–ಕ್ಯುಕೆನ್ಹಾಫ್– ಹಾಲೆಂಡ್ ಯೂರೋಪಿನಲ್ಲೇ ಅತ್ಯಂತ ಸುಂದರ ರಾಷ್ಟ್ರ ಎಂದರೆ ತಪ್ಪೇನಿಲ್ಲಾ. “ದೇವರು ವಿಶ್ವವನ್ನು ಸೃಷ್ಟಿಸಿದರೆ ಡಚ್ಚರು ಹಾಲೆಂಡನ್ನು ಸೃಷ್ಟಿಸಿದರು” ಎಂಬ ಗಾದೆ ಇದೆ. ಅಷ್ಟು ಸುಂದರವಾಗಿ ಡಚ್ಚರು ಹಾಲೆಂಡನ್ನು ನಿರ್ಮಿಸಿದ್ದಾರೆ. ಹಾಲೆಂಡಿನ ಇನ್ನೊಂದು ಹೆಸರು ನೆದರ್ಲ್ಯಾಂಡ್, ಅಂದರೆ ತಗ್ಗಾದ ಪ್ರದೇಶ ಎಂದು. ಅತ್ಯಂತ ಸ್ವಚ್ಚ ಸುಂದರ ದೇಶ ತನ್ನ ಕಲಾತ್ಮಕತೆಗೆ, ನಾಡಿನ ತುಂಬಾ ಹರಡಿರುವ ಕಾಲುವೆಗಳು ಹಾಗೂ ಇಲ್ಲಿರುವ ಹೂದೋಟಕ್ಕೆ ಪ್ರಸಿದ್ದಿ. ಡಚ್ಚರು ಹೂದೋಟವನ್ನು ಬೆಳೆಸುವುದರಲ್ಲಿ ಎತ್ತಿದ ಕೈ. ತಮ್ಮ ದೇಶದ ಅಂದವನ್ನು ಹೆಚ್ಚಿಸಲು ಇವರು ಅನೇಕ […]Read More
ಕೃಷ್ಣಮೃಗ Black buck or Indian antelopeScientific name: Antelope cervicapra ಇತ್ತೀಚಿಗೆ ಕೃಷ್ಣಮೃಗಗಳನ್ನು ನೋಡುವ ಸಲುವಾಗಿ ಚಿಕ್ಕಮಗಳೂರಿನ ಒಂದು ಊರಿಗೆ ಬೇಟಿ ನೀಡಿದ್ದೆವು (ಕೆಲವು ಕಾರಣಗಳಿಂದ ಊರಿನ ಹೆಸರು ತಿಳಿಸಿಲ್ಲ) ಸುಮಾರು 700 ಹೆಕ್ಟೇರ್ ಪ್ರದೇಶ ಇರುವ ಈ ಜಾಗದ ಸುತ್ತಲೂ ಕೃಷಿ ಭೂಮಿ ಇದೆ, ಹಾಗಾಗಿ ಕೃಷ್ಣ ಮೃಗಗಳು ಇರುವ ಸಾಧ್ಯತೆ ಇಲ್ಲ ಎಂದು ಕೊಂಡು ಒಳ ಪ್ರವೇಶ ಮಾಡಿದೆವು. ಹುಲ್ಲುಗಾವಲಿನಿಂದ ಕೂಡಿದ ಈ ಜಾಗದಲ್ಲಿ ಅಲ್ಲಲ್ಲಿ ಪೊದೆಗಳು ತುಂಬಿಕೊಂಡಿದ್ದವು, ಕೃಷ್ಣಮೃಗಗಳ ವಾಸಕ್ಕೆ ಯೋಗ್ಯವಾದ […]Read More
ನಮ್ಮ ಪರಂಪರೆಯೇ ಚೆಂದ ನಮ್ಮ ಪರಂಪರೆ ಮಾತ್ರ…ನನ್ನದೆನ್ನುವ ಭಾವ ಮೂಡಿಸಬಲ್ಲದು…..ಪರರದ್ದು…ಸ್ವಂತದ್ದು ಎನ್ನಿಸಿ ಕೊಳ್ಳುವುದೇ ಇಲ್ಲ.ಪರರದ್ದಕ್ಕೆ ನೀ ಆಕರ್ಷಿತನಾಗಬಹುದು.ಅರ್ಪಿಸಿಕೊಳ್ಳಲಾರೆ.. ಅರ್ಪಣೆ..ಆಕರ್ಷಣೆಯ ನಡುವೆಭೂಮಿ ..ಗಗನದ ಅಂತರ…ಅನುಕರಿಸಬಹುದು..ಅನುಸರಿಸಲಾರೆ..ಕಳೆದರೂ ಮನ್ವಂತರ.. ಸುಕೃತಿ ಕಂದRead More
–ಸಾಹಸಿ– ಕತ್ತಲು ತುಂಬಿದ ರಸ್ತೆ ಬೆಂಗಳೂರು ಮಹಾನಗರವಾದರೂ, ಒಳಗಿನ ರಸ್ತೆಗಳು ಬಿಕೋ ಎನ್ನುತ್ತಿವೆ. ಅಲ್ಲೊಂದು ಇಲ್ಲೊಂದು ಬೀದಿ ದೀಪಗಳಿವೆ.ತಡವಾಗಿದೆ ಎಂದು ಪಾರು ತನ್ನ ದ್ವಿಚಕ್ರ ವಾಹನದಲ್ಲಿ ವೇಗವಾಗೇ, ಬರುತ್ತಿದ್ದಾಳೆ.ಇದ್ದಕ್ಕಿದ್ದಂತೆ ಅವಳ ಮುಂದೆ ಹೋದ ಒಂದು ಕಾರು ರಸ್ತೆಯ ಬದಿಯಲ್ಲಿ ,ಸಾಲಾಗಿ ನಿಲ್ಲಿಸಿದ ಒಂದು ಕಾರಿಗೆ ತಗುಲಿಸಿ ಅದೇ ವೇಗದಲ್ಲಿ ಸಾಲು ಕಾರುಗಳಿಗೂ ತಗುಲಿಸಿಕೊಂಡು ಹೋಯಿತು. ಪಾರುವಿಗೆ ಎಲ್ಲಿತ್ತೋ ಧೈರ್ಯ, ತಕ್ಷಣವೇ ಆ ಕಾರನ್ನು ಅಡ್ಡಗಟ್ಟಿ, ಜೋರಾಗಿ ಹಾರನ್ ಮಾಡಿದಳು. ಕಾರಿನ ಚಾಲಕ ಗಲಿಬಿಲಿಗೊಂಡ ತಬ್ಬಿಬ್ಬಾದ ವಿಧಿಯಿಲ್ಲದೆ ಬ್ರೇಕ್ […]Read More
ಗ್ರಹಣಗಳು ಚಂದ್ರ ಅಥವಾ ಕಾಯವು ಮತ್ತೊಂದರ ನೆರಳಿನಲ್ಲಿ ಚಲಿಸಿದಾಗ ಗೋಚರವು ಮರೆಯಾಗುವುದನ್ನು ಗ್ರಹಣವೆಂದೆನ್ನುತ್ತಾರೆ. ಬೇರೆ ರೀತಿಯಲ್ಲಿ ಹೇಳುವುದಾದರೆ, 3 ಕಾಯಗಳು ಸಾಲಾಗಿ ನಿಂತಾಗ ಗ್ರಹಣ ಸಂಭವಿಸುತ್ತದೆ. ತಾರಾಮಂಡಲದಲ್ಲಿ ಗ್ರಹಣ ಉಂಟಾದಾಗ ಒಂದು ಬಗೆಯ ಸಂಯೋಗದ ರಚನೆಯಾಗುತ್ತದೆ. ಗ್ರಹಣಕ್ಕೆ ಒಳಗಾಗುವ ಕಾಯ ಸ್ವಯಂಪ್ರಭೆಯಿಂದ ಕೂಡಿದ್ದು ಅಪಾರ ಕಾಯವೊಂದರ ನೆರಳಿನಿಂದ ಅಸ್ಪುಟವಾಗುವುದು ಒಂದು ಬಗೆಯ ಗ್ರಹಣ ಬದಲು ಅದು ಪ್ರತಿಫಲಿತ ಬೆಳಕಿನಿಂದ ಹೊಳೆಯುವುದಾಗಿದ್ದು ಅಪಾರ ಕಾಯವೊಂದು ಇದಕ್ಕೂ ಇದರ ಬೆಳಕಿನ ಆಕಾರಕ್ಕೂ ನಡುವೆ ಸರಿಯುವಾಗ ಅಸ್ಪುಟವಾಗುವುದು ಇನ್ನೊಂದು ಬಗೆಯ ಗ್ರಹಣ. […]Read More
— ಅಬ್ದುಲ್ ಖಾದಿರ್ ಫಾರ್ಮಸಿ — ನಾವು ಸೋಮಾಲಿಯಾ ದೇಶಕ್ಕೆ ಹೋದಾಗ 1976 ರಲ್ಲಿ, ನನ್ನ ನೆನಪಿನ ಪ್ರಕಾರ, ಸುಮಾರು ಆರೂವರೆ ಸೋಮಾಲಿ ಶಿಲಿಂಗಿಗೆ (shilling) ಒಂದು ಅಮೇರಿಕನ್ ಡಾಲರ್ ಸಮ ಇತ್ತು. ಭಾರತದಲ್ಲೂ ಅಂದಾಜು ಏಳು ರೂಪಾಯಿಗೆ ಒಂದು ಡಾಲರ್ ಬೆಲೆ ಇತ್ತು. ನಮ್ಮ ಕಾಂಟ್ರ್ಯಾಕ್ಟ್ ಸೋಮಾಲಿ ಶಿಲಿಂಗ್ ನಲ್ಲಿದ್ದು, ಅದರ ಅರ್ಧ ಬೆಲೆಯಷ್ಟು ಡಾಲರ್ ವಿನಿಮಯ ಮಾಡಿ ನಮ್ಮ ಭಾರತದ ಅಕೌಂಟಿಗೆ ಕಳಿಸಲು ಅವಕಾಶ ಇತ್ತು. ಆದರೆ ಸರ್ಕಾರದ ಆರ್ಥಿಕ ಅವ್ಯವಸ್ಥೆ ಮತ್ತು ಕೆಟ್ಟ […]Read More
ಪ್ರಕಸಂ ರಿಫ್ರೆಶ್ ಟಿ20 ರಂಗ ಸ್ಪರ್ಧೆ ದಿನಾಂಕ: ಮಾರ್ಚ್ 12 ಮತ್ತು 13, 2022,ಸ್ಥಳ: ಸುಚಿತ್ರಾ, ಪೂರ್ವಾಂಕರ ಸಭಾಂಗಣ, ಬೆಂಗಳೂರು ‘ಪ್ರಕಸಂ’ ತಂಡ ಕ್ಕೆ 20 ವರ್ಷ ತುಂಬಿದೆ. ಕಳೆದ 21 ವರ್ಷಗಳಿಂದ ತಂಡವು ಹಲವಾರು ನಾಟಕಗಳನ್ನು ಪ್ರದರ್ಶಿಸಿವೆ. ಕಲಾಸೌಧದ ಕಾಲದಲ್ಲಿ ಈ ತಂಡದ ಕಾರ್ಯಕ್ರಮಗಳನ್ನು ರಂಗಾಸಕ್ತರು ಮರೆತಿಲ್ಲ. ಪ್ರಕಸಂಗೆ ಇಪ್ಪತ್ತು ತುಂಬಿದ ಸಂಧರ್ಭದಲ್ಲಿ ಕೋವಿಡ್ ಕಾಲದಲ್ಲಿ ಕಾಣೆಯಾಗಿದ್ದ ನಾಟಕ ಚಟುವಟಿಕೆಗಳನ್ನು ಹುರುದುಂಬಿಸಲು ರಿಫ್ರೆಶ್ ಟಿ20 ಅನ್ನೋ ಸ್ಪರ್ಧೆಯನ್ನು ಏರ್ಪಡಿಸಿದೆ. ಈ ಸ್ಫರ್ಧೆಯಲ್ಲಿ ಇಪ್ಪತ್ತು ತಂಡಗಳು ಇಪ್ಪತ್ತು […]Read More
ಹಾಲು ನೀರುಗಳೊಳಗೆ ಹಾಲು ಉತ್ತಮವೆಂದುಮೇಲಾದ ಹಾಲಿನಲಿ ಬಾಳೆಂದು ಮೀನ –ಮೇಲೆತ್ತಿ ನೀರಿನಿಂ ಹಾಲಿನೊಳು ಹಾಕಿದರೆಬಾಳಲಾರದು ಕಾಣ- || ಪ್ರತ್ಯಗಾತ್ಮ || ಆವೇಶಕೊಳಗಾಗಿ ದಾನ ಮಾಡಲು ಬೇಡಆವೇಶವಿಳಿದಾಗ ಪರಿತಪಿಸಬೇಡಆವ ಪರಿಯಲು ನೀನು ಮತಿ ವಿಕಳನಾಗದಿರುಆವೇಶ ಸಲ್ಲದೈ- || ಪ್ರತ್ಯಗಾತ್ಮ || ಹದವರಿತು ಪಾಳಿಸುವ ಕಲ್ಕುಟಿಕ ವಡ್ಡನೇಂ ?ಮಿದುವಾದ ಮೇಣವೇಂ ಕಲ್ಲು ಅರೆಬಂಡೆ ?ಚದುರನಹ ರೂವಾರಿಗೀ ಹೆಸರು ತರವಲ್ಲಅದ ವಿಚಾರಿಸಿ ನೋಡು – || ಪ್ರತ್ಯಗಾತ್ಮ || ಮತದ ಲಾಂಛನ ಧರಿಸೆ ಸಂಕೋಚವೇಕಯ್ಯ ?ಸತಿಯ ಕ್ಯೆ ಹಿಡಿವಾಗ ಮತ ಧರ್ಮ […]Read More
ವ್ಯತ್ಯಾಸ ಹಳ್ಳಿ ಅಂದ್ರೆಪರಿಸರ.ಪಟ್ಟಣ ಅಂದ್ರೆಅವಸರ. ಗೆಳೆಯ ಓದು, ಕೆಲಸ ಎಲ್ಲದರಲ್ಲೂ ಮೊದಲು,ಮುಗಿಸಿಬಿಡುತ್ತಿದ್ದ ಎಲ್ಲವನ್ನೂಸರಸರ.ಭೂಲೋಕವನ್ನೂ ತ್ಯೆಜಿಸಿಬಿಟ್ಟಏನಿತ್ತೋ ಅವಸರ. ಕಾಣಿಕೆ ಪ್ರಯಾಣ ಸುಖಕರವಾಗಿರಲುಚಾಲನೆಯಲ್ಲಿ ಇರಬಾರದುಅವಸರ.ಸಂಸಾರ ಸುಖವಾಗಿರಲುಆಗಾಗ ತರಬೇಕು ಅವಸರ. ಭಾಷಾಭಿಮಾನ ಎಲ್ಲರೂ ಕನ್ನಡ ಬಳಸಬೇಕು ಎಂಬುದುನಿರೀಕ್ಷೆ.ದಿನೆ ದಿನೆ ಚಿಕ್ಕದಾಗುತ್ತಿರುವುದಂತೂಅಕ್ಷರಶಃ ಸತ್ಯಕನ್ನಡದ ಭಾಷಾನಕ್ಷೆ. ಶ್ರೀಧರ ಕಾಡ್ಲೂರುRead More
ಒಲುಮೆ ಮನದಲ್ಲಿ ಅಡಗಿ ಕುಳಿತಿದೆನಿನ್ನ ಪ್ರೇಮದ ಮಧುರ ನೆನಪುನೆನೆದಷ್ಟು ಮನಕೆ ಹೊಳಪುಈ ಬದುಕು ಸವಿಯಲುನಿನ್ನ ಸಾಂಗತ್ಯ ಬೇಕುಸಲುಗೆ ಬೇಕುಒಲುಮೆಯು ಬೇಕು ಗತ್ತು ನನ್ನ ಎದೆಬಗೆದು ನಿನ್ನಹೆಸರನ್ನುಜಗತ್ತಿಗೆ ತೋರಿಸುತ್ತಲೇಇರುತ್ತೇನೆ!ಜೊತೆಗೆ ನಿನ್ನಗತ್ತನ್ನೂ!! ಮಾನ್ಯ ನೀ ನನ್ನ ಜೀವನಸಂಗಾತಿನೀನೆ ನನ್ನಬದುಕಿನ ಸಂಗತಿ!!ಬದುಕಲ್ಲಿ ನಿನ್ನ ಶ್ರಮಅಸಾಮಾನ್ಯನಿನ್ನಿಂದಲೇ ನನ್ನಬದುಕು ಮಾನ್ಯ! ತೇವ ನಾ ನಿನಗಿಷ್ಟವೆಂದುನಿನ್ನ ಮುಖದ ರಂಗೇಸಾರಿ ಸಾರಿ ಹೇಳುತಿದೆ!ಆದರೂನಿನ್ನ ನಾಲಿಗೆಏಕೆ ಮೌನ?ಕಣ್ಣುಗಳೇಕೆತೇವ? ಡಾII ಪರಮೇಶ್ವರಪ್ಪ ಕುದರಿRead More