ತೀಟೆ ತಿಮ್ಮನ ಕ್ವಾಟ್ಲೆ ತೀಟೆ ತಿಮ್ಮನ ಕ್ವಾಟಲೆ ಯಾಕೊಮಿತಿ, ಮಿತಿ, ಮಿತಿ, ಮಿತಿ ಮೀರಿತ್ತುಅವನನು ಕುಲುಕಿ,ಇವಳನು ಕೆಣಕಿಶಾಲೆಯು ಜಾತ್ರೆಯ ತರವಿತ್ತುಇವನೆ ತೀಟೆ ತಿಮ್ಮ,,,ಕಪಿರಾಯನ ಪ್ರೀತಿಯ ತಮ್ಮ.!!೧!! ಚಂದ್ರನ ಚಡ್ಡಿಯ ಎಳೆಯುವನುಭಾಗ್ಯ ಬ್ಯಾಗನು ಎಸೆಯುವನುಮಂಜನ ತಿಂಡಿಯ ಮುಕ್ಕುವನುಗೌರಿಗೆ ಗೊಣ್ಣೆಯ ತಿಕ್ಕುವನುಇವನೆ ತೀಟೆ ತಿಮ್ಮ,,,ಕಪಿರಾಯನ ಪ್ರೀತಿಯ ತಮ್ಮ.!!೨!! ಆ ಕಡೆ, ಇ ಕಡೆ ಅಲೆದಾಟಪುಸ್ತಕ ಹರಿದು ರಂಪಾಟಒದದೆ ಬರೆಯದೆ ಹುಡುಗಾಟಅಯ್ಯೋ ಇವನದು ಬಲುಕಾಟಇವನೆ ತೀಟೆ ತಿಮ್ಮ,,,ಕಪಿರಾಯನ ಪ್ರೀತಿಯ ತಮ್ಮ.!!೩!! ಮಗ್ಗಿಯ ಕಲಿಯದ ಮಂಗಣ್ಣಸುಳ್ಳು ಹೇಳುವ ಸುಬ್ಬಣ್ಣಮಾತಿಗೆ ಕೂತರೆ ಮಲ್ಲಣ್ಣಜಗಳಕೆ ನಿಂತರೆ […]Read More
ಮನಸಿನ ಭಾವಚಿತ್ತ ಮನಸಿನ ಲಹರಿಗೆ ತಾನೆಂದೂಸಿಗದೆನ್ನುವ ಭಾವ ಹೃದಯಕೆ!ಸಿಕ್ಕರೂ ತನಗೇನೂ ನಷ್ಟವಿರದೆನ್ನುವ..ನಿರಾಳತೆಯ ಭಾವ ಅಂತರಾಳಕೆ!! ಮನಸಲಿ ನಡೆವ ತುಮುಲಗಳಬೇರ್ಪಡಿಸುವ ಭಾವ ಚಿಂತನೆಗೆ!ಆ ಚಿಂತನೆಯಲೇ ಸಂತಸವನು..ಅರಸುವ ಭಾವ ನಿತ್ಯವೂ ಚಿತ್ತಕೆ!! ಮನದ ಸಾಗರದಿ ಏಳುವಚಿಂತೆಯಲೆಗಳ ಉಬ್ಬರ ಮುಗಿಲೆತ್ತರಕೆ!ದೇವರ ಲೀಲೆಯ ನಿತ್ಯ ಪ್ರಶ್ನಿಸುವವ..ಕಾಯಬಾರದೇ ಅವನ ಉತ್ತರಕೆ!! ಮನಸೆಂಬ ಬನದಲಿ ಸ್ನೇಹದಂಕುರಚಿಗುರಲು ಬದುಕಲಿ ಸಡಗರ!ಅದು ಕೊಡುವ ದಿವ್ಯ ಪ್ರತಿಫಲದ..ಸಿಹಿಯ ಸವಿಯಲು ಬಾಳು ಮಧುರ!! ಸುಮನಾ ರಮಾನಂದRead More
ಆ ಒಂದು ಕ್ಷಣ….. ಭಾಗ – 03 ಒಬ್ಬ ವ್ಯಕ್ತಿ ಆಸ್ಪತ್ರೆಯ ತೀವ್ರ ನಿಗಾ ಕೊಠಡಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.ಆತನ ಪರಿಸ್ಥಿತಿ ಗಂಭೀರವಾಗಿದೆ.ಅವನನ್ನು ನೋಡಿಕೊಳ್ಳುವ ವೈದ್ಯರ ಮುಂದೆ ಎರಡೇ ಆಯ್ಕೆ ಇದೆ.ರೋಗಿಗೆ ಆಪರೇಷನ್ ಮಾಡಿದರೆ ಅವನಿಗೆ ಆಗಿರುವ ಅಪಾಯದ ತೀವ್ರತೆಯನ್ನು ಕಡಿಮೆ ಮಾಡಿ ಸೂಕ್ತವಾದ ಚಿಕಿತ್ಸೆ ಕೊಡುತ್ತಾ ಕಾಲಾಂತರದಲ್ಲಿ ಅವನನ್ನು ಸಹಜವಾದ ಸ್ಥಿತಿಗೆ ತರುವುದು…ಇಲ್ಲವೇ ಅತ್ಯಂತ ಕ್ಲಿಷ್ಟಕರವಾದ ಈ ಆಪರೇಷನ್ ಕೈ ಬಿಡುವುದು….ಏಕೆಂದರೆ ಈ ಆಪರೇಷನ್ ಕೂಡಾ ಸಾವು ಬದುಕಿನ ಪ್ರಶ್ನೆಯೇ ಆಗಿದೆ. ಇಂತಹ ಸಂದರ್ಭದಲ್ಲಿ ನುರಿತ ವೈದ್ಯ […]Read More
ಹೆಣ್ಣು ಮತ್ತು ಆರೋಗ್ಯ – 1 ಎಲ್ಲರಿಗೂ ನಮಸ್ಕಾರ. ಈ ಅಂಕಣದ ಮೂಲಕ ನಾನು ಹೆಣ್ಣು ಮಕ್ಕಳ ಆರೋಗ್ಯ, ಅವರಿಗೆ ಬೇರೆ ಬೇರೆ ಸಮಯಗಳಲ್ಲಿ ಬೇಕಾಗುವ ವೈದ್ಯಕೀಯ ಚಿಕಿತ್ಸೆಯ ಬಗ್ಗೆ ಬರೆಯುತ್ತೇನೆ. ಮೊದಲಿಗೆ ಅತ್ಯಂತ ಜವಾಬ್ದಾರಿಯುತ ಗರ್ಭಿಣಿಯ ವಿಷಯ ತಿಳಿಸಿಕೊಡುತ್ತೀನಿ ಮದುವೆಯಾದ ಮೇಲೆ, ತಾಯಿಯಾಗುವುದು ಎಲ್ಲ ಹೆಣ್ಣುಮಕ್ಕಳ ಕನಸು.ಗರ್ಭಿಣಿಯಾದ ಹೆಣ್ಣು, ಮೊದಲ ಮೂರುತಿಂಗಳು ,ಆರು ತಿಂಗಳು ,ಹಾಗೂ ಒಂಬತ್ತು ತಿಂಗಳುಗಳಲ್ಲಿ ತೆಗೆದುಕೊಳ್ಳಬೇಕಾದ ನಿಗಾ, ತೋರಿಸಬೇಕಾದ ಕಾಳಜಿ, ಜವಾಬ್ದಾರಿಗಳನ್ನು ಮೊದಲು ಹೇಳುತ್ತೇನೆ. ಸರಿಯಾದ ಆಹಾರ ಪದ್ಧತಿ, ವೈದ್ಯರಿಗೆ ತೋರಿಸಬೇಕಾದ […]Read More
ವ್ಯಾಸ ಗುಟ್ಟು ಒಂದು ದಿನ ಮುಸ್ಸಂಜೆಯಲಿ ಹಳ್ಳಿದಾರಿಯಲ್ಲಿ ಸೈಕಲ್ ಸವಾರಿ ಮಾಡುತ್ತಾ ಹೋಗುತ್ತಿದ್ದೆ. ನೇಸರನು ತನ್ನ ತಾಪವನ್ನಿಳಿಸಿಕೊಂಡು ಪಡುವಣದ ಕಡೆ ಜಾರುತ್ತಿದ್ದ. ಎತ್ತ ನೋಡಿದರೂ ಹಸಿರು ರಾಶಿಯಾಗಿ ಸುರಿಯುತ್ತಿದೆ. ಕಾಲುವೆಗಳಲ್ಲಿ ಸಮೃದ್ಧ ಜಲಧಾರೆ ಹರಿಯುತ್ತಿದೆ. ಮನಸ್ಸನಲ್ಲಿ ತುಂಬಾ ದೂರದವರೆಗೂ ಸೈಕಲ್‌ನಲ್ಲೇ ಹೋಗಿ ಬರೋಣ ಅಂತ ತೀರ್ಮಾನಿಸಿದೆ. ಪ್ರಶಾಂತ ವಾತಾವರಣದ ಸವಿ ನನ್ನಂತಹ ನಗರವಾಸಿಗೆಲ್ಲಿ ಸಿಗಬೇಕು? ಕಳೆದ ಮೂರ್ನಾಲ್ಕು ದಿನಗಳಿಂದ ಸೈಕಲ್ ಅಭ್ಯಾಸವಾಗಿಬಿಟ್ಟಿದೆ. ಹೀರೋ ಕಂಪನಿಯ ಗಟ್ಟಿಯಾದ ಸೈಕಲ್ ಎಪ್ಪತ್ತನೇ ಇಸವಿಯ ಸೈಕಲ್ ಇನ್ನೂ ಸದೃಢವಾಗಿದೆ. ಅದರ ಮೇಲೆ […]Read More
ಮರೆಯದಿರಿ ನಾಗರೀಕತೆಯ ಪ್ರಜ್ಞೆಯನ್ನು ನಾಗರೀಕತೆ ಎಂದರೆ ಮನುಷ್ಯ ಸಮಾಜದಲ್ಲಿ ಉತ್ತಮ ರೀತಿಯಲ್ಲಿ ಬಾಳಿ ಬದುಕುವ ಅಥವಾ ಇತರರೊಡನೆ ಹೊಂದಾಣಿಕೆಯೊಂದಿಗೆ ಸಹ ಜೀವನ ಮಾಡುವ ರೀತಿ ಎಂದು ಹೇಳಬಹುದಾಗಿದೆ. ನಾಗರೀಕತೆ ಎಂಬುವುದು ಕೇವಲ ಒಬ್ಬ ವ್ಯಕ್ತಿಗಷ್ಟೇ ಸೀಮಿತವಾಗಿರದೆ, ನಾವು ಬದುಕುತ್ತಿರುವ ಸಮಾಜ ಹಾಗೂ ಪರಿಸರಕ್ಕೂ ಸಂಬಂಧಿಸಿದ್ದಾಗಿದೆ. ಆಧುನಿಕತೆಯು ಬೆಳೆದಂತೆ ಒಂದು ನಿರ್ದಿಷ್ಟ ಪ್ರದೇಶದ ಹಾಗೂ ಅಲ್ಲಿನ ಜನರ ಸಾಮಾಜಿಕ ಹಾಗೂ ಸಂಘಟನಾತ್ಮಕ ಜೀವನ ಶೈಲಿಯಲ್ಲಿ ಆಗುವ ಬದಲಾವಣೆಯನ್ನು ನಾಗರೀಕತೆ ಎನ್ನಬಹುದು. ಉತ್ತಮ ನಾಗರೀಕತೆಯು ಪರಿಸರ ಅಥವಾ ವಾತಾವರಣದ ನಿರ್ಮಾಣವಾಗಬೇಕಾದರೆ […]Read More
ಬದುಕಿನ ಸವಿಯನಾವರಣ ನನಸಾಗಿರಲು ಕಂಡ ಸವಿಗನಸುಗಳುಬೇಸರಿಕೆ ಕಾಣದೊಲ್ಲದು ಮನಸು!ಅಂತರಾಳದಲಿ ಸವಿನೆನಪುಗಳ ದಿಬ್ಬಣಸಾಗುತಿರಲು..ಬಾಳೆಂದಿಗೂ ಸೊಗಸು!! ಕಂಬನಿ ಮಿಡಿದಿಹ ಕಂಗಳನೊರೆಸಿಬಾಳಪುಟಕೆ ನೀ ಮುನ್ನುಡಿಯಾದೆ!ಮೌನದ ಬದುಕಲಿ ನೀನಡಿಯನಿರಿಸಿ…ಅರಿಯದ ಹರುಷಕೆ ನಾಂದಿಯಾದೆ!! ನಿನ್ನೊಲವಿನ ಮಳೆಯ ಸಿಂಚನದಿಭಾವಾಂತರಾಳದಲಿ ಧನ್ಯತೆಯ ಒನಪು!ಜೀವಸಾಂಗತ್ಯದ ಭಾವಲಾಸ್ಯಕೆ..ಒಲಿದ ಹೃದಯಾಂತರಾಳವೇ ಮುಡಿಪು!! ಕಾಣದ ದೇವರ ಹಾರೈಕೆಯಲಿನಮ್ಮೊಲವಿನ ನಂದನವನ ಅರಳಿದೆ!ಸಂಕಟವು ಮರೆಯಾಗಿ ಬಾಳಲಿ..ಸಂತಸದ ಕ್ಷಣಗಳೆಲ್ಲ ಮರಳಿದೆ!! ಮನದಾಳದ ಆಸರೆಯೋ..ಆಸರೆಯಮನದಾಳವೋ ಮನ ತಿಳಿಯದಾಗಿದೆ!ಮಿಡಿದ ಜೀವ ಜೊತೆಯಲಿರಲು..ಜೊತೆಯಲಿಹ ಜೀವ ನಿತ್ಯ ಮಿಡಿದಿದೆ!! ಸುಮನಾ ರಮಾನಂದRead More
ಪರಿಪೂರ್ಣತೆಯೆಡೆಗೆ… ನಾಯಿ-ನರಿ ಬೊಗಳಿದರೆಆನೆ ಬೆದರುವುದೇ ?ತಾನು ಮುನ್ನಡೆಯುವುದಎಂದಾದರೂ ಮರೆವುದೇ? ಕರಿಯ ತೆರದಲಿ ನಾವುಮುನ್ನಡೆಯುತ್ತಿರುವಾ,ನಿಂದನೆ, ಕುಹಕಗಳಿಗೆಕಿವಿಯಗೊಡದೆ ! ಬೊಗಳುವರು ನಿಂತಲ್ಲೇಬೊಗಳುತ್ತಾ ನಿಲ್ಲುವರು,ದಿಟ ಹೆಜ್ಜೆಯಿಡುವವರತಡೆವರಾರಿಹರು? ಕ್ಷುಲ್ಲಕ ವಿಷಯಗಳಕಡೆಗಣಿಸುತ್ತಲೇ,ನಡೆಯುವಾ ನಾವುಪರಿಪೂರ್ಣತೆಯೆಡೆಗೆ! ಶ್ರೀವಲ್ಲಿ ಮಂಜುನಾಥRead More
ಕರುಣಾಳು ಪರಮೇಶ(ಕುಸುಮ ಷಟ್ಪದಿ) ಕರುಣಿಸೋ ಪರಮೇಶಕರುಣೆಯನು ತೋರಿಸೋ!ಕಂಭಸುತ ಕರುಣಾಳು ಕಾಪಾಡು ಬಾ|ಕಡುಕಷ್ಟ ಪಡುತಿಹೆನುಕಾಣುತಿಹೆ ನೀನಿಂದುಕಡುಲೋಭಿ ಜಿಪುಣನಾ ಕಾಪಾಡಿದೆ||. ೧|| ಕಡುಬಡವ ಕುಚೇಲನಕರ ಪಿಡಿದು ಕಾಪಾಡಿದೆಕನಕನಿಗೆ ಕಿಂಡಿಯಲಿ ಮೊಗವನ್ನು ತೋರ್ದೆ|ಕಾಪಾಲಿ ಶಿವನನ್ನುಕಂಟಕದಿ ನೀ ಸಲಹಿದೆಕಡುಕಷ್ಟ ಪಡುತಿರುವೆ ಕಾಪಾಡು ನೀ||. ||೨|| ಮೊರೆಯಿಟ್ಟ ಪಾಂಚಾಲಿಮಾನವನು ಉಳಿಸಿದೇಮದನಪಿತ ಮಾಧವನೆ ಕರುಣಾಸಿಂಧು|ಮೋಹಿನಿಯೆ ಸುಧೆಯಂಚಿಮೋಹವನು ಬೀರಿದಳೆಮೋಹನ ನಾಗಶಯನನೆ ಕರುಣಾಳು|| ||೩|| ನಾಗರಾಜು.ಹ.ಬೆಂಗಳೂರುRead More
ಶ್ರೀ ಕ್ಷೇತ್ರ ಪೊಳಲಿ ದಕ್ಷಿಣ ಕನ್ನಡ ಜಿಲ್ಲೆಯು ಕಡಲತಟದ ಇತಿಹಾಸ ಪ್ರಸಿದ್ಧ ಸ್ಥಳವಾಗಿದ್ದು, ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದಲ್ಲಿರುವ ಶ್ರೀ ಕ್ಷೇತ್ರ ಪೊಳಲಿ ರಾಜರಾಜೇಶ್ವರಿ ದೇವಸ್ಥಾನವು ಅತ್ಯಂತ ಪುರಾತನ ದೇವಾಲಯಗಳಲ್ಲಿ ಒಂದು. ಇದು ಮಂಗಳೂರಿನಿಂದ ಸುಮಾರು 20 ಕಿ.ಮೀ ದೂರದಲ್ಲಿದ್ದು ಪೊಳಲಿಯು ಇತರ ದೇವಾಲಯಗಳಿಗಿಂತ ಭಿನ್ನವಾದ ಸ್ಥಳ ಪುರಾಣವನ್ನು ಹೊಂದಿದ್ದು ಇದು ಮುಖ್ಯವಾಗಿ ಫಲ್ಗುಣಿ ನದಿ ದಡದಲ್ಲಿದೆ. ಮೂಲಗಳ ಪ್ರಕಾರ 1446ರಲ್ಲಿ ಫಲ್ಗುಣಿ ನದಿಯಲ್ಲಿ ಬಂದ ನೆರೆಯಿಂದಾಗಿ ಪೊಳಲಿ ದೇವಸ್ಥಾನದ ಪವಿತ್ರ ಸ್ಥಳವನ್ನು ಹೊರತು ಪಡಿಸಿ ಉಳಿದೆಲ್ಲಾ […]Read More