ಆ ಒಂದು ಕ್ಷಣ…… ಜೀವನ ಪಯಣದಲ್ಲಿ ನಮ್ಮದು ಯಾವಾಗಲೂ ಗೆಲುವಿಗಾಗಿ ತುಡಿಯುವ ಮನಸ್ಸು!!!.ಗೆಲುವಿಗಾಗಿ ಕಾಯುತ್ತಾ ಕುಳಿತು ಬಹುತೇಕ ಸಂದರ್ಭಗಳಲ್ಲಿ ನಿರಾಶರಾಗುವುದೂ ಇದೆ. ಹಣ, ಹೆಸರು, ಕೀರ್ತಿ, ಸಾಮಾಜಿಕ ಸ್ಥಾನಮಾನ ಇವೆಲ್ಲವೂ ನಮ್ಮ ಗೆಲುವಿನ ಮೇಲೆ ಹೆಚ್ಚಿನಂಶ ಅವಲಂಬಿತವಾಗಿದೆ ಎನ್ನುವುದು ಸುಳ್ಳಲ್ಲ. ಈ ಎಲ್ಲವನ್ನೂ ತಂದು ಕೊಡುವ ಆ ಗಳಿಗೆ ಇದೆಯಲ್ಲ!!! ಅದು ನಮ್ಮ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಆ ನಿಮಿಷ, ಆ ಕ್ಷಣದ ನಿರ್ಧಾರ ನಮ್ಮನ್ನು ಎತ್ತರಕ್ಕೂ ಕೊಂಡೊಯ್ಯುತ್ತದೆ…ಎಚ್ಚರ ತಪ್ಪಿದರೆ ಪಾತಾಳಕ್ಕೂ ನೂಕುತ್ತದೆ.. . ಒಬ್ಬ […]Read More
ಹೀಗೊಂದು ಭಾವನೆ ಯಾರಿಗಾದರೂ ಹಂಚಿ,ಎದೆ ಭಾರವಿಳಿಸಲುಆಸ್ಪದವನ್ನೀಯದ,ತಿದಿಯೊತ್ತಿದಂತೆಉರಿಯುತ್ತಿರುವಅಸಹನೀಯ ನೋವು! ಮನದ ಸಾಗರದಲಿಬಚ್ಚಿಟ್ಟು, ಒಂದೊಂದೇಹನಿ ತೊಟ್ಟಿಕ್ಕಿಸಿದರೂಮುಗಿಯದೆ, ಕರಗದೆ,ಜನ್ಮವೆತ್ತುತ್ತಿರುವ ಈಅಂತರಾಳದ ನೋವು! ಮಾತುಗಳೇ ಮುಳ್ಳಾಗಿಚುಚ್ಚಿದರೂ, ನಗುವಕಂಗಳ ಹಿಂದಡಗಿಮೌನದಿ ಬಿಕ್ಕಿದರೂಪರರಿಗರಿವಾಗದಂತಿಹಅಸಹಾಯಕ ನೋವು! ತನ್ನವರೇ ಹೊಡೆದಮಾತಿನಾಘಾತಕ್ಕೆತತ್ತರಿಸಿ, ಉಸಿರೆತ್ತದೆಒಳಗುದಿಯ ಅದಿಮಿಟ್ಟುನಗೆಯ ಮೊಗವಾಡವಿಟ್ಟಅಂತರ್ದಾಹಕವೀ ನೋವು! ಅನಿವಾರ್ಯತೆಯವಾಸ್ತವವನ್ನರಿತು,ಎಲ್ಲವನ್ನೆದುರಿಸಲುಸಜ್ಜಾದ ಪ್ರಬುದ್ಧ ಮನದಗಂಭೀರ ನೋವು! ಶ್ರೀವಲ್ಲಿ ಮಂಜುನಾಥRead More
“ಹೆಬ್ಬಕ್ಕ”ನಿಗೆ ಸುತ್ತೆಲ್ಲವೂ ಶತ್ರುಗಳೇ! ಹೆಬ್ಬಕ್ಕಗಳು (ದಿ ಗ್ರೇಟ್ ಇಂಡಿಯನ್ ಬಸ್ಟರ್ಡ್) ಇದೀಗ ಮತ್ತೆ ಸುದ್ದಿಯಲ್ಲಿವೆ! ಹೆಬ್ಬಕ್ಕ – ದಿ ಗ್ರೇಟ್ ಇಂಡಿಯನ್ ಬಸ್ಟರ್ಡ್ ಈಗ ತೀವ್ರ ಅಳಿವಿನಂಚಿನಲ್ಲಿರುವ ಪಕ್ಷಿ ಪ್ರಭೇದ. ಇದು ರಾಜಸ್ಥಾನದ ರಾಜ್ಯ ಪಕ್ಷಿಯು ಹೌದು. ಕಳೆದ ಶತಮಾನದ ಮಧ್ಯದವರೆಗೂ ನಮ್ಮ ಭಾರತದಲ್ಲಿ ಹೇರಳವಾಗಿ ಕಾಣಸಿಗುತ್ತಿದ್ದ ಹೆಬ್ಬಕಗಳು ಕಳೆದ ಗಣತಿಯಲ್ಲಿ ಎಣಿಕೆಗೆ ಸಿಕ್ಕಿದ್ದು ಇಡೀ ದೇಶದಲ್ಲೇ 150 ಹಕ್ಕಿಗಳು ಮಾತ್ರ . ರಾಜಸ್ಥಾನದ ಜೈಸಲ್ಮೇರ್ ಒಂದರಲ್ಲೇ 100 ಹಕ್ಕಿಗಳಿದ್ದರೆ, ಗುಜರಾತ್ ನ ಕಛ್ ನಲ್ಲಿ 25, […]Read More
ಭಕ್ತರ ಕಾಯುವ ದೊಡ್ಡ ಕಾಯಪ್ಪ ತುಮಕೂರಿನಿಂದ ಕೊರಟಗೆರೆ ಮಾರ್ಗವಾಗಿ ತೋವಿನಕೆರೆ ಬಳಿಯ ಕುರಮಕೋಟೆ ಎಂಬ ಹಳ್ಳಿಗೆ ಹೋದರೆ ಸಿದ್ದರ ಬೆಟ್ಟದ ಬುಡದಲ್ಲಿ ನೆಲೆಸಿ ಕಷ್ಟ, ರೋಗ ರುಜಿನ ಎಂದು ನೊಂದು ಬರುವ ಭಕ್ತರ ಅಭಿಲಾಷೆಯನ್ನು ಇಡೇರಿಸುತ್ತಾ ದೊಡ್ಡಕಾಯಪ್ಪ ಎಂಬ ಹೆಸರಿನಿಂದ ಇಲ್ಲಿ ಅಂಜನೇಯ ಸ್ವಾಮಿ ನೆಲೆ ನಿಂತಿದ್ದಾನೆ. ಹಿಂದಿನಿಂದಲೂ ಇಲ್ಲಿಗೆ ಬರುವ ಭಕ್ತರಿಗೆ ಇರುವ ಖಾಯಿಲೆ ಹಾಗೂ ಕಷ್ಟ ನಿವಾರಣೆಯಾಗುತ್ತದೆಂಬ ನಂಬಿಕೆ ಇದ್ದು ಅದು ಹಾಗೆ ಮುಂದುವರೆದುಕೊಂಡು ಬಂದಿದೆ. ಈ ದೇವಸ್ಥಾನದ ಇತಿಹಾಸವನ್ನು ಹುಡುಕುತ್ತಾ ಹೋದರೆ ಅದು […]Read More
ಜನ್ಮದಿನದ (ಸಂ)ಭ್ರಮ ಸಂದಿಹವು ವರುಷಗಳುನೆನಪುಗಳ ಮೆರವಣಿಗೆಯಲಿನಾನು ಇಟ್ಟ ಹೆಜ್ಜೆಗಳ ಲೆಕ್ಕವಿಲ್ಲಕಂಡ ಕನಸುಗಳ ಪರಿವೆಯಿಲ್ಲ ನೆನಪುಗಳ ದಾರದಲಿ ಪೋಣಿಸಿಹಮಧುರ ನೆನಪುಗಳಹೂವಿನ ಘಮಲು ಮಾತ್ರಇಂದಿಗೂ ಆಗೀಗ ಕಾಡುತ್ತನನ್ನೊಳಗಿನ ನಾನು ಎಚ್ಚೆತ್ತುಒಮ್ಮೆ ಕಣ್ಣಹನಿಯು ಜಾರುತ್ತಮತ್ತೊಮ್ಮೆ ಹರಿಯಲಾಗದೇ ಇಂಗುತ್ತಾಮಗದೊಮ್ಮೆ ದಿಂಬಿನಾಸರೆಯಲ್ಲಿನಿರಾಳವಾಗಿ ನಿಟ್ಟುಸಿರು ಬಿಡುತ್ತದೆ ಅಂದು ಮುತ್ತಿನ ಹನಿಯಂತೆಫಳಫಳನೆ ಹೊಳೆದುಕೋಡಿ ಒಡೆದು ಜಾರಿದ ಕಣ್ಣೀರುಇಂದು ಕಟ್ಟೆ ಕಟ್ಟಿದರೂ ತುಂಬದಬರಡು ಜಲಾಶಯದಂತೆಅಳುವಿಗೂ ತತ್ವಾರ ತಂದಿದೆ ಬೆಳಕಿನರಮನೆಯಲ್ಲಿ ಕುಳಿತವಗೆಅಂತರಂಗದ ಕತ್ತಲೆಯ ತೊಡೆವದಾರಿ ಕಾಣದಾಗಿದೆಒಡಲೊಳಗಿನ ಬಾಗಿಲಿಗೆಬೀಗ ಜಡಿದಿರುವಾಗಗುರಿಗೆ ಎಲ್ಲಿಯ ದಾರಿ!? ಮೌನವನು ಆಲಿಸಿದ ಕಿವಿಗೆಮಾತು ಇಷ್ಟವಾಗುತ್ತಿಲ್ಲನೆನಪಿನಂಗಳದಿ ಚದುರಿಹೋದಭಾವಗಳನ್ನು ಹೆಕ್ಕಿ […]Read More
ಕಲ್ಲು ಮೀನು ಬಹುಶಃ ಕಡಲತೀರದಲ್ಲಿ ಅತ್ಯಂತ ಅಪಾಯಕಾರಿ ಎಂದರೇ ಅದು ಈ ಕಲ್ಲು ಮೀನು (ಸ್ಟೋನ್ ಪಿಶ್) ಇರಬಹುದು. ಸಾಮಾನ್ಯವಾಗಿ ಇವು ಸಾಗರದ ಹವಳದ ಬಂಡೆಗಳು, ಸಮುದ್ರದ ಹುಲ್ಲು ಮತ್ತು ಇತರೇ ಸಸ್ಯಗಳ ನಡುವೆಚಲನರಹಿತವಾಗಿರುತ್ತವೆ (ನಿಶ್ಚಲವಾಗಿ ಬಿದ್ದುಕೊಂಡಿರುತ್ತವೆ), ಕೆಲವೊಂದು ಸರ್ತಿ ಸಮುದ್ರದ ಮರಳಿನಡಿಯಲ್ಲಿ ದೇಹದ ತಲೆಯನ್ನ ಹೊರಹಾಕಿ ಸಮುದ್ರದ ಮರಳಿನಲ್ಲಿ ಬಾಗಶಃ ಮರೆಮಾಚಿಕೊಂಡು ಮುಚ್ಚಿಹಾಕಿಕೊಂಡಿರುತ್ತವೆ. ಇವು ಭೇಟೆಗಳ ಬೆನ್ನು ಹತ್ತಿ ಹೋಗುವುದಿಲ್ಲ. ತಮ್ಮ ಹತ್ತಿರ ಬರುವ ಭೇಟೆಗಳ ಮೇಲೆ ಮಿಂಚಿನಂತೆ ಎರಗಿ ಭೇಟೆಯಾಡಿ ಭಕ್ಷಿಸುತ್ತವೆ. ಇವುಗಳ ವಿಷ […]Read More
ಒಲವಿನ ನೋಟದುಯ್ಯಾಲೆ ಸವಿಕಂಗಳ ನೋಟವು ಒಂದಾಗಿರಲುಅಂಕುರಿಸಿತು ಒಲವಿನ ಸೆಲೆ!ಜೀವಭಾವಗಳು ಜತೆಯಲಿ ಮಿಡಿದಿರಲು..ಅನುಭಾವದಲಿ ಕಂಡಿದೆ ನೆಲೆ!! ಕಾಡುವಾ ಸಂಪ್ರೀತಿಯ ಸೆಳೆತಕೆಭಾವತರಂಗಗಳ ನಿತ್ಯ ನರ್ತನ..!ಮೂಡುವಾ ಭಾವದ ಅಗ್ಗಿಷ್ಟಿಕೆಗೆ..ಪ್ರೀತಿಯಲೆಯ ಪನ್ನೀರ ಸಿಂಚನ!! ಸುಪ್ತಮನದ ಸಂತಸದೊಲುಮೆಗೆಮನದಂಗಳದಿ ಬಣ್ಣಗಳ ಚಿತ್ತಾರ!ಅಪ್ಪಳಿಸುವ ಅನುರಾಗದಲೆಗೆ..ಮಿಡಿದ ಹೃದಯವಾಗಿದೆ ಹಗುರ!! ಸರಿಸಾಟಿ ಜಗದಲಿ ಯಾವುದಿದೆಬಳ್ಳಿ ಮರವನು ಅಪ್ಪುವ ರೀತಿಗೆ..!ಸಂಕಟದಿ ನೊಂದ ಜೀವವರಳಿದೆ..ದೊರೆತಾಗ ಜನ್ಮದ ಪ್ರೀತಿಗೆ ಅದರ ನೀತಿಗೆ!! ಸುಮನಾ ರಮಾನಂದRead More
ಕಂಟಕದ ಸಮಯದಲ್ಲಿನ ತಾಳ್ಮೆ – ಸಂಯಮ ಮಹಾಭಾರತ ಮಹಾಯುದ್ಧದಲ್ಲಿ ಕೌರವರ ಮತ್ತು ಪಾಂಡವರ ಬಿಲ್ವಿದ್ಯೆಯ ಗುರುಗಳಾದ ದ್ರೊಣಾಚಾರ್ಯರು ಕೊಲ್ಲಲ್ಪಟ್ಟಾಗ ಅವರ ಮಗ ಅಶ್ವತ್ಥಾಮನಿಗೆ ಸಹಿಸಲು ಅಸಾಧ್ಯವಾದ ನೋವು, ದುಃಖ, ಕ್ರೋಧ ಮತ್ತು ದ್ವೇಷ ಉಂಟಾಗಿತ್ತು. ಆ ಕೋಪದ ಆವೇಶದಲ್ಲಿ ಪಾಂಡವರನ್ನೆಲ್ಲರನ್ನು ಸಂಹರಿಸಲು ಅಶ್ವತ್ಥಾಮನು ಅತ್ಯಂತ ಭಯಾನಕ ಮತ್ತು ವಿಧ್ವಂಸಕಾರಿಯಾದ ನಾರಾಯಣ ಅಸ್ತ್ರವನ್ನು ಪಾಂಡವರ ಸೈನ್ಯದ ಮೇಲೆ ಪ್ರಯೋಗಿಸಿದನು.ಒಮ್ಮೆ ಪ್ರಯೋಗಿಸಲ್ಪಟ್ಟ ನಾರಾಯಣ ಅಸ್ತ್ರವನ್ನು ನಿಷ್ಕ್ರಿಯಗೊಳಿಸುವುದು ಯಾರಿಂದಲೂ ಸಾಧ್ಯವಿರಲಿಲ್ಲ. ಶಸ್ತ್ರಸಜ್ಜಿತರಾದ ಹಾಗೂ ಆಯುಧಗಳನ್ನು ಹಿಡಿದುಕೊಂಡು ಎದುರಾಳಿಯ ಮೇಲೆ ಧಾಳಿಮಾಡಲು ಪ್ರಯತ್ನಿಸುವವರನ್ನು […]Read More
ಸೂಲಗಿತ್ತಿ ಪಾರವ್ವ ” ಏನ ಪಾರವ್ವ ಇವತ್ತು ಯಾವುದು ಡೆಲಿವರಿ ಕೇಸ್ ಬಂದಿಲ್ಲ ಏನೋ? ಅಂತಾ ಕೂಲಿ ಕೆಲಸಕ್ಕೆ ಹೊಂಟಿದ್ದ ರತ್ನವ್ವ ಕೇಳಿದಳು. ಯಾವುದೂ ಇಲ್ಲ ನೋಡ ತ೦ಗಿ ಅಂತಾ ಪಾರವ್ವ ಮುಗುಳುನಕ್ಕಳು”, ನಡು ರಸ್ತೆಯಲ್ಲಿ ಬೀದಿ ನಾಯಿ ಮರಿ ಹಾಕಿತ್ತು. ಯಾವುದಾದರೂ ಗಾಡಿ ಹಾಯ್ದು, ಇಲ್ಲಾ ಯಾರಾದರೂ ತುಳಿದು ಮರಿಗಳು ಸಾಯಬಾರದೆಂದು, ಮರಿಗಳನ್ನು ಸೀರೆಯ ಸೆರಗಿನಲ್ಲಿ ಹಾಕಿಕೊ೦ಡು ತಂದು, ಮನೆಯ ನೆರಳಿಗೆ ಹಾಸಿದ್ದ ಮೆತ್ತನೆಯ ಚೀಲದ ಮೇಲೆ ಹಾಕಿದಳು. ಬಾಣ೦ತಿ ನಾಯಿಗೆ ಹಾಲು ಕಲಸಿದ ಅನ್ನ […]Read More