ಆ ಒಂದು ಕ್ಷಣ….. ನಿಮ್ಮೊಂದಿಗೆ – ಸುನೀಲ – 4

ಆ ಒಂದು ಕ್ಷಣ….. ನಿಮ್ಮೊಂದಿಗೆ – ಸುನೀಲ – 4 ಒಂದು ದೊಡ್ಡ ಕಂಪನಿ….. .ಅಂತರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಹೆಸರು ಮಾಡಿದೆ.ಇತ್ತೀಚಿನ ದಿನಗಳಲ್ಲಿ ಈ ಕಂಪನಿಗೂ ಸವಾಲೊಡ್ಡುವಂತಹ ಕಂಪನಿಗಳು ಮಾರುಕಟ್ಟೆ ಪ್ರವೇಶ ಮಾಡಿವೆ.ಇತರ ಕಂಪನಿಗಳ ಜೊತೆಗೆ ಸ್ಪರ್ಧಿಸಿ ಗೆಲ್ಲುವ, ಜೊತೆಗೆ ಅತ್ಯುತ್ತಮ ಸೇವೆಯನ್ನು ಕೊಡಬೇಕಾದ ಗುರುತರ ಜವಾಬ್ದಾರಿ ಕಂಪನಿಯ ಮೇಲೆ ಇದೆ. ಆ ಕಂಪನಿಗೆ ಮುಖ್ಯಸ್ಥರಾಗಿ ಬಂದ ವ್ಯಕ್ತಿಯ ಮುಂದೆ ಹಲವು ಸವಾಲುಗಳು…೧.ತಮ್ಮಲ್ಲಿರುವ ಮಾನವ ಸಂಪನ್ಮೂಲಗಳ ಸದ್ಭಳಕೆ..೨.ಉದ್ಯೋಗಿಗಳಿಗೆ ಅವಶ್ಯಕವಾದ ಸೌಕರ್ಯಗಳನ್ನು ಒದಗಿಸುವುದು೩.ಹೆಚ್ಚಿನ ವೇತನ ಅಥವಾ ಸೌಲಭ್ಯಗಳನ್ನು ಹುಡುಕಿ […]Read More

ಬಡವರ ಮಗಳು ಸೌಜನ್ಯ

ಬಡವರ ಮಗಳು ಸೌಜನ್ಯ ಬಡವನ ಮನೆಯಲಿ ಏಕೆ ಹುಟ್ಟಿಸಿದೆಮಂಜುನಾಥನೆ,, ನನ್ನನ್ನು.ನಿನ್ನಯ ನೆಲದಲಿ ತಿಂದು, ತೇಗಿದರುನನ್ನಯ ಬದುಕಿನ ಕನಸನ್ನುಏತಕೆ ನಿನಗೆ ಪೂಜೆಗಳು,,,ತೆಲುತಿವೆ ಹೆಣ, ದೇಹಗಳು.!!೧!! ತಿಂದು ತೇಗಿದ ಕಾಮುಕರನ್ನುರಕ್ಷಿಸುತಿಹರು ಹಲವು ಜನ.ನನ ದೇಹ, ಮನಸಿಗೆ ಆದ ನೋವನುಮರೆಯಲು ಸಾಧ್ಯವೇ, ನನ್ನ ಮನ.ಏತಕೆ ನಿನಗೆ ಹರಕೆಗಳು,,?ಬದುಕಿಹರಲ್ಲ ಈ ಬೆರಕೆಗಳು.!!೨!! ತಾಯಿ ನೊಂದಳು,ತಂದೆ ಬೆಂದನುನನ್ನಯ ಈ ಸ್ಥಿತಿ ನೋಡಿ.ಪಾಪಿ ಎಳೆದನು,ದುರುಳ ಕಡಿದನುಬೇಡಿದರು ನನ್ನ ಎಳೆದಾಡಿ.ನಿನಗೆ ಏತಕೆ ದೀಪಗಳು,,?ನಿನ್ನಯ ನೆರಳಲಿ ಪಾಪಗಳು.!!೩!! ಮಂಜುನಾಥನೆ ಹೇಳು ಬೇಗನೆನನಗೆ ನ್ಯಾಯವ ಕೊಡಿಸುವೆಯಾ.?ಧರ್ಮಸ್ಥಳದ ಧರ್ಮರಕ್ಷಕನೆನಾರಿಯ ಮಾನವ ಉಳಿಸುವೆಯಾ,?ಉಳಿಸಿದೆ […]Read More

ಆಪ್ಯಾಯ ಮೌನ

ಆಪ್ಯಾಯ ಮೌನ ಮನವೇಕೋ ಮೌನದಮೊರೆ ಹೋದಂತಿದೆ.ಮಾತಿಗೆ ಮೌನಬೇಲಿ ಹಾಕಿದಂತಿದೆ. ಎಂದೂ ಕಂಡಿರದಮಾತಿಲ್ಲದ, ಮೌನವಕಂಡ ಮನ ಅರೆಕ್ಷಣಗಲಿಬಿಲಿಗೊಂಡಂತಿದೆ. ಮೌನದಲ್ಲೇ ಮನಎಲ್ಲವ ಮನನ ಮಾಡಿಸರಿತಪ್ಪುಗಳನೆಣಿಸಿದಂತೆಭಾಸವಾಗುತ್ತಿದೆ. ಇತ್ತೀಚೆಗೇಕೆ ಯಾವಮಾತೂ ಬೇಡವೆನಿಸಿ,ಏಕಾಂತಕ್ಕಾಗಿ ಮನಕಾತರಿಸುತ್ತಲಿದೆ ! ಶ್ರೀವಲ್ಲಿ ಮಂಜುನಾಥRead More

ಚಂದಿರನ ಸೋಜಿಗ

ಚಂದಿರನ ಸೋಜಿಗ ಬುವಿಯಲಿ ಪಸರಿಸಿಹ ಬೆಳದಿಂಗಳಲಿತಾ ನಕ್ಕು ಆಗಮಿಸಿಹನು ಚಂದಿರ!ತಾರೆಗಳ ತೋಟದ ಹಾಲ್ಬೆಳಕಲಿ..ಕಾಣುವ ಲೋಕವದುವೇ ಸುಂದರ!! ಮುಸ್ಸಂಜೆಗೆ ಅರಳಿ ಮುದುಡುವಮಲ್ಲೆ,ಪಾರಿಜಾತ ಹೂಗಳದೇ ಕಂಪು!ಕುದಿವ ಕೆಂಡದ ತಾಪದ ಮರೆಯಲಿ..ಅವ ನೀಡಿಹನು ಇಳೆಗೆ ತಂಪು!! ನೇಸರನ ಬೆಳಕಲಿ ಜಗ ಮಿಂಚಿದೆಕಣ್ಕೋರೈಸುವ ಹೊಂಗಿರಣದಿ!ಧರೆಯು ನವವಧುವಿನಂತೆ ಹೊಳೆದಿದೆ…ರವಿಯಿಂದ ಕಡ ತಂದ ಶಶಿಕಿರಣದಿ!! ಅಂಬರದಿ ಚದುರಿದ ನಕ್ಷತ್ರಗಳಒಂದಾಗಿಸಿ ಮಿನುಗಿಸಿಹನು ತಂಗದಿರ!ಬಿರುಬಿಸಿಲ ತಾಪಕೆ ಬಳಲಿದ ಧರಣಿಯ…ತಂಪಾಗಿಸುವ ಬೆಳದಿಂಗಳೇ ಮಧುರ!! ಸುಮನಾ ರಮಾನಂದRead More

ಸಂಪನ್ಮೂಲ ವ್ಯಕ್ತಿಯೆಂಬ ಮಹಾನ್ ಕಲಾವಿದ

ಸಂಪನ್ಮೂಲ ವ್ಯಕ್ತಿಯೆಂಬ ಮಹಾನ್ ಕಲಾವಿದ ಯಾವುದೇ ಒಂದು ವಿಚಾರದ ಬಗ್ಗೆ ಮಾಹಿತಿಯ ವಿವರಣೆಯನ್ನು ನೀಡಲು ಬಹಳ ಹಿಂದಿನ ಕಾಲದಿಂದಲೂ ಪ್ರಚಲಿತದಲ್ಲಿರುವ ಒಂದು ಪದ್ದತಿ ಎಂದರೆ ಉಪನ್ಯಾಸ. ಉಪನ್ಯಾಸ ಎಂದ ಕೂಡಲೇ ಇಂದು ವಿದ್ಯಾರ್ಥಿಗಳ ಪಾಲಿಗೆ ಅದೊಂದು ಮಹಾನ್ ಕೊರೆತ ಎಂದೇ ಬಿಂಬಿತವಾಗಿದೆ. ಯಾಕೆಂದರೆ ಉಪನ್ಯಾಸಕರು ಒಂದಷ್ಟು ವಿಚಾರಗಳನ್ನು ಅಭ್ಯಸಿಸಿಕೊಂಡು ಬಂದು ಬಡಪಾಯಿ ವಿದ್ಯಾರ್ಥಿಗಳ ಮೇಲೆ ಪ್ರಯೋಗ ಮಾಡುತ್ತಾರೆ. ಇದು ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಎಂಬಂತಾಗಿಬಿಡುತ್ತದೆ. ತಾನು ತಿಳಿಸುತ್ತಿರುವ ವಿಚಾರಗಳನ್ನು ವಿದ್ಯಾರ್ಥಿಗಳು ಎಷ್ಟು ಅರ್ಥೈಸಿಕೊಳ್ಳುತ್ತಿದ್ದಾರೆ, ತಾನು ನೀಡುತ್ತಿರುವ […]Read More

ಅಂತರಾಷ್ಟ್ರೀಯ ಹುಲಿ ದಿನ – ಜುಲೈ 29

ಅಂತರಾಷ್ಟ್ರೀಯ ಹುಲಿ ದಿನ – ಜುಲೈ 29 ಹುಲಿಗಳು ಮೂಲತಃ ಬೆಕ್ಕಿನ ವಂಶವಾದ ಪೆಲಿಡೇ ಕುಟುಂಬಕ್ಕೆ ಸೇರಿದ್ದು. ಬೆಕ್ಕಿನ ವಂಶದ ಜೀವಿಗಳು 70 ಮಿಲಿಯನ್ನು ವರ್ಷಗಳ ಹಿಂದೆ ಏಷಿಯಾ ಖಂಡದಲ್ಲಿ ಜನ್ಮ ತಾಳಿವೆ ಎಂದು ಸಂಶೋದನೆ ಹೇಳುತ್ತದೆ. ಪ್ರಸ್ತುತ ಜಗತ್ತಿನಲ್ಲಿ 37 ಬೆಕ್ಕಿನ ಜಾತಿಯ ಪ್ರಾಣಿಗಳನ್ನು ನೋಡಬಹುದು , ಭಾರತದಲ್ಲಿ 15 ಜಾತಿಗಳಿಗೆ. ಇವುಗಳಲ್ಲಿ ಅನೇಕ ಉಪ ಪ್ರಭೇದಗಳು ಇವೆ. ಸಣ್ಣ ಬೆಕ್ಕುಗಳನ್ನು “ಫೆಲಿನಿ” (Felini) ಹಾಗು ದೊಡ್ಡ ಬೆಕ್ಕುಗಳನ್ನು “ಪ್ಯಾಂಥರಿಣಿ” (Pantherini) ಎಂದು ಎಂದು ಗುಂಪುಗಳಲ್ಲಿ […]Read More

ಜರೀಬೇಡ ಕನ್ನಡ ನುಡಿಯ

ಜರೀಬೇಡ ಕನ್ನಡ ನುಡಿಯ ಅಯ್ಯೋ!? ಹುಚ್ಚಪ್ಪ ಕನ್ನಡ ನುಡಿಯ ಜರಿಯಬೇಡ…….|ಪ|ಈ, ನಮ್ಮ ಕನ್ನಡ ನಾಡಿನ ಮಣ್ಣನು ಮರೆಯಬೇಡಆ, ಚಂದಿರ ಬೆಳದಿಂಗಳ ಹೊತ್ತು ತರುವುದು ಕೂಡಾಕನ್ನಡ ನುಡಿಯ, ಕಲಿಯಬೇಕೆಂಬ ಬಯಕೆ ನೋಡಾ…….|೧| ಅಯ್ಯೋ!? ಹುಚ್ಚಪ್ಪ ಕನ್ನಡ ನುಡಿಯ ಜರಿಯಬೇಡ…….|ಪ|ಈ, ನಮ್ಮ ಕನ್ನಡ ನಾಡಿನ ಮಣ್ಣನು ಮರೆಯಬೇಡಆ, ಮೋಡವು ಕುಣಿದು ಮಳೆ ಸುರಿಸುವುದು ಕೂಡಾಕನ್ನಡ ನುಡಿಯ, ಕಲಿಯಬೇಕೆಂಬ ಬಯಕೆ ನೋಡಾ…….|೨| ಅಯ್ಯೋ!? ಹುಚ್ಚಪ್ಪ ಕನ್ನಡ ನುಡಿಯ ಜರಿಯಬೇಡ…….|ಪ|ಈ, ನಮ್ಮ ಕನ್ನಡ ನಾಡಿನ ಮಣ್ಣನು ಮರೆಯಬೇಡಆ ಸೂರ್ಯ ಕಿರಣವ ಬಿಟ್ಟು ಹುಡುಕುವುದು […]Read More

ತೀಟೆ ತಿಮ್ಮನ ಕ್ವಾಟ್ಲೆ

ತೀಟೆ ತಿಮ್ಮನ ಕ್ವಾಟ್ಲೆ ತೀಟೆ ತಿಮ್ಮನ ಕ್ವಾಟಲೆ ಯಾಕೊಮಿತಿ, ಮಿತಿ, ಮಿತಿ, ಮಿತಿ ಮೀರಿತ್ತುಅವನನು ಕುಲುಕಿ,ಇವಳನು ಕೆಣಕಿಶಾಲೆಯು ಜಾತ್ರೆಯ ತರವಿತ್ತುಇವನೆ ತೀಟೆ ತಿಮ್ಮ,,,ಕಪಿರಾಯನ ಪ್ರೀತಿಯ ತಮ್ಮ.!!೧!! ಚಂದ್ರನ ಚಡ್ಡಿಯ ಎಳೆಯುವನುಭಾಗ್ಯ ಬ್ಯಾಗನು ಎಸೆಯುವನುಮಂಜನ ತಿಂಡಿಯ ಮುಕ್ಕುವನುಗೌರಿಗೆ ಗೊಣ್ಣೆಯ ತಿಕ್ಕುವನುಇವನೆ ತೀಟೆ ತಿಮ್ಮ,,,ಕಪಿರಾಯನ ಪ್ರೀತಿಯ ತಮ್ಮ.!!೨!! ಆ ಕಡೆ, ಇ ಕಡೆ ಅಲೆದಾಟಪುಸ್ತಕ ಹರಿದು ರಂಪಾಟಒದದೆ ಬರೆಯದೆ ಹುಡುಗಾಟಅಯ್ಯೋ ಇವನದು ಬಲುಕಾಟಇವನೆ ತೀಟೆ ತಿಮ್ಮ,,,ಕಪಿರಾಯನ ಪ್ರೀತಿಯ ತಮ್ಮ.!!೩!! ಮಗ್ಗಿಯ ಕಲಿಯದ ಮಂಗಣ್ಣಸುಳ್ಳು ಹೇಳುವ ಸುಬ್ಬಣ್ಣಮಾತಿಗೆ ಕೂತರೆ ಮಲ್ಲಣ್ಣಜಗಳಕೆ ನಿಂತರೆ […]Read More

ಮನಸಿನ ಭಾವಚಿತ್ತ

ಮನಸಿನ ಭಾವಚಿತ್ತ ಮನಸಿನ ಲಹರಿಗೆ ತಾನೆಂದೂಸಿಗದೆನ್ನುವ ಭಾವ ಹೃದಯಕೆ!ಸಿಕ್ಕರೂ ತನಗೇನೂ ನಷ್ಟವಿರದೆನ್ನುವ..ನಿರಾಳತೆಯ ಭಾವ ಅಂತರಾಳಕೆ!! ಮನಸಲಿ ನಡೆವ ತುಮುಲಗಳಬೇರ್ಪಡಿಸುವ ಭಾವ ಚಿಂತನೆಗೆ!ಆ ಚಿಂತನೆಯಲೇ ಸಂತಸವನು..ಅರಸುವ ಭಾವ ನಿತ್ಯವೂ ಚಿತ್ತಕೆ!! ಮನದ ಸಾಗರದಿ ಏಳುವಚಿಂತೆಯಲೆಗಳ ಉಬ್ಬರ ಮುಗಿಲೆತ್ತರಕೆ!ದೇವರ ಲೀಲೆಯ ನಿತ್ಯ ಪ್ರಶ್ನಿಸುವವ..ಕಾಯಬಾರದೇ ಅವನ ಉತ್ತರಕೆ!! ಮನಸೆಂಬ ಬನದಲಿ ಸ್ನೇಹದಂಕುರಚಿಗುರಲು ಬದುಕಲಿ ಸಡಗರ!ಅದು ಕೊಡುವ ದಿವ್ಯ ಪ್ರತಿಫಲದ..ಸಿಹಿಯ ಸವಿಯಲು ಬಾಳು ಮಧುರ!! ಸುಮನಾ ರಮಾನಂದRead More

ಆ ಒಂದು ಕ್ಷಣ….. ನಿಮ್ಮೊಂದಿಗೆ – ಸುನೀಲ – 3

ಆ ಒಂದು ಕ್ಷಣ….. ಭಾಗ – 03 ಒಬ್ಬ ವ್ಯಕ್ತಿ ಆಸ್ಪತ್ರೆಯ ತೀವ್ರ ನಿಗಾ ಕೊಠಡಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.ಆತನ ಪರಿಸ್ಥಿತಿ ಗಂಭೀರವಾಗಿದೆ.ಅವನನ್ನು ನೋಡಿಕೊಳ್ಳುವ ವೈದ್ಯರ ಮುಂದೆ ಎರಡೇ ಆಯ್ಕೆ ಇದೆ.ರೋಗಿಗೆ ಆಪರೇಷನ್ ಮಾಡಿದರೆ ಅವನಿಗೆ ಆಗಿರುವ ಅಪಾಯದ ತೀವ್ರತೆಯನ್ನು ಕಡಿಮೆ ಮಾಡಿ ಸೂಕ್ತವಾದ ಚಿಕಿತ್ಸೆ ಕೊಡುತ್ತಾ ಕಾಲಾಂತರದಲ್ಲಿ ಅವನನ್ನು ಸಹಜವಾದ ಸ್ಥಿತಿಗೆ ತರುವುದು…ಇಲ್ಲವೇ ಅತ್ಯಂತ ಕ್ಲಿಷ್ಟಕರವಾದ ಈ ಆಪರೇಷನ್ ಕೈ ಬಿಡುವುದು….ಏಕೆಂದರೆ ಈ ಆಪರೇಷನ್ ಕೂಡಾ ಸಾವು ಬದುಕಿನ ಪ್ರಶ್ನೆಯೇ ಆಗಿದೆ. ಇಂತಹ ಸಂದರ್ಭದಲ್ಲಿ ನುರಿತ ವೈದ್ಯ […]Read More