ತಾಯ್ತನ

ತಾಯ್ತನ ಎತ್ತರೆತ್ತರದ ಮರಗಳನರಸಿಚಿಗುರೆಲೆಗಳ ಹುಡುಕಿ ಉಂಡುಖನಿಜಾಂಶಗಳ ಬೆದಕಿ ತಿಂದುಮಂದಗಮನೆಯಂತೆ ನಿಂತಿರುವೆ ನೀಳ್ಗತ್ತನು ನೀಟಿ ದೂರದ ನೋಟ ನೋಡಿಅರಿಯ ಅರಿವನು ಅರಿತು ಬೆದರಿ ನೋಡಿಭೀತಿಯ ನೋಟವನು ಬೀರುತ ಓಡಿವಿಶಾಲ ಬಯಲನು ತಲುಪಿ ನಿಂತಿಹುದು ಮಾನವನೆತ್ತರಕ್ಕೆ ಬೆಳೆದ ಕಂದನು ಜೊತೆಗಿರಲುಹಸಿವಿನಿಂದ ಅವ ನನ್ನ ಸುತ್ತ ಸುತ್ತುತ್ತಿರಲುಜಗವ ಮರೆತು ನಾ ಅವಗೆ ಹಾಲೂಡಿಸಲುತಾಯ್ತನವು ಸಾರ್ಥಕವೆಂದು ಮನೆವೆನುತಿಹುದು. ಸಿ.ಎನ್. ಮಹೇಶ್Read More

ಕಠಿಣ ಪರಿಶ್ರಮದ ಕೆಲಸಕ್ಕಿದೆ ಕಿಮ್ಮತ್ತು

ಕಠಿಣ ಪರಿಶ್ರಮದ ಕೆಲಸಕ್ಕಿದೆ ಕಿಮ್ಮತ್ತು ದೇಶವು ಜಾಗತಿಕವಾಗಿ ಅಭಿವೃದ್ಧಿಯೆಡೆಗೆ ಸಾಗುತ್ತಿದ್ದಂತೆ ಮನುಷ್ಯನ ಆಯಸ್ಸು ಪ್ರತಿದಿನವೂ ಕಡಿಮೆಯಾಗುತ್ತಾ ಹೋಗುತ್ತಿದೆ. ಇದಕ್ಕೆ ಪ್ರಮುಖ ಕಾರಣ ಅಸಮರ್ಪಕ ಜೀವನಶೈಲಿ. ಸಾಮಾಜಿಕವಾಗಿ ಬೆಳೆದಂತೆ, ತಂತ್ರಜ್ಞಾನ ಕ್ಷೇತ್ರದಲ್ಲಿನ ಅಭಿವೃದ್ಧಿ ಮತ್ತು ದಿನ ದಿನವೂ ಬದಲಾಗುತ್ತಿರುವ ಹವಾಮಾನದ ಕಾರಣದಿಂದ ಮನುಷ್ಯನ ಆರೋಗ್ಯ ಮತ್ತು ಜೀವಿತಾವಧಿಯು ಕಡಿಮೆಯಾಗುತ್ತಿದೆ. ಹಿಂದೆ 40-50 ವರ್ಷ ದಾಟಿದವರು ತಮ್ಮ ಪೋಷಕರನ್ನು ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಬರುತ್ತಿದ್ದರೆ, ಇಂದು ಅದೇ ವಯಸ್ಸಿನ ಹೆತ್ತವರು ತಮ್ಮ ಮಕ್ಕಳನ್ನು ಅನಾರೋಗ್ಯದ ಕಾರಣದಿಂದಾಗಿ ಆಸ್ಪತ್ರೆಗಳಿಗೆ ಕರೆದುಕೊಂಡು ಬರುವಂತಹ […]Read More

ದೇವರು ಅರೆಸ್ಟ್ ಆದ – ಶಿವಕುಮಾರ್ ಮಾವಲಿ

ದೇವರು ಅರೆಸ್ಟ್ ಆದ – ಕಥಾ ಸಂಕಲನ ಪುಸ್ತಕ: ದೇವರು ಅರೆಸ್ಟ್ ಆದಲೇಖಕರು : ಶಿವಕುಮಾರ್ ಮಾವಲಿಮುದ್ರಣ : ಮಾವಲಿ ಪಬ್ಲಿಕೇಷನ್ಸ್ ಲೇಖಕರ ಪರಿಚಯ ಬರಹಗಾರರಾದ ಶಿವಕುಮಾರ್ ಮಾವಲಿ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಮಾವಲಿ ಯವರು. ಸಾಹಿತ್ಯಕ್ಷೇತ್ರದ ಮಜಲುಗಳಾದ ಕಥೆ, ಕವಿತೆ, ನಾಟಕ ಗಳ ರಚನೆಯ ಮೂಲಕ ಪ್ರತಿಭಾವಂತ ಬರಹಗಾರರೆನಿಸಿಕೊಂಡಿದ್ದಾರೆ. ಸುಪಾರಿ ಕೊಲೆ (ನಾಟಕ), ಪ್ರೇಮಪತ್ರದ ಆಫೀಸು ಮತ್ತು ಅವಳು, ದೇವರು ಅರೆಸ್ಟ್ ಆದ, ಟೈಪಿಸ್ಟ್ ತಿರಸ್ಕರಿಸಿದ ಕಥೆ (ಕಥಾ ಸಂಕಲನಗಳು), ನೋ ಮೋರ್ ಇಂಗ್ಲಿಷ್, […]Read More

ಕಣ್ಣೀರ ಕಥೆ

ಕಣ್ಣೀರ ಕಥೆ ಎನ್ನ ಮನದಾಳದಿಹುದುಗಿ ಕುಳಿತಕಣ್ಣೀರ ಕುರಿತು ನಾನುಡಿದೆ, ಹೇ ಹೀಗೇಕೆನೀನವಿತು ಕುಳಿತೆ, ನೀನೊಮ್ಮೆ ಹೊರಬಂದು ಬಿಡಬಾರದೇ ?ಮತ್ತಷ್ಟು ಒಳಗೇಅಡಗಿದ ಕಣ್ಣೀರುಹೊರಬರಲು ತಾಒಪ್ಪಲೇ ಇಲ್ಲ. ಅನುನಯದಿಕೇಳಿದಾಗ ಅದುಉಲಿಯಿತು, ನಾಹೊರಬಂದಲ್ಲಿ ನನ್ನನೋಡಿ ನಗುವರೆಲ್ಲ.ಒಳಗಿನ ನೋವಿನಕಾವನು ಆರಿಸಲುಬರುವವರಾರೂ ಇಲ್ಲ! ಮನದಲುದಯಿಸಿದಕಣ್ಣೀರ ಹೊರಗಟ್ಟದೆಒಳಗಿಳಿಸುತಲಿಧಗಧಗಿಸುತ್ತಿರುವಒಡಲಾಗ್ನಿಯೆಂಬನೋವ ತಣಿಸಿಬಿಡುವೆ!! ಶ್ರೀವಲ್ಲಿ ಮಂಜುನಾಥRead More

ಅಸ್ತಿತ್ವದ ಅಂಚಿನಲ್ಲಿ ಬಿಳಿ ಹೊಟ್ಟೆಯ ಬೆಳ್ಳಕ್ಕಿ

ಅಸ್ತಿತ್ವದ ಅಂಚಿನಲ್ಲಿ ಬಿಳಿ ಹೊಟ್ಟೆಯ ಬೆಳ್ಳಕ್ಕಿ ಇಹಪರಕೆ ಕೊಂಡಿಯಾದಂತಿದೆ ಈ ಬೆಳ್ಳಕ್ಕಿ ಹಿಂಡುಹಿಂಡಾಗಿ ಅಥವಾ ಬೇರೆ ಬೇರೆಯೂ ಆಗಿಬೆಳ್ಳಂಬೆಳಗ್ಗೆ ಬೆಳಕಿಗೆ ಬೆಳಕಾಗಿ ಪರಕ್ಕೆ ಹೊರಟುಮರಳುವುವು ಸಂಜೆ ಮತ್ತೆ ಇಹವೆ ಬೇಕೆಂದು ಬಯಸಿನಾ. ಮೊಗಸಾಲೆ ಬತ್ತದ ಗದ್ದೆಗಳಲ್ಲಿ, ಹಳ್ಳ ಕೊಳ್ಳಗಳ ನೀರ ತೆರೆಗಳ ಸನಿಹದಲ್ಲಿ, ಜಾನುವಾರುಗಳ ಮೇಲೆ ಕುಳಿತು ಹುಳುಗಳನ್ನು ಹೆಕ್ಕುವ ಬೆಳ್ಳಂ ಬೆಳಗಿನ ಬೆಳ್ಳಕ್ಕಿಗಳನ್ನು (Heron) ಯಾರು ತಾನೇ ಕಂಡಿಲ್ಲ! ಈ ಬೆಳ್ಳಕ್ಕಿಗಳು ಸೂರ್ಯೋದಯದ ದೃಡೀಕರಣವು ಹೌದು. ಎಷ್ಟೋ ಕವಿಗಳಿಗೆ ಕವನಗಳಿಗೆ ಸ್ಪೂರ್ತಿ ಈ ಬೆಳ್ಳಕ್ಕಿ! ಆದರೆ […]Read More

ಹಿಂಗ್ ಮಾಡಿದ್ರೆ ಹೆಂಗೆ – ನಾಟಕ ಪ್ರದರ್ಶನ

ಹಿಂಗ್ ಮಾಡಿದ್ರೆ ಹೆಂಗೆ – ನಾಟಕ ಪ್ರದರ್ಶನ ಬೆಂಗಳೂರಿನ ಅಂತರಂಗ ಬಹಿರಂಗ ರಂಗ ತಂಡ ನಿರಂತರವಾಗಿ ಸುಮಾರು ಆರು ವರ್ಷಗಳಿಂದ ರಂಗ ಚಟುವಟಿಕೆಯಲ್ಲಿ ತೊಡಗಿಸಿ ಕೊಂಡಿದೆ. ತಂಡವು ಇಲ್ಲಿಯವರೆಗೂ ಆರು ನಾಟಕಗಳನ್ನು ರಂಗದ ಮೇಲೆ‌ ತಂದಿದ್ದಾರೆ. ನೂರಕ್ಕು ಹೆಚ್ಚು ಮರುಪ್ರದರ್ಶನಗಳನ್ನು ಕೊಟ್ಟಿದ್ದಾರೆ. “ಹಿಂಗ್ ಮಾಡಿದ್ರೆ ಹೆಂಗೆ” ತಂಡದ 7ನೇ ನಾಟಕ. ನಗರದ ಒತ್ತಡ ಜೀವನದಲ್ಲಿ ಕೆಲವು ಸಮಯ ಮನಸ್ಸನ್ನು ಹಗುರಾಗಿಸಿಕೊಳ್ಳಲು ಬಹು ಮುಖ್ಯವಾಗಿ ನಗು ಬೇಕಾಗುತ್ತದೆ. ಈ ಉದ್ದೇಶದಿಂದಲೇ ಪ್ರೇಕ್ಷಕರಿಗೆ ಬರಪೂರ ಹಾಸ್ಯವನ್ನು ನೀಡಿ ಮನಸ್ಸನ್ನು ತಿಳಿಯಾಗಿಸುವ […]Read More

ವೈಜಯಂತಿಪುರ – ಕ್ರಿ.ಶ. 316 ರಿಂದ 355

ಪುಸ್ತಕ : ವೈಜಯಂತಿಪುರಲೇಖಕರು: ಸಂತೋಷಕುಮಾರ ಮೆಹೆಂದಳೆಪ್ರಕಾಶಕರು: ಸಾಹಿತ್ಯಲೋಕ ಪಬ್ಲಿಕೇಷನ್ಸ್ ಸಂತೋಷ್ ಕುಮಾರ ಮೆಹೆಂದಳೆ ಕನ್ನಡದ ಕಾದಂಬರಿಕಾರ, ಅಂಕಣಗಾರ, ಕಥೆಗಾರ ನಮ್ಮ ಹೆಮ್ಮೆಯ ಕದಂಬ ರಾಜ ಮಯೂರವರ್ಮನ ಕುರಿತು ರಚಿಸಿರುವ ವೈಜಯಂತಿಪುರ ಕಾದಂಬರಿ ಇದೀಗ ನಾಲ್ಕನೇ ಮುದ್ರಣ ಕಾಣುತ್ತಿದೆ. ಆ ನೆನಪಿಗೋಸ್ಕರ ಪ್ರಗತಿಪರ ಲೇಖಕರಾದ ಸಿಹಿಜೀವಿ ಸಿ ಜಿ ವೆಂಕಟೇಶ್ವರ್ ಕಾದಂಬರಿಯ ಕುರಿತು ಬರೆದ ವಿಮರ್ಶೆ ನಿಮಗಾಗಿ. ವೈಜಯಂತಿಪುರದ ಜಯ… ಇಪ್ಪತ್ಮೂರು ವರ್ಷಗಳಿಂದ ಕದಂಬರ ಬಗ್ಗೆ ಮಕ್ಕಳಿಗೆ ಪಾಠ ಮಾಡುವಾಗ ಮಯೂರ ಶರ್ಮ ಮಯೂರವರ್ಮನಾದ ಕಥೆಯನ್ನು ಹೇಳಿರುವೆ. ಮಕ್ಕಳು […]Read More

ಹಣತೆಯ ಅಹಂಕಾರ

ಹಣತೆಯ ಅಹಂಕಾರ ಹಣತೆಯು ಮನೆ ಮನಗಳನ್ನು ಬೆಳಗುತ್ತದೆ. ಅದೇ ರೀತಿ ಹಣತೆಯೊಂದು ಉರಿಯುತ್ತಾ ಮನೆಯನ್ನು ನಿತ್ಯ ಬೆಳಗುತ್ತಿತ್ತು. ಒಂದು ದಿನ ತಡರಾತ್ರಿ ಆ ಮನೆಯಲ್ಲಿ ಉರಿಯುತ್ತಿದ್ದ ಹಣತೆಯು ತನ್ನಿಂದಲೇ ಕೋಣೆಯಲ್ಲಾ ಬೆಳಕು ಬೀರುತ್ತಿದೆ ಎಂಬ ಗರ್ವದಿಂದ ‘ನನ್ನಿಂದಲೇ ದೀಪವು ಉರಿಯುತ್ತಿದೆ, ಆದ್ದರಿಂದ ಈ ಬೆಳಕು ನನ್ನದೇ’ ಎಂದು ಕೂಗಿ ಹೇಳಿತು.ಇದನ್ನು ಕೇಳಿದ ಹಣತೆಯಲ್ಲಿ ಹಾಕಿದ್ದ ಎಣ್ಣೆಯು ‘ಈ ದೀಪ ಮತ್ತು ಬೆಳಕಿಗೆ ನಾನೇ ಜೀವಾಳ. ನಾನೇ ಇಲ್ಲವಾದರೆ ದೀಪವೂ ಇರುವುದಿಲ್ಲ, ಬೆಳಕೂ ಇರುವುದಿಲ್ಲ ಆದ್ದರಿಂದ ಈ ಬೆಳಕು […]Read More

ಬದುಕಿನ ಭಾಗ್ಯದ ಲಹರಿಯಲಿ..

ಬದುಕಿನ ಭಾಗ್ಯದ ಲಹರಿಯಲಿ.. ಬರಡಾದ ಬದುಕಿನಲಿಹಕಷ್ಟಗಳನು ತೊಡೆದು ಬದುಕುವಾ..!ಸವಿಯಾದ ಬದುಕಿನಲಿಹ..ಸಿಹಿಯನೆಲ್ಲವ ಸವಿದು ಬಾಳುವಾ..!! ಬಂಗಾರದ ಬದುಕನು ಅಂಗೈಲಿಟ್ಟಕಾಣದ ದೈವಕೆ ನಿತ್ಯ ಕೈಮುಗಿಯುವಾ..!ಸವಿಬದುಕನು ನಮ್ಮ ಮಡಿಲಲಿಟ್ಟ..ಹೆತ್ತವರಿಗೆ ಶಿರಬಾಗಿ ನಮಿಸುವಾ!! ಜೋಡೆತ್ತಿನ ತೆರೆದಿ ಸಾಗುತಾಬಾಳಿನ ಬಂಡಿಯ ಎಳೆಯುವಾ..!ಸ್ನೇಹಿತರ ಒಡನಾಟದಿ ನಡೆಯುತಾ..ಬದುಕನು ಚೆಂದದಿ ಕಳೆಯುವಾ!! ಅಂದದ ಬದುಕನು ಜೋಳಿಗೆಯಲಿಟ್ಟಅದೃಶ್ಯ ಶಕ್ತಿಯ ಸದಾ ನೆನೆಯುವಾ..!ಮಾನವೀಯತೆಯ ಶ್ರೇಷ್ಠತೆಯ ಸಾಧಿಸಿ..ನಶ್ವರ ಮಾನವಜನ್ಮವ ಸಾರ್ಥಕಗೊಳಿಸುವಾ..!! ಸುಮನಾ ರಮಾನಂದRead More

ಬೆಳಕಾದವಳು

ಬೆಳಕಾದವಳು ಇವಳು, ಬದುಕೆಲ್ಲ ಬವಣೆಯನೆ ಹೊದ್ದವಳು.ನೋವಿಗೆ ತೈಲವಾದವಳು.ನಲಿವಿಗೆ ಕಾದವಳು,ಕಾದು ಹೈರಾಣಾದವಳು. ಮನೆಯೋ, ಬಯಲೋ, ಅಂತರವ ಕಾಣದೆ ಅಂತರ್ಮುಖಿಯಾದವಳು.ಮಮತೆ ವಾತ್ಸಲ್ಯದ ಸಾಕಾರಕೆ,ಹಂಗು ಅಣಕಗಳಿಗೆ ಸಾಕ್ಷಿಯಾದವಳು. ತನ್ನನೇ ಗಾಣದೆತ್ತಾಗಿಸಿಕೊಂಡವಳು,ನೆನಪಲ್ಲೇ ಕೊಟ್ಟ ನೆಪಗಳನು ಎಣಿಸಿ ಕೊಂಡವಳು. ಗೆಳೆಯನೋ, ಪ್ರೇಮಿಯೋ,ಮಾತೋ ಮೌನವೋ ಅರಿಯದವಳು,ಬೆಟ್ಟದಷ್ಟು ಭಾವಗಳ ಮನೆಯ ಅಟ್ಟದಲೆ ಅರಿತವಳು.ನೋವ ಕತ್ತಲೆಗೆ ನಲಿವ ಬೆಳಕ ಹುಡುಕುತ್ತಾ ಹೊರಟವಳು. ಆದರೆ, ಬೆಳಕಿಗೆ ಮೊಗ ಮಾಡಿ ನಿಂದವಳಬೆನ್ನ ಹಿಂದೆ ಬರೀ ಕತ್ತಲು.ತಮವು ಆವರಿಸಿ ಕಾಣದಿಹ ಜಗದ ಬೆತ್ತಲು.ನೀರವ ಮೌನ ಸುತ್ತಲೂ. ಬರಲಿ ಬಿಡು , ಬೆಳಕು ನಮ್ಮನೆತ್ತಲು. […]Read More