‘ದೇವರು ಬೇಕಾಗಿದ್ದಾರೆ’ ಕನ್ನಡ ಚಿತ್ರ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದೆ. ಆಗಸ್ಟ್ 13 ರಂದು ಸಂಜೆ 7ಕ್ಕೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿದೆ. ಈ ಚಿತ್ರವು ಚಿತ್ರಮಂದಿರದಲ್ಲಿ ಬಿಡುಗಡೆಯಾಗಿದ್ದ ಸಂದರ್ಭದಲ್ಲಿ ನಾನು ಬರೆದಿದ್ದ ಲೇಖನವನ್ನು ಈಗ ಮತ್ತೆ ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಈ `ದೇವರು ಬೇಕಾಗಿದ್ದಾರೆ’ ಚಿತ್ರದಲ್ಲಿ ಏನಿದೆ? ಮಕ್ಕಳ ಮುಗ್ಧ ಮನಸ್ಸಿನ ತುಮಲಗಳನ್ನು ಇಲ್ಲಿ ಬಿಚ್ಚಿಟ್ಟಿದ್ದಾರೆ. ಕತೆಯು ಚಿಕ್ಕದೇ ಅದರ ಅದಕ್ಕೊಂದು ವಿಸ್ತಾರವಾದ ಅರ್ಥ ಕೊಟ್ಟು ಚಿತ್ರವನ್ನು ಹಲವು ಪದರಗಳಲ್ಲಿ ಚಿತ್ರಿಸಿದ್ದಾರೆ. ಈ ಚಿತ್ರದಲ್ಲಿ `ದೇವರು’ ಯಾರು? ಎಂಬುದೇ ಚಿತ್ರದ […]Read More
ಹಿಂದಿನ ಸಂಚಿಕೆಯಲ್ಲಿ ಅಪ್ರಮೇಯನ ಮನಸಿನಲ್ಲಿ ಗುರುಗಳ ದೇಹದ ಮೇಲೆ ಸುತ್ತ ಗಾಯಗಳು ಹೇಗಾದವು ಎಂಬ ಚಿಂತೆಗೆ ಬೀಳುತ್ತಾನೆ.ಅವರು ಇಟ್ಟಿಕೊಂಡಿದ್ದ ರಹಸ್ಯಗಳಾದರು ಏನು ? —ಮೂರು— ಪ್ರಪಂಚದಲ್ಲಿನ ದುಷ್ಟತನಕ್ಕೆ ಕೊನೆಯೇ ಇಲ್ಲವೇನೋ… ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಂ| ಧರ‍್ಮಸಂಸ್ಥಾಪನಾರ‍್ಥಾಯ ಸಂಭವಾಮಿ ಯುಗೇ ಯುಗೇ|| ಎನ್ನುತ್ತಾನೆ ಆ ದೇವದೇವ. ಸಜ್ಜನರನ್ನು ಉಳಿಸಲೆಂದು, ಕೇಡಿಗರನ್ನು ಅಳಿಸಲೆಂದು, ಧರ‍್ಮವನ್ನು ನೆಲೆಗೊಳಿಸಲೆಂದು ಯುಗ ಯುಗದಲ್ಲೂ ಮೂಡಿ ಬರುತ್ತೇನೆ ಎಂದಿದ್ದಾನೆ. ಆದರೆ ಇನ್ನೂ ಒಂದು ಮಾತು ನಾವು ಕೇಳಿದ್ದೇವೆ. ಪಾಪದ ಕೊಡ ತುಂಬುವವರೆಗೂ ಶಿಕ್ಷೆ […]Read More
ಕೊರಗುವುದೇಕೆ ಕಾರ್ಮಿಕ ?ನಾವಿಲ್ಲವೇ ನಮ್ಮ ವೇದಿಕೆಯಿಲ್ಲವೇಜೊತೆ…ಕೊರಗದಿರಿ ಕರೋನ ಬಂತ್ತೆಂದುಕಟ್ಟಿರುವೆವು ಕಾರ್ಮಿಕ ವೇದಿಕೆ ನಿಮಗಾಗಿಸೇರಿದ್ದೀರಲ್ಲ ನಮ್ಮ ಜೊತೆಚಿಂತೆ ಇನ್ಯಾತಕ್ಕೆ. ಕಷ್ಟ ಕಾರ್ಪಾಣ್ಯ ಕಳೆಯುವುದು ಮೋಡದ ಹಾಗೆಕೈ ಬೆಸೆದಿದ್ದೇವಲ್ಲ ನಿಮ್ಮ ಅಂಗೈಗಳಿಗೆಕಣ್ಣೀರ ಒರೆಸುವುದು ನಮ್ಮಗಳ ಕೈನಂಬಿಕೆಯಿರಲಿ ಎಂದೆಂದಿಗೂನಮ್ಮ ವೇದಿಕೆಯೊಂದಿಗೆಸದ್ಯಕ್ಕೆ ಕಾಣಿಸಬೇಕು ನಿಮ್ಮ ಮುಗುಳುನಗೆ. ಗಿರಿಜಮ್ಮರಾಜ್ಯ ಮಹಿಳಾ ಅಧ್ಯಕ್ಷರುRead More
ಅ-ಜಾಂತ ಎಂದರೆ ತಿಳಿಯದ್ದು ಎಂದು ಅರ್ಥ. ಹಾಗಾಗಿ ಅಜಂತ ನಾಮಧೇಯವಾಗಿದೆ. ಇದು ಹುಲಿಗಳೇ ವಾಸಿಸುವ ದಟ್ಟ ಅರಣ್ಯದಲ್ಲಿದ್ದು ವಾಘೋರ ಎಂಬ ನದಿಯ ದಡದಲ್ಲಿ ಇದೆ. ನದಿಯು ಕುದುರೆಯ ಲಾಳದ ಆಕಾರದಲ್ಲಿ ಬಾಗಿ ಮುಂದಕ್ಕೆ ಹರಿಯುತ್ತದೆ. ವ್ಯಾಘ್ರಗಳೇ ಹೆಚ್ಚಾಗಿರುವ ಈ ಕಾಡಿನಲ್ಲಿ ಎಲ್ಲ ಹುಲಿಗಳೂ ನೀರು ಕುಡಿಯಲು ಇಲ್ಲಿಗೇ ಬರುವುದರಿಂದ ಈ ನದಿಗೆ ವಾಘೋರ ಎಂಬ ಹಸರು ಬಂದಿದೆ, ಈ ಪರಿಸರದ ಕಲ್ಲುಗಳು ಬಹಳ ಕಠಿಣವಾಗಿರುವುದರಿಂದ ಶಿಲಾನ್ಯಾಸಕ್ಕೆ ಸೂಕ್ತವಾದುದು ಮತ್ತು ಬೇಸಿಗೆಯನ್ನು ಬಿಟ್ಟು ಉಳಿದ ಎಲ್ಲ ಕಾಲಮಾನಗಳೂ ಬಹಳ […]Read More
ಕೆಲವೊಮ್ಮೆ ಮನದೊಳಗಿನ ಆಲೋಚನೆಗಳುಅಪಾರ್ಟ್ಮೆಂಟಿನ ಕಾಂಪೌಂಡಿನೊಳಗೆವಾಕಿಂಗ್ ಮಾಡಿದಂತೆ ಅಲ್ಲಲ್ಲೇ ಸುತ್ತುತ್ತಿರುತ್ತವೆಕಣ್ಣಿಗೆ ಬೀಳುವಷ್ಟರಲ್ಲೇ ಕಥೆ ಹೆಣೆಯುತ್ತಿರುತ್ತವೆ || ನಮ್ಮದು ನೋಡಿ ಹೈಫೈ ಅಪಾರ್ಟ್ಮೆಂಟುಹೇಳದಿದ್ದರೆ ನಿಮಗೆ ಅರ್ಥವಾಗುವ ಬಗೆ ಏನುಂಟು || ಏರೋಪ್ಲೇನಿನ ಬ್ಯುಸಿನೆಸ್ ಕ್ಲಾಸಿನಂತೆವಿಚಿತ್ರ ನಿಶ್ಯಬ್ದದೊಂದಿಗೆ ಜನರಿಲ್ಲಿ ಜೀವಿಸುತ್ತಾರೆರಾತ್ರಿಯ ನಿರ್ವಾತದಂತೆ ಹಗಲುಗಳೂ ಇಲ್ಲಿ ಖಾಲಿ ಖಾಲಿ || ಥೇಟು ಸುತ್ತಿ ಸುತ್ತಿ ಬರುವ ಅವವೇ ಆಲೋಚನೆಗಳಂತೆವಾಕಿಂಗು ಮಾಡುವಾಗ ಕಾಣಿಸುವುದು ಅವವೇ ಮುಖಗಳುಪರಿಚಿತರಂತೆ?!? ಪರಿಚಿತರೊಳಗಿನ ಅಪರಿಚಿತರಂತೆ || ಕಳೆದ ತಿಂಗಳು ಮೂರು ಕೆಂಪು ಆರು ಬಿಳಿ ಬಳೆ ತೊಟ್ಟುಚಡ್ಡಿ ಹಾಕಿಕೊಂಡು ಗಂಡನೊಡನೆ […]Read More
ಹಾಯ್, ಹಲೋ ಎಲ್ಲರಿಗು… ಒಬ್ಬ ಪುಟ್ಟ ಮುಗ್ಧ ಹುಡುಗ ಇದ್ದ. ಓದಿನಲ್ಲಿ ಹಿಂದೆ ಉಳಿದಿದ್ದ. ತನ್ನದೇ ಲೋಕದಲ್ಲಿ ಸದಾ ಮುಳುಗಿರುತ್ತಿದ್ದ. ಅವನಿಗಿದ್ದ ಪ್ರಪಂಚ ಒಂದೇ. ಅದು ಅವನ ತಾಯಿ. ತನ್ನ ಮಗ ಬದುಕಿನಲ್ಲಿ ಎಲ್ಲರಂತಾಗಬೇಕೆಂದರೆ ತಾನು ಮಾತ್ರ ಅವನಿಗೆ ಪ್ರೋತ್ಸಾಹಿಸಬೇಕು ಎಂದು ಅರಿತ ತಾಯಿ ಅವನನ್ನು ಜಗತ್ತಿನ ಕಹಿ ಮಾತುಗಳಿಂದ ದೂರವಿರಿಸಿ, ಅವರೆಲ್ಲರೂ ಅವನನ್ನು ಪ್ರೀತಿಸುತ್ತಾರೆಂದೂ, ಹೊಗಳುತ್ತಾರೆಂದೂ ಹೇಳುತ್ತಿದ್ದಳು. ಮುಂದೆ ಆ ಹುಡುಗನು ಜನರ ನಂಬಿಕೆ, ಪ್ರೀತಿ, ನಂಬಿಕೆ ಉಳಿಸಲು ಮಹತ್ಕಾರ್ಯ ಮಾಡಿ ಜಗತ್ತಿಗೇ ಮಾದರಿಯಾದ ವಿಜ್ಞಾನಿಯಾದನಂತೆ. […]Read More
ಉಸಿರು ನಿಲ್ಲುವ ಮುನ್ನ ಹೆಸರು ನಿಲ್ಲುವ ಕೆಲಸ ಮಾಡಬೇಕು ಎಂದು ಬರೆದ ಕನ್ನಡ ಶಾಯರಿಗಳ ಜನಕ ಎಂದೇ ಖ್ಯಾತರಾಗಿದ್ದ ಖ್ಯಾತ ಕವಿ ಇಟಗಿ ಈರಣ್ಣ. ಚಂದಕ್ಕಿಂತ ಚಂದ ನೀನೇ ಸುಂದರನಿನ್ನ ನೋಡ ಬಂದ ಬಾನ ಚಂದಿರ ಹೊಸಪೇಟೆ, ಬಳ್ಳಾರಿ, ಹೂವಿನಹಡಗಲಿ ಇನ್ನಿತರ ಕಡೆ ಉಪನ್ಯಾಸಕರಾಗಿದ್ದ ಈರಣ್ಣ ನಿವೃತ್ತಿಯ ನಂತರ ಶಿವಮೊಗ್ಗದಲ್ಲಿ ನೆಲೆಸಿದ್ದರು. ಕನ್ನಡದ ಶಾಯರಿಗಳು ಅವರ ಜನಪ್ರಿಯ ಪುಸ್ತಕ. ಹದಿನೈದಕ್ಕೂ ಹೆಚ್ಚು ಮುದ್ರಣ ಕಂಡಿರುವುದು ಅವರ ಜನಪ್ರಿಯತೆಗೆ ಸಾಕ್ಷಿ. ತಾಯಿ ಕೊಟ್ಟ ತಾಳಿ ಅವರ ಸಾಹಿತ್ಯ ಬಳಕೆ […]Read More
ಸೂರ್ಯದೇವನಿಗಿಂತ ಇನ್ನು ದೇವರು ಇಲ್ಲಸೂರ್ಯನೇ ಈ ಜಗದ ಆಧಾರ ಭೂತ |ಸೂರ್ಯನಿಂದಲೆ ಸಕಲ ಜೀವಿಗಳ ಉತ್ಪತ್ತಿಸೂರ್ಯನಿಗೆ ಶರಣೆನ್ನು – || ಪ್ರತ್ಯಗಾತ್ಮ || ಸೃಷ್ಟಿ ಮೇಣ್ ಸ್ಥಿತಿ, ಲಯಕೆ ಸೂರ್ಯ ಕಾರಣಸೃಷ್ಟಿಕರ್ತನು ಇವನೆ; ಸಸ್ಯಗಳ ಪ್ರಾಣ |ದೃಷ್ಟಿಗೋಚರವಪ್ಪ ಭಗವಂತನಿವನೆ ದಿಟಇಷ್ಟಾರ್ಥದಾಯಕನು- || ಪ್ರತ್ಯಗಾತ್ಮ || ನವಗ್ರಹಗಳೆಲ್ಲವು ಇನವ ಅಂಕೆಗೊಳಪಟ್ಟಿಹವುಮಹನೀಯನಿವನೊಬ್ಬ ವಿಶ್ವಕ್ಕೆ ಒಡೆಯ |ಇಹಪರದ ಸೌಖ್ಯಕ್ಕೆ ಇವನ ಬಿಟ್ಟರೆ ಇಲ್ಲವಿಹಿತದಲಿ ಶರಣಾಗು- || ಪ್ರತ್ಯಗಾತ್ಮ || ಎನ್. ಶಿವರಾಮಯ್ಯ ‘ನೇನಂಶಿ’ವಾಚನ – ಗೌರಿ ದತ್ತ ಏನ್ ಜಿRead More
ಬಣ್ಣವೊಂದನ್ನು ಬಿಟ್ಟರೆ ಬೆಳ್ಳಕ್ಕಿಯ ದೊಡ್ಡಣ್ಣನೇ ಎನಿಸುವ ಈ ಬಕ, ಮುಖ್ಯವಾಗಿ ಕರಾವಳಿ ಪ್ರದೇಶಗಳಲ್ಲಿ ಕಂಡುಬರುತ್ತದೆ. ನಮ್ಮ ಉಡುಪಿಯ ಸಮುದ್ರ ತಟದಲ್ಲಿಯೂ ಕಂಡುಬರುತ್ತದೆ. ಇಂಗ್ಲೀಷಿನಲ್ಲಿ Western Reef Heron ಅಥವಾ Western Reef Egret ಎನ್ನಲಾಗುವ ಇದರ ವೈಜ್ಞಾನಿಕ ಹೆಸರು Egretta gularis. ಏನಿದು ವೈಜ್ಞಾನಿಕ ಹೆಸರು ಎಂಬ ಪ್ರಶ್ನೆ ಏಳಬಹುದು, ಕೆಲವರಿಗೆ. ಭೂಮಿಯ ಮೇಲಿನ ಸಕಲ ಜೀವಿಗಳಿಗೂ ಒಂದೊಂದು ಅನನ್ಯವಾದ ಹೆಸರು ಬೇಕಲ್ಲವೆ? ಇಲ್ಲವಾದಲ್ಲಿ ಒಂದಕ್ಕೇ ಅನೇಕ ಕಡೆ ಅನೇಕ ಹೆಸರುಗಳು ಇದ್ದು ಅಧ್ಯಯನ, ಗುರುತುಹಚ್ಚುವಿಕೆಗೆ ತೊಂದರೆಯಾಗುತ್ತದೆ. […]Read More
“ಋಣಭಾರ” ಕಥಾಸಂಕಲನಕ್ಕೆ ಸಾಹಿತ್ಯ ಶರಭ ಪ್ರಶಸ್ತಿ ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಅಪ್ಪಟ ಹಳ್ಳಿ ಪ್ರತಿಭೆ ಅನಂತ ಅವರ ಚೊಚ್ಚಲ ಕೃತಿ ಋಣಭಾರ ಕಥಾಸಂಕಲನ ಇದೀಗ ಮೂರನೆಯ ಪ್ರಶಸ್ತಿ ಪಡೆದುಕೊಂಡಿದೆ. 2020 ರಲ್ಲಿ ಪ್ರಕಟಗೊಂಡ ಈ ಕಥಾಸಂಕಲನವು ಕನ್ನಡ ಪುಸ್ತಕ ಪ್ರಾಧಿಕಾರದಿಂದ ಯುವಬರಹಗಾರ ಚೊಚ್ಚಲ ಕೃತಿ ಬಹುಮಾನ ಹಾಗೂ ಹೆಬ್ಬಗೋಡಿ ಗೋಪಾಲ್ ದತ್ತಿ ಪ್ರಶಸ್ತಿ ಪಡೆದುಕೊಂಡಿತ್ತು. ಇದೀಗ ಗುರುಕುಲ ಪ್ರತಿಷ್ಠಾನದಿಂದ ಕೊಡಮಾಡುವ ರಾಜ್ಯಮಟ್ಟದ ಸಾಹಿತ್ಯ ಶರಭ ಪ್ರಶಸ್ತಿಗೆ ಕೃತಿ ಆಯ್ಕೆಯಾಗಿದೆ ಎಂದು ಗುರುಕುಲ ಪ್ರತಿಷ್ಠಾನದ ರಾಜ್ಯಾಧ್ಯಕ್ಷರಾದ ಹುಲಿಯೂರುದುರ್ಗ […]Read More