ಅದೃಷ್ಟದ ಆಟ – ಎನ್. ಶಿವರಾಮಯ್ಯ (ನೇನಂಶಿ) ಭಾಗ – 14

ಹಿಂದಿನ ಸಂಚಿಕೆಯಿಂದ… ಉಜ್ಜಯಿನಿ ಅಥವಾ ಪಾಟಲಿಪುತ್ರದ ಹಾಗೆ ವಿಶಾಲವಲ್ಲದಿದ್ದರೂ ಈ ಕಪೋತಕೂಟವು ಪರಿಶುದ್ಧವೂ ಸುಂದರವೂ ಆದ ನಗರವೆನ್ನಲೇಬೇಕು ಎಂದು ಚಿತ್ರಕನಿಗೆ ನಗರ ಪ್ರದಕ್ಷಿಣೆಯ ಸಮಯದಲ್ಲಿ ಅನ್ನಿಸಿತು. ಅವನು ತನ್ನ ಸೈನಿಕ ಜೀವನದ ಓಡಾಟದಲ್ಲಿ ಅನೇಕ ಸ್ಥಳಗಳನ್ನು ನೋಡಿದ್ದನು. ಆದರೆ ಚಿಕ್ಕದಾದ ಏರುತಗ್ಗುಗಳಿಂದ ಕೂಡಿದ ಕಲ್ಲಿನ ಈ ನಗರವು ಅವನ ಮೆಚ್ಚುಗೆಗೆ ಪಾತ್ರವಾಯಿತು. ಆದರೆ ಈ ಜಾಗದಲ್ಲಿ ಬಹಳ ಕಾಲ ಇರಲು ಸಾಧ್ಯವಿಲ್ಲ. ಬಹಳ ದಿನವಿದ್ದರೆ ಬಂಧನಕ್ಕೊಳಗಾಗುವ ಭಯವಿದೆ. ಇದೇ ಊರಿನಲ್ಲಿ ಆ ಮೂವರೂ ಇದ್ದಾರೆ. ಅದೂ ಅಲ್ಲದೆ […]Read More

ವಿಶ್ವ ರಂಗಭೂಮಿ ದಿನದ ಸಂದೇಶ – 2022

ಸಂದೇಶಕಾರರು : ಪೀಟರ್ ಸೆಲ್ಲರ್ಸ್ಕನ್ನಡ ಅನುವಾದ – ಬಿ. ಸುರೇಶ ಪೀಟರ್ ಸೆಲ್ಲಾರ್ಸ್ ಅಮೇರಿಕನ್ ರಂಗಭೂಮಿ ನಿರ್ದೇಶಕರಾಗಿದ್ದು, ವಿಶ್ವ ರಂಗಭೂಮಿ ದಿವಸದ ಅಂಗವಾಗಿ ಸಮಸ್ತ ರಂಗಕಲಾವಿದರಿಗೆ ತಮ್ಮ ಸಂದೇಶವನ್ನು ಕಳಿಸಿದ್ದು ಅದನ್ನು ಖ್ಯಾತ ರಂಗನಿರ್ದೇಶಕ ಬಿ. ಸುರೇಶ್ ರವರು ಕನ್ನಡದಲ್ಲಿ ಅನುವಾದಿಸಿದ್ದಾರೆ. ಪ್ರಿಯ ಸಂಗಾತಿಗಳೇ, ಇಡೀ ಜಗತ್ತು ಕ್ಷಣಕ್ಷಣದ ಸುದ್ದಿ ಪ್ರವಾಹದಲ್ಲಿ ಮುಳುಗಿರುವಾಗ, ಸೃಜನಶೀಲವೃತ್ತಿಯವರಾದ ನಾವೆಲ್ಲರೂ ನಮ್ಮ ನೈಜ್ಯ ಶಕ್ತಿ , ಸಾಮರ್ಥ್ಯ, ದೃಷ್ಟಿಕೋನ ಬಳಸಿ ಈ ಮಹಾಕಾಲದ, ಮಹಾ ಬದಲಾವಣೆಯ ಪರ್ವದ, ಮಹಾನ್ ತಿಳುವಳಿಕೆಯ, ಮಹಾನ್ […]Read More

ವಿಶ್ವ ವಿಸ್ಮಯ -4 – ನಕ್ಷತ್ರ ಪುಂಜ

ನಕ್ಷತ್ರ ಪುಂಜ ವಿಶ್ವದ ಸೃಷ್ಟಿ ಸುಮಾರು 12 ರಿಂದ 20 ಬಿಲಿಯನ್ ಅಥವಾ 1200 – 2000 ಕೋಟಿ ವರ್ಷಗಳ ಹಿಂದೆ ಪ್ರಾರಂಭವಾಗಿರಬೇಕೆಂದು ವಿಜ್ಞಾನಿಗಳು ತರ್ಕಿಸಿದ್ದಾರೆ. ಇತ್ತೀಚಿನ ಸಂಶೋಧನೆಗಳ ನಂತರ ವಿಶ್ವದ ವಿಕಾಸದ ಆರಂಭ 1375 ಬಿಲಿಯನ್ ವರ್ಷಗಳ ಹಿಂದೆ ಪ್ರಾರಂಭವಾಗಿರಬೇಕೆಂದು ಮರುತರ್ಕಿಸಿದ್ದಾರೆ. ವಿಶ್ವದ ಆರಂಭದ ಕ್ಷಣಗಳನ್ನು ಮಹಾಸ್ಫೋಟವೆಂದು ಕರೆದಿದ್ದಾರೆ. ಒಂದು ಸೂಕ್ಶ್ಮಾತಿ ಉಪಕರಣ ಪ್ರಭಾಣು ಪ್ರೋಟಾನ್ ಸ್ಪೋಟಗೊಂಡು ಕೆಲವೇ ಸೆಕೆಂಡುಗಳಲ್ಲಿ ಅಗಾಧ ಶಾಖದಿಂದ ಕುದ್ದು 30 ನಿಮಿಷಗಳಲ್ಲಿ ಕುದಿಯುತ್ತಿರುವ ದೊಡ್ಡ ಪ್ಲಾಸ್ಮಾದ ಉಂಡೆಯಾಗಿ ಕ್ರಮೇಣ ಶಾಖವನ್ನು […]Read More

ಕವಿತೆ ಬೇಕಿತ್ತು!

ಕವಿತೆ ಬೇಕಿತ್ತು! ಬೇಕಿತ್ತು ನಿಮ್ಮದೊಂದೆರಡುಕವಿತೆಗಳು ಸಾಲವಾಗಿಯೋಚಿಸಬೇಡಿ ಹಿಂತಿರುಗಿಸುತ್ತೇನೆ ಪಡೆದೆರಡನ್ನು ನಾಲ್ಕಾಗಿಸಿನಾಲ್ಕೇಕೆ ಆರಾಗಿಸುತ್ತೇನೆಬಡ್ಡಿ ಅಷ್ಟೇ ಏನುಚಕ್ರಬಡ್ಡಿಯನ್ನೂ ಸೇರಿಸಿಕೊಡುತ್ತೇನೆ ಬೇಕಿತ್ತು ನಿಮ್ಮದೊಂದೆರಡುಕವಿತೆಗಳು ಸಾಲವಾಗಿಯೋಚಿಸಿನೋಡಿ ಹಿಂತಿರುಗಿಸುತ್ತೇನೆ ಪದಗಳೊಡನೆ ಆಡುವುದುನನಗೂ ಅಷ್ಟಿಷ್ಟು ತಿಳಿದಿದೆಅದೇ ನೀವು ಮಾಡಿದ ಹಾಗೆಯೇಅಲ್ಲಷ್ಟು ಇಲ್ಲಿಷ್ಟು ಬದಲಾಯಿಸುವುದು ಬೇಕಿತ್ತು ನಿಮ್ಮದೊಂದೆರಡುಕವಿತೆಗಳು ಸಾಲವಾಗಿಒಮ್ಮೆ ಕೊಟ್ಟು ನೋಡಿನನ್ನ ಕೈಚಳಕ ತೋರಿಸುತ್ತೇನೆ ನಿಮ್ಮದೇ ಕವನಗಳಛಂದಸ್ಸು ಬದಲಿಸುತ್ತೇನೆನಗುವಿನ ಅಳುವಿನಅಲಂಕಾರ ಮಾಡುತ್ತೇನೆ ಬೇಕಿತ್ತು ನಿಮ್ಮದೊಂದೆರಡುಕವಿತೆಗಳು ಸಾಲವಾಗಿಯೋಚಿಸಲೇನಿದೆ ಒಮ್ಮೆ ಒಪ್ಪಿಬಿಡಿ ನಿಮ್ಮದೇ ಅಂಕಿತದೊಂದಿಗೆಹೊಸರಾಗ ಹೊಸೆಯುತ್ತೇನೆನಿಮಗರ್ಪಣೆ ಎಂದು ಹೇಳುತ್ತಲೇಎಲ್ಲರನೂ ಯಾಮಾರಿಸುತ್ತೇನೆ ನೀವು ಒಪ್ಪಿ ಅಥವಾ ಬಿಡಿಸೌಜನ್ಯಕ್ಕಾಗಿ ಕೇಳಿದ್ದೇನೆನಿಮ್ಮ ಮೌನವೇ ಸಮ್ಮತಿಯೆಂದುನಾನಾಗಲೇ […]Read More

ಪಾರು ಹೇಳಿದ ಕಥೆಗಳು ಕಥೆ-೬

— ತಪ್ಪಾಯಿತು ಕ್ಷಮಿಸಿಬಿಡಿ — ಮಕ್ಕಳು ಅಜ್ಜಿ-ತಾತನ ಮನೆಗೆ ಬೇಸಿಗೆ ರಜಕ್ಕೆ ಹೋಗಿದ್ದಾರೆ. ಅವರನ್ನು ಕರೆತರಲು ಪಾರು ಎಷ್ಟೋ ದಿವಸಗಳ ಬಳಿಕ ಕೆಂಪು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಳೆ. ಬಸ್ಸಿನಲ್ಲಿ ಕುಳಿತ ಪಾರುವಿನ ಕಣ್ಣಿಗೆ, ಸೀಟುಗಳ ಒರಗು ಹಾಸಿನ ಮೇಲೆ, ಹಾಯ್ ನಾನು ಸ್ನೇಹ, ಕಾಲ್ ಮೀ ವೆನ್ ಯುವರ್ ಫ್ರೀ ಎಂಬ ಬರವಣಿಗೆ ಮತ್ತು ನಂಬರ್ ಕಾಣಿಸಿತು. ಅದನ್ನು ಕಂಡ ಪಾರು ಮುಗುಳ್ನಕ್ಕಳು. ಪಾರು ಹೈಸ್ಕೂಲಿಗೆ ಹೋಗುತ್ತಿದ್ದ ದಿನಗಳು…. ಪಾರು ಸ್ಕೂಲಿಗೆ ತನ್ನ ಊರಿನಿಂದ ಪಕ್ಕದೂರಿಗೆ ಹೋಗಬೇಕಿತ್ತು. ದಿನಾಲು […]Read More

ಕೆಲಸಕ್ಕಾಗಿ ಕಗ್ಗತ್ತಲೆಯ ಖಂಡದತ್ತ- ೨೬

–ಕಚ್ಚಿ ಕೊಟ್ಟ ಮಾಂಸ– ಅಂದು ಕರ್ನಲ್ ಅಬ್ಷೀರ್ ಮನೆಯಿಂದ ಬಂದು, ನನ್ನ ಮಡದಿ, ಕಮಲಳಿಗೆ ವಿಷಯ ತಿಳಿಸಿದ ಮೇಲೆ ಸಹ ನನಗೇಕೋ ಮನಸ್ಸಿನಲ್ಲಿ ಒಂದು ರೀತಿಯ ಕಲ್ಲೋಲ. ಸದ್ಯ ಶಿಲ್ಲಿಂಗ್ ಮೌಲ್ಯ ಅತೀವವಾಗಿ ಕುಸಿದಿಲ್ಲ. ಅಲ್ಲದೆ, ನನಗೆ ಬರುವ ಸಂಬಳದ ಅರ್ಧದ ಜೊತೆಗೆ, ಅಬ್ದುಲ್ ಕಾದಿರ್ ಫಾರ್ಮಸಿಯಲ್ಲಿ ಕನ್ಸಲ್ಟೇಶನ್ನಿನಿಂದ ಬರುತ್ತಿದ್ದ ಹಣವನ್ನೂ ಸೇರಿಸಿಯೇ ಭಾರತಕ್ಕೆ ಡಾಲರ್ ಆಗಿ ಪರಿವರ್ತಿಸಿ ಕಳಿಸಲು ಸಾಧ್ಯ ಇತ್ತು. ಹಾಗಂತ ಸೆಂಟ್ರಲ್ ಬ್ಯಾಂಕಿನಲ್ಲಿದ್ದ ನನ್ನ ಆಪ್ತರೊಬ್ಬರು ಆಶ್ವಾಸನೆ ಕೊಟ್ಟಿದ್ದಲ್ಲದೆ, ಅಬ್ದುಲ್ ಕಾದಿರ್ ಸಹ […]Read More

ಹನಿಗವಿತೆಗಳು – ಡಾII ಪರಮೇಶ್ವರಪ್ಪ ಕುದರಿ – 17

ಹೂವಾದವು ಇಬ್ಬರ ನಡುವೆಮುನಿಸಿತ್ತುಪರಸ್ಪರ ಅರ್ಥಮಾಡಿಕೊಂಡೆವು!ನಮ್ಮ ನಮ್ಮ ತಪ್ಪುಗಳನ್ನುತಿದ್ದಿಕೊಂಡೆವುಜೀವನ ಹೂವಾಯಿತು!! ಜೋಡಿ ಜೀವ ಒಲಿದ ಜೀವಜೊತೆಗಿರಬೇಕುಸುಮಧುರವಾದ ಬದುಕಿಗೆ!ಅವಕಾಶವಿರಬೇಕುಸ್ವಚ್ಛಂದ ಪ್ರೀತಿಗೆ!!ಅರ್ಥೈಸಿಕೊಂಡುಬದುಕುವ ಜೋಡಿಜೀವಗಳಾಗಿರಬೇಕು!!! ಸುಂದರ ಲೋಕ ದೂರದಲ್ಲಿದೆಸುಂದರ ಲೋಕಅಲ್ಲಿ ನೀನು – ನಾನುಬರೀ ಆಟ ಕೂಟ!ನನಗೆ ನೀನುನಿನಗೆ ನಾನುಜೀವನ ಸಿಹಿ ಜೇನು!! ಆಡುತಿರಲು ನೀನು ನಾನಾಗಿನಾನು ನೀನಾಗಿಜೋಡಿ ಮೀನಾಗಿಆಡುತಿರಲುಹೊತ್ತು ಹೋದದ್ದೇತಿಳಿಯಲಿಲ್ಲ!ನಿನ್ನ ಸ್ನೇಹವೇಅಂತಹುದುಎಲ್ಲಾ ಮರೆಸುವಂತಹದು!! ಡಾII ಪರಮೇಶ್ವರಪ್ಪ ಕುದರಿಚಿತ್ರದುರ್ಗRead More

ಗಲಾಟೆ ಗುಬ್ಬಿ

ಒಂದು ಕಾಲದಲ್ಲಿ ಗುಬ್ಬಿಗಳಿಲ್ಲದ ಮನೆಗಳನ್ನು ಊಹಿಸಲು ಸಾಧ್ಯವಿತ್ತೇ? ಮನೆ ಸದಸ್ಯರಂತೆ ಹಾಗು ನೆಂಟರ ಹಾಗೆ ಎಲ್ಲರ ಮನೆಗಳಲ್ಲಿ ಹೋಗಿ ಬಂದು ಮಾಡುತ್ತಿದ್ದವು. ಊರಲ್ಲಿನ ನಮ್ಮ ಅಜ್ಜಿಯ ಮನೆಯ ಪಡಸಾಲೆಯ ತುಂಬ ಹಾಗಾಗ ನಾನಾ ತರಹದ ಕಾಳುಗಳು, ಅಕ್ಕಿ ನುಚ್ಚು ಹಾಗೂ ಒಮ್ಮೊಮ್ಮೆ ಗೋದಿ ಕಾಳುಗಳನ್ನು ಒಣಗಲು ಹಾಕುತಿದ್ದಾಗ ಈ ಗುಬ್ಬಿಗಳು ತಮ್ಮ ಸೈನ್ಯದ ಸಮೇತ ದಾಳಿ ಇಡುತಿದ್ದವು. ಚಿಇಂಕ್-ಚಿಇಂಕ್ ಎಂದು ಎಡೆಬಿಡದೆ ಸದ್ದು ಮಾಡಿ ಕಾಳುಗಳನ್ನು ಹಾರಿಸಿಕೊಂಡೋಗುತಿದ್ದವು. ಅದೇನು ಸದ್ದು ಅವುಗಳದ್ದು, ಅಬ್ಬಬಾ! ಆದರು ಇವುಗಳ ಸದ್ದು […]Read More

ಭಾವ ರೇಖೆಗಳ ನಡುವೆ – ಕೃತಿ ಬಿಡುಗಡೆ

ಕವಿ ಕಲಾವಿದ : ಸಿದ್ದಾಪುರ ಶಿವಕುಮಾರ್ಬಿಡುಗಡೆ : ಕಗ್ಗೆರೆ ಪ್ರಕಾಶನ ಪ್ರಕಾಶ್ ರವರ ಕಗ್ಗೆರೆ ಪ್ರಕಾಶನಕ್ಕೆ 20 ವರ್ಷ ತುಂಬಿದ ಸವಿನೆನಪಿನಲ್ಲಿ ಕವಿ ಹಾಗು ಕಲಾವಿದ ಸಿದ್ದಾಪುರ ಶಿವಕುಮಾರ್ ರವರ “ಭಾವ ರೇಖೆಗಳ ನಡುವೆ” ಹನಿಗವಿತೆಗಳ ಸಂಕಲನವು ಮಾರ್ಚ್ 19 ರ ಶನಿವಾರದಂದು ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರ ಚಾಮರಾಜಪೇಟೆಯ ಸಭಾಂಗಣದಲ್ಲಿ ಬಿಡುಗಡೆಯಾಯಿತು. ಕವಿ ಹಾಗು ಶಿಕ್ಷಕರಾದ ಡಾII ಪರಮೇಶ್ವರಪ್ಪ ಕುದರಿ ಯವರ ನಿರೂಪಣೆಯಲ್ಲಿ ಹಾಗು ಶ್ರೀ ಡಾII ಸಂತೋಷ್ ಸು ಹಾನಗಲ್ (ಕನ್ನಡ […]Read More

ಅದೃಷ್ಟದ ಆಟ – ಎನ್. ಶಿವರಾಮಯ್ಯ (ನೇನಂಶಿ) ಭಾಗ – 13

–ಮದಿರಾ ಭವನ– ಅರಮನೆಯಿಂದ ಹೊರಬಿದ್ದು ತೋರಣದ ಬಾಗಿಲ ಬಳಿ ಬಂದ ಸುಗೋಪಾ ನೋಡುತ್ತಾಳೆ ಬಾಗಿಲು ಮುಚ್ಚಿದೆ. ಅದು ದಿನ ನಿತ್ಯದ ವ್ಯಾಪಾರ ಇದರಿಂದ ಸುಗೋಪಾಳಿಗೆ ಏನೂ ತೊಂದರೆಯಿಲ್ಲ. ಅವಳು ಪ್ರತೀಹಾರಿಗೆ ಬಾಗಿಲು ತೆರೆಯುವಂತೆ ಹೇಳಿದಳು. ಏಕೋ ಏನೋ ಪ್ರತೀಹಾರಿಗೆ ಸ್ವಲ್ಪ ತಮಾಷೆ ಮಾಡಬೇಕೆಂದು ಅನ್ನಿಸಿತು. ಅವನು ಎರಡು ಭಾಗವಾಗಿ ಕವಲೊಡೆದಿದ್ದ ಗಡ್ಡವನ್ನು ನೀವಿಕೊಳ್ಳುತ್ತ ಶೃಂಗಾರಚೇಷ್ಟೆ ಮಾಡಲು ಪ್ರಾರಂಭಿಸಿದನು. ಅದೇ ರೀತಿ ಸುಗೋಪಾ ಕೂಡ ಉತ್ತರ ಕೊಡುತ್ತಿದ್ದಳು. ಆಗಿನ ಕಾಲದಲ್ಲಿ ಶೃಂಗಾರ ರಸವು ಗೋರಕ್ತ, ಬ್ರಾಹ್ಮಣ ರಕ್ತದ ಹಾಗೆ […]Read More