ಸಿದ್ದಗಂಗೆಯ ಸಿದ್ಧಪುರುಷ ಶರಣು ಬಂದೆನು ನಿಮಗೆ ಶ್ರೀ ಶಿವಕುಮಾರರೇ !ತುಮಕೂರು ಸಿದ್ದಗಂಗೆಯ ಬೆಳಗಿಸಿದವರೇ!!ಜಗವೆಲ್ಲಾ ಕೊಂಡಾಡುವ ಪುಣ್ಯಾತ್ಮರೇ!ಜ್ಞಾನ ಕರ್ಮ ಧರ್ಮಗಳ ಆರಾಧಕರೇ|| ಹಣೆಯಲ್ಲಿ ವಿಭೂತಿ ಧರಿಸಿಕೊರಳಲ್ಲಿ ರುದ್ರಾಕ್ಷಿಯ ಧರಿಸೀ|ದಾಸೋಹಕ್ಕಾಗೀ ಬೆನ್ನು ಬಾಗಿಸಿಶಿವ ಧರೆಗೆ ಕಳಿಸಿದ ಸನ್ಯಾಸೀ|| ಕರ್ನಾಟಕದ ರತ್ನಾಕರರು ನೀವುಗೌರವ ಡಾಕ್ಟರೇಟ್ ಲಭಿಸಿದವು|ಆಧುನಿಕ ಬಸವಣ್ಣನವರೇ ನೀವುನಮ್ಮಯ ದೇವಮಾನವರು ನೀವು|| ನಾಗಶಯನನ ಪ್ರಪೌತ್ರರ ಸೇವಕರುಗಂಗಮ್ಮ ಹೊನ್ನಾಪುರದ ಕುಲಪುತ್ರರು|ಬನದ ಹುಣ್ಣಿಮೆಯಲಿ ಲಿಂಗೈಕ್ಯ ರಾದವರುನಮ್ಮ ಸಿದ್ದಗಂಗೆಯ ಸಿದ್ಧಪುರುಷರು|| ನಾಗರಾಜು.ಹಬೆಂಗಳೂರುRead More
ಆಸ್ಟ್ರೇಲಿಯದ ಸಂರಕ್ಷಿತ ಪಕ್ಷಿ – ಕಾಕಟೂ “ಕ್ಯಾಕಟುಯಿಡೆ” ಕುಟುಂಬಕ್ಕೆ ಸೇರಿದ 21 ಜಾತಿಯ ಗಿಳಿಗಳಲ್ಲಿ ಕಾಕಟೂ ಹಕ್ಕಿಯು ಒಂದು. ಕಪ್ಪು ಕಾಕಟೂ ಅಥವಾ ಕಪ್ಪುರೆಕ್ಕೆಯ ಕಾಕಟೂ ಆಸ್ಟ್ರೇಲಿಯಾದ ಸ್ಥಳೀಯ ಪಕ್ಷಿ. ಈ ಪಕ್ಷಿಗಳು ಹೊಳೆಯುವ ಕಪ್ಪುರೆಕ್ಕೆಗಳನ್ನು ಹೊಂದಿದ್ದು, ರೆಕ್ಕೆಯ ಅಂಚುಗಳು ಬಿಳಿಯಾಗಿರುತ್ತವೆ. ಅವುಗಳ ಮೇಲೆ ಸೂರ್ಯ ಬೆಳಗಿದಾಗ ಹೆಚ್ಚು ಆಕರ್ಷಕವಾಗಿ ಕಾಣುತ್ತವೆ. ಅದರಲ್ಲೂ ಕೆಂಪುಬಾಲದ ಮತ್ತು ಕಪ್ಪು ರೆಕ್ಕೆಯಿರುವ ಕಾಕಟೂಗಳು ಸುಂದರವಾಗಿರುತ್ತವೆ. ಗಂಡು ಕಾಕಟೂಗಳು ಕೆಂಪುಬಾಲವನ್ನು ಹೊಂದಿದ್ದು, ಇವುಗಳ ತೂಕ 670ರಿಂದ 920 ಗ್ರಾಮ್ ಇದ್ದರೆ ಹೆಣ್ಣು […]Read More
ರಾಷ್ಟ್ರ ಧ್ವಜ ಪ್ರತಿಯೊಂದು ರಾಷ್ಟವು ತನ್ನದೇ ಆದ ಧ್ವಜವನ್ನು ಹೊಂದಿದೆ. ನಮ್ಮ ರಾಷ್ಟ್ರವು ತ್ಯಾಗದ ಹಾಗೂ ಧೈರ್ಯದ ಸಂಕೇತವಾಗಿ ಕೇಸರಿ ಬಣ್ಣ, ಶಾಂತಿಯ ಸಂಕೇತವಾಗಿ ಬಿಳಿ ಬಣ್ಣ, ಸಮೃದ್ಧಿಯ ಸಂಕೇತವಾಗಿ ಹಸಿರು ಬಣ್ಣ, ಹಾಗೂ ಮದ್ಯದಲ್ಲಿ ಧರ್ಮ, ವಿಜಯದ ಸಂಕೇತವಾಗಿ ನೀಲಿ ಬಣ್ಣದಿಂದ ಕೂಡಿರುವ ಆಶೋಕ ಚಕ್ರದಿಂದ ನಮ್ಮ ರಾಷ್ಟಧ್ವಜವನ್ನು ವಿನ್ಯಾಸಗೊಳಿಸಲಾಯಿತು. ಇದು ತಿರಂಗಾ ಎಂಬ ಹೆಸರಿನಿಂದಲೇ ಜನಪ್ರಿಯವಾಗಿದೆ. ಪ್ರತಿಯೊಂದು ಭಾರತೀಯನ ಹೆಮ್ಮೆ, ಪ್ರತಿಷ್ಠೆ, ಗೌರವದ ಸಂಕೇತ ನಮ್ಮ ರಾಷ್ಟ್ರಧ್ವಜ. 1921ರಲ್ಲಿ ವಿಜಯವಾಡದಲ್ಲಿ ಅಖಿಲ ಭಾರತ ಅಧಿವೇಶನದಲ್ಲಿ, […]Read More
ಬದುಕೇ ನೀನೇಕೆ ಹೀಗೆ! ಬದುಕೆಂದರೆ ಎನು?ಬದುಕಿನ ಅರ್ಥವಾದರೂ ಎನುಜೀವನದ ಮಹತ್ವ ವಾದರೂ ಏನೂ?ಎಂದೋ ಹುಟ್ಟಿ ಎಂದೋ ಸಾಯುವುದೇ ಬದುಕೇಇಷ್ಟ ಬಂದ ಹಾಗೆ ಇರುವುದು ಬದುಕೇ,ಸರಿ ತಪ್ಪುಗಳ ತಿಳಿಯುವುದೇ? ತಪ್ಪುಗಳ ತಿದ್ದಿ ಮುಂದೆ ಹೋಗುವುದೇ?ಜೀವನದ ಹಾದಿಯಲ್ಲಿ ಬರುವ ಆಗು ಹೋಗುಗಳ ಅರಿತು ಬದುಕುವುದೇ,ಬದುಕೆಂದರೆ ಏನೆಲ್ಲಾ ಪ್ರಶ್ನೆಗಳು. ಎಡವಿ ಬಿದ್ದಾಗ ಎದ್ದು ಮುಂದೆ ನಡಿ ಎಂದಿತು ಬದುಕು ,ಸಿಟ್ಟು ಬಂದಾಗ ಕೋಪ ಮಾಡಿ ಕೊಳ್ಳದೆ ತಾಳ್ಮೆಯಿಂದ ಇರು ಎಂದು ಕಲಿಸಿತು ಬದುಕು .ಕೋಪದಲ್ಲಿ ಮೆದುಳಿಗೆ ಕೆಲಸ ಕೊಟ್ಟು ಅವಸರದ ನಿರ್ಧಾರ […]Read More
ಹಮ್ಮಿಂಗ್ ಬರ್ಡ್ ಗಾಳಿಯಲ್ಲಿ ಹಿಂದಕ್ಕೂ ಮುಂದಕ್ಕೂ ಮೇಲಕ್ಕೂ ಕೆಳಗೂ ನಿರಂತರವಾಗಿ ರೆಕ್ಕೆ ಬಡಿಯುತ್ತಾ ಹಾರಾಟವನ್ನ ನಿಯಂತ್ರಿಸಿಕೊಂಡು ಹಾರಾಟದ ದಿಕ್ಕನ್ನ ಬದಲಾಯಿಸುತ್ತಾ ಹಾರಾಡಬಲ್ಲ ಜಗತ್ತಿನ ಏಕೈಕ ಹಕ್ಕಿ ಹಮ್ಮಿಂಗ್ ಬರ್ಡ್. ಈ ಪಕ್ಷಿಗಳ ರೆಕ್ಕೆಗಳ ರಚನೆಯೇ ಇದಕ್ಕೆ ಮುಖ್ಯ ಕಾರಣ. ಇವುಗಳಿಗೆ ಇತರೇ ಪಕ್ಷಿಗಳಂತೆ ಟೊಳ್ಳಾದ ಮೂಳೆ ವಿಶಾಲ ಎದೆ ಎಲ್ಲ ಇದ್ದರೂ ರೆಕ್ಕೆಗಳ ಚಲನೆಯ ದಿಕ್ಕು ಮಾತ್ರ ಅವುಗಳಂತಿಲ್ಲ. ಸಾಮಾನ್ಯವಾಗಿ ಎಲ್ಲ ಪಕ್ಷಿಗಳು ತಮ್ಮ ರೆಕ್ಕೆಗಳನ್ನ ಮೇಲಕ್ಕೂ ಕೆಳಕ್ಕೂ ಬಡಿದು ಹಾರಾಟ ಮಾಡಲು ಬೇಕಾಗುವ ಒತ್ತಡ ಪಡೆದುಕೊಳ್ಳುತ್ತವೆ […]Read More
ನಾ ರೈತನ ಮಗ ರೈತನ ಮಗನು ನಾನು ಎನ್ನುವ,,,ಹೆಮ್ಮೆಯಿದೆ ನನ್ನ ಬದುಕಿನಲಿ.ಈ ಜಗದ ಹಸಿವನು ನೀಗಿಸುವತುತ್ತು ಬೆಳೆಯುವೆನು ಹೊಲಗಳಲಿ.ರೈತನ ಮಗನೊ ನಾನು,,,ನಾ ಬೆಳೆದರೆ ಬದುಕುವೆ ನೀನು,,,.!!೧!! ಭೂಮಿ ತಾಯಿಯ ನಂಬಿ ಬದುಕುವೆನೇಗಿಲ ಹಿಡಿದು ಉಳುಮೆ ಮಾಡುವೆಮಡದಿ ಮಕ್ಕಳಿಗು ಇದನು ಕಲಿಸುವೆಸಾಯುವ ತನಕ ಅನ್ನ ಬೆಳೆಯುವೆರೈತನ ಮಗನೊ ನಾನು,,,ನಾ ಬೆಳೆದರೆ ಬದುಕುವೆ ನೀನು,,,,.!!೨!! ಬಸವನು ತಿನ್ನುವ ಮೇವನು ಬೆಳೆದುಧಾನ್ಯವ ತೆಗೆದು ಬಣವೆಯಾಕುವೆಬಸವನ ಸಾಕುತ ಹಾಲನು ಕರೆದುಮಕ್ಕಳ ಒಡಲಿಗೆ ಅಮೃತವಾಗುವೆ.ರೈತನ ಮಗನೊ ನಾನು,,,ನಾ ಬೆಳೆದರೆ ಬದುಕುವೆ ನೀನು,,,.!!೩!! ಹಣ್ಣು ಹಂಪಲು,ಹೂಗಳ […]Read More
ಬಣ್ಣ ಅಂದು ಹೋಳಿ ಹಬ್ಬ ಎಲ್ಲೆಲ್ಲೂ ಬಣ್ಣಗಳದ್ದೇ ದರ್ಬಾರು. ಎಲ್ಲಾ ಬೀದಿಗಳಲ್ಲಿ ಬಣ್ಣದ ನೀರಿನ ಓಕಳಿಯೇ ಹರಿದ್ದಿತ್ತು, ಕರೆಂಟ್ ತಂತಿಗಳ ಮೇಲೆ ಚಿಂದಿ ಬಟ್ಟೆಗಳು ಬಾವುಲಿಗಳಂತೆ ತೂಗಾಡುತಿದ್ದವು. ರಾಮುವು ಕೂಡಾ ಬಣ್ಣದ ಆಕರ್ಷಣೆಗೆ ಸೋತು ತಾನು ಸ್ನೇಹಿತರೊಡನೆ ಬಣ್ಣಗಳಲ್ಲಿ ಮಿಂದು ಏಳಬೇಕೆಂದುನಿರ್ಧರಿಸಿದ. ಇಂದಿಗೆ ಗಾಡ ಕತ್ತಲ ಜೀವದಿಂದ ಮುಕ್ತಿ, ನಾಳೆ ಬಣ್ಣದ ಲೋಕದ ಕಡೆಗೆ ಪಯಣ ಎಂದು ಖುಷಿಯಲ್ಲಿಕುಣಿದಾಡಿದ. ಈ ವರ್ಷದ ಹೋಳಿ ಹಬ್ಬ ಎಲ್ಲರ ಬದುಕನ್ನು ಬದಲಿಸಿದಂತೆ ನನ್ನ ಜೀವನದ ತಿರುವುಗಳಿಗೆಸಾಕ್ಷಿಯಾಗಲಿದೆ ಎಂದು ಏನೇನೋ ಆಸೆ […]Read More
ನಿನ್ನ ಕಂಡಾಗ ನಾನಿನ್ನ ಕಂಡಾಗಕನಸೊಂದ ಕಂಡಂತೆಭಾಸವಾಗಿಹುದಿಂದುನನ್ನ ಮನದಲ್ಲಿ ! ಹಾರುವಾ ಹೂವನ್ನುಜಾರುವಾ ತಾರೆಯನುಹೊಳೆವ ಬೆಳ್ಳಿಯಬೆಳಕ ನಾನು ಕಂಡಂತೆ ! ಕುಣಿಯುವಾ ಜಿಂಕೆಯನುನಲಿಯುವಾ ನವಿಲನ್ನುಕಾಲ ಬಳಸುವ ಮೊಲದಮರಿಯ ಕಂಡಂತೆ ! ಮಲ್ಲಿಗೆಯ ಘಮವನ್ನುಜಾಜಿಯಾ ನವಿರನ್ನುಸಂಪಿಗೆಯು ಹೊಮ್ಮಿಸುವಪರಿಮಳವು ಬಂದಂತೆ ! ನದಿ ಹರಿವ ನಾದವನುಕಂದನಾ ನಗೆಯನ್ನುಉಲಿವ ಕೋಗಿಲೆಯಸ್ವರವ ನಾ ಕೇಳಿದಂತೆ ! ನಿನ್ನ ಹುಡುಕುತಲಿ ಸೋತುಕಳವಳದಿ ಮನವಿಂದುಸಾಗರನ ಅಲೆಯಂತೆಅಲೆಯುತಿಹುದು ! ಶ್ರೀವಲ್ಲಿ ಮಂಜುನಾಥRead More
ಹೆಣ್ಣು ಮತ್ತು ಆರೋಗ್ಯ -4 ಈ ಒಂಬತ್ತು ತಿಂಗಳಲ್ಲಿ ಸಾಮಾನ್ಯವಾಗಿ ಗರ್ಭಿಣಿಯರಿಗೆ ದೇಹಸ್ಥಿತಿ ಹೇಗಿರುತ್ತದೆ ಎಂಬುದನ್ನು ಇದುವರೆಗೂ ನಾನು ಹೇಳಿದ್ದೇನೆ. ಆಗ ಆಗುವ ಸಾಮಾನ್ಯ ತೊಂದರೆಗಳು ಅದಕ್ಕೆ ಸಾಮಾನ್ಯ ಪರಿಹಾರಗಳನ್ನು ಹೇಳಿದ್ದೇನೆ. ಇನ್ನು ಆಹಾರದಲ್ಲಿ ಕೆಲವು ಬದಲಾವಣೆಗಳನ್ನು ಖಂಡಿತ ಮಾಡಿಕೊಳ್ಳಬೇಕಾಗುತ್ತದೆ ಅದರ ಬಗ್ಗೆ ಮೊದಲು ಹೇಳಿ ನಂತರ ಏನು ಮಾಡುವುದರಿಂದ ಗರ್ಭವತಿ ಹಾಗೂ ಗರ್ಭದಲ್ಲಿರುವ ಶಿಶುವಿಗೆ ಒಳ್ಳೆಯದಾಗುತ್ತದೆ ಎಂದು ತಿಳಿಸಿಕೊಡುತ್ತೇನೆ. ಆಹಾರದ ವಿಷಯಕ್ಕೆ ಬಂದರೆ ಒಂಬತ್ತು ತಿಂಗಳು ಕೂಡ ಗರ್ಭಿಣಿ ಎಲ್ಲಾ ಪೋಷಕಾಂಶಗಳು ಇರುವಂತ ಸತ್ವಯುತವಾದ ಆಹಾರವನ್ನು […]Read More
ಪ್ರೀತಿಯ ಅನಂತತೆ ಬೆಲೆಕಟ್ಟಲಾರದ ಅನಂತ ಪ್ರೀತಿಯಿರಲುಕಲೆಯಾಗಲಾರದು ಎಂದಿಗೂ ಬದುಕು!ಸೆಲೆಯಂತೆ ಮುಗಿಲತ್ತ ಚಿಮ್ಮುತಿರಲು..ನೆಲೆ ಕಂಡೀತು ಮಬ್ಬಾದ ಬೆಳಕು!! ಜಟಿಲತೆಯಲಿ ಪ್ರತೀ ಬಾಳು ಸಾಗಿರಲುಕುಟಿಲತೆಯಲಿ ಕಾಣದೆಂದಿಗೂ ನೆರಳು!ಸರಳತೆಯಲಿ ಆ ದೈವ ಉತ್ತರಿಸಿರಲು..ಮಧುರತೆಯಲಿ ಮಧುವಂತೆ ಜೀವನದೊಳು!! ಜಗ್ಗದ ಜಗದಿ ಪ್ರೀತಿಯೇ ಸತ್ಯವಾಗಿರಲುಕಗ್ಗದಲಿರುವಂತೆ ಕಳೆವುದು ಬಾಳು!ಸಗ್ಗದಲಿ ತನ್ನಿನಿಯನ ಜೊತೆಯಾಗಿರಲು..ಬಗ್ಗದ ಶಕ್ತಿಯಲಿ ಬದುಕಿನ ಸರಳು!! ಸುಮನಾ ರಮಾನಂದRead More