ರಕ್ಕಸ ನಿದ್ದೆ ಹಲವು ಜನರಿಗೆ ಮರೀಚಿಕೆಯಾದೆಕೆಲವರ ಪಾಲಿಗೆ ಬೇಡದ ವರವಾದೆನಿನಗಾಗಿ ಅಸುರನೊಬ್ಬನ ಸಾಂಗತ್ಯವಿದೆ ನಿನ್ನಯ ಶಾಪಕೆ ಅವನಿಗೂ ಕೆಟ್ಟಹೆಸರುಅವನಿಂದ ಈಗಲೂ ಹಲವರಿಗೆ ಅದೇ ಹೆಸರುಬೇಡುವರು ಕೆಲವರು ನಿನ್ನಯ ಉಸಿರು ಸಂತೆಯಾದರೂ ಚಿಂತೆಯಿಲ್ಲದಿದ್ದರೂ ಸಹನಿನಗಿಲ್ಲ ಚಿಂತೆ ಬದುಕಲ್ಲಿ ನಿನದೇ ಸಂತೆನಿನ್ನಯ ಆಗಮನವ ಕಂಡು ಕರುಬುವ ಜನ ತುತ್ತಿನ ಚೀಲಕ್ಕೆ ನಿನ್ನನ್ನು ಮರೆತ ಜನಮರಕ್ಕಂಟಿದ ಬಾವಲಿಗಳಂತೆ ನಿಶಾಚರಿಯಾಗಿನಿನದೇ ಧ್ಯಾನದಲಿ ಕೊರಗುತಿಹರು ಅನುದಿನ ಊಟದಷ್ಟೇ ಮಹತ್ವ ನಿನಗೂ ಇರಲಿನಿನ್ನಯ ಕೃಪೆಯು ಎಲ್ಲರ ಮೇಲಿರಲಿಕಾವಳದ ರಾತ್ರಿಯಲಿ ಸುಂದರ ಸ್ವಪ್ನಗಳಿರಲಿ ಮರೀಚಿಕೆಯಾಗದಿರು ನೀನು ನಿದಿರೆಕುಂಭಕರ್ಣನಿಗೆ […]Read More
ಆ ಒಂದು ಕ್ಷಣ – ಅಂಕಣ ಭಾಗ-02 ಆ ಕ್ಷಣದ ನಿರ್ಧಾರ …. ಅದು ಹೇಗೆ ಸಾಧ್ಯ…!? ನಿರ್ದಿಷ್ಟ ಗುರಿ ಅಥವಾ ಉದ್ದೇಶವನ್ನು ಸಾಧಿಸಲು ಅಗತ್ಯವಾದ ಪೂರ್ವ ನಿರ್ಧರಿತ ಕಾರ್ಯಮಾರ್ಗ “ಯೋಜನೆ”. ಅದನ್ನು ಕಾರ್ಯರೂಪಕ್ಕೆ ತರುವುದು ನಿರ್ಧಾರ. ಏನು ಮಾಡಬೇಕು, ಹೇಗೆ ಮಾಡಬೇಕು, ಯಾವಾಗ ಮಾಡಬೇಕು ಮತ್ತು ಅದನ್ನು ಯಾರು ಮಾಡಬೇಕು ಎಂಬುದನ್ನು ಪೂರ್ವಭಾವಿಯಾಗಿ ಯೋಚಿಸಿ ಕಾರ್ಯರೂಪಕ್ಕೆ ಇಳಿಸಿದರೆ ಅದು ನಿರ್ಧಾರ. ಯೋಜಿಸುವಿಕೆಯು ನಾವು ಎಲ್ಲಿದ್ದೇವೆ ಮತ್ತು ಎಲ್ಲಿಗೆ ಹೋಗಬೇಕು ಎಂಬುದರ ನಡುವಿನ ಸಂಪರ್ಕ ಸೇತು.ಇದು ಯೋಜನೆ […]Read More
ನನ್ನ ಮುದ್ದು ಕಂದ ನನ್ನ ಮುದ್ದು ಕಂದನ ನಗುವಿಗೆವೀಣಾ ವಾಣಿಯು ಮುನಿಸಿದೆ……..|೨|ನನ್ನ ಕಂದನ ಹಾಗೆ ನಗಲು ಬರಲು…|೨| ನನ್ನ ಮುದ್ದು ಕಂದನ ನಡಿಗೆಗೆನಡೆವಾ ನವಿಲು ಮುನಿಸಿದೆ…………|೨|ನನ್ನ ಕಂದನ ಹಾಗೆ ನಡೆಲು ಬರಲು…|೨| ನನ್ನ ಮುದ್ದು ಕಂದನ ಹಾಡಿಗೆಹಾಡುವ ಕೋಗಿಲೆ ಮುನಿಸಿದೆ…….|೨|ನನ್ನ ಕಂದನ ಹಾಗೆ ಹಾಡ ಬರಲು…|೨| ನನ್ನ ಮುದ್ದು ಕಂದನ ನೋಟಕೆನೋಡುವ ನಕ್ಷತ್ರ ಮುನಿಸಿದೆ………..|೨|ನನ್ನ ಕಂದನ ಹಾಗೆ ನೋಡ ಬರಲು…|೨| ಪ್ರೇಮಕವಿ ಗುಡ್ಡಪ್ಪ. ಬಿಉಜ್ಜಿನಿRead More
ಸಹ್ಯಾದ್ರಿಯ ನಗೆಮಲ್ಲರು – Laughingthrush 2 ಮುಂದುವರೆದ ಭಾಗ ಹಿಂದಿನ ಭಾಗ ಓದಲು ಕೆಳಗಿನ ಲಿಂಕ್ ಬಳಸಿ https://rb.gy/30l4y ಪಳನಿ ನಗೆಮಲ್ಲ – Palani Laughingtrush ಪಶ್ಚಿಮ ಘಟಗಳ ಪೂರ್ವಕ್ಕೆ ವಿಸ್ತರಣೆಯಾಗಿರುವ ಪರ್ವತ ಶ್ರೇಣಿಗಳನ್ನು ಪಳನಿ ಬೆಟ್ಟಗಳು ಎಂದು ಕರೆಯುತ್ತಾರೆ. ದಟ್ಟ ಕಾಡುಗಳನ್ನು ಹೊಂದಿರುವ ತಮಿಳುನಾಡಿನ ಅಣ್ಣಾಮಲೈ ಪರ್ವತಶ್ರೇಣಿಗಳ ಪಶ್ಚಿಮದಿಂದ ಶುರುವಾಗುವ ಪಳನಿ ಬೆಟ್ಟಗಳು ಕೇರಳದ ಸೀಮೆ ಹಾಗೂ ಭಾರತದ ಪಶ್ಚಿಮ ಕರಾವಳಿಗೆ ಸಮಾನಂತರವಾಗಿ ಸಾಗುತ್ತದೆ. ಈ ಪಳನಿ ಬೆಟ್ಟಗಳಲ್ಲಿನ ದಟ್ಟ ಅಡವಿಗಳಲ್ಲಿ ಕಾಣಸಿಗುವುದೇ ಈ ಪಳನಿ […]Read More
“ಪುಸ್ತಕ ಮಾರಾಟವು ಒಂದು ಕಲೆ” ಪುಸ್ತಕಗಳನ್ನ ಇಟ್ಟು ಮಾರಾಟ ಮಾಡಿದ್ದನ್ನ ನೋಡಿ ಎಲ್ಲರಿಗೂ ಖುಷಿಯಾಗಿರುತ್ತೆ. ಇದೇ ರೀತಿ ಸಾಹಿತ್ಯಕ್ಕೆ ಸಂಬಂಧಿಸಿದ ವಿಭಿನ್ನ ಚಟುವಟಿಕೆಗಳಲ್ಲಿ ಇತ್ತೀಚೆಗೆ ಕಬ್ಬನ್ ರೀಡ್ಸ್ ಎನ್ನುವ ಒಂದು ತಂಡದ ಬಗ್ಗೆ ನಾವೆಲ್ಲರು ಕೇಳಿದ್ದೇವೆ. ಅವರು ಪ್ರತಿ ವಾರಂತ್ಯದಲ್ಲಿ ಕಬ್ಬನ್ ಪಾರ್ಕಿನ ಆವರಣದಲ್ಲಿ ಒಂದಷ್ಟು ಜನ ಸಾಹಿತ್ಯಾಸಕ್ತರು ಸೇರಿಕೊಂಡು ಸಾಹಿತ್ಯ ಓದಿ, ಚರ್ಚೆ ಮಾಡುತ್ತಾರೆ. ಆ ತಂಡದಲ್ಲಿ ಇರುವ ಬಹುತೇಕರು ಇಂಗ್ಲಿಷ್ ಸಾಹಿತ್ಯ ಓದುತ್ತಾರೆ. ಇದನ್ನು ಗಮನಿಸಿರುವ ಬಹಳಷ್ಟು ಜನ ಕನ್ನಡ ಓದಗರು ನಾವು ಹೀಗೆ […]Read More
ಕಿವಿ – ನ್ಯೂಜಿಲ್ಯಾಂಡ್ ನ ರಾಷ್ಟ್ರೀಯ ಪಕ್ಷಿ ನ್ಯೂಜಿಲೆಂಡಿನ ರಾಷ್ಟ್ರೀಯ ಪಕ್ಷಿ “ಕಿವಿ” ಎನ್ನುವ ವಿಷಯ ಕ್ರಿಕೆಟ್ ನೋಡುಗರಿಗೊಂದೇ ಅಲ್ಲಾ ತುಂಬಾ ಜನರಿಗೂ ತಿಳಿದೇ ಇದೆ . 14 ರಿಂದ 18 ಇಂಚು ಉದ್ದ , 1 kg ಯಿಂದ 2 kg ತೂಗುವ ಈ ಪಕ್ಷಿಯ ಕುರಿತಾಗಿ ಅನೇಕ ಕುತೂಹಲಕಾರಿಯಾದ ಸಂಗತಿಗಳಿವೆ . ತುಪ್ಪಳದಂತ ಗರಿಗಳನ್ನ ಹೊಂದಿರುವ ಇದು ಕೊಕ್ಕಿನ ಮುಂಬಾಗದಲ್ಲಿ ಮೂಗಿನ ಹೊರಳೆಗಳನ್ನ ಹೊಂದಿರುವ ಜಗತ್ತಿನ ಏಕೈಕ ಪಕ್ಷಿ . ಭೂಮಿಯ ಅಡಿಯಲ್ಲಿ ಬಿಲ […]Read More
ಹಗುರಾಗು ಮನವೆ ಕಣ್ಣ ಕಂಬನಿಯಿಂದುಕಥೆಯ ಹೇಳುತಲಿಹುದು,ಗಲಿಬಿಲಿಯ ನಗೆಯುತಾನದರಲ್ಲಿ ಸೇರಿಹುದು, ನಿನ್ನ ಇನಿದನಿಯಿಂದುಗಧ್ಗದಿತವಾಗುತಿದೆ,ನಿನ್ನ ಮನಸಿನಲಾವನೋವು ಮೀಟುತಿದೆ; ನಿನ್ನ ನೋವನು ಕೇಳೆನನ್ನ ಕಿವಿ ಕಾಯುತಿದೆ,ನಿನ್ನ ಮನದಳಲೇನುನನ್ನ ಕಿವಿಯಲ್ಲುಸುರು, ನಿನ್ನ ಸವಿ ಮನಕಿಂದುನೆಮ್ಮದಿಯ ತರಲೆಂದು,ನನ್ನ ಮನ ಕಾತರದಿಕಾದು ಕುಳಿತಿಹುದು! ಶ್ರೀವಲ್ಲಿ ಮಂಜುನಾಥRead More
ಪೊಸೈಡನ್-8ಐ ಹದ್ದಿನ ಕಣ್ಣಿನ ಚಾಣಾಕ್ಷ “ಪೊಸೈಡೆನ್” ಹೆಸರೇ ಏನೋ ಒಂಥರಾ ವಿಚಿತ್ರ ಅಲ್ಲವೇ? ಹೌದು ಹೆಸರೇನೋ ವಿಚಿತ್ರ ಹೌದು ಆದರೆ ಈತ ಬಹು ವಿಶಿಷ್ಟ ಶತ್ರು ಸಂಹಾರಿಯೂ ಹೌದು. ಹೆಸರೇ ಹೇಳುವಂತೆ ಇದೊಂದು ಭಾರತೀಯ ಸೈನ್ಯದ ಬತ್ತಳಿಕೆಗೆ ಸೇರಿದ ಬಹುಪಯೋಗಿ ಹಾಗೂ ವಿಭಿನ್ನ ಯುದ್ಧ ಸಾಮಥ್ರ್ಯ ಹೊಂದಿದ ಪೊಸೈಡೆನ್-8ಐ ಎಂಬ ಯುದ್ಧ ವಿಮಾನ. ಈ ಯುದ್ಧ ವಿಮಾನ ತಯಾರಕ ಅಮೇರಿಕಾದ ಬೋಯಿಂಗ್ ಡಿಫೆನ್ಸ್. ಸದ್ಯಕ್ಕೆ ಈ ಯುದ್ಧ ವಿಮಾನ ಪ್ರಪಂಚದ ಅಮೇರಿಕಾ ಬಿಟ್ಟರೆ ಇರುವುದು ಭಾರತದಲ್ಲಿ ಮಾತ್ರ.!!! […]Read More
ಮೌನರಾಗ ಕರಿಮೋಡದಂಚಿನಲಿಮೂಡಿದಾ ಕಿರಿದೊಂದುಬಿಳಿಗೆರೆಯ ನಗೆಯಲ್ಲಿಇಣುಕಿಕ್ಕುತಿಹುದೊಂದುಮೌನರಾಗ! ಗಿಡುಗನನು ಕಂಡೊಡನೆ,ಹಸಿರೆಲೆಗಳ ನಡುವೆಬಚ್ಚಿ ಕುಳಿತ ಮರಿಗುಬ್ಬಿಯಎದೆಮಿಡಿತದ ಸದ್ದಲಿದೆಮೌನ ರಾಗ ! ಬೇಲಿಯಂಚಿನ ಪುಟ್ಟಹೂವ ಮಡಿಲಲಿ ಕುಳಿತಬಣ್ಣದಾ ಚಿಟ್ಟೆಯಕಣ್ಣಿನಲ್ಲವಿತಿಹುದೊಂದುಮೌನರಾಗ! ತನ್ನ ತಬ್ಬಿದಿಬ್ಬನಿಯಹಿಡಿದಿಟ್ಟ ಹಸಿ ಹುಲ್ಲಹಸಿರಲ್ಲಿ ಉಸಿರಾಗಿಜೀವಂತವಾಗಿಹುದುಮೌನರಾಗ! ಕಣ್ಣು ಜಾರಿಸೋ ಎಲ್ಲಹನಿಗಳೂ ಒತ್ತಾಗಿ,ನಿಶ್ಯಬ್ದದಲಿ ಮುತ್ತಾಗಿಉರುಳುರುಳುವುದೇಮೌನರಾಗ!! ಶ್ರೀವಲ್ಲಿ ಮಂಜುನಾಥRead More
ತುಳಸಿ ಮತ್ತು ತುಳಸೀ ದಳ – ಯಂಡಮೂರಿ ವೀರೇಂದ್ರನಾಥ್ ಯಂಡಮೂರಿ ವೀರೇಂದ್ರ ಅವರ ಅದ್ಭುತ ಕಾದಂಬರಿಗಳು. ಕ್ಷಣ ಕ್ಷಣಕ್ಕೂ ರೋಚಕ ತಿರುವು ಪಡೆದು ಓದುಗರ ಕುತೂಹಲ ಕೆರಳಿತ್ತವೆ. ಮುಂದಿನ ತಿರುವು ಏನೆಂದು ಕಾತರದಿಂದ ಓದುವಂತೆ ಮಾಡುತ್ತದೆ. ತುಳಸಿ ಮೊದಲನೇಯ ಭಾಗವಾಗಿದ್ದು, ತುಳಸಿ ದಳ ನಂತರದ್ದಾಗಿದೆ. ವಿಜ್ಞಾನ, ಮಾಟ-ಮಂತ್ರ, ವಶೀಕರಣ (ಹಿಪ್ನಾಟಿಸಂ) ಕ್ಷುದ್ರ ಶಕ್ತಿ, ದೈವೀಶಕ್ತಿಗಳ ಬಗ್ಗೆ ಬೆಳಕು ಚೆಲ್ಲುವಂತ ರೋಮಾಂಚನಕಾರಿ ಕಥೆಯಾಗಿದೆ. ಮಾನವನ ಅಜ್ಞಾನ, ಅದ್ಭುತ ಸಂಶೋಧನೆ, ಅವನ ಪೈಶಾಚಿಕ ಕೃತ್ಯಗಳು, ಹಣದ ವ್ಯಾಮೋಹ ಇದೆಲ್ಲವನ್ನೂ ಲೇಖಕರು […]Read More