ತಾಯಿ – ದೇವರು ನಸುಕಿನಲಿ ಬೇಗೆದ್ದು ಕಂದನ ಜತೆಗೂಡಿಗುಡಿಯ ಬಾಗಿಲಿಗೆ ಎಡತಾಕಿನದಿಯಲಿ ಮನಸಾರೆ ಮಿಂದು ಬಂದಳವ್ವ ಗುಡಿಯಲ್ಲಿ ಕುಳಿತ ದೇವನಾ ಕಾಣುವಾಸೆಯಲಿಪುಟ್ಟ ಕಂದನ ಎಬ್ಬಿಸಿ ಗಿಲಕಿಯಾಸೆ ತೋರಿಸಿದೂರದಿಂದಲೇ ನಡೆದು ಬಂದಳಾ ಹೆತ್ತವ್ವ ಖಾಲಿ ಖಾಲಿ ಅಂಗಳದ ದೇಗುಲ ಕಂಡುಬಿರು ಬಿರುಸಾಗಿ ಹೆಜ್ಜೆಯ ಹಾಕುತಕಂದನ ಕೈ ಹಿಡಿದು ಓಡುವಳವ್ವ ಬಿಸಿಲೇರುವ ಮುನ್ನ ದೇವನಾ ಕಂಡುಸಕಲ ಭಾಗ್ಯಗಳನು ಬೇಡುತಾತುತ್ತಿನ ಚೀಲವನರಸಿ ಹೋಗುವಳವ್ವ ಮನೆಯೇ ಮೊದಲ ಪಾಠಶಾಲೆಅಮ್ಮನೇ ಮೊದಲ ಗುರುವುಸಂಸ್ಕಾರ ಕಲಿಸುವ ಅಮ್ಮನೇ ಸತ್ಯ ಕಾಣವ್ವ ಸಿ. ಎನ್. ಮಹೇಶ್Read More
ಚಾರಣಿಗರಿಗೆ ಸವಾಲು ಈ ಕುಮಾರ ಪರ್ವತ ಕುಮಾರ ಪರ್ವತ ಎಂದರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ..? ಹೌದು ಇಲ್ಲಿ ಹೇಳ ಹೊರಟಿರುವುದು ದಕ್ಷಿಣ ಕನ್ನಡ ಜಿಲ್ಲೆಯ ಪುಣ್ಯಕ್ಷೇತ್ರಗಳಲ್ಲೊಂದಾದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಅತ್ಯಂತ ಸಮೀಪವಿರುವ (ದೇವಾಲಯದ ಮುಖ್ಯ ಗೋಪುರ ಮುಂಭಾಗದಲ್ಲಿ ನಿಂತಾಗ ದೂರದಲ್ಲಿ ಕಾಣಿಸುವ ಬೆಟ್ಟ) ಪರ್ವತದ ಕುರಿತು. ಇದು ರಾಜ್ಯದ ರಾಜಧಾನಿ ಬೆಂಗಳೂರಿನಿಂದ ಸುಮಾರು 280 ಕಿ.ಮೀ. ದೂರದಲ್ಲಿದೆ. ಕರ್ನಾಟಕದ ಮಟ್ಟಿಗೆ ಚಾರಣದ ಪರ್ವತಗಳಲ್ಲೇ ಇದು ಅತ್ಯಂತ ಕಠಿಣ ಹಾಗೂ ದೀರ್ಘಕಾಲದ ಚಾರಣದ ಬೆಟ್ಟವೆಂದೇ ಹೇಳಬಹುದು. ಕುಕ್ಕೆಸುಬ್ರಹ್ಮಣ್ಯದಿಂದ […]Read More
ಭಾವಾಲಿಂಗನದ ಲಹರಿ ಪ್ರೇಮದಾ ಅಭಿವ್ಯಕ್ತಿಗೆ ಎಂದೂದೇಹದ ಸ್ಪಂದನೆ ಮಾನದಂಡವಲ್ಲ..!ಹೃದಯಾಂತರಾಳದ ಭಾವ ಲಹರಿಗೆ..ಯಾರ ಅಪ್ಪಣೆಯೂ ಬೇಕಿಲ್ಲ!! ಮೀರಾಳ ಭಕ್ತಿಯ ಪರವಶತೆಗೆಆ ಕೃಷ್ಣನ ವೇಣುಗಾನವೇ ತೃಪ್ತಿ..!ಶಬರಿಯ ಕಾಯುವಿಕೆಯ ತಪಸ್ಸಿನ ಪರಿಗೆ..ಆ ರಾಮನ ದಿವ್ಯಾಗಮನವೇ ಶಕ್ತಿ!! ಸತ್ಯದ ಪ್ರೀತಿಯ ನಿತ್ಯ ರೂಪಕೆನಲ್ಮೆಯ ಭಾವಾಲಿಂಗನವೇ ಸ್ಪೂರ್ತಿ..!ನೋವಿನ ಕುಲುಮೆಯಲಿ ನರಳಿದ ಭಾವಕೆ..ಒಲುಮೆಯ ನೆರಳಿನ ಕಲ್ಪವೃಕ್ಷವೇ ದೀಪ್ತಿ!! ಜ್ವಾಲಾಮುಖಿಯ ಜ್ವಲಿಸುವ ಭಾವವುಮುಗಿಲಿನ ವರ್ಷಧಾರೆಗೆ ತಣಿಯಿತು..!ನಾಗನಂತೆ ಬುಸುಗುಡುತಿದ್ದ ಮನವು…ಒಲವಿನ ಆತ್ಮದಾಲಿಂಗನಕೆ ಮಣಿಯಿತು!! ಸುಮನಾ ರಮಾನಂದRead More
ಸಹ್ಯಾದ್ರಿಯ ನಗೆಮಲ್ಲರು – Laughingthrush ಭಾರತದಲ್ಲಿನ ಪರ್ವತ ಶ್ರೇಣಿಗಳಲ್ಲಿ ಹಿಮಾಲಯದ ನಂತರ ಅತಿ ಉದ್ದವಾದದ್ದು ಪಶ್ಚಿಮ ಘಟ್ಟದ ಶ್ರೇಣಿಗಳು. ಸಹ್ಯಾದ್ರಿ ಘಟ್ಟಗಳು ಎಂದು ಸಹ ಹೆಸರಿರುವ ಈ ಶ್ರೇಣಿಗಳು ಬರೋಬರಿ 1600 ಕಿಲೋಮೀಟರಿನಷ್ಟು ವ್ಯಾಪ್ತಿಯಲ್ಲಿ ದಟ್ಟ ಅರಣ್ಯ ಗುಡ್ಡ ಪ್ರದೇಶಗಳಿಂದ ಹರಡಿಕೊಂಡಿದೆ. ಮಹಾರಾಷ್ಟ್ರ ಗುಜರಾತ್ ಗಳ ಗಡಿಪ್ರದೇಶದಲ್ಲಿನ ತಪತೀ ನದಿಯ ದಕ್ಷಿಣದಿಂದ ಆರಂಭವಾಗುವ ಈ ಶ್ರೇಣಿಯು ದಕ್ಷಿಣಾಭಿಮುಖವಾಗಿ ಹಬ್ಬಿ ಅಲ್ಲಲ್ಲಿ ಕವಲೊಡೆದು ಕನ್ಯಾಕುಮಾರಿಯವರೆಗೆ ಚಾಚಿಕೊಂಡಿದೆ. ಇದರ ಒಟ್ಟೂ ಪ್ರದೇಶಗಳ ಅರ್ಧಕ್ಕೂ ಹೆಚ್ಚು ಭಾಗವಿರುವುದು ನಮ್ಮ ಕರ್ನಾಟಕದಲ್ಲೇ ಎಂಬುದು […]Read More
ಕಸೂತಿಯಾಗದ ದಾರದುಂಡೆ – ಕಥಾಗುಚ್ಛ ಪುಸ್ತಕ : ಕಸೂತಿಯಾಗದ ದಾರದುಂಡೆಲೇಖಕರು : ರೇವತಿ ಶೆಟ್ಟಿ ಕೋಟಪ್ರಕಾಶನ : ಪ್ರಾಂಜಲ ಪಬ್ಲಿಕೇಷನ್ಸ್ ಉಡುಪಿ ಜಿಲ್ಲೆಯ ಕೋಟದ ರೇವತಿ ಶೆಟ್ಟಿ ಯವರ ಪ್ರಥಮ ಕಥಾಸಂಕಲನದ ಹೆಸರು ಕಸೂತಿಯಾಗದ ದಾರದುಂಡೆ. ಹೆಸರೇ ಅದೆಷ್ಟು ಧ್ವನಿಪೂರ್ಣ! ದಾರದುಂಡೆ ಎಂದರೆ ಬೆಸೆಯುವಿಕೆಯ ದ್ಯೋತಕ. ಅದೂ ಕಣ್ಮನ ತಣಿಸುವ ಸೂಕ್ಷ್ಮ ಕಸೂತಿಯಾಗಿ ಆ ದಾರದೆಳೆಗಳು ಅರಳಿದರೆ, ಆ ಕುಸುರಿ ಅದೆಷ್ಟು ಚೆಂದ ಅಲ್ವಾ? ಪ್ರತಿ ವಸ್ತುವಿಗೂ,ವ್ಯಕ್ತಿಗೂ ತಾನೊಂದು ಉತ್ಕೃಷ್ಟ ಪ್ರತಿಮೆಯಾಗಬೇಕು,ತನ್ನಿಂದ ಏನಾದರೊಂದು ಸಾಧನೆಯಾಗಬೇಕು ಎಂಬ ಆಸೆ […]Read More
ಬದುಕು ಜಟಕಾಬಂಡಿ – ಕಥಾಸಂಕಲನ ಕಥಾಸಂಕಲನ: ಬದುಕು ಜಟಕಾ ಬಂಡಿಲೇಖಕರು : ಅನಂತ್ ಕುಣಿಗಲ್ಪ್ರಕಾಶನ : ಸಾಹಿತ್ಯಲೋಕ ಪಬ್ಲಿಕೇಷನ್ಸ್ ನಾವು ಬೆಳೆದ ಪರಿಸರ, ಹೊಂದಿಕೊಂಡ ಜಾಗ, ಹಚ್ಚಿಕೊಂಡ ಜನಗಳು ಒಮ್ಮೊಮ್ಮೆ ನಮ್ಮ ಹವ್ಯಾಸ, ಆಸಕ್ತಿಗಳ ಆಯ್ಕೆಯನ್ನ ನಿರ್ಧರಿಸಿಬಿಡುತ್ತವೆ… ಅಂತೆಯೇ ಅನಂತ್ ಅವರ ಬರಹದ ಬದುಕಿಗೆ ಸ್ಪೂರ್ತಿ ಮತ್ತು ಶಕ್ತಿಯಾಗಬಲ್ಲ ಎಲ್ಲ ಚೇತನ, ಅಚೇತನಗಳಿಗೆ ನಾನು ಮನಪೂರ್ವಕವಾಗಿ ವಂದಿಸುವೆ. ಅಂತೆಯೇ ಕಂಡು ಕೇಳಿದ ಘಟನೆಗಳನ್ನ ವಸ್ತುವಾಗಿಸಿಕೊಂಡು ಕಥೆ ಬರೆದು ಸಹೃದಯರಿಗೆ ಹಂಚಿದ ಅನಂತ್ ಕುಣಿಗಲ್ ಅವರಿಗೂ.. ಲೇಖಕರ ಪರಿಚಯ: […]Read More
ಜೋಕಾಲಿ ಮರೆಯಾಯ್ತು ಹಳ್ಳಿಯ ದಿನಗಳುಎಷ್ಟು ಚೆಂದ ಆ ಬಾಲ್ಯದ ದಿನಗಳುಈಗ ಅಲ್ಲುಂಟು ಮೊಬೈಲುಗಳು ಊರ ಮರಕೆ ಚಿಕ್ಕಪ್ಪ ಕಟ್ಟಿದ ಜೋಕಾಲಿಚಿಗುರು ಉತ್ಸಾಹಮಕ್ಕಳ ಮನದಲಿನಾಮುಂದು ತಾಮುಂದು ಎನುವ ಆತುರದಲಿ ಹುತ್ತಕ್ಕೆರದು ಬಗುರಿಯಾಡಿದ ಬಳಿಕಪಂಚಮಿ ಉಂಡೆಯ ಸವಿಯುತಹೋ ಎಂದು ಕಿರುಚಾಡಿ ತೂಗುತಾ ಜೋಕಾಲಿಗಿಲ್ಲ ವಯಸಿನಾ ಭೇದಅಡುಗೆ ಮುಗಿಸಿಟ್ಟು ಓಡುವ ಅಮ್ಮತನ್ನ ಕೂಸುಗಳ ಜತೆಯಾಡುವಳಮ್ಮ ಹಬ್ಬ ಕಳೆದ ಬಳಿಕ ಪಟ್ಟಣ ಸೇರುವಾ ಜನಮರೆಯುವರು ಹಳ್ಳಿಯ ನಲಿವಿನ ದಿನಮೊಬೈಲು ಟ್ಯಾಬುಗಳಿಗೆ ಕಾತರಿಸುವ ಮನ ಮರಿಬೇಡ ಓ ಮನುಜ ನಿನ ಬಾಲ್ಯವಾಮುಂದಿನ ಪೀಳಿಗೆಗೆ ಇರಲಿ […]Read More
ತೇರೂವೋ ಕಾದಂಬರಿ: ತೇರೂವೋಮರಾಠಿ ಮೂಲ: ಗೌರಿ ದೇಶಪಾಂಡೆಕನ್ನಡಕ್ಕೆ : ಚಂದ್ರಕಾಂತ ಪೋಕಳೆಪ್ರಕಾಶನ : ದೇಸೀ ಪುಸ್ತಕ ಪ್ರಕಾಶನಬೆಲೆ : ರೂ 80 ಈ ಕಾದಂಬರಿಯ ಕಥಾನಾಯಕಿ ತನ್ನ ಪ್ರೀತಿಯ ಉತ್ಕಟತೆಯನ್ನು ‘ಸಾಕೆ’ ಯ ಅಮಲಿನಲ್ಲೇ ಆದರೂ ತನ್ನ ಪ್ರೀತಿಯ ಇಂಗ್ಲಿಷ್ ಕವಿತೆಯೊಂದಿಗೆ ಹೇಳಿಕೊಳ್ಳುವ ಸಾಲುಗಳೊಂದಿಗೆ ಆರಂಭಿಸುತ್ತೇನೆ. ಅವಳ ಪ್ರೀತಿಗೊಂದು ಜೈ ಹೇಳುತ್ತಾ… Drink to me only with thineEyes and I will pledge with mineOr leave a kiss within the cupAnd […]Read More
ಜನುಮದ ಮೈತ್ರಿ ನಿನ್ನ ಬೆರಗಿನ ಸವಿನೋಟದಲಿನಿನ್ನೊಲವಿನ ಅನುಭೂತಿಯಲಿ!ಮನದಲಿ ಮಿಂಚಿನ ರಿಂಗಣ..ಇರಲೆಂದಿದೆ ಬಾಳಲಿ ಅನುದಿನ!! ಯಾವ ಜನ್ಮದ ಮೈತ್ರಿಯಿದುಅನುಭಾವದಲಿ ಮನ ಮಿಡಿದು!ನೆಮ್ಮದಿ ಕಂಡಿದೆ ನಿನ್ನ ಕಂಗಳಲಿ..ಹಸಿರು ತಬ್ಬಿದಂತೆ ಕಾನನದಲಿ!! ಒಂದೇ ರಾಗದಿ ಒಂದೇ ಭಾವದಿತಲ್ಲೀನಗೊಳಿಸಿಹುದು ಈ ಲೋಕದಿ!ಬೆರೆತಿಹುದು ನಮ್ಮ ಮನಗಳಿಂದು..ಬೆರೆತಂತೆ ನದಿಯು ಕಡಲಲಂದು!! ಅನುಗಾಲವೂ ಇರಲಿ ಆತ್ಮಪ್ರೀತಿದಿಗಂತದಿ ಅನಂತವಾಗುವಾ ರೀತಿ!ನೀ ಬಾಳಿನಾ ಜೀವದುಸಿರು..ಅಳಿಯಲಿ ಅದರಲಿ ನನ್ನುಸಿರು!! ಸುಮನಾ ರಮಾನಂದRead More
ನೀರುನಾಯಿ – The Otter ನೀರು ನಾಯಿಗಳು ಮಾಂಸಹಾರಿ ಗಣದ ‘ಮುಸ್ಟಲಿಡೀ’ (mustelidae) ಕುಟುಂಬಕ್ಕೆ ಸೇರಿದ್ದು ವೀಸಲ್ ಗಳು (weasel), ಮಾರ್ಟೆನ್ಗಳು (Martens), ಬ್ಯಾಜರ್ (Badger) ಇನ್ನೂ ಅನೇಕ ಪ್ರಾಣಿಗಳು ಈ ಕುಟುಂಬದಲ್ಲಿ ಬರುತ್ತವೆ. ಈ ಗುಂಪುಗಳ ಪ್ರಾಣಿಗಳು ಒಂದಕ್ಕೊಂದು ವಿಭಿನ್ನವಾಗಿದ್ದರೂ ಕೆಲವೊಂದು ಲಕ್ಷಣಗಳಲ್ಲಿ ಸಾಮ್ಯತೆ ಇರುವುದರಿಂದ ಒಂದೇ ಕುಟುಂಬದಲ್ಲಿ ಇರಿಸಲಾಗಿದೆ. ಉದ್ದ ದೇಹ, ಗಿಡ್ಡ ಕಾಲು, ಬಾಲದ ಬುಡದಲ್ಲಿ ವಾಸನಾ ಗ್ರಂಥಿ ಅಭಿವೃದ್ಧಿ ಹೊಂದಿದ ಮಾಂಸದ ಹಲ್ಲುಗಳು ಈ ಕುಟುಂಬದ ಪ್ರಾಣಿಗಳ ಲಕ್ಷಣಗಳಾಗಿವೆ. ವಿಶ್ವದಲ್ಲಿ 13 […]Read More