ಕೆಲಸಕ್ಕಾಗಿ ಕಗ್ಗತ್ತಲೆಯ ಖಂಡದತ್ತ – ೨೨

–ಅಬ್ದೋ ತಂದೆಯ ಮನೆ– ನಾವು ಮೊಗದಿಶುವಿನಲ್ಲಿ ಇದ್ದ ಹನ್ನೆರಡು ವರ್ಷದಲ್ಲಿ ಒಟ್ಟು ಐದು ವಿವಿಧ ಬಾಡಿಗೆ ಮನೆಗಳಲ್ಲಿ ಭಿನ್ನ ಭಿನ್ನ ಸಮಯಗಳಲ್ಲಿ ವಾಸ ಇದ್ದೆವು. ಒಂದೊಂದು ಮನೆಯನ್ನೂ ಒಂದೊಂದು ಕಾರಣಕ್ಕೆ ಬಿಡಬೇಕಾಗಿತ್ತು. ಮೊದಲನೆಯ ‘ಹಾವೇಸ್’ ಮನೆಯನ್ನು ಸರಣಿ ಕಳ್ಳತನಗಳಿಂದ, ಎರಡನೆಯ ಮಾರ್ಕೆಟ್ ಸಾಮೀಪ್ಯದ ಹಳೆಯ ಸಂಕೀರ್ಣದ ಮನೆಯನ್ನು ಹಗಲು ಮತ್ತು ರಾತ್ರಿಯ ಗಲಾಟೆಯಿಂದ ಹೀಗೆ. ನಾವು ಇದ್ದ ಐದನೆಯ ಮತ್ತು ನಮ್ಮ ಮೊಗದಿಶು ವಾಸದ ಕೊನೆಯ ಮನೆ ಕೂಡ, ಹಾವೇಸ್ ಮನೆಯ ರೀತಿ ವಿಶಾಲವಾದ ಹಾಲ್ ಅಲ್ಲದೆ […]Read More

ವಾಲಿ ವಧೆ – ಇದು ಹಳ್ಳಿ ಹುಡುಗರ ರಂಗ ಪಯಣ

ವಾಲಿ ವಧೆ – ನಾಟಕ ಪ್ರದರ್ಶನ ಹಳ್ಳಿ ಹುಡುಗರೇ ನಟಿಸುವ ಶ್ರೀರಾಮಾಯಣ ದರ್ಶನಂ ಆಧಾರಿತ ನಾಟಕ ‘ವಾಲಿ ವಧೆ’ ಈ ನಾಟಕದ ಪಾತ್ರಧಾರಿಗಳು ರಂಗಭೂಮಿಯ ಸ್ಟಾರ್‌ಗಳು! ಇಂಟ್ರೋ:ಯಾವುದೇ ರಂಗ ತರಬೇತಿಗಳನ್ನೂ ಪಡೆಯದ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಪುಟ್ಟ ಗ್ರಾಮದ ಶೇಷಗಿರಿಯಲ್ಲಿನ ಗಜಾನನ ಯುವಕ ಮಂಡಳಿಯ ಸ್ಥಳೀಯ ಕಲಾವಿದರು ಹಳೆಗನ್ನಡದ ನಾಟಕವನ್ನು ಮಾಡುತ್ತಾರೆ. ಇವರು ಸ್ವಲ್ಪವೂ ತೊದಲದೇ, ಅಳುಕದೇ ಎಂತಹ ಹಿರಿಯ ಕಲಾವಿದರೂ ತಲೆದೂಗಿ ಮೆಚ್ಚುವಂತೆ ಅಭಿನಯಿಸುತ್ತಾರೆ, ಅಭಿನಯಿಸುತ್ತಿದ್ದಾರೆ! ಇಲ್ಲಿಯವರೆಗೂ ಪ್ರದರ್ಶನಗೊಂಡ ಕಡೆಗಳಲ್ಲೆಲ್ಲಾ ಯಶಸ್ಸನ್ನು ಕಂಡ ನಾಟಕವಿದು. […]Read More

ಹನಿಗವಿತೆಗಳು – ಡಾII ಪರಮೇಶ್ವರಪ್ಪ ಕುದರಿ – 14

ಪ್ರೀತಿಯೇ ಔಷದಿ ಎಲ್ಲ ನಲಿವಿಗೂಪ್ರೀತಿಯೇ ಪ್ರೇರಣೆಎಲ್ಲ ನೋವಿಗೂಪ್ರೀತಿಯೇ ಔಷದಿ!ಮತ್ತೇಕೆ ಜಿಪುಣತನಕೈ ತುಂಬ ಹಂಚಿಎದೆ ತುಂಬ ಹರಡಿ!! ಅಭಿನಂದನೆ ಪ್ರೀತಿಯ ಪಾದರಕ್ಷೆನಿನ್ನಿಂದಲೇ ಈ ಜೀವಕೆ ರಕ್ಷೆನೀ ಇಲ್ಲದೆ ಒಂದು ಹೆಜ್ಜೆಕೂಡ ಎತ್ತಿಡಲೂನಾನು ಅಸಮರ್ಥ!ನಿನ್ನಿಂದಲೇ ನನ್ನ ಚಲನವಲನನಿನಗಿದೋ ವಂದನೆಅಭಿನಂದನೆ!! ಧನ್ಯವಾದ ಪ್ರೀತಿಯ ಮನಸೇನನ್ನದೊಂದು ಬಿನ್ನಹಮರೆತು ಹೋದವರ ಬಗ್ಗೆನೀನು ಚಿಂತಿಸಬೇಡ!ಇದ್ದಷ್ಟು ದಿನಅವರು ನೀಡಿದಸಂತೋಷಕ್ಕೆಧನ್ಯವಾದ ತಿಳಿಸು!! ಭರ್ತಿಯಾಗಿದೆ ನನ್ನದು ನಿಜವಾದಪ್ರೀತಿ ಎಂದುಎಷ್ಟು ಹೇಳಿದರುನೀ ಕೇಳದಾದೆ!ಇಂದು ನಿನ್ನ ಸ್ಥಿತಿ ನೋಡಿಕರಳು ಕಿತ್ತು ಬರುತಿದೆ!ಆದರೇನು ಮಾಡಲಿನಾನೀಗ ಅಸಹಾಯಕನಿನ್ನ ಸ್ಥಾನ ಭರ್ತಿಯಾಗಿದೆ!! ಡಾII ಪರಮೇಶ್ವರಪ್ಪ ಕುದರಿRead More

ಹಕ್ಕಿಯ ಚಿತ್ತಾರ

ಹಕ್ಕಿಯ ಚಿತ್ತಾರ ಹಕ್ಕಿಯ ಹಿಂಡುಬಾನಲಿ ಹಾರಿದೆಹಕ್ಕಿಯ ಹಿಂಡುಹಿಂದೆಯೇ ಓಡಿದೆಮೋಡದ ದಂಡು ಸೂರ್ಯನು ಪಡುವಣಸೇರುವ ಹೊತ್ತುಆಯಿತು ಗೂಡಿಗೆಹೋಗುವ ಹೊತ್ತು ಬಗೆ ಬಗೆಹಕ್ಕಿಯು ಹಾರುತಲಿಹುದುಸುಂದರ ಚಿತ್ತಾರವದುಮೂಡುತಲಿಹುದು ಬಣ್ಣದ ಆಗಸದಿಹಕ್ಕಿಯು ಹಾರಲುಚಿಲಿಪಿಲಿ ಕಲರವಮೂಡಿರಲುಕವಿಮನಪುಳಕಿತವಾಗಿಹುದುಸುಂದರ ಕವನವದುಮೂಡಿಹುದು ಪ್ರಕಾಶ್ ಕೆ. ನಾಡಿಗ್ಶಿವಮೊಗ್ಗRead More

ಅದೃಷ್ಟದ ಆಟ – ಎನ್. ಶಿವರಾಮಯ್ಯ (ನೇನಂಶಿ) ಭಾಗ – 9

ಕಳೆದ ಸಂಚಿಕೆಯಿಂದ… ಶಶಿಶೇಖರನು ಎರಡು ಮನಸ್ಸು ಮಾಡದೆ ಮತ್ತೆ ಆಟಕ್ಕೆ ಕುಳಿತನು. ಆದರೆ ಭಾಗ್ಯದೇವಿಯು ಅವನ ಮೇಲೆ ಮುನಿಸಿಕೊಂಡಿದ್ದಳು. ಹಾಗಾಗಿ ಅವನು ಸೋತು ಸರ್ವಸ್ವವನ್ನೂ ಕಳೆದುಕೊಂಡನು. ಬೇಸರಗೊಂಡು ಹತಾಶನಾಗಿ ದಾಳಗಳನ್ನು ದೂರ ಎಸೆದು, ಎದ್ದು ನಿಂತನು. ಚಿತ್ರಕನು ಆ ದಾಳಗಳನ್ನು ಎತ್ತಿಕೊಂಡು ‘ಈ ದಾಳಗಳು ಈಗ ನನ್ನವು.ನೀನು ಸರ್ವಸ್ವವನ್ನೂ ಸೋತಿರುವೆ ಎಂಬುದು ನೆನಪಿರಲಿ’ ಎಂದು ಹೇಳಿದನು. ಶಶಿಶೇಖರನು ಉನ್ಮತ್ತನಂತೆ ಗಟ್ಟಿಯಾಗಿ ಕಿರಿಚುತ್ತಾ ‘ನೀನು ಕಿತವ, ದರೋಡೆಕೋರ! ಮೋಸದಿಂದ ನನ್ನ ಸರ್ವಸ್ವನ್ನೂ ಲೂಟಿ ಹೊಡೆದಿರುವೆ’ ಎಂದು ದೂರಿದನು. ಚಿತ್ರಕನ […]Read More

ಚಂದ್ರಮಾನೆ ಹಾಗು ಸಾಹಿತ್ಯ ಮತ್ತು ಸಮಾಜ – ಕಗ್ಗೆರೆ ಪ್ರಕಾಶ್

ಲೇಖಕರ ಪರಿಚಯ ತಮ್ಮ ಹುಟ್ಟೂರಾದ ಕಗ್ಗೆರೆಯನ್ನು ಸೇರಿಸಿಕೊಂಡ ಪ್ರಕಾಶ್ ಕನ್ನಡ ಸಾಹಿತ್ಯ ಲೋಕದಲ್ಲಿ ಕಗ್ಗೆರೆ ಪ್ರಕಾಶ್ ಎಂದೇ ಚಿರಪರಿಚಿತರು. ಕೆ. ಸಿ. ಚೆನ್ನಾಚಾರ್ ಮತ್ತು ಅಮ್ಮಯಮ್ಮ ದಂಪತಿಗಳ ಶ್ರೀ ಪ್ರಕಾಶ್ ರವರು ತಮ್ಮ 18 ನೇ ವಯಸ್ಸಿನಲ್ಲಿ ಬೆಂಗಳೂರಿಗೆ ಬಂದು ಹಲವು ಕಷ್ಟ ನೋವು ಸಂಕಟದ ರುಚಿಯನ್ನು ಅನುಭವಿಸಿ ಪತ್ರಿಕೋದ್ಯಮದಲ್ಲಿ ಡಿಪ್ಲೊಮೊ ಪಡೆದು ಹೊಸ ದಿಗಂತ, ಆಂದೋಲನ, ಪ್ರಜಾಮತ, ಕರ್ನಾಟಕ ನ್ಯೂಸ್ ನೆಟ್, ವಿಕ್ರಾಂತ ಕರ್ನಾಟಕ, ಹಾಯ್ ಬೆಂಗಳೂರು, ಚಿತ್ತಾರ , ಕರ್ನಾಟಕದ ಟೀವಿ ಲೋಕ, ಕನ್ನಡ […]Read More

ವಿಶ್ವ ವಿಸ್ಮಯ -1 ಕಪ್ಪು ಕುಳಿ – Black Hole

ಕಪ್ಪು ಕುಳಿ – Black Hole ಒಮ್ಮೆ ಊಹಿಸಿಕೊಳ್ಳಿ ನೀವು ದೊಡ್ಡ ಕತ್ತಲ ಗುಹೆಯೊಳಗೆ ನುಗ್ಗಿ ಮುಂದೆ ಚಲಿಸುತ್ತ ಇದ್ದು ಎಷ್ಟು ಹೊತ್ತಾದರೂ ಆಚೆಗಿನ ಬೆಳಕು ಕಾಣಿಸದೆ ಇದ್ದು ಮತ್ತು ಕತ್ತಲ ಹೊರತು ಬೇರಾವ ಬೆಳಕು ಅಥವಾ ದಡ ಸಿಕ್ಕದಿದ್ದಾಗ. ಇದು ಇನ್ಯಾವ ಗುಹೆ ಅಂದುಕೊಂಡಿರಾ…ಇದುವೇ ಬಾಹ್ಯಾಕಾಶದಲ್ಲಿರುವ ಕಪ್ಪು ಕುಳಿಗಳು… ಕಪ್ಪು ಕುಳಿ ಬಾಹ್ಯಾಕಾಶದ ಪ್ರದೇಶವಾಗಿದ್ದು ಅದರಿಂದ ಬೆಳಕು ಸೇರಿದಂತೆ ಮತ್ಯಾವುದು ತಪ್ಪಿಸಿಕೊಂಡು ಹೋಗುವುದಕ್ಕೆ ಸಾಧ್ಯವಾಗುವುದಿಲ್ಲ. ಕಪ್ಪು ಕುಳಿಯ ಸುತ್ತ ಅಗೋಚರ ಹೊರ ಮೈಯಿದ್ದು ಇದು ಹಿಂತಿರುಗಲಾರದ […]Read More

ಗಾಳವೆಂದರೆ ಅವಳ ಕುಡಿ ನೋಟ..

ಮೀನಿನಗಾಳ,ಗಾಳವೆಂದರೆ ಅವಳ ಪಿಸುಮಾತು..ಗಾಳವೆಂದರೆ..ಅವಳ ಸೆರಗು ತೀಡಿಬಂದ ತಂಬೆಲರ..ಘಮ.. ಗಾಳವೆಂದರೆ ಅವಳ ಹುಸಿ ಮುನಿಸು..ಆ ಗಾಳಕ್ಕೆ ಸಿಕ್ಕಿ ಬಿಡಬೇಕುಎಂದು ಕನವರಿಸಿಅವನು ಧಾವಿಸಿ ಬಂದಾಗಬೆಸ್ತನೆದೆಯಲ್ಲಿ ಅವಳು ಸ್ವಾತಿಮುತ್ತು….. ಸುಕೃತಿ ಕಂದRead More

ಪಾರು ಹೇಳಿದ ಕಥೆಗಳು – 1

ಪಾರು ನಮ್ಮ ಕಥಾನಾಯಕಿ ಅವಳ ಕಥೆಗಳು ‘ಮುಂಗೇರಿ ಲಾಲ್ ಕೆ ಹಸೀನ್ ಸಪ್ನೆ’ ಇದ್ದಂತೆ ಕನಸಿನ ಕಟ್ಟುಕಥೆಗಳ ರಾಣಿ. ಅವಳು ಹೇಳುವ ಕಥೆಗಳು ಸತ್ಯಕ್ಕೆ ದೂರವಾಗಿದ್ದರು ಮನಸ್ಸಿಗೆ ಸ್ವಲ್ಪ ಮುದ ಕೊಡುವುದಂತೂ ಸತ್ಯ. ಅವಳು ಕಥೆ ಹೇಳುವ ಪರಿಯೇ ಹೊಸದು ಸ್ವಲ್ಪವೂ ಅಂಜಿಕೆಯಿಲ್ಲದೆ ಅನಿಸಿದ್ದನ್ನು ನಿರಾಳವಾಗಿ ಹೇಳಿಬಿಡುತ್ತಾಳೆ ಹೀಗೆ ಅವಳು ಹೇಳಿದ ಹತ್ತು ಕಥೆಗಳು ಸರಣಿ ಇಲ್ಲಿವೆ… ಕಥೆ-1 –ಅವಳಿ- ಜವಳಿ– ಪಾರು ಆಗ ಇನ್ನು ಹತ್ತನೇ ತರಗತಿಯ ವಿದ್ಯಾರ್ಥಿನಿ ತುಂಬಾ ಮಾತುಗಾತಿ ಓದುವುದಕ್ಕಿಂತ ಮಾತಿನಲ್ಲೇ ಹೆಚ್ಚು […]Read More

ಪ್ರತ್ಯಗಾತ್ಮ ಚಿಂತನ (ನೇನಂಶಿ) – 27

ತನ್ನ ಮಗ ತನಗಿಂತ ಮೇಲೇರಲೆಂಬುದಕೆತನ್ನ ಒಳಗಿನ ಸ್ವಾರ್ಥ ತಂದೆಗಿರಬಹುದುತನ್ನ ಶಿಷ್ಯರ ಏಳ್ಗೆ ಚಿಂತಿಸುವ ಗುರುವಿನಲಿಇನ್ನಾವ ಸ್ವಾರ್ಥವಿದೆ?- || ಪ್ರತ್ಯಗಾತ್ಮ || ಕಲ್ಲು ಬಂಡೆಯ ಬಿಡಿಸಿ ಪಾಳಿಪನು ಕಲ್ಕುಟಿಕಕಲ್ಲಿನಲಿ ಶಿಲ್ಪವನು ಬಿಡಿಸುವುದು ಶಿಲ್ಪಿಕಲ್ಲು ಕುಟ್ಟುವುದಲ್ಲ; ಬಿಡಿಸುವುದು ಕಡುಕಷ್ಟಎಲ್ಲ ಕೈ ಚಳಕವೋ!- || ಪ್ರತ್ಯಗಾತ್ಮ || ಸತಿ ಪತಿಯ ಎದುರಿನಲಿ, ಪತಿ ಸತಿಯ ಎದುರಿನಲಿಅತಿ ಉಪಾಯದಿ ಗೆಲುವ ನಿರ್ಧಾರ ತಾಳಿಗತಿ ಕಾಣದೆಯೆ ಸೋತು ಗೆಲುವ ಪಡೆವನು ಕಡೆಗೆಅತಿ ವಿಚಿತ್ರದ ಗೆಲುವು- || ಪ್ರತ್ಯಗಾತ್ಮ || ಮೂಕ ಪಶುಗಳಿಗಿಂತ ನರನ ಶಕ್ತಿಯು […]Read More