ಆ ಒಂದು ಕ್ಷಣ….. ನಿಮ್ಮೊಂದಿಗೆ – ಸುನೀಲ

ಆ ಒಂದು ಕ್ಷಣ….. ನಿಮ್ಮೊಂದಿಗೆ – ಸುನೀಲ – 6 ಆ ಒಂದು ಕ್ಷಣ ಎನ್ನುವುದು ದೇಶ-ಕಾಲ ಮತ್ತು ಬದುಕಿನ ಜೊತೆ ತಳಕು ಹಾಕಿಕೊಂಡಿದೆ .ಈ ಜಗತ್ತಿನಲ್ಲಿ ಯಾವುದೇ ಒಂದು ಸ್ಥಿತಿ ಅಸ್ತಿತ್ವದಲ್ಲಿ ಉಳಿಯಬೇಕಾದರೆ ಅದಕ್ಕೆ ವ್ಯತಿರಿಕ್ತವಾದ ವಸ್ತು ಸ್ಥಿತಿಯೊಂದರ ಆಧಾರವೂ ಬೇಕಲ್ಲವೇ !?.ರಾತ್ರಿ- ಹಗಲು ,ಕಷ್ಟ- ಸುಖ ,ಸ್ಥಿತಿ-ಗತಿ, ಲಾಭ- ನಷ್ಟ ಹೀಗೆ ಇವೆಲ್ಲವೂ ಕಾಲನ ಜೊತೆ ತಳಕು ಹಾಕಿಕೊಂಡಿವೆ, ಕ್ಷಣ ಎನ್ನುವುದು ಕಾಲನ ಅಧೀನ. ಭೂಮಿಯ ಅರ್ಧಭಾಗ ಕತ್ತಲು ಆವರಿಸಿಕೊಂಡಿದ್ದರೆ ಮತ್ತೊಂದು ಭಾಗ ಬೆಳಕನ್ನು […]Read More

ಮಕ್ಕಳಿಗೆ ಬೇಕು ಜೀವನದ ಕೌಶಲಗಳು

ಮಕ್ಕಳಿಗೆ ಬೇಕು ಜೀವನದ ಕೌಶಲಗಳು ಬದುಕೆನ್ನುವುದು ತುಂಬಾ ಸಂಕೀರ್ಣ ಮತ್ತು ಗೊಂದಲಮಯ ವಿಷಯವಾಗಿದ್ದು, ಹೆಚ್ಚು ಉತ್ಪಾದಕ ಮತ್ತು ಸಂತಸವನ್ನು ನೀಡುವ ಅಗತ್ಯ ಕೌಶಲ ಮತ್ತು ಸಾಮರ್ಥ್ಯಗಳಿಲ್ಲದೆ ಇಲ್ಲಿ ಒಂದು ದಿನವೂ ಬದುಕಲು ಸಾಧ್ಯವಿಲ್ಲ. ಆದ್ದರಿಂದ ಮಕ್ಕಳಿಗೂ ಆತ್ಮವಿಶ್ವಾಸದಿಂದ ಬದುಕಲು ಮತ್ತು ಬದುಕುಳಿಯುವ ಕೌಶಲಗಳು ಅತ್ಯಗತ್ಯ. ಸುಷ್ಮಿತ್ ಎಂಟನೇ ತರಗತಿಯ ವಿದ್ಯಾರ್ಥಿ, ಓದಿನಲ್ಲಿ ತೀರಾ ಮುಂದಿದ್ದು, ತರಗತಿಯಲ್ಲಿ ಮೇಷ್ಟ್ರು ಹೇಳಿಕೊಡುವ ಎಲ್ಲಾ ಚಟುವಟಿಕೆಗಳನ್ನೂ ಸರಿಯಾಗಿ ಅಭ್ಯಸಿಸಿ ಅತ್ಯುತ್ತಮ ಫಲಿತಾಂಶ ಪಡೆಯುತ್ತಿದ್ದನು. ವಿದ್ಯಾರ್ಜನೆಯ ನಂತರ ಒಳ್ಳೆಯ ಹೆಸರು ಮತ್ತು ವರಮಾನ […]Read More

ಹೆಣ್ಣು ಮತ್ತು ಆರೋಗ್ಯ ಭಾಗ -3

ಹೆಣ್ಣು ಮತ್ತು ಆರೋಗ್ಯ ಭಾಗ -3 ಆಗಮನದ ನಿರೀಕ್ಷೆ – 3 ನೇ ಹಂತ 7 8 9 ನೇ ತಿಂಗಳು ಗರ್ಭಿಣಿಯಲ್ಲಾ ಆಗುವ ವ್ಯತ್ಯಾಸಗಳು, ಮಗುವಿನ ಬೆಳವಣಿಗೆಯಲಾಗುವ ವ್ಯತ್ಯಾಸಗಳನ್ನು ಈ ಕಂತಿನಲ್ಲಿ ತಿಳಿಸಿಕೊಡುತ್ತೇನೆ. 1-ಏಳು ಎಂಟು ಒಂಬತ್ತು ನೇ ತಿಂಗಳು ಮಗುವಿನ ಉದ್ದ ಹಾಗೂ ತೂಕದಲ್ಲಿ ಹೆಚ್ಚುವಿಕೆಯನ್ನು ಕಾಣಬಹುದು ಅದಕ್ಕೆ ತಾಯಿಯ ದೇಹದಲ್ಲೂ ವ್ಯತ್ಯಾಸಗಳು ಕಾಣುತ್ತದೆ. ಮಗುವಿನ ಬೆಳವಣಿಗೆಗೆ ಪೂರಕವಾಗುವಂತೆ ಹೆಚ್ಚಿನ ಪುಷ್ಟಿದಾಯಕವಾದ ಆಹಾರವನ್ನು ಸೇವಿಸಬೇಕು. 2-ಮಗು ದೊಡ್ಡದಾಗಿ ಹೊಟ್ಟೆಯಲ್ಲಿನ ಎಲ್ಲಾ ಅಂಗಗಳನ್ನು ಒತ್ತುವುದರಿಂದ ತಾಯಿಗೆ […]Read More

ದಯೆ ಬಾರದೇ ಪರಮಾತ್ಮ

ದಯೆ ಬಾರದೇ ಪರಮಾತ್ಮ ಹೇ! ಪರಮಾತ್ಮ ದಯೆ ಬಾರದೇ!ಹೇರಂಭಮಿತ್ರ ಕರುಣೆ ತೋರು!ಹೇಳಿಕೊಳ್ಳುವೆ ಬಡತನವ ದೂರ ಮಾಡೆಂದು|ಹೇ! ವೆಂಕಟಾದ್ರಿ ವೆಂಕಟೇಶ್ವರಹೇ! ತಿರುಮಲೇಶ ಶೇಷಾದ್ರಿವಾಸಹೇಳುವೆನು ಕೇಳು ಎನ್ನ ಬವಣೆ ಶ್ರೀನಿವಾಸ|| ಬಡತನವು ಮೀರುತಿಹುದುಬಲಿಯಾಗುತಿರುವೇ ಕಷ್ಟಕಾರ್ಪಣ್ಯಕೆಬಂದೊದಗಿದೆ ಎನಗಿನ್ನಾರು ಗತಿ?ಬರಸಿಡಿಲು ಬಂದೆರಗಿತುಬವಣೆಯನು ತಾಳಲಾರೆನು ನಾನುಬಡವರಲ್ಲಿ ಕರುಣೆಯನು ಕರುಣಿಸು ಬಾ ಸತ್ಯ ನಾರಾಯಣನಾಗಿ ಸಜ್ಜನರಸಲಹಲು ಭೂವೈಕುಂಠಕೆ ಬಂದೇ!ಸಕಲ ಭಾಗ್ಯವ ಬ್ರಾಹ್ಮಣ ವೈಶ್ಯರಲ್ಲದೇಸರ್ವ ಕ್ಷತ್ರಿಯ ಶೂದ್ರರಿಗೂ ಕರುಣಿಸಿದ!!ಸಪಾದ ಪ್ರಸಾದವನ್ನು ನೀಡಿದೆಸಕಲ ಜೀವಿಗಳು ನಿನ್ನ ಸ್ಮರಿಸುವರುಸರ್ವ ರಕ್ಷಕ ನಮ್ಮ ಶ್ರೀಸತ್ಯದೇವಾ|| ನಾನ್ಯಾಕೇ ಬದುಕಿರಲೀ?ನಾಡು ದೂಷಿಸುತಿದೆ|ನಾಗಶಯನನ ಕರುಣೆ ಎನಗಿಲ್ಲಾ!!ನಾಗಭೂಷಣಗೆ […]Read More

ಅರಿಯಲಾಗದ ಅಂತರಾಳ

ಅರಿಯಲಾಗದ ಅಂತರಾಳ ಒಡಲಾಳವ ಬಗೆದಷ್ಟೂಬಗೆಬಗೆಯ ರಂಗಿನಚಿತ್ತಾರ ಮೂಡುತ್ತಲಿವೆ; ಹಸಿಬಿಸಿಯ ನೆನಪಿನಬುಗ್ಗೆಯುಕ್ಕಿ ಮನವರಾಡಿಗೊಳಿಸುತ್ತಲಿವೆ; ಅರಿವಾಗದ ನೋವಿನತಳಮಳದಲಿ ಮನಕಳವಳಿಸುತ್ತಲಿದೆ ; ಮರದ ಕೊಂಬೆಯಯಾರೂ ಜಗ್ಗಿ ಬಿಟ್ಟಂತೆಮನ ತುಯ್ದಾಡುತ್ತಲಿದೆ; ಬಚ್ಚಿಡಲು ಹೆಣಗಿಸೋತು, ಮುಚ್ಚಿಡಲಾಗದಮನ ಮರುಗುತ್ತಲಿದೆ ; ಹೇಳಲಾಗದ, ಹೇಳದೇಇರಲಾಗದ ಭಾವವೊಂದುಮನವ ಕಾಡುತ್ತಲಿದೆ,! ಶ್ರೀವಲ್ಲಿ ಮಂಜುನಾಥ್Read More

ಆ ಒಂದು ಕ್ಷಣ….. ನಿಮ್ಮೊಂದಿಗೆ – ಸುನೀಲ

ಆ ಒಂದು ಕ್ಷಣ….. ನಿಮ್ಮೊಂದಿಗೆ – ಸುನೀಲ – 5 ಎಲ್ಲರೂ ಯಶಸ್ಸಿಗಾಗಿ ಹಾತೊರೆಯುತ್ತಾರೆ.ಆದರೆ ವೈಫಲ್ಯ ಎದುರಿಸಲು ಕಷ್ಟವಾಗುತ್ತದೆ; ಅದು ಇಷ್ಟವಾಗುವುದಿಲ್ಲ. ಒಂದು ನೆನಪಿನಲ್ಲಿಡಬೇಕು: ಯಶಸ್ಸು ಹಾಗೂ ವೈಫಲ್ಯ ನಿರ್ದಿಷ್ಟ ಘಟನೆಗಳನ್ನು ವಿವರಿಸುವ ಪದಗಳೇ ವಿನಃ ವ್ಯಕ್ತಿಗಳನ್ನಲ್ಲ. ಅಂದರೆ,ನಾವು ಕೆಲವನ್ನು ಸಾಧಿಸುವಲ್ಲಿ ಯಶಸ್ವಿಯಾಗಬಹುದು ಅಥವಾ ವಿಫಲರಾಗಿರಬಹುದು; ಕೆಲ ಮೈಲಿಗಲ್ಲುಗಳನ್ನು ತಲುಪುವಲ್ಲಿ ಸಫಲವಾಗಬಹುದು ಇಲ್ಲವೇ ವಿಫಲರಾಗಬಹುದು. ಯಶಸ್ಸು ಹಾಗೂ ವೈಫಲ್ಯ ಎನ್ನುವುದನ್ನು ನಮ್ಮ ಜೀವನದಲ್ಲಿ ಒಂದು ನಿರ್ದಿಷ್ಟ ಘಟನೆಯನ್ನು ನಾವು ಹೇಗೆ ನಿರ್ವಹಿಸಿದ್ದೇವೆ ಎನ್ನುವುದನ್ನು ವಿವರಿಸುವ ಸಾಧನವಾಗಿ ಬಳಸುತ್ತೇವೆ.ಅಂತೆಯೇ […]Read More

ಮುಸ್ಸಂಜೆಯ ಸೊಬಗಲಿ..

ಮುಸ್ಸಂಜೆಯ ಸೊಬಗಲಿ.. ಬಾನಲಿ ಮೂಡಿದ ರಂಗಿನೋಕುಳಿಗೆಮನದುಂಬಿ ನಕ್ಕಂತಿದೆ ವಸುಂಧರೆ!ಮೇಘಗಳು ಚಲಿಸುವ ಆ ಪರಿಗೆ..ಸುರಿಸಲಿವೆ ಚಟಪಟನೆ ವರ್ಷಧಾರೆ!! ನಿಗಿನಿಗಿ ಕೆಂಡದಂತಹ ಬಿಸಿಯಉಡಿಯಲಿರಿಸಿ ಬಂದಿಹ ನೇಸರ!ಮುಸ್ಸಂಜೆಯ ವೇಳೆಗೆ ನೆಲ ತಂಪಾಗಿಸಿ..ಕೂಗಿ ಕರೆದಂತಿದೆ ಧರಣಿಯ ಹೆಸರ!! ಮಾನಿನಿಯ ನೊಸಲ ಬಿಂದಿಯಂತೆಕೆಂಪಾಗಿ ಮೂಡುವನವ ಬೆಳಗಿನಲಿ!ತಾ ಪಶ್ಚಿಮಕೆ ನಡೆದಿರಲು ಮುಗ್ಧನಂತೆ..ಅರಿತು ಸೊಂಪಾಗಿದೆ ಅವನಿ ಬೈಗಿನಲಿ!! ದುಡಿದ ಜನರು ದಣಿದು ವಿರಮಿಸಲುಹೊರಟಿರಲು ತಮ್ಮ ನೆಚ್ಚಿನ ಗೂಡಿಗೆ!ನಿಶೆ ಅಳಿದು ಮರುದಿನವು ಮೂಡಲು…ಮತ್ತೆ ಲೋಕಕೆ ಆ ದಿನಕರನೇ ದೀವಿಗೆ!! ಸುಮನಾ ರಮಾನಂದRead More

ಚಮಚ ಕೊಕ್ಕಿನ ಮರಳು ಪೀಪಿ

ಚಮಚ ಕೊಕ್ಕಿನ ಮರಳು ಪೀಪಿ – Spoonbilled Sand Piper ನಿರಂತರವಾಗಿ ಬರುತಿದ್ದ ಮನೆಯ ನೆಂಟರು ಕ್ರಮೇಣವಾಗಿ ಕಡಿಮೆಯಾಗುತ್ತಾ ಬಂದರೆ! ನಂತರ ಬರುವುದನ್ನೇ ನಿಲ್ಲಿಸಿದರೆ ಬರುತ್ತಿದ್ದ ನೆಂಟರಿಗೆ ಏನಾಯಿತೋ ಏನೋ ಎಂದು ಕಳವಳವಾಗುವುದು ಸಹಜ. ರಷ್ಯಾ ದೇಶದಿಂದ ಚಳಿಗಾಲದ ಅತಿಥಿಯಾಗಿ ಭಾರತಕ್ಕೆ ಆಗಮಿಸುತಿದ್ದ “ಸ್ಪೂನ್ ಬಿಲ್ಡ್ ಸ್ಯಾಂಡ್ ಪೈಪರ್” ಎಂಬ ಪುಟ್ಟ ಅಲೆಮಾರಿ ವಲಸೆ ಹಕ್ಕಿಯ ಸಂತತಿ ಬಗ್ಗೆ ನಿಜಕ್ಕೂ ಈಗ ಆಗುತ್ತಿರುವುದು ಅದೇ ಕಳವಳ. ರಷ್ಯಾದ ಚುಕೋಟ್ಸ್ಕ್ ಹಾಗು ಕಮ್ಚಟ್ಕಾ ಎಂಬ ಪರ್ಯಾಯ ದ್ವೀಪದಲ್ಲಿ ಸಂತಾನವೃದ್ಧಿ […]Read More

ಅವ್ವ ಸೃಜನಶೀಲ ಸಾಹಿತ್ಯ ಪ್ರಶಸ್ತಿ – 2023

“ಅವ್ವ ಸೃಜನಶೀಲ ಸಾಹಿತ್ಯ ಪ್ರಶಸ್ತಿ – 2023” ಅವ್ವ ಪುಸ್ತಕಾಲಯ ಸಾಹಿತ್ಯ ಬಳಗ ಕುಣಿಗಲ್ ಇವರ ವತಿಯಿಂದ ಪ್ರತೀ ವರ್ಷದಂತೆ “ಶ್ರೀಮಾನ್ ಲೇ. ನರಸಯ್ಯ” ಅವರ ಸ್ಮರಣಾರ್ಥ ಕೊಡಮಾಡುವ “ಅವ್ವ ಸೃಜನಶೀಲ ಸಾಹಿತ್ಯ ಪ್ರಶಸ್ತಿ” ಗಾಗಿ 2022 ಮತ್ತು 2023 ರಲ್ಲಿ ಪ್ರಕಟವಾಗಿರುವ ಕನ್ನಡ ಸಾಹಿತ್ಯ ಕೃತಿಗಳನ್ನು ಆಹ್ವಾನಿಸಲಾಗಿದೆ. ಈ ಹಿಂದೆ ಪ್ರಶಸ್ತಿ ಪಡೆದವರು ಈ ವರ್ಷದ ಪ್ರಶಸ್ತಿಗೆ ಅರ್ಹರಾಗಿರುವುದಿಲ್ಲ. * 2023 ರ ಆಗಸ್ಟ್ 31 ರ ಒಳಗೆ ತಮ್ಮ ಕೃತಿಯ ಮೂರು ಪ್ರತಿಗಳನ್ನು, ಪ್ರತ್ಯೇಕ […]Read More

ಹೆಣ್ಣು ಮತ್ತು ಆರೋಗ್ಯ ಭಾಗ -2

ಹೆಣ್ಣು ಮತ್ತು ಆರೋಗ್ಯ ಭಾಗ –2 ಈ ಎರಡನೇ ಅಂಕಣದಲ್ಲಿ ನಾನು ಗರ್ಭಿಣಿಯ 4,5,6 ನೆ ತಿಂಗಳುಗಳು ಹೇಗಿರುತ್ತದೆ ಏನನ್ನು ನಿರೀಕ್ಷಿಸಬಹುದು, ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಏನು ಅಂತ ತಿಳಿಸಿಕೊಡುತ್ತೇನೆ. ಇಡೀ ಗರ್ಭಿಣಿ ಅವಧಿಯಲ್ಲೇ ತುಂಬಾ ಸಂತಸದಾಯಕ ಹಾಗೂ ಆರಾಮದಾಯಕ ತಿಂಗಳುಗಳು ಇವು. 1- ಮೊದಲ 3 ತಿಂಗಳು ಅನುಭವಿಸಿದ ವಾಕರಿಕೆ, ವಾಂತಿ,ಸುಸ್ತು, ಸ್ಥನಗಳ ನೋವು, ಊತ ಕಮ್ಮಿಯಾಗುತ್ತದೆ ಇದಕ್ಕೆ ಕಾರಣ ಒಂದು ಹಾರ್ಮೋನ್ ಕಡಿಮೆಯಾಗುವಿಕೆ ಹಾಗೂ ಜನನ ಪ್ರಕ್ರಿಯೆಗೆ ಬೇಕಾದ ಹಾರ್ಮೋನ್ ಜಾಸ್ತಿಯಾಗುವಿಕೆ. 2- ಹಸಿವು ಹೆಚ್ಚಿ, […]Read More