಸಿದಾತನಿಗೆ ಮಾತ್ರ ಗೊತ್ತಿರಲು ಸಾದ್ಯ.ಪ್ರತಿಯೊಂದು ಜೀವಿಗೂ ಆಹಾರವಿಲ್ಲದೆ ಜೀವಿಸಲು ಸಾದ್ಯವಿಲ್ಲ. ಹಾಗೇಯೆ ಅದರ ಅವಶ್ಯಕತೆ ಎಷ್ಟಿದೆ ಎಂಬುವುದನ್ನು ತಿಳಿದುಕೊಳ್ಳುವುದು ಮುಖ್ಯ. ಬೇರೆ ಬೇರೆ ಪ್ರದೇಶಗಳಲ್ಲಿ, ಬೇರೆ ಬೇರೆ ಧರ್ಮಗಳಲ್ಲಿ, ಬೇರೆ ಬೇರೆ ಜೀವಿಗಳಲ್ಲಿ ಆಹಾರವು ವೈವಿದ್ಯಮಯವಾಗಿರುತ್ತದೆ.ಗಾಳಿ, ನೀರು ನಮಗೆ ಎಷ್ಟು ಅವಶ್ಯಕವೋ ಅಷ್ಟೇ […]Read More
ಇವಳುಬರಿದೆ ಅನಿಸಿಕೆಯ ಹೆಣ್ಣಲ್ಲಅಥವ ಸುಮ್ಮಸುಮ್ಮನೆ ಹೆಂಡತಿಸಹ ಅಲ್ಲಇವಳೇ ಈ ಗೃಹದ ಧವಳರಾಶಿ! ಇವಳುಬೆಳಗ್ಗೆಯ ಬೆಳಗುಅಲ್ಲದೆ ಬಿಡುವಿರದೆ ಪ್ರತಿಮುಂಜಾನೆಇವಳೇ ಮೊದಲು ಮೂಡುವುದುಆ ನೇಸರನನು ಬಡಿದೆಬ್ಬಿಸುವುದು! ಪರಿವಾರದೂಳಿಗದ ಅನವರತಹೊಣೆಗೆ ಕೆತ್ತಿ ಕಡೆದಿಟ್ಟಇವಳ ಅಂಗಾಂಗಗುಡಿಯಲುರಿವ ಉಕ್ಕುಭರವಸೆಯಮನೋದೀಪಹೊತ್ತುಗೊತ್ತಿರದೆ ವ್ಯಾಪಿಸುವಬೆಳಕ ಹೊನಲು! ಹಗಲಿರುಳೆನದೆಸೂರಡಿಯ ಸಂಸಾರದೂರಹಾದಿಬೀದಿ ಗುಡಿಸಿಸಾರಿಸಿ ಸ್ವಚ್ಟ! ಸರಪಳಿ ಕೊಂಡಿಗಳ ನೇಯುವಹಾಗೆ ಒಂದರಪಕ್ಕಒಂದೊಂದು ಕೂಡಿಸಿ ಹೆಣೆವಗುಣಾಕಾರದ ಕಾಯಕಗಳಸೋನೆ ಸುರಿಮಳೆಇವಳುಹಗಲು ಕಪ್ಪಿಡುವ ಹೊತ್ತಿಗೆಕೋಡಿ ಹರಿವ ತುಂಬು ಹೊಳೆ! ರಾತ್ರಿಒಲುಮೆ ತುಳುಕುವ ನಲ್ಲನತೆಕ್ಕೆಯಪ್ಪುಗೆಉತ್ಕಟ ಬಯಕೆಬೆವರ ಬಿಸಿ ಸರೋವರದಲಿಮುಳುಗಿ ಮುಲುಕಿತೇಲಿ ಈಜಿಮತ್ತೆಮತ್ತೆ ತೇಲಿ ಈಜೀಜಿದರೂಇವಳುಇವಳಂಥವರುಮಾತ್ರ ಅಂತಲ್ಲಲಕ್ಷ್ಮಣನ ಜನನಕು ಮೊದಲೆಹೆಣ್ಣಿಗಿಲ್ಲಿ […]Read More
ಹಿಂದಿನ ಸಂಚಿಕೆಯಿಂದ… ದಂಪತಿಗಳ ನೆರವಿಗೆ ಬಂದ ಆತ್ಮ ಒಂಟಿಮನೆಯ ದುರಂತ ಕಥೆ ಯನ್ನು ಹೇಳತೊಡಗಿದಾಗ ದಂಪತಿಗಳು ಭಾವಪರಾಶರಾಗುತ್ತಾರೆ.ಆತ್ಮವು ತನ್ನ ಶಕ್ತಿಯಿಂದ ಆ ಬಳಿಗಳನ್ನೆಲ್ಲ ಬಾಗಿಲಿನಿಂದ ತೆಗೆದು ಎಸೆಯಿತು. ಮುಂದೆ… ಹೀಗೆ ಮತ್ತೆ ಮತ್ತೆ ಬಾಗಿಲು ಬಡಿದಾಗ ಒಳಗಿನಿಂದ ಬರುವ ಸದ್ದನ್ನು ಪದೇ ಪದೇ ಆಲಿಸಿ ಬೇಜಾರದ ಆತ್ಮವು, ಕೊನೆಗೆ ತನ್ನ ಶಕ್ತಿಯನ್ನೆಲ್ಲ ಉಪಯೋಗಿಸಿ ಆ ಕೊನೆಯ ಬಾಗಿಲನ್ನು ಜೋರಾಗಿ ತಳ್ಳುತ್ತಲೆ ಆ ಬಾಗಿಲು ಪಕ್ಕದ ಗೋಡೆಗೆ ಬಡಿದುಕೊಂಡು ಏನೋ ಸಿಡಿದ ಹಾಗೆ ಭಾಸವಾಯಿತು. ಅವನು ಬಂದು ಒಳಗೆ […]Read More
ರಂಗನತಿಟ್ಟಿನಲ್ಲಿ ನೀವು ದೋಣಿವಿಹಾರಕ್ಕೆ ಹೋಗಿ ದೊಡ್ಡಗಾತ್ರದ ಹಕ್ಕಿಗಳನ್ನು ನೋಡಿ ಆನಂದಿಸುತ್ತಾ ಹಾಗೇ ದೋಣಿ ಇನ್ನೇನು ಹೊರಟ ಸ್ಥಾನಕ್ಕೆ ಹಿಂದಿರುಗಿತು ಎನ್ನುವಾಗ ಬಂಡೆಯ ಮೇಲೆ ಕಾಣುವ ದಪ್ಪಕೊಕ್ಕಿನ, ಎದ್ದುಕಾಣುವ ಹಳದಿ “ಕನ್ನಡಕದ” ಹಕ್ಕಿಯೇ ಬಂಡೆಗೊರವ! ಪ್ರಧಾನವಾಗಿ ಬೂದು-ಬಿಳಿ ಹಕ್ಕಿ. ಬಲವಾದ ತುಸು ಮೇಲ್ತಿರುಗಿರುವ ಕೊಕ್ಕು. ಹಾರುವಾಗ ರೆಕ್ಕೆಯ ಮೇಲಿನ ಬಿಳಿ ಮಚ್ಚೆ ಹಾಗೂ ರೆಕ್ಕೆಯಂಚಿನ ಕಪ್ಪು ಬಣ್ಣ ಪ್ರಧಾನವಾಗಿ ಕಾಣುತ್ತದೆ. ಇದರ ಚಟವಟಿಕೆ ಸಂಜೆ ಮತ್ತು ರಾತ್ರಿಯೇ ಹೆಚ್ಚು. ಆದರೆ, ಹಗಲಿನಲ್ಲಿಯೂ ಕಾಣಿಸಿಕೊಳ್ಳುತ್ತದೆ. ಕಲ್ಲಿನ ಸಂದಿಯಲ್ಲಿನ ಏಡಿ ಪ್ರಧಾನವಾದ […]Read More
ಅಟ್ಟದಿಂ ಬಿದ್ದವನ ದಡಿಯಿಂದ ಬಡಿಯದಿರುಮೊಟ್ಟಮೊದಲಿಗೆ ಅವನ ಸಾಂತ್ವಯಿಸಬೇಕುಪೆಟ್ಟು ಬಿದ್ದಿರಬಹುದು, ಅದನು ಪರಿಕಿಸಿ ನೋಡುಕೆಟ್ಟ ಮಾತಾಡದಿರು- || ಪ್ರತ್ಯಗಾತ್ಮ || ಸಾವಿಗಾಗಳುತಿರುವ ಸತ್ತ ಕೂಸಿನ ತಾಯ್ಗೆಸಾವಧಾನದಿ ಬುದ್ಧ ಅವಳ ಸಂತೈಸಿಸಾವು ಕಾಣದ ಮನೆಯ ಸಾಸಿವೆಯ ತಾರೆಂದಸಾವಿರದ ಮನೆಯುಂಟೆ ?- || ಪ್ರತ್ಯಗಾತ್ಮ || ನೂರಾರು ಭವಬಾಧೆ ಇರಲಿ, ರಾಮಾಯಣದಪಾರಾಯಣವ ಮಾಡು ಭಯಭಕ್ತಿಯಿಂದತೂರಿ ಬಿಡುವುದು ಗಾಳಿ ಜಳ್ಳು ತೂರುವ ಹಾಗೆತಾರಕೋಪಾಯವಿದು- || ಪ್ರತ್ಯಗಾತ್ಮ || ಅಂಬುಧಿಯ ನೀರ್ಕಾದು ಆವಿಯಾಗುವುದೆಂತು !ಅಂಬರದ ಮೋಡದಲಿ ಅದು ನಿಲ್ವುದೆಂತು !ತುಂಬಿ ತುಳುಕಿದ ನೀರು ಬುವಿಗೆ […]Read More
ಹೇ ನೀನು, ನಿನ್ನ ದೇಹಕ್ಕಿದು ತಿಳಿದಿಲ್ಲ ;ನೀನು ಯಾರೆಂದುನಿನೆಷ್ಟು ಮುಖ್ಯ ಮನೆಯವರಿಗೆಂದುನೀನೆನು ಕೆಲಸ ಮಾಡುತ್ತೀ ಎಂದುನೀನು ನಡೆಯುವವನೋ, ಓಡುವವನೋ, ಹಾರುವವನೋ ಎಂದು… ನಿನ್ನ ದೇಹಕ್ಕಿದು ತಿಳಿದಿಲ್ಲ ;ನಿನ್ನನು ಮೆಚ್ಚುವವರೆಷ್ಟೆಂದುನಿನ್ನ ನಿಂದಿಸಿ ಹಣಿಯಲು ಹಪಹಪಿಸುವರೆಷ್ಟೆಂದುನಿನ್ನಿಂದ ಒಳಿತುಂಡವರ್ಯಾರೆಂದುನೀನು ವಂಚಿಸಿದವರು ಏನಾದರೆಂದು ನಿನ್ನ ದೇಹಕ್ಕಿದು ತಿಳಿದಿಲ್ಲ ;ನೀನ್ಯಾವ ಜಾತಿಯವನೆಂದುನೀನೇನು ತಿನ್ನುತ್ತೀ ಎಂದುನೀನು ಪೂಜಿಸುವ ದೇವರ್ಯಾರೆಂದುನೀನು ಆಸ್ತಿಕನೋ,ನಾಸ್ತಿಕನೋ ಎಂದು ನಿನ್ನ ದೇಹಕ್ಕಿದು ತಿಳಿದಿಲ್ಲ ;ನೀನು ಗೆದ್ದ ಪ್ರಶಸ್ತಿಗಳುಸೋತ ಪಂದ್ಯಗಳು ಎಷ್ಟೆಂದುನಿನ್ನ ಪ್ರೀತಿಸುವವರೆಷ್ಟುನಿನ್ನ ದ್ವೇಷಿಸುವವರೆಷ್ಟೆಂದು ನಿನ್ನ ದೇಹಕ್ಕಿದು ತಿಳಿದಿಲ್ಲ ;ನೀನು ಕವಿಯೆಂದುನೀನು ಕಾರ್ಮಿಕನೆಂದುನೀನೊಬ್ಬ ಅಪ್ಪನೂ,ಅಮ್ಮಳೂಅಣ್ಣನೂ […]Read More
ಮೊಗದಿಶು ಕಂಡೆ ಅಂತೂ ನನ್ನ ವೃತ್ತಿ ಬದುಕಿನ ಮುಂದಿನ ಕಾರ್ಯಕ್ಷೇತ್ರದ ಮಣ್ಣಿನಮೇಲೆ ಕಾಲಿಟ್ಟಿದ್ದಾಗಿತ್ತು. ಅಲ್ಲಿ ಇನ್ನು ಮುಂದೆ ಅದೆಷ್ಟು ಸಂವತ್ಸರಗಳ ಬದುಕೋ ಏನೋ; ಸದ್ಯಕ್ಕೆ ಯಾರ ಊಹೆಗೂ ನಿಲುಕದ್ದು. ನನ್ನನ್ನು ಹಾರ್ಗೀಸಾದ, ‘ಸರ್ಕಾರಿ ನೌಕರರ ವಿಮೆಯ ಔಷಧಾಲಯ’ದ ಕೆಲಸಕ್ಕೆ ಕರೆಸಿಕೊಳ್ಳಲಾಗಿತ್ತು. ಹಾಗಾದರೆ ಮೊಗದಿಶುಗೆ ಟಿಕೆಟ್ ಕಳಿಸಿದ್ದರೇಕೆ? ಅಣ್ಣನಿಂದ ಕೇಳಿದ ಮೇಲೆ ತಿಳಿಯಿತು. ಆ ಸಂಸ್ಥೆಯ ಕೇಂದ್ರ ಕಾರ್ಯಸ್ಥಾನ ಇರುವುದು, ರಾಜಧಾನಿ ಮೊಗದಿಶುವಲ್ಲಿ; ಆದ್ದರಿಂದ, ಅಲ್ಲಿಗೇ ಮೊದಲು ಹಾಜರಾಗಬೇಕೆಂದು (Duty Reporting Headquarters) ನಿಯಮ. ಹಾರ್ಗೀಸಾ ತಲಪಿದ ಮೊದಲ […]Read More